ಇನ್ನು ಮುಂದೆ ನಿಮ್ಮ ಠೇವಣಿಯ ಸಲುವಾಗಿ ATM ಕಾರ್ಡ್ ಬೇಕಾಗಿಲ್ಲ, UPI ಮೂಲಕ ಮಾಡಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಬಳಸುವ ನಗದು ಠೇವಣಿ ಸೌಲಭ್ಯದ ಪ್ರಸ್ತಾಪದ ಬಗ್ಗೆ ಘೋಷಣೆ ಮಾಡಿದರು. ಜನರು ಸುಲಭವಾಗಿ ಹಣ ಹಾಕಲು ಈ ಹೊಸ Method ಅನ್ನು ಮಾಡಲಾಗಿದೆ. 2024-25ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಹೇಳಿಕೆಯ ಅನಾವರಣ ಸಂದರ್ಭದಲ್ಲಿ ಪ್ರಮುಖ ಘೋಷಣೆ ಮಾಡಲಾಗಿದೆ. ಸ್ನೇಹಿತರಿಗೆ ಹಣವನ್ನು ಕಳುಹಿಸುವುದು, ಬಿಲ್‌ಗಳನ್ನು ಪಾವತಿಸುವುದು, ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವುದು ಮತ್ತು ಇತರ ಆನ್‌ಲೈನ್ ಪಾವತಿಗಳನ್ನು…