ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇಟ್ಟುಕೊಂಡು ವ್ಯಕ್ತಿಗಳಿಗೆ ಈಗ ಶುಭ ಸುದ್ದಿ ಬಂದಿದೆ. ಏನೆಂದರೆ ಸಾರಿಗೆ ಇಲಾಖೆಯಲ್ಲಿ ಬರೋಬ್ಬರಿ 9000 ಹುದ್ದೆಗಳ ನೇಮಕಾತಿಗೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಸಾರಿಗೆ ಸಚಿವರು ಆಗಿರುವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಹಿಂದಿನ ಸರಕಾರ ಸಾರಿಗೆ ಇಲಾಖೆ ನೇಮಕಾತಿ ಮಾಡಿಕೊಂಡಿಲ್ಲ: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇತ್ತು. ಆಗ ಯಾವುದೇ ರೀತಿಯ ಸಾರಿಗೆ ನೌಕರರನ್ನು ನೇಮಕ ಮಾಡಿಕೊಂಡಿಲ್ಲ. ಆದ್ದರಿಂದ ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಹಾಗೂ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇದೆ. ಆದ್ದರಿಂದ ಈಗ ನಮ್ಮ ಸರ್ಕಾರವು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ ಎಂದು ಸಾರಿಗೆ ಸಚಿವರು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ನಾಲ್ಕು ನಿಗಮಗಳಲ್ಲಿ ನೇಮಕಾತಿ ನಡೆಯುತ್ತಿದೆ :- ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ನೇಮಕಾತಿ ನಡೆಯುತ್ತಿದ್ದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಕೆಲವು ಹುದ್ದೆಗಳು ಭರ್ತಿ ಆಗಿದೆ ಎಂಬುದು ಸಚಿವರು ಸ್ಪಷ್ಟ ಪಡಿಸಿದರು.
ಈಗಾಗಲೇ 2000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿದಿದೆ :-
ನಾಲ್ಕು ರಸ್ತೆ ಸಾರಿಗೆ ನಿಗಮದಲ್ಲಿ ಈಗಲೇ ಒಟ್ಟು 2000 ಹುದ್ದೆಗಳ ನೇಮಕಾತಿ ನಡೆದಿದೆ. ಇನ್ನುಳಿದ ಹುದ್ದೆಗಳ ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ಸಚಿವರು ಮಾಧ್ಯಮದವರಿಗೆ ತಿಳಿಸಿದರು.
ಹೊಸ ಬಸ್ ಗಳ ಖರೀದಿಗೆ ಮುಂದಾದ ರಾಜ್ಯ ಸರ್ಕಾರ :- ಜನರ ಬೇಡಿಕೆಯ ಮೇರೆಗೆ ರಾಜ್ಯದಲ್ಲಿ ಒಟ್ಟು 5800 ಹೊಸ ಬಸ್ ಗಳನ್ನು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ 2400 ಬಸ್ ಗಳನ್ನು ರಾಜ್ಯ ಸರ್ಕಾರವು ಖರೀದಿಸಿದೆ. ಇನ್ನುಳಿದ ಬಸ್ ಗಳು ಶೀಘ್ರವೇ ಖರೀದಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.
ಬಸ್ ಟಿಕೆಟ್ ದರಗಳ ಬಗ್ಗೆ ಇನ್ನೂ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ: ಈಗಾಗಲೇ ರಾಜ್ಯದಲ್ಲಿ ಬಸ್ ದರಗಳನ್ನು ಏರಿಕೆ ಮಾಡುವ ಸುದ್ದಿ ಹರಿದಾಡುತ್ತಿದ್ದು ಅದಕ್ಕೆ ಉತ್ತರಿಸಿದ ಸಚಿವರು ಇನ್ನು ಇದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾಲ್ಕು ನಿಗಮಗಳು ಹಾಗೂ ರಾಜ್ಯ ಸರ್ಕಾರವು ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೋದಿ ಸರಕಾರದ ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.
ರಾಜ್ಯದಲ್ಲಿ ಸಾರಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ ಆಗಿದೆ :-
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸೇರಿ ಬರುವ ಆದಾಯಕ್ಕಿಂತ ಖರ್ಚು ಜಾಸ್ತಿ ಆಗಿದೆ. ಗಗನಕ್ಕೆ ಏರಿರುವ ಪ್ರೋಟೋಲ್ ಮತ್ತು ಡೀಸೆಲ್ ಬೆಲೆಗಳು ಮುಖ್ಯ ಕಾರಣ ಆದರೆ ಸಿಬ್ಬಂದಿಗಳಿಗೆ ನೀಡುವ ಸಂಬಳ ಬಸ್ ರಿಪೇರಿಗೆ ಆಗುವ ಖರ್ಚುಗಳು ಸಾರಿಗೆ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಶಕ್ತಿ ಯೋಜನೆ ಇದಕ್ಕೆ ಕಾರಣ ಅಲ್ಲ ಎಂಬುದು ಸರ್ಕಾರದ ಹೇಳಿಕೆ . ಆದರೆ ಜನರು ಶಕ್ತಿ ಯೋಜನೆಯಿಂದಲೇ ಸಾರಿಗೆ ಇಲಾಖೆ ನಷ್ಟದಲ್ಲಿ ಇದೆ ಎಂದು ಹೇಳುತ್ತಿದ್ದಾರೆ. ಇದೆಲ್ಲವನ್ನೂ ಹೊರತು ಪಡಿಸಿ ಮುಖ್ಯ ಕಾರಣ ಏನೆಂದರೆ ರಾಜ್ಯದಲ್ಲಿ ಸಾರಿಗೆ ವಾಹನವನ್ನು ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಪ್ರತಿ ಒಬ್ಬರು ತಮ್ಮದೇ ಸ್ವಂತ ಬೈಕ್ ಅಥವಾ ಕಾರ್ ಬಲ್ಲಿ ಓಡಾಡುವುದರಿಂದ ಬಸ್ ನಲ್ಲಿ ಓಡಾಡುವರ ಸಂಖ್ಯೆ ಕಡಿಮೆ ಆಗಿದೆ. ಜೊತೆಗೆ ಬೆಂಗಳೂರಿನಂಥ ನಗರಗಳಲ್ಲಿ ಬಸ್ ನಲ್ಲಿ ಹೋದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ಕಷ್ಟ ಅದರಿಂದ ಅಲ್ಲಿ ಜನರು ಕಾರ್ ಅಥವಾ ಬೈಕ್ ಇಲ್ಲವೇ ಮೆಟ್ರೋ ಬಳಕೆಯನ್ನು ಮಾಡುವುದು ಹೆಚ್ಚಾಗಿದೆ. ಇದೆಲ್ಲವೂ ಸಾರಿಗೆ ಇಲಾಖೆಯ ನಷ್ಟಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಬೆಂಗಳೂರಿನ ಮೆಟ್ರೋದಲ್ಲಿ ಹುದ್ದೆಗಳು ಖಾಲಿ ಇವೆ.