TATA AVINYA : ವಿಶಿಷ್ಟ ವಿನ್ಯಾಸದಿಂದ ಗ್ರಾಹಕರಿಗೆ ಮೈ ಬಿಸಿ ಏರಿಸುವ ಟಾಟಾ ಅವಿನ್ಯಾ ಸದ್ಯದಲ್ಲೇ ಲಾಂಚ್ ಆಗಲಿದೆ.

TATA AVINYA: ಈ ನಡುವೆ ಎಲ್ಲಾದಕ್ಕಿಂತ ಮುಂದಾಗಿ ಟಾಟಾ ಮೋಟರ್ಸ್(TATA Motors) ಹೊಸ ರೀತಿಯ ಹೊಸ ವಿನ್ಯಾಸಗಳೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಗಳನ್ನು(EV) ಲಾಂಚ್ ಮಾಡುತ್ತಿದೆ. ಮುಂಬರುವ ಇನ್ನು ಕೆಲವೇ ವರ್ಷಗಳಲ್ಲಿ ಇನ್ನು ಅನೇಕ ವೈಶಿಷ್ಟ ರೀತಿಯ ವಾಹನಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ 2025ರ ವೇಳೆಗೆ ಟಾಟಾ ಅವಿನ್ಯ ಎಲೆಕ್ಟ್ರಿಕ್ ಕಾರನ್ನು(TATA AVINYA Electric Car) ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗುತ್ತದೆ.

WhatsApp Group Join Now
Telegram Group Join Now

ಮುಂಬರುವ ವರ್ಷಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಟಾಟಾ ಅವಿನ್ಯಾ(TATA AVINYA) ಭಾರತೀಯ ಮಾರುಕಟ್ಟೆಗೆ ದಾಪುಗಾಲು ಹಾಕಲಿದೆ. ಈ ವಾಹನವು ಕೇವಲ ಅತ್ಯಾಧುನಿಕ ಡಿಸೈನ್ ಮಾತ್ರವಲ್ಲ ಅತ್ಯುತ್ತಮ ಬ್ಯಾಟರಿಯನ್ನು ಕೂಡ ಹೊಂದಿದೆ. ಟಾಟಾ ಅವಿನ್ಯಾವನ್ನು 5 ಆಸನದ (seaters) ಕಾರ್ ನ ವಿನ್ಯಾಸದೊಂದಿಗೆ ನಿರ್ಮಾಣ ಮಾಡಲಾಗಿದೆ. ಇದು ಎಲ್ಇಡಿ ಹೆಡ್ ಲೈಟ್ ಯೂನಿಟ್ ಮತ್ತು ಸಂಪೂರ್ಣವಾಗಿ ಹೊಸ ಶೈಲಿಯೊಂದಿಗೆ ಕಂಡುಬರುತ್ತದೆ. ಇದು ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರ್ ಆಗಿದ್ದು ಇದರ ಕ್ಯಾಬಿನನ್ನು ವಿಶೇಷವಾದ ಸ್ಥಳದೊಂದಿಗೆ ನಿರ್ಮಿಸಲಾಗಿದೆ. ಹೆಡ್ ಲೈಟ್ ಸೈಡ್ ಪ್ರೊಫೈಲ್ ಗಳನ್ನು ಕೂಡ ಉದ್ದವಾದ ಸಾಲಿನಲ್ಲಿ ವಿಭಿನ್ನವಾಗಿ ಅಳವಡಿಸಲಾಗಿದೆ.

image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಟಾಟಾ ಅವಿನ್ಯಾದ ವೈಶಿಷ್ಟ್ಯತೆಗಳು(Features Of Tata Avinya)

  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್: ದೊಡ್ಡ ಟಚ್ ಸ್ಕ್ರೀನ್ ಇನ್ಸ್ಟ್ರುಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಬೇರೆ ಬೇರೆ ವಾಹನಗಳ ಪ್ರಮುಖ ಮಾಹಿತಿಯನ್ನು ಒಂದು ಸ್ಕ್ರೀನ್ ನಲ್ಲಿ ಪ್ರದರ್ಶಿಸುತ್ತದೆ.
  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ: ಅವಿನ್ಯಾದ ಆಂಡ್ರಾಯ್ಡ್ ಆಡಿಯೋ ಕನೆಕ್ಟಿವಿಟಿಯು ವಾಹನ ಸಂಪರ್ಕವನ್ನು ಸುಲಭವಾಗಿಸುತ್ತದೆ.
  • 360 ಡಿಗ್ರಿ ಕ್ಯಾಮೆರಾ: ಆವಿನ್ಯಾವು ಆಸುಪಾಸಿನ ಪ್ರದೇಶವನ್ನು 360 ಡಿಗ್ರಿ ಯಲ್ಲಿ ಪಡೆಯಲು ಸಹಾಯಕವಾಗುತ್ತದೆ.
  • ಎತ್ತರ ಹೊಂದಾಣಿಕೆ: ಟಾಟಾ ಅವಿನ್ಯಾ(TATA AVINYA) ವಾಹನಗಳು ಎತ್ತರ ಹೊಂದಾಣಿಕೆಯ ವಿಶೇಷತೆಯನ್ನು ಹೊಂದಿದ್ದು, ವಿವಿಧ ಭೂಪ್ರದೇಶಗಳಿಗೆ ಸುಖವಾಗಿ ಪ್ರಯಾಣಿಸಬಹುದು.
  • ಆಪಲ್ ಕಾರ್ಪ್ಲೇ ಸಂಪರ್ಕ: ಟಾಟಾ ಅವಿನ್ಯಾ ವಾಹನಗಳು ಆಸನಗಳೊಂದಿಗೆ ಆಪಲ್ ಕಾರ್ಪ್ಲೇ ಸಂಪರ್ಕವನ್ನು ಹೊಂದಿವೆ.

