ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಭಾರತ ಮೂಲದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ (IT) ಸೇವಾ ಖಾಸಗಿ ಸಲಹಾ ಮತ್ತು ವ್ಯಾಪಾರ ಪರಿಹಾರಗಳ ಕಂಪನಿಯಾಗಿದೆ. 1968 ರಲ್ಲಿ ಸ್ಥಾಪಿತವಾದ TCS, ಟಾಟಾ ಗ್ರೂಪ್ ಗೆ ಸೇರಿದೆ. ಇದು ಒಂದು ವಿಶ್ವದ ಅತಿದೊಡ್ಡ IT ಸೇವಾ ಕಂಪನಿಗಳಲ್ಲಿತ್ತಿದೆ. ಇದರ ಮುಖ್ಯ ಶಾಖೆ ಮುಂಬೈ ನಲ್ಲಿ ಇದೆ. ಈ ಕಂಪನಿಯಲ್ಲಿ ಕೆಲಸ ಮಾಡಲು ಯುವಕರು ಬಹಳ ಆಸೆ ಪಟ್ಟಿರುತ್ತಾರೆ. ಅಂತವರಿಗೆ ಈಗ ಒಂದು ಸುವರ್ಣ ಅವಕಾಶ ಬಂದಿದೆ. ಮಾರ್ಚ್ 9 ಶನಿವಾರ ಕೆಲವು ಹುದ್ದೆಗಳ ನೇಮಕಾತಿಗೆ ಇಂಟರ್ವ್ಯೂ ಕರೆಯಲಾಗಿದೆ. ಹುದ್ದೆಗಳ ಪೂರ್ಣ ವಿವರಗಳು ಇಲ್ಲಿವೆ.
ಕೆ. ಕೃತಿವಾಸನ್ ಅವರು ನಾಸ್ಕಾಮ್ ಅಧಿವೇಶನದಲ್ಲಿ ಹೇಳಿದ ಮಾತೇನು?: ನಮ್ಮ ಕಂಪನಿಯಲ್ಲಿ ಉದ್ಯೋಗಗಳ ಕಡಿತ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ ಹಾಗೆಯೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಾ ಇದ್ದೇವೆ. ನಮ್ಮ ಕಂಪನಿಯಲ್ಲಿ ನಾವು ನೇಮಕಾತಿ ಹಂತವನ್ನು ಬದಲಾಯಿಸಬೇಕಾಗುತ್ತದೆ, ಆದರೆ ನೇಮಕಾತಿ ಯೋಜನೆಯನ್ನು ಕಡಿತಗೊಳಿಸುವುದಿಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸಿದರು. ಇದರ ಜೊತೆಗೆ ನಾವು ವರ್ಕ್ ಫ್ರಮ್ ಹೋಂ ಜಾಬ್ ಗಿಂತ ವರ್ಕ್ ಫ್ರಮ್ ಆಫೀಸ್ ಕೆಲಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತವೆ ಎಂಬ ಮಾತನ್ನು ತಿಳಿಸಿದರು.
ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.?: ವಾಕ್ ಇನ್ ಇಂಟರ್ವ್ಯೂ ನಲ್ಲಿ ನೇಮಕಾತಿ ನಡೆಯುವ ಹುದ್ದೆಗಳ ಹೆಸರು ಹೀಗಿವೆ :-ಕಾರ್ನರ್‌ಸ್ಟೋನ್ ಇಂಪ್ಲಿಮೆಂಟೇಶನ್ ಕನ್ಸಲ್ಟೆಂಟ್, ಕಾರ್ನರ್‌ಸ್ಟೋನ್ / LXP ಇಂಪ್ಲಿಮೆಂಟೇಶನ್ ಕನ್ಸಲ್ಟೆಂಟ್, SABA ಅನುಷ್ಠಾನ ಸಲಹೆಗಾರ, ಯುಕೆಜಿ ಆಯಾಮಗಳ ಸಲಹೆಗಾರ, UKG – ಆಯಾಮಗಳ ಕ್ರಿಯಾತ್ಮಕ ಸಲಹೆಗಾರ, Knonos WFM ಡೆವಲಪರ್, ಕೆಲಸದ ದಿನದ ಕೋರ್ HCM, ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಂದರ್ಶನ ನಡೆಯುವ ಸ್ಥಳ :-
ಬೆಂಗಳೂರಿನ TCS ನ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ನೇರವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ – ಅಭಿಲಾಷ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಸೆಂಟರ್, ಪ್ಲಾಟ್ ನಂ. 96, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ, ವೈಟ್‌ಫೀಲ್ಡ್, ಬೆಂಗಳೂರು – 560066 ವಿಳಾಸಕ್ಕೆ ಭೇಟಿ ನೀಡಿ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಯ ಪಟ್ಟಿ ಹೀಗಿದೆ:-
- ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರ್ಣಗೊಂಡಿರಬೇಕು.
- BE ಅಥವಾ B.Tech ಅಥವಾ MCA ಅಥವಾ M.Sc ಅಥವಾ MS ಜೊತೆಗೆ ಕನಿಷ್ಠ 2 ವರ್ಷಗಳ ಸಂಬಂಧಿತ ಅನುಭವದ ನಂತರ ಹೊಂದಿರಬೇಕು.
- B.Sc ಅಥವಾ BCA ಪದವೀಧರರು ಕನಿಷ್ಠ 2.5 ವರ್ಷಗಳ ಕಾಲ IT ಅನುಭವ ಹೊಂದಿರಬೇಕು.
- ಪೂರ್ಣ ಸಮಯದ ಕೋರ್ಸ್‌ಗಳನ್ನು ಮುಗಿಸಿದ್ದಾರೆ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದು.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಸಹ ಅರ್ಜಿ ಸಲ್ಲಿಸಬಹುದು
ಇಂಟರ್ವ್ಯೂ ಗೆ ತೆರಳುವಾಗ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು:-
- ರೆಸ್ಯುಂ ಪ್ರತಿ
- ಗೌರ್ನೆಮೆಂಟ್ ಐಡಿ ಪ್ರೂಫ್
- ಪಾಸ್ಪೋರ್ಟ್ ಸೈಜ್ ಫೋಟೋ
- ಎಜುಕೇಷನ್ ಸರ್ಟಿಫಿಕೇಟ್ ಪ್ರತಿ
- ಅನುಭವ ಇರುವ ಅಭ್ಯರ್ಥಿಗಳು ಎಕ್ಸ್ಪೀರಿಯೆನ್ಸ್ ಸರ್ಟಿಫಿಕೇಟ್
- TCS ಅರ್ಜಿ ನಮೂನೆ
ಇಂಟರ್ವ್ಯೂ ನಡೆಯುವ ಸಮಯ:- ಬೆಳಗ್ಗೆ 9 ರಿಂದ ಮಧ್ಯಾನ್ಹ 1 ಗಂಟೆಯವರೆಗೆ.
ಇದನ್ನೂ ಓದಿ: ಇನ್ನು ಮುಂದೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ತುಂಬಾ ಸುಲಭ, ಅದರಲ್ಲೂ ಓಲಾ ಸ್ಕೂಟರ್ ಅಂತೂ ವಿಶೇಷ ರಿಯಾಯಿತಿಯಲ್ಲಿ!