TCS ನಲ್ಲಿ ಫ್ರೆಶರ್‌ಗಳ ನೇಮಕಾತಿಗೆ ಏಪ್ರಿಲ್ 5 ಕೊನೆಯ ದಿನ

TCS ION Hiring Freshers

ಟಿಸಿಎಸ್ ಭಾರತದ ಐಟಿ ಸೆಕ್ಟರ್ ನ ದೊಡ್ಡ ಕಂಪನಿ. ಪ್ರತಿಯೊಬ್ಬ ಪದವಿದರರಿಗೆ ಒಮ್ಮೆ ಆದರೂ ಟಿಸಿಎಸ್ ನಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಎಲ್ಲ ಕಡೆಗಳಲ್ಲಿ experience ಕೇಳುತ್ತಾರೆ. experience ಪಡೆಯಲು ಯಾವುದಾದರೂ ಚಿಕ್ಕ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಆಲೋಚಿಸುತ್ತಾ ಇರುವವರಿಗೆ ಈಗ TCS ನಲ್ಲಿ ಫ್ರೆಶರ್‌ಗಳಿಗೆ ಸುವರ್ಣ ಅವಕಾಶ ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ಮೊದಲು TCS ರಾಷ್ಟ್ರೀಯ ಅರ್ಹತಾ ಪರೀಕ್ಷೆ (TCS NQT) ಅಟೆಂಡ್ ಮಾಡಬೇಕು. :- ನೀವು TCS ನಲ್ಲಿ ಹುದ್ದೆ ಪಡೆಯಬೇಕು ಎಂದಾದರೆ ಮೊದಲು ನೀವು TCS NQT ಪರೀಕ್ಷೆಯನ್ನು ಪಾಸ್ ಆಗಬೇಕು. ಈ ಪರೀಕ್ಷೆ ನಿಮ್ಮ ನಿಮ್ಮ ಕೌಶಲ್ಯಗಳನ್ನು ಸಾಬೀತುಪಡಿಸಲು ನೀಡುವ ಒಂದು ಪರೀಕ್ಷೆ ಆಗಿದ್ದು , ನೀವು ಈ ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳ ಮೇಲೆ ಮುಂದಿನ ಹಂತಕ್ಕೆ ಹೋಗುತ್ತೀರಿ. ಎರಡು ಅಥವಾ ನಾಲ್ಕು ವಾರಕೊಮ್ಮೆ ಪರೀಕ್ಷಾ ಕೇಂದ್ರದಲ್ಲಿ TCS NQT ನಡೆಯುತ್ತದೆ. ನಿಮ್ಮ ಅಂಕಪಟ್ಟಿಯ ಪ್ರತಿ ವಿಭಾಗದಲ್ಲಿ ನಿಮ್ಮ ಕಾರ್ಯಕ್ಷಮತೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಪರೀಕ್ಷೆಯನ್ನು ಚೆನ್ನಾಗಿ ಬರೆದರೆ ಟಿಸಿಎಸ್ ಹುದ್ದೆಗಳಿಗೆ ನಿಮ್ಮ ಅಂಕಪಟ್ಟಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಹತಾ ಪಟ್ಟಿ:-

  • ಯಾವುದೇ ವಿಷಯದಲ್ಲಿ ಪದವಿಯ ಪೂರ್ವ-ಅಂತಿಮ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
  • 2019-2025 ರ ನಡುವೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹುದ್ದೆ ಅರ್ಜಿ ಸಲ್ಲಿಸಬಹುದು.
  • 2 ವರ್ಷಗಳ ಕೆಲಸದ ಅನುಭವ ಇರುವ ಅಭ್ಯರ್ಥಿಗಳು ಹುದ್ದೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ ?

  • ಸ್ಟೆಪ್ 1: TCS NQT ಗೆ ಅರ್ಜಿ ಸಲ್ಲಿಸಬೇಕು ನಂತರ ನಿಮ್ಮ ಅರ್ಹತೆಯ ಪರೀಕ್ಷೆ ನಡೆಸಲಾಗುತ್ತದೆ.
  • ಸ್ಟೆಪ್ 2: ಪರೀಕ್ಷೆ ಅಟೆಂಡ್ ಅದ ನಂತರ ನೀವು ನಿಮ್ಮ NQT ಅಂಕಪಟ್ಟಿ ಪಡೆಯಿಬೇಕು.
  • ಸ್ಟೆಪ್ 3: NQT ಅಂಕಪಟ್ಟಿ ಪಡೆದ ನಂತರ TCS ನ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.
  • ಸ್ಟೆಪ್ 4: ಇಲ್ಲವೇ ಇತರ ಕಾರ್ಪೊರೇಟ್‌ಗಳ ವೆಬ್‌ಸೈಟ್‌ಗಳಲ್ಲಿಯೂ TCS ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  • ಸ್ಟೆಪ್ 5: ನಿಮ್ಮ NQT ಅಂಕಗಳು ಹಾಗೂ ಸೂಕ್ತತೆಯ ಆಧಾರದ ಮೇಲೆ ಉದ್ಯೋಗಗಳನ್ನು ಪಡೆಯುತ್ತೀರಿ.

ಪ್ರಮುಖ ದಿನಾಂಕಗಳು :-

  • TCS NQT ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 5 2024.
  • TCS NQT ಪರೀಕ್ಷೆ ನಡೆಯುವ ದಿನಾಂಕ: ಏಪ್ರಿಲ್ 17 2024.
  • ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ನಗೆ ಭೇಟಿ ನೀಡಿ.

ನಾವು ಕಾಲೇಜು ಕ್ಯಾಂಪಸ್‌ಗಳಿಂದ ನೇಮಕಾತಿ ಮಾಡಿಕೊಳ್ಳಲು ಮತ್ತು ಪ್ರತಿಭೆಗಳನ್ನು ಬೆಳೆಸಲು ಬದ್ಧರಾಗಿದ್ದೇವೆ. ಮುಂದಿನ ವರ್ಷಕ್ಕೆ ನಮ್ಮ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದೇವೆ ಮತ್ತು TCS ಗೆ ಸೇರಲು ಫ್ರೆಶರ್‌ಗಳಲ್ಲಿ ಉತ್ಸಾಹ ತುಂಬಾ ಹೆಚ್ಚಾಗಿದೆ ಎಂಬ ಮಾಹಿತಿಯನ್ನು TCS ತಿಳಿಸಿದೆ. ಇನ್ನೂ TCS ನಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬ ವರದಿಯು ಸುಳ್ಳು ಎಂದು ತಿಳಿಸಿದೆ. ಆದರೆ ಕೆಲವು ಪತ್ರಿಕಾ ವರದಿಗಳ ಪ್ರಕಾರ TCS ಹಲವು ಕಾರಣಗಳಿಂದ ಉದ್ಯೋಗ ಕಡಿತ ಮಾಡಿರುವ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ: ಈ ಅವಕಾಶವನ್ನು ನೀವು ಬಳಸಿಕೊಂಡರೆ ನೀವು iPhone 14 ಅಥವಾ 14 Plus ಖರೀದಿಯಲ್ಲಿ 22,000 ರೂಪಾಯಿಗಳನ್ನು ಉಳಿಸಬಹುದು.