ಇನ್ನೇನು ಒಂದು ವಾರದಲ್ಲಿ ಬೇಸಿಗೆ ರಜವು ಆರಂಭ ಆಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ಕಾಲ ಮಕ್ಕಳಿಗೆ ರಜೆ ಸಿಗುತ್ತದೆ. ಆದರೆ ರಜೆಯ ಜೊತೆ ಜೊತೆಗೆ ಮಕ್ಕಳು ಪಾಠದ ಬಗ್ಗೆ ಗಮನ ಕೊಡಲು ಶಿಕ್ಷಕರು ಮಕ್ಕಳಿಗೆ ಹೂಂ ವರ್ಕ್ ನೀಡುತ್ತಾರೆ. ಈಗ ತಾನೇ ಎಲ್ಲಾ ಪರೀಕ್ಷೆಗಳನ್ನು ಮುಗಿಸಿ ಸಮುದಾಯದತ್ತ ಶಾಲೆಯ ದಿನ ಬರುವ ಫಲಿತಾಂಶಕ್ಕೆ ಈಗ ಮಕ್ಕಳು ಕಾಯುತ್ತಾ ಇದ್ದರೆ. ಅದರ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷ ಯಾವಾಗಿನಿಂದ ಆರಂಭ ಆಗುತ್ತದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
2024-25 ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ:- ಶಾಲಾ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದ ಆರಂಭಿಕ ದಿನಾಂಕದ ಮಾಹಿತಿಯನ್ನು ಕರ್ನಾಟಕದ ಎಲ್ಲ ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಹಾಗೂ ಪ್ರೌಢ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದು ಅದರ ಮಾಹಿತಿಯ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷವೂ ಮೇ 29 ರಿಂದ ಆರಂಭ ಆಗುತ್ತದೆ. ಇದೇ ಬರುವ ಏಪ್ರಿಲ್ 10ನೇ ತಾರೀಖಿನ ನಂತರ ಮಕ್ಕಳಿಗೆ ರಜಾ ಆರಂಭ ಆಗಲಿದೆ.
ದಸರಾ ರಜೆಯ ವಿವರ :-
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳಿಗೆ 15 ದಿನಗಳ ದಸರಾ ರಜೆ ಸಿಗುತ್ತಿದೆ. ಅಕ್ಟೋಬರ್ 3 2024 ರಿಂದ ಅಕ್ಟೋಬರ್ 20 2024 ರ ವರೆಗೆ ದಸರಾ ರಜೆ ಇರಲಿದೆ. ದಸರಾ ರಜೆಗೂ ಮುನ್ನ ಎಲ್ಲಾ ತರಗತಿಗಳ ಅರ್ಧ ವಾರ್ಷಿಕ ಪರೀಕ್ಷೆಗಳು ಮುಗಿದಿರಲಿವೆ. ಆದರೆ ವೇಳಾಪಟ್ಟಿಯ ಮಾಹಿತಿಯನ್ನು ಶಿಕ್ಷಣ ಇಲಾಖೆಯು ನೀಡಲಿಲ್ಲ. ಅಕ್ಟೋಬರ್ 20 ರ ನಂತರ ಮತ್ತೆ ಶಾಲೆಗಳು ಆರಂಭ ಆಗಲಿದೆ. ಅರ್ಧ ವಾರ್ಷಿಕ ಪರೀಕ್ಷೆಗಳ ಒಳಗೆ ಮಕ್ಕಳಿಗೆ ಟೆಸ್ಟ್ ಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎರಡನೇ ಸೆಮಿಸ್ಟರ್ ಯಾವಾಗ ಆರಂಭ :- ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆ ಪ್ರಕಾರ ಅಕ್ಟೋಬರ್ 20 ರಿಂದ ಎರಡನೇ ಸೆಮಿಸ್ಟರ್ ಆರಂಭ ಆಗಲಿದ್ದು ಏಪ್ರಿಲ್ 10 2025 ರ ತನಕ ಶಾಲೆಗಳು ಕಾರ್ಯ ನಿರ್ವಹಿಸಲಿದೆ. ಒಟ್ಟು 244 ದಿನಗಳ ಕಾಲ ಶಾಲೆಗಳು ತೆರೆದಿರಲಿವೆ.
ಇದನ್ನೂ ಓದಿ: 2000 ಕ್ಕಿಂತಲೂ ಹೆಚ್ಚಿನ ರಿಯಾಯಿತಿಯೊಂದಿಗೆ Motorola Edge 50 Pro, ಇದರ ಬೆಲೆ ಎಷ್ಟು ಗೊತ್ತ?
ಶಾಲೆಗಳಿಗೆ ರಜೆ ದಿನಗಳು ಹೀಗಿವೆ :-
- ಜೂನ್ – 17- 2024 ರಂದು ಬಕ್ರೀದ್ ಆಚರಣೆ.
- ಜುಲೈ -17-2024 ರಂದು ಮೊಹರಂ ಆಚರಣೆ.
- ಆಗಸ್ಟ್ -15- 2024 ರಂದು ಸ್ವಾತ್ರಂತ್ರ್ಯ ದಿನ.
- ಸಪ್ಟೆಂಬರ್ – 16-2024 ರಂದು ಈದ್ ಮಿಲಾದ್.
- ನವೆಂಬರ್ 01-2024 ರಂದು ಕನ್ನಡ ರಾಜ್ಯೋತ್ಸವ.
- ನವೆಂಬರ್ – 02-2024 ರಂದು ದೀಪಾವಳಿ.
- ಡಿಸೆಂಬರ್ – 25-2024 ರಂದು ಕ್ರಿಸ್ ಮಸ್.
- ಜನವರಿ – 14-2025 ರಂದು ಮಕರ ಸಂಕ್ರಾಂತಿ.
- ಜನವರಿ -26-2025 ರಂದು ಗಣರಾಜ್ಯೋತ್ಸವ.
- ಮಾರ್ಚ್ -13-2025 ರಂದು ಹೋಳಿ ಹಬ್ಬ.
ಇದರ ಜೊತೆಗೆ ಸ್ಥಳೀಯ ರಜೆಗಳು ಇರಲಿವೆ.
ಈ ಸಮಯದಲ್ಲಿ ಬರುವ ಎಲ್ಲಾ ಪರೀಕ್ಷೆಗಳು ಮತ್ತು ಮಕ್ಕಳಿಗೆ ನೀಡಬೇಕಾದ ಪುಸ್ತಕ ಹಾಗೂ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿ ಮಾಹಿತಿ ನೀಡಲಿದೆ.
ಇದನ್ನೂ ಓದಿ: ವೀಲ್ ಬರೆದ ಮೇಲೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯ ಹಕ್ಕು ಸಿಗುತ್ತದೆಯೇ?
ಇದನ್ನೂ ಓದಿ: LIC ಯ ಹೊಸ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 12000 ರೂಪಾಯಿ ಪಿಂಚಣಿ ಪಡೆಯಬಹುದು.