ಯಾವುದೇ ದೇಶದ ಆರ್ಥಿಕತೆಯನ್ನು ಆ ಉತ್ಪನ್ನಗಳು, ಜನರ ಜೀವನಮಟ್ಟ, ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಏರುವ ಅಥವಾ ಇಳಿಯುವ ಆರ್ಥಿಕ ಬೆಳವಣಿಗೆ ಹಾಗೂ ವಿದೇಶಿ ವಿನಿಮಯ ಏಷ್ಟು ಆಗಿದೆ. ಸಾಲದ ಬಗ್ಗೆ ಮಾಹಿತಿ, ಬಡತನ ಹಾಗೂ ನಿರುದ್ಯೋಗಿ ದರ ಎಲ್ಲವನ್ನೂ ಪರಿಗಣಿಸಲಾಗುತ್ತದೆ.
ಭಾರತದ ಎರಡನೇ ಅತಿ ದೊಡ್ಡ ಪ್ರೈವೇಟ್ ಕಂಪನಿ ಅಂದರೆ ಅದು ಟಾಟಾ. ಟಾಟಾ ಕಂಪೆನಿಯ ಒಟ್ಟು ಮೌಲ್ಯ 365 ಶತಕೋಟಿ. ಆದರೆ ಭಾರತದ ವೈರಿ ರಾಷ್ಟ್ರ ಆಗಿರುವ ಪಾಕಿಸ್ತಾನದ ಆರ್ಥಿಕತೆಯು ಇದರ ಅರ್ಧದಷ್ಟು ಇದೆ. ಪಾಕಿಸ್ತಾನ ಈಗಾಗಲೇ ಆರ್ಥಿಕ ಸವಾಲನ್ನು ಎದುರಿಸುತ್ತಾ ಇರುವ ಬಗ್ಗೆ ಗೊತ್ತೇ ಇದೆ. ಆದರೆ ಒಂದು ಪ್ರೈವೇಟ್ ಕಂಪನಿಯ ಬಂಡವಾಳದ ಆರ್ಥಿಕತೆ ಅರ್ಧ ಪಾಕಿಸ್ಥಾನದ ಪೂರ್ಣ ಆರ್ಥಿಕತೆಯಾಗಿದೆ. ಟಾಟಾ ಕಂಪೆನಿಯ ಬಂಡವಾಳ ಮೊತ್ತ 365 ಶತಕೋಟಿ ಆದರೆ ಪಾಕಿಸ್ತಾನದ ಜಿಡಿಪಿ 341 ಶತಕೋಟಿ ಆಗಿದೆ. 170 ಕೋಟಿ ಮೌಲ್ಯದ ಟಾಟಾ ಕನ್ಸಲ್ಟೆಂಟ್ ಸರ್ವೀಸ್ ಪಾಕಿಸ್ತಾನದ GDP ಯ ಅರ್ಧ ಇದೆ. ಟಾಟಾ ಕಂಪೆನಿಯ ಆರ್ಥಿಕ ಬೆಳವಣಿಗೆ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಪಾಕಿಸ್ತಾನದ ಅರ್ಥಿಕತೆ ಕುಸಿತ ಕಾಣಲು ಹಲವಾರು ಕಾರಣಗಳನ್ನು ಎಂದೆಂದರೆ ಹಣದುಬ್ಬರ, ಡಾಲರ್ ಎದುರು ಕುಸಿತ ಕಂಡ ಪಾಕಿಸ್ಥಾನದ ರೂಪಾಯಿ ಮೌಲ್ಯ, ಹೆಚ್ಚಾದ ಸಾಲ, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಮೂಲ ಕಾರಣವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಟಾಟಾ ಕಂಪೆನಿಯ ಬೇರೆ ಬೇರೆ ಆದಾಯದ ಮೂಲಗಳು ಯಾವುದು?
ಟಾಟಾ ಪ್ರಮುಖ 7 ಬ್ಯುಸಿನೆಸ್ ವಿಭಾಗಗಳನ್ನು ಹೊಂದಿದೆ. ಅವುಗಳು ಟಾಟಾ ಕಂಪನಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.
- ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS): ಇದು ಒಂದು ಭಾರತದ ಅತಿ ದೊಡ್ಡ IT ಕಂಪನಿಯಾಗಿದೆ. ಜಾಗತಿಕವಾಗಿ ಸಹ ಇದು ಹೆಚ್ಚಿನ ಲಾಭ ಗಳಿಸುತ್ತದೆ. 2023 ರ ಆರ್ಥಿಕ ವರ್ಷದಲ್ಲಿ ಸುಮಾರು 2.25 ಟ್ರಿಲಿಯನ್ ಭಾರತೀಯ ರೂಪಾಯಿಗಳ ವಾರ್ಷಿಕ ಮಾರಾಟವನ್ನು ಮಾಡಿದೆ.
- ಟಾಟಾ ಮೋಟಾರ್ಸ್: ಟಾಟಾ ಗ್ರೂಪ್‌ನ ವಾಹನ ಉತ್ಪಾದನಾ ಭಾಗವಾಗಿದೆ. ಟಾಟಾ ಕಂಪನಿಯು ಭಾರತದ ಅತಿದೊಡ್ಡ ವಾಹನ ಉತ್ಪಾದನೆ ಮತ್ತು ಮಾರಾಟ ಮಾಡುವ ಕಂಪನಿ ಆಗಿದೆ. ಮತ್ತು ಜಾಗತಿಕವಾಗಿ 4 ನೇ ಅತಿ ದೊಡ್ಡ ಮೋಟಾರ್ಸ್ ಕಂಪನಿ ಆಗಿದೆ.
- ಟಾಟಾ ಸ್ಟೀಲ್:- ಇದು ಸಹ ಭಾರತದಲ್ಲಿ ಅತಿ ದೊಡ್ಡ ಉಕ್ಕು ಉತ್ಪಾದನಾ ಕೇಂದ್ರವಾಗಿ ಬೆಳೆದಿದೆ. ಇದು ಪ್ರಪಂಚದಲ್ಲಿ ಎರಡನೇ ದೊಡ್ಡ ಉಕ್ಕು ಉತ್ಪಾದನಾ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಸಹ ಟಾಟಾ ಸಮೂಹಕ್ಕೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.
- ಟಾಟಾ ಕೆಮಿಕಲ್ಸ್: ಭಾರತದ ಅತಿದೊಡ್ಡ ರಾಸಾಯನಿಕ ಉತ್ಪಾದನಾ ಕಂಪನಿ ಆಗಿದೆ.
- ಟಾಟಾ ಗ್ಲೋಬಲ್ ಬೆವರೇಜಸ್: ಇದು ಪಾನೀಯ ಉತ್ಪಾದನಾ ಕಂಪನಿ ಆಗಿದ್ದು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಸಹ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
- ಟಾಟಾ ಪವರ್: ಉತ್ಪಾದನಾ ವಿದ್ಯುತ್ ಕಂಪನಿ ಇದಾಗಿದ್ದು. ಟಾಟಾ ಪವರ್ ಭಾರತದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕವಾಗಿದೆ.
- ಟಾಟಾ ಕಮ್ಯುನಿಕೇಷನ್ಸ್ :- ಇದು ಭಾರತದ ದೂರ ಸಂಪರ್ಕ ಕಂಪನಿ ಆಗಿದೆ. ಇಂಟರ್ನೆಟ್ ಸೇವೆಯನ್ನು ಒದಗಿಸುವಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ.
ಇದರ ಜೊತೆಗೆ ಟಾಟಾ ಗ್ರೂಪ್ ಟಾಟಾ ಕ್ಲಿಕ್, ಟಾಟಾಬಕ್ಸ್, ಟಾಟಾ ಟೈಟಾನ್, ಟಾಟಾ ಸ್ಕೈ, ಟಾಟಾ ಮುಂತಾದ ಟ್ರಸ್ಟ್ ಟಾಟಾ ಕಂಪೆನಿಯ ಭಾಗವಾಗಿದೆ.
ಇದನ್ನೂ ಓದಿ: ಆಶಾಕಿರಣ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; HRA 3% ಏರಿಕೆ ಯಾವಾಗ ಎಂದು ಸರ್ಕಾರ ತಿಳಿಸಿದೆ.