ಹೋಟೆಲ್ ಬ್ಯುಸಿನೆಸ್ ಯಶಸ್ವಿ ಆದ ಬಳಿಕ ಈಗ ಜ್ಯುವೆಲರಿ ಬಿಸಿನೆಸ್ ಗೆ ಕೈ ಹಾಕಿದ ತನಿಷಾ ಕುಪ್ಪಂಡ

Tanisha Kuppanda New Jewellery Shop

ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಬೆಂಗಳೂರಿನ ವಿಜಯನಗರದಲ್ಲಿ ‘ಕುಪ್ಪಂಡ ಜ್ಯುವೆಲರೀಸ್’ ಎಂಬ ಹೆಸರಿನಲ್ಲಿ ತಮ್ಮದೇ ಹೊಸ ಆಭರಣ ಮಳಿಗೆಯನ್ನು ಉದ್ಘಾರಿಸಿದರು. ಆಭರಣ ಮಳಿಗೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕೃತಕ ಆಭರಣಗಳು ಸೇರಿದಂತೆ ವಿವಿಧ ರೀತಿಯ ಆಭರಣಗಳು ಲಭ್ಯವಿವೆ. ಉದ್ಘಾಟನಾ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಮತ್ತು ತನಿಷಾ ಕುಪ್ಪಂಡ ಅವರ ಕುಟುಂಬದವರು ಭಾಗವಹಿಸಿದ್ದರು.

WhatsApp Group Join Now
Telegram Group Join Now

ಈಗಾಗಲೇ ಹೋಟೆಲ್ ಬಿಸಿನೆಸ್ ನಲ್ಲಿ ಲಾಭ ಪಡೆದುಕೊಂಡಿದ್ದಾರೆ:- ಬಿಗ್ ಬಾಸ್ 10 ಖ್ಯಾತಿಯ ತನಿಷಾ ಕುಪ್ಪಂಡ ಅವರು ಯಶಸ್ವಿ ನಟಿ ಎಂದು ಎಲ್ಲರಿಗೂ ಗೊತ್ತು. ಈಗಾಗಲೇ ಇವರು ಹಲವು ಧಾರಾವಾಹಿಗಳಲ್ಲಿ ನಟಿಸಿ ನಮ್ಮ ನಟನಾ ಸಾಮರ್ಥ್ಯವನ್ನು ತೋರಿದ್ದಾರೆ. ಇದರ ಜೊತೆಗೆ ಇವರು ಉದ್ಯಮಿಯೂ ಹೌದು. ಇವರು ಲಾಭದಾಯಕ ಹೋಟೆಲ್ ವ್ಯವಹಾರದಲ್ಲಿ ಯಶಸ್ಸು ಕಂಡಿದೆ. ಬೆಂಗಳೂರಿನ ರಾಜರಾಜೇಶ್ವರಿ ‘ಅಪ್ಪುಸ್ 93 ಕಿಚನ್’ ಎಂಬ ಹೆಸರಿನ ಹೋಟೆಲ್ ಅನ್ನು ತನಿಷಾ ಕುಪ್ಪಂಡ ನಡೆಸುತ್ತಿದ್ದಾರೆ. ಈ ಹೋಟೆಲ್ ರುಚಿಕರವಾದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. 

ಶುಭಕೋರಿದ ಹಿತೈಷಿಗಳು :-

‘ಕುಪ್ಪಂಡ ಜ್ಯುವೆಲರೀಸ್’ 29ನೇ ತಾರೀಖಿನಂದು ಉದ್ಘಾಟನೆಯಾಯಿತು. ಶಾಸಕ ಪ್ರಿಯಾ ಕೃಷ್ಣ, ನಟ ಲೂಸ್ ಮಾದ ಯೋಗಿ ಮತ್ತು ಅವರ ಪತ್ನಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಬಂದಿದ್ದರು. ಇವರ ಬ್ಯುಸಿನೆಸ್ ಗೆ ಶುಭಾಶಯ ತಿಳಿಸಲು ತನಿಷಾ ಕುಪ್ಪಂಡರ ಗೆಳೆಯ ಬಿಗ್ ಬಾಸ್ ಸ್ಪರ್ಧಿ ಆಗಿರುವ ಕಾರ್ತಿಕ್ ಮಹೇಶ್ ‘ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ತನಿಷಾರ ಕನಸುಗಳನ್ನು ಕೇಳಿದ್ದೆ. ಈಗ ಅವು ನನಸಾಗುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು instagram ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

ತನಿಷಾ ಅವರು ನಟಿಸಿರುವ ಧಾರಾವಾಹಿಗಳು :- ತನಿಷಾ ಅವರು ಮೊದಲು ಬಣ್ಣ ಹಚ್ಚಿದ್ದು ಕಲರ್ಸ್ ಕನ್ನಡದ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ನಂತರ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರ ಆದ ಇಂತಿ ನಿಮ್ಮ ಆಶಾ, ಸತ್ಯ ಶಿವಂ ಸುಂದರಂ, ವಾರಸ್ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಇದರ ಜೊತೆಗೆ ಬೇರೆ ಭಾಷೆಗಳ ಧಾರಾವಾಹಿಗಳಲ್ಲಿ ಸಹ ಇವರು ನಟಿಸಿದ್ದಾರೆ.

ಸಿನಿಮಾಗಳ ಹೆಸರುಗಳು :- ತನಿಷಾ ದಂಡುಪಾಳ್ಯ ಸಿನಿಮಾ ಮೂಲಕ ಬೆಳ್ಳಿತೆರೆ ಪಾದಾರ್ಪಣೆ ಮಾಡಿದರು. ನಂತರ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ತನಿ‍ಷಾ ಕುಪ್ಪಂಡ ನಟಿಸಿದ ಪೆಂಟಗನ್ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟನೆ ಮಾಡಿದ್ದರು. ಇದರ ಪ್ರಚಾರದ ಸಮಯದಲ್ಲಿನ ಯ್ಯೂಟೂಬರ್ ಒಬ್ಬರು ಅಶ್ಲೀಲ ಸಿನಿಮಾದಲ್ಲಿ ನಟಿಸುತ್ತೀರಾ ಅಂತ ಹೇಳಿದ್ದರು ಹಾಗೂ ಇವರು ನಟಿಸಿದ ದಂಡುಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿಗೆ ಕಿಸ್ ಕೊಟ್ಟಿದ್ದರು. ಇದು ಕೂಡ ವಿವಾದ ಆಗಿತ್ತು.

ಇವರ ಬಿಗ್ ಬಾಸ್ ಪಯಣ :- ತನಿಷಾ ಅವರು ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 14ನೇ ವಾರ ಇವರು ಬಿಗ್ ನಾಸ್ ಮನೆಯಿಂದ ಎಲಿಮಿನೇಟ್ ಆದರು. ಆದರೂ ಇವರಿಗೆ ಅನೇಕ ಜನರು ಫ್ಯಾನ್ಸ್ ಇದ್ದರೆ. ಇವರು ಫೈನಲ್ ನಲ್ಲಿ ಇರುತ್ತಾರೆ ಎಂಬುದು ಹಲವರ ಆಸೆ ಆಗಿತ್ತು. ಇವರು ಎಲಿಮಿನೇಟ್ ಆದಾಗ ಬಹಳ ಜನರಿಗೆ ಬೇಸರ ಆಗಿತ್ತು.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SSC ಬರೋಬ್ಬರಿ 968 ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಇನ್ನು ಮುಂದೆ ಸಿಮ್ ಕಾರ್ಡ್ ಗಾಗಿ ಹೊರಗಡೆ ಅಲೆಯಬೇಕಾಗಿಲ್ಲ, ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು