ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನ ಅಂಗಸಂಸ್ಥೆಯಾದ TCS iON ಅವರು ಯುವ ವೃತ್ತಿಪರರಿಗಾಗಿ ಉಚಿತ 15 ದಿನಗಳ ಟಿಸಿಎಸ್ ಐಯಾನ್ ಕೆರಿಯರ್ ಎಡ್ಜ್ ಎಂಬ ಆನ್‌ಲೈನ್ ಕೋರ್ಸ್ ನೀಡಲು ತೀರ್ಮಾನಿಸಲಾಗಿದೆ. 15-ದಿನಗಳ ವೃತ್ತಿಪರಕೋರ್ಸ್ ನಲ್ಲಿ ಯುವಕರಿಗೆ ಬೇಕಾಗಿರುವ ಉದ್ಯೋಗ ಕೌಶಲ್ಯಗಳನ್ನು ಕಲಿಸುತ್ತಾರೆ. ಉತ್ತಮ ಜಾಬ್ ತೆಗೆದುಕೊಳ್ಳಲು ಇದು ಬಹಳ ಅನುಕೂಲಕರವಾಗಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಕೋರ್ಸ್ ನಲ್ಲಿ ಕಲಿಸುವ ವಿಷಯಗಳು:-
- ಕಮ್ಯುನಿಕೇಶನ್ ಸ್ಕಿಲ್ ( communication skill) :- ಸಂದರ್ಶನದಲ್ಲಿ confident ಆಗಿ ಮಾತನಾಡುವುದು ಹೇಗೆ ಹಾಗೂ ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ ಎಂದು ಹೇಳಿಕೊಡುತ್ತಾರೆ.
- ಪ್ರೆಸೆಂಟೇಷನ್ ಸ್ಕಿಲ್ :- ಪ್ರೆಸೆಂಟೇಷನ್ ತಯಾರಿಸುವುದು ಹೇಗೆ ಮತ್ತು ಅದನ್ನು ವಿವರಿಸುವ ಕೌಶಲ್ಯದ ವಿಷಯ ಇರುತ್ತದೆ.
- ಸಾಫ್ಟ್ ಸ್ಕಿಲ್ :- ಸಾಫ್ಟ್ ಸ್ಕಿಲ್ ಗಳು ಎಂದರೆ ಸಂವಹನ , ಟೈಮ್ ಮ್ಯಾನೇಜ್ಮೆಂಟ್ ಗಳ ವಿಷಯಗಳ ಬಗ್ಗೆ ಇರುತ್ತದೆ.
- ರೆಸ್ಯುಮ್ ಪ್ರಿಪೇರ್ :- ಕಂಪನಿಗಳಿಗೆ ನೀಡುವ ರೆಸ್ಯುಮ್ ತಯಾರಿಸುವುದು ಹೇಗೆ ಹಾಗೂ ಯಾವ ಯಾವ ಮಾಹಿತಿಯನ್ನೂ ರೆಸ್ಯುಮ್ ನಲ್ಲಿ ಹಾಕಬೇಕು ಎಂದು ಸಂಕಿಪ್ತವಾಗಿ ತಿಳಿಸುತ್ತಾರೆ.
- ಗ್ರೂಪ್ ಡಿಸ್ಕಶನ್ :- interview ದಲ್ಲಿ ಗ್ರೂಪ್ ಡಿಸ್ಕಶನ್ ಎಂಬ ರೌಂಡ್ ಇರುತ್ತದೆ. ಅಲ್ಲಿ ಹೇಗೆ ಆಕ್ಟಿವ್ ಇರಬೇಕು. ಉಳಿದ ಸಹಪಾಠಿಗಳ ಜೊತೆಗೆ ಹೇಗೆ ವರ್ತಿಸಬೇಕು ಎಂದು ತಿಳಿಸಿಕೊಡುವುದು.
- ಇಮೇಲ್ ಬರವಣಿಗೆ :- ಇಮೇಲ್ ಬರೆಯುವ ವಿಧಾನ ಹೇಗೆ ಮತ್ತು ಯಾವ ಯಾವ ವಿಷಯಗಳನ್ನು ಒಳಗೊಂಡಿರಬೇಕು ಎಂದು ತಿಳಿಸುವುದು. ಹಾಗೂ ಯಾವ ಅಧಿಕಾರಿಗೆ ಯಾವ ರೀತಿ ಇಮೇಲ್ ಬರೆಯಬೇಕು ಎಂಬ ವಿಷಯಗಳ ಬಗ್ಗೆ ಇರುತ್ತದೆ.
- ಟೆಲಿಫೋನ್ ಇಂಟರ್ವ್ಯೂ:- ಟೆಲಿಫೋನ್ ಇಂಟರ್ವ್ಯೂ ದಲ್ಲಿ ಹೇಗೆ ಮಾತನಾಡಬೇಕು ಯಾವ ರೀತಿಯಲ್ಲಿ ಉತ್ತರಿಸಬೇಕು ಎಂದು ಕಲಿಯುತ್ತಿರಿ.
- ಅಕೌಂಟಿಂಗ್ ಫಂಡಮೆಂಟಲ್ಸ್ : ಹಣಕಾಸಿನ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಪರಿಕಲ್ಪನೆಗಳನ್ನು ತಿಳಿಸಿಕೊಡುತ್ತದೆ.
ಇದನ್ನೂ ಓದಿ: ಹುಂಡೈ ಕ್ರೆಟಾ ಸೇರಿದಂತೆ ಒಟ್ಟು ಐದು ಮಧ್ಯಮ ಗಾತ್ರದ SUV ಗಳ ಬಂಪರ್ ಮಾರಾಟಗಳು, ತಿಳಿಯುವ ಬಯಕೆ ಇದ್ದರೆ ಪೂರ್ತಿ ಲೇಖನವನ್ನು ಓದಿ
ಕೋರ್ಸ್ ನಿಂದ ಇರುವ ಲಾಭಗಳು :-
- ಇಂಟರ್ವ್ಯೂ ನಲ್ಲಿ ಹೇಗೆ ವರ್ತಿಸಬೇಕು ಹಾಗೂ ಸಂದರ್ಶಕರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ಕಲಿಯುವುದರಿಂದ ಸುಲಭವಾಗಿ ನೀವು ಒಂದು ಹಂತದ ಇಂಟರ್ವ್ಯೂ ಪಾಸ್ ಆದಂತೆ.
- ಮೊದಲು ಇಂಟರ್ವ್ಯೂ ರೂಂ ಒಳಗೆ ಹೇಗೆ ಬರಬೇಕು ನಿಮ್ಮ ಪರಿಚಯ ಹೇಗೆ ಮಾಡಿಕೊಳ್ಳಬೇಕು ಎಂದು ಸರಿಯಾದ ಕ್ರಮ ಅರಿವು ಆಗುವುದರಿಂದ ನೀವು ಬಹಳ ಬುದ್ಧಿವಂತರು ಎಂದು ಸಂದರ್ಶಕ ಭಾವಿಸುತ್ತಾರೆ.
- ರೆಸ್ಟಮ್ ಅನ್ನು ತುಂಬಿಸಿ ಇಡುವುದು ಬಿಟ್ಟು ಯಾವ ವಿಷಯ ಏಷ್ಟು ಹಾಕಬೇಕು ಎಂಬುದನ್ನು ಅರಿತ ಮೇಲೆ ನಿಮ್ಮ ರೆಸ್ಯುಮ್ ನೋಡಿದ ಕೂಡಲೇ ಇಂಪ್ರೆಸ್ ಆಗುತ್ತದೆ.
- ಗ್ರೂಪ್ ಡಿಸ್ಕಷನ್ ಏನು ಎಂದು ಅರಿಯದೆ ಎಲ್ಲರ ಮಧ್ಯ ಹೋಗಿ ಸುಮ್ಮನೆ ಕೂರುವುದನ್ನು ತಪ್ಪಿಸಿಕೊಳ್ಳಬಹುದು.
- ಐಟಿ ಕಂಪನಿಗಳಲ್ಲಿ ನ ವ್ಯವಹಾರ ಸಂವಹನದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.
- ಇಂಟರ್ವ್ಯೂ ಗೆ ಹೋಗುವ ಮುನ್ನ ಬ್ಲಾಂಕ್ ಆಗಿ ಹೋಗುವ ಬದಲು ಇಂಟರ್ವ್ಯೂ ಹೇಗೆ ಇರುತ್ತದೆ ಎಂದು ತಿಳಿದು ಪ್ರಿಪೇರ್ ಆಗಲೂ ಅನುಕೂಲ ಆಗುತ್ತದೆ.
- ಇದು ಆನ್ಲೈನ್ ಕೋರ್ಸ್ ಆಗಿರುವುದರಿಂದ ನೀವು ಮನೆಯಿಂದಲೇ ಅಟೆಂಡ್ ಆಗಬಹುದು.
- ಯಾವುದೇ ಭಯವಿಲ್ಲದೇ ಇಂಟರ್ವ್ಯೂ ಅಟೆಂಡ್ ಆಗಲೂ ಇದು ಉತ್ತಮ.
- ಪ್ರೊಫೆಷನಲ್ ಆಗಿ ಹೇಗೆ ನಡೆದುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಒಂದೇ ಕಡೆ ನಿಮಗೆ ಸಿಕ್ಕಂತೆ ಆಗುತ್ತದೆ.
- ಸಾವಿರಾರು ರೂಪಾಯಿಗಳ ಫೀಸ್ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ: ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ ಪರ್ಸನಲ್ ಲೋನ್…