ಇದರಲ್ಲಿ ಸುರಕ್ಷತಾ ಮಟ್ಟವನ್ನು ವಿವಿಧ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಇದು ವಾಹನದ ಸುತ್ತಮುತ್ತ ಬರುವ ಜೀವಿಗಳು ಆಗಿರಬಹುದು ಅಥವಾ ಮನುಷ್ಯರೇ ಆಗಿರಬಹುದು ಸುತ್ತಮುತ್ತಲು ಬರುವ ವೆಹಿಕಲ್ ಗಳನ್ನು ಗುರುತಿಸಲು ಸ್ವಯಂಚಾಲಿತ ಸಿಸ್ಟಮ್ ಅನ್ನು ಉಪಯೋಗಿಸುತ್ತಿದೆ. ಇನ್ನು ಸ್ವಯಂ ಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆಯು ತುರ್ತು ಪರಿಸ್ಥಿತಿಯಲ್ಲಿ ವಾಹನದ ಬ್ರೇಕ್ ಸ್ವಯಂಚಾಲಿತವಾಗಿ ಕ್ರಿಯಾಶೀಲಗೊಳ್ಳುತ್ತದೆ. ಇನ್ನು ಈ ವಾಹನದಲ್ಲಿ ಸಾಲಿನಿಂದ ಹೊರಗಡೆ ಹೋಗುವುದು ಹಾಗೂ ಮತ್ತೆ ಸಾಲಿಗೆ ತಂದು ನಿಲ್ಲಿಸುವುದು ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ.

ರಿಯಲ್ ಕ್ರಾಸ್ ಟ್ರಾಫಿಕ್ ಅಲರ್ಟ್ ಇದು ವಾಹನದ ಸುತ್ತಲಿನ ಚಲನೆಯನ್ನು ಗಮನಿಸಲು ಸಹಾಯ ಮಾಡುತ್ತದೆ. ಇನ್ನು ಟ್ರಾಫಿಕ್ ಜಾಮ್ ಅಸಿಸ್ಟ್ ಸಮಯದಲ್ಲಿ ಮಾರ್ಗವನ್ನು ಹುಡುಕುವ ಸಹಾಯವನ್ನು ನೀಡುತ್ತದೆ. ಸ್ವಯಂ ಚಾಲಿತ ಹೈ ಭೀಮ್ ಅಸಿಸ್ಟೆಂಟ್ ಅಳವಡಿಸಲಾಗಿದೆ ಇದು ಪ್ರಮುಖವಾಗಿ ಹಾನಿಕಾರಕ ಪ್ರಾಣಿಗಳನ್ನು ಗಮನಿಸಲು ಹೆಚ್ಚಿನ ಸುರಕ್ಷತಾ ವ್ಯವಸ್ಥೆಯಲ್ಲಿ ಸಹಾಯ ಮಾಡುತ್ತದೆ.

30 ಲಕ್ಷ ಹಣದೊಂದಿಗೆ ಆರಂಭವಾಗುವ ಬೆಲೆಯ ಜೊತೆ 2025ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಲಿದೆ ಎಂದು ಶೈಲೇಶ್ ಚಂದ್ರ ಜಿ ಅವರು ದೃಢಪಡಿಸಿದ್ದಾರೆ ಮುಂದಿನ ವರ್ಷದಲ್ಲಿ ಟಾಟಾ ಕರ್ವಿವಿ ಪ್ರಾರಂಭಿಸುವ ಸಾಧ್ಯತೆಗಳಿವೆ. ಟಾಟಾ ಅವಿನ್ಯಾ(TATA AVINYA). ಇನ್ನೂ ಯಾವ ಪ್ರತಿಸ್ಪರ್ಧಿಗಳನ್ನು ಎದುರಿಸದೆ ಇದ್ದರೂ ಕೂಡ 2025ರ ವೇಳೆಗೆ ಪ್ರತಿಸ್ಪರ್ಧಿಯೊಂದಿಗೆ ಹೋರಾಡುವ ಸಾಧ್ಯತೆ ಇದೆ ಈ ವಾಹನವು ವಿವಿಧ ಶೈಲಿಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಕೇವಲ 27 ನಿಮಿಷದ ಚಾರ್ಜ್ ಗೆ 720 ಮೈಲೇಜ್ ಕೊಡುವ ಭರ್ಜರಿ ಬೇಡಿಕೆಯೊಂದಿಗೆ ಹೊಸ ಕಿಯಾ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಮಿಂಚಲಿದೆ. 

ಇದನ್ನೂ ಓದಿ: ದೀಪಾವಳಿಯ ನಿಮಿತ್ತ ಭರ್ಜರಿ ರಿಯಾಯಿತಿಯೊಂದಿಗೆ ಹೋಂಡಾ ಬೈಕ್ ಆರು ಬಂಪರ್ ಆಫರ್ ಗಳನ್ನು ನೀಡುತ್ತಿದೆ. 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram