ಡಿಸೆಂಬರ್ ತಿಂಗಳಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸೇರಿದಂತೆ ಐದು ಗ್ರಹ ಗಳು ಸಾಗುತ್ತವೆ. ಸೂರ್ಯ ಮಂಗಳ ಮತ್ತು ಬುಧ, ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಬುಧಾದಿತ್ಯ ಯೋಗವನ್ನು ಉಂಟು ಮಾಡುತ್ತವೆ. ಸೂರ್ಯ ಮತ್ತು ಮಂಗಳನ ಸಂಯೋಜನೆ ಆದಿತ್ಯ ಮಂಗಳ ಎಂಬ ರಾಜ ಯೋಗವನ್ನು ರೂಪಿಸುತ್ತಿದೆ. ಇದರಿಂದ ಯಾರ್ಯಾರಿಗೆ ಅದೃಷ್ಟ ಇದೆ, ಒಳ್ಳೆಯ ಸಮಯ ಯಾರಿಗೆ ಶುರುವಾಗ್ತಿದೆ, ಯಾವ ರಾಶಿಯವರಿಗೆ ಅನುಕೂಲಕರ ಸಮಯ ಅನ್ನೋದನ್ನ ಈ ಲೇಖನದಲ್ಲಿ ನಾವು ಸಂಪೂರ್ಣವಾಗಿ ನೋಡ್ತಾ ಹೋಗೋಣ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅದೃಷ್ಟದ ರಾಶಿಗಳಿವು
ಮೊದಲಿಗೆ ವೃಷಭ ರಾಶಿ, ವೃಷಭ ರಾಶಿಗೆ ಡಿಸೆಂಬರ್ ನಲ್ಲಿ ಸಂಭವಿಸುವ ಗ್ರಹಗಳ ಸಂಚಾರ ಅದೃಷ್ಟವನ್ನು ಹೆಚ್ಚು ಮಾಡುತ್ತೆ. ಮುಂಬರುವ ವರ್ಷದಲ್ಲಿ ಪ್ರಗತಿಗೆ ಅನೇಕ ಅವಕಾಶಗಳನ್ನು ಕೂಡ ಪಡೀತಾರೆ ಹೊಸ ವರ್ಷ ಬರ್ತಾ ಇರೋದ್ರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಯಾವುದೇ ಪ್ರಯೋಗ ಮಾಡಿದರು ಕೂಡ. ನಿಮ್ಮ ಕಡೆಯಿಂದ ನೀವು ಅದೃಷ್ಟವನ್ನು ಪಡೆಯುತ್ತೀರಿ. ನೀವು ಯಾವುದೇ ಒಂದು ಹೊಸ ಯೋಜನೆಯನ್ನು ಮಾಡಬೇಕು ಅಥವಾ ಹೊಸ ಪ್ರಯೋಗ ಮಾಡಬೇಕು ಅಂತಿದ್ರೆ ನಿಮ್ಮ ವೃತ್ತಿಯಲ್ಲಿ ಅಥವಾ ನಿಮ್ಮ ಉದ್ಯೋಗದಲ್ಲಿ ಅಥವಾ ನಿಮ್ಮ ವ್ಯವಹಾರದಲ್ಲಿ ಏನಾದರೂ ಮಾಡಬೇಕು ಅಂತಿದ್ರೆ ಹೊಸ ಯೋಜನೆಗಳು ಮಾಡಬೇಕು ಅಂತಿದ್ರು ಕೂಡ ನೀವು ಅದರಲ್ಲಿ ಯಶಸ್ಸ ನ್ನು ಗಳಿಸುವುದಕ್ಕೆ ಇದು ಬಹಳ ಒಳ್ಳೆಯ ಸಮಯ ಅಂತಾನೇ ಹೇಳಬಹುದು.
ಹಾಗೆ ಯಾವುದೇ ಪ್ರಯೋಜನ ನೀವು ಯಾವುದೇ ಪ್ರಯೋಗ ಮಾಡಿದರು ಕೂಡ, ಅದು ನಿಮಗೆ ಪ್ರಯೋಜನವನ್ನ ಕೊಡುತ್ತೆ. ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯವಾಗಿದೆ. ನೀವು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತೀನಿ ಅಂತ ಅಂದ್ರೆ ಒಂದು ಒಳ್ಳೆ ಸಮಯವಾಗಿದೆ 5 ಗ್ರಹಗಳ ಬದಲಾವಣೆ ಡಿಸೆಂಬರ್ ನಲ್ಲಿ ತುಲಾ ರಾಶಿಗೂ ಕೂಡ ಇದು ಬಹಳ ಅದ್ಭುತವಾದಂತಹ ಸಮಯ. ಶುಕ್ರನು ತನ್ನದೇ ಆದ ರಾಶಿಯಲ್ಲಿ ಇರುವುದರಿಂದ ಈ ರಾಶಿಚಕ್ರದ ಜನರು ಒಂದರ ನಂತರ ಒಂದರಂತೆ ಪ್ರಗತಿಗೆ ಅದ್ಭುತ ಅವಕಾಶಗಳನ್ನು ಪಡೆಯುತ್ತಾರೆ ತುಲಾ ರಾಶಿ ಅವರು ಒಂದಾದ ಮೇಲೊಂದು ಒಂದಾದ ಮೇಲೊಂದು ಅವಕಾಶಗಳು ಬರ್ತಾನೆ ಇರುತ್ತೆ. ತುಲಾ ರಾಶಿಯವರಿಗೆ ನೀವು ಬಾಕಿ ಇರುವ ಹಣವನ್ನ ಮರಳಿ ಪಡೆಯುತ್ತೀರಿ.
ಯಾರಿಗಾದ್ರು ಹಣ ಕೊಡೋದಿದ್ರೆ ಅಥವಾ ಬರಬೇಕಾಗಿದ್ದರೆ ಅಥವಾ ಅದರ ಹಣ ಬರಲಿಲ್ಲ ನಿಮಗೆ ಅಂತ ಆದ್ರೆ ನಿಮ್ಮ ದುಡಿಮೆಯ ಹಣ ಆಗಿರಬಹುದು ಅಥವಾ ನಿಮಗೆ ನೀವು ಸಾಲ ಕೊಟ್ಟ ಹಣ ಇರಬಹುದು ಯಾವುದೇ ಇರಬಹುದು ಈಗ ನಿಮ್ಮ ಕೈ ಸೇರುತ್ತೆ ತುಲಾ ರಾಶಿಯವರಿಗೆ ವ್ಯವಹಾರದಲ್ಲಿ ಅನಿರೀಕ್ಷಿತವಾದಂತಹ ಯಶಸ್ಸನ್ನು ಕೂಡ ಪಡೆಯುತ್ತೀರಿ. ಮತ್ತೆ ಮದುವೆಯಾಗುವ ಆಲೋಚನೆಯಲ್ಲಿ ಅವರ ಕನಸು ಶೀಘ್ರದಲ್ಲೇ ನನಸಾಗತ್ತೆ ಕೆಲಸದ ಸ್ಥಳದಲ್ಲಿ ನೀವು ಉತ್ತಮ ವಾತಾವರಣವನ್ನು ಕೂಡ ತುಲಾ ರಾಶಿಯವರು ಪಡೆಯುತ್ತೀರಿ. ಧನು ರಾಶಿ ನೋಡಿ ಡಿಸೆಂಬರ್‌ನಲ್ಲಿ ಗ್ರಹಗಳ ಸಂಚಾರ ಅನ್ನುವಂತದ್ದು ಧನು ರಾಶಿಯವರ ಜೀವನದ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿಸುದ್ದಿ; ಗೃಹಲಕ್ಷ್ಮಿ ಅದಾಲತ್ ಆಯೋಜನೆಗೆ ಸೂಚನೆ
ಮಕರ ರಾಶಿ ಹಾಗೂ ಕುಂಭ ರಾಶಿ
ಇನ್ನು ಮಕರ ರಾಶಿ ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳ ಗ್ರಹಗಳ ಸಂಕ್ರಮಣ ಅತ್ಯಂತ ಮಂಗಳಕರವಾಗಿದೆ. ಮಕರ ರಾಶಿಯವರಿಗೆ ಬಹಳ ದಿನಗಳಿಂದ ಅರ್ಧಂಬರ್ಧ ಆಗಿರುವ ಕೆಲಸಗಳ ಪೂರ್ಣಗೊಳಿಸಲು ಇರುವಂತಹ ಕೆಲಸಗಳು ಕೂಡ ಪೂರ್ಣ ಮಾಡ್ತೀರಿ. ಈಗ ಎಲ್ಲ ಕೆಲಸಗಳು ಕೂಡ ಸಂಪೂರ್ಣವಾಗಿ ಮಾಡೋದಕ್ಕೆ ನಿಮಗೆ ಅವಕಾಶ ಸಿಗುತ್ತದೆ. ನೀವು ಬಯಸಿದ ಜೀವನ ಸಂಗಾತಿಯನ್ನ ಹುಡುಕುವ ನಿಮ್ಮ ಹುಡುಕಾಟ ಪೂರ್ಣಗೊಳ್ಳುತ್ತದೆ. ಬಂದ್ರೆ ನಿಮಗೆ ಒಳ್ಳೆ ಸಂಗಾತಿ ನಿಮಗೆ ಸಿಗ್ತಾರೆ ಮಕರ ರಾಶಿಯವರಿಗೆ ಮಕರ ರಾಶಿಯ ಜನರು ಹಣ ಮತ್ತು ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. ಈ ಡಿಸೆಂಬರ್ ನಲ್ಲಿ ಈ ಐದು ಗ್ರಹಗಳ ಬದಲಾವಣೆಯಿಂದಾಗಿ ನಿಮಗೆ ಹಣದ ಹರಿವು ಹೆಚ್ಚಾಗಿರುತ್ತೆ. ಮಕರ ರಾಶಿಯವರು ಜನ ಹಣ ಮತ್ತು ಸಂಪತ್ತಿನಲ್ಲಿ ಬಹಳ ಅದೃಷ್ಟವಂತರು. ಈ ರಾಶಿಯರಿಗೆ ಹಣಗಳಿಸುವ ಆಸೆ ಇರುತ್ತೆ. ಮತ್ತೆ ಬಾಕಿ ಉಳಿದಿರುವ ಕೆಲಸಗಳು ಪೂರ್ಣ ಆಗುತ್ತೆ. ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾದ್ರೂ ಬರೀತಾ ಇದ್ದರೆ, ಮಕರ ಇವರು ಇದ್ರೆ ಅಲ್ಲೂ ಕೂಡ ನೀವು ಯಶಸ್ಸನ್ನು ಪಡೆಯುತ್ತೀರಿ.
ಇನ್ನು ಕುಂಭ ರಾಶಿ ಕುಂಭ ರಾಶಿಯ ಜನರು ಡಿಸೆಂಬರ್‌ನಲ್ಲಿ ಗ್ರಹಗಳ ಸಂಚಾರದ ಪ್ರಭಾವದಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ವಿಶೇಷ ಲಾಭ ಗಳನ್ನ ಪಡೆಯಲಿದ್ದಾರೆ. ಗ್ರಹಗಳ ಸಂಚಾರದ ಪ್ರಭಾವ ನಿಮಗೆ ಬಹಳ ಒಳ್ಳೆ ಅನುಕೂಲಕರ ವಾತಾವರಣವನ್ನು ಕಲ್ಪಿಸಿ ಕೊಡುತ್ತೆ. ಕುಂಭ ರಾಶಿಯವರಿಗೆ ನೀವು ಉದ್ಯೋಗದಲ್ಲಿದ್ದರೆ ಈ ವರ್ಷ ನಿಮ್ಮ ಬಡ್ತಿ ಕೂಡ ಆಗುವ ಸಾಧ್ಯತೆ ಹೆಚ್ಚಾಗಿದೆ ಅಂದ್ರೆ 2023 ಡಿಸೆಂಬರ್ ನಂತರ ಡಿಸೆಂಬರ್ ಏಳಲು ಆಗಬಹುದು. ಅನಂತರದಲ್ಲೂ ಕೂಡ ಒಳ್ಳೇದು ಆಗುವ ಸಾಧ್ಯತೆ ಇದೆ. ಹಣ ಮತ್ತು ವೃತ್ತಿಯಲ್ಲಿ ಬರ್ತಾ ಇದ್ದ ಎಲ್ಲ ಅಡೆತಡೆಗಳು ಕೂಡ ನಿವಾರಣೆ ಆಗುತ್ತದೆ.
ಕೆಲಸದಲ್ಲಿ ಏನೇ ಮಾಡಿದ್ರು ಕೂಡ ಕಚೇರಿಯಲ್ಲಿ ಇರಬಹುದು ಅಥವಾ ಹೊರಗಡೆ ವ್ಯವಹಾರ ಮಾಡಲು ಎಲ್ಲ ಅಡೆತಡೆ ಬರ್ತಾ ಇರುತ್ತೆ. ಯಾವ ಕೆಲಸವೂ ಆಗುತ್ತಿಲ್ಲ. ಆದರೆ ಈಗ ಹಾಗಲ್ಲ. ಐದು ಗ್ರಹಗಳ ಬದಲಾವಣೆ ನಿಮಗೆ ಅದೃಷ್ಟ ತರ್ತಾ ಇದೆ. ಎಲ್ಲ ಕೆಲಸಗಳು ಕೂಡ ಸುಸೂತ್ರವಾಗಿ ನೆರವೇರುತ್ತವೆ. ನಿಮ್ಮ ಅದೃಷ್ಟ ಹೆಚ್ಚಾಗುತ್ತೆ. ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗೆ ನೀವು ಅದ್ಭುತವಾದ ಸಮಯವನ್ನು ಕಳೆಯುವುದಕ್ಕೆ ನಿಮಗೆ ಒಳ್ಳೆ ಅವಕಾಶಗಳು ಕೂಡ ಬರುತ್ತೆ. ಒಟ್ಟಾರೆಯಾಗಿ ಡಿಸೆಂಬರ್‌ನಲ್ಲಿ ಐದು ಗ್ರಹಗಳ ಬದಲಾವಣೆ ಅನ್ನುವಂತದ್ದು ಈ ಐದು ರಾಶಿಯವರಿಗೆ ವೃಷಭ ರಾಶಿ, ತುಲಾ ರಾಶಿ, ಧನು ರಾಶಿ, ಮಕರ ರಾಶಿ, ಕುಂಭರಾಶಿಯ ಐದು ರಾಶಿಯವರು ಬಹಳ ಒಳ್ಳೆಯ ಸಮಯವನ್ನು ಹೊಂದಿರುತ್ತಾರೆ. ಮತ್ತೆ ಅದೃಷ್ಟದ ಸಮಯ ಶುರುವಾಗ್ತಾ ಇದೆ. ಈ ಸಮಯವನ್ನು ಈ ಐದು ರಾಶಿಯವರು ಸದುಪಯೋಗಪಡಿಸಿಕೊಂಡಲ್ಲಿ ಜೀವನವನ್ನ ಪ್ರಗತಿಯ ಹಾದಿಯತ್ತ ನಡೆಸಿಕೊಂಡು ಹೋಗುವುದಕ್ಕೆ ಬಹಳ ಸುಲಭವಾಗುತ್ತೆ.
ಇದನ್ನೂ ಓದಿ: ಆರ್ ಬಿಐ ಜಾರಿಗೊಳಿಸಿದ 5 ಹೊಸ ನಿಯಮ; ಬ್ಯಾಂಕ್ ಗಳಿಗೆ ಶುರುವಾಗಲಿದೆ ಟೆನ್ಶನ್ ಗ್ರಾಹಕರಿಗೆ ಫುಲ್ ರಿಲೀಫ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram