ನಿಮ್ಮ ಮಕ್ಕಳು 1 ರಿಂದ 10ನೇ ತರಗತಿಯ ಒಳಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದಾದರೆ ನೀವು ಈ ಮಾಹಿತಿಯನ್ನು ಖಂಡಿತವಾಗಿಯೂ ನಿಮಗೆ ಖುಷಿ ನೀಡಲಿದೆ. ಹೌದು ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ಎನ್‌ಸಿಇಆರ್‌ಟಿ ನಿಗದಿ ಪಡಿಸಿರುವ ಪಠ್ಯಕ್ರಮವನ್ನು ಹೊರತುಪಡಿಸಿ ಬೇರೆ ಯಾವುದೇ ಪಠ್ಯಕ್ರಮವನ್ನು ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡುವುದಾಗಿ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ನಿಗಾವಹಿಸಲು ಹಾಗೂ ಪರಿಶೀಲನೆ ನಡೆಸಲು ತಂಡವನ್ನು ರಚನೆ ಮಾಡುವುದಾಗಿ ತಿಳಿಸಿದೆ. ಇನ್ನು ನಿಮ್ಮ ಮಕ್ಕಳ ಸ್ಕೂಲ್ ಬ್ಯಾಗ್ ತೂಕ ನಿಗದಿ ಮಾಡಿ. 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕ ಇಳಿಸುವ ಕುರಿತು ಶಿಕ್ಷಣ ಇಲಾಖೆ ಹೊಸ ನಿರ್ಧಾರ ಕೈಗೊಂಡಿದೆ.
ಈ ಮೂಲಕ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದೊಂದು ಶುಭ ಸಮಾಚಾರವಾಗಿದೆ ಅಂತಲೇ ಹೇಳಬಹುದು. ಹೌದು 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಈ ನಿಯಮ ಅನ್ವಯವಾಗುತ್ತದೆ. ಶ್ರೀ ಯಶಪಾಲ ಶರ್ಮಾ ಸಮಿತಿಯ ಹೊರೆಯಿಲ್ಲದ ಕಲಿಕೆ 1993 ರ ವರದಿ ಅಧ್ಯಯನದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದು, 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ಹೊರೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ
ಇನ್ನು DSERT ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿಯಲ್ಲಿ ಶಾಲಾ ಬ್ಯಾಗ್ ಹೊರೆ ತಗ್ಗಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಹಳೇ ವರದಿಯ ಪ್ರಕಾರವೇ ಬ್ಯಾಗ್ ತೂಕ ನಿಗದಿ ಮಾಡಬೇಕೆಂದು ಶಾಲೆಗಳಿಗೆ ಸೂಚನೆ ನೀಡಿದೆ. ವಿಧ್ಯಾರ್ಥಿಗಳು ಅವರ ದೇಹದ ತೂಕದ ಶೇ 10 ರಿಂದ 15ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಮೂಳೆ ತಜ್ಞರ ಶಿಫಾರಸ್ಸು ಆಧರಿಸಿ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ಇದು ಎಷ್ಟೋ ಪಾಲಕರಿಗೂ ನಿರಾಳವಾಗಿದೆ. ಅಲ್ದೇ 1ರಿಂದ 10ನೇ ತರಗತಿಯವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಿದೆ. ಆ ಪ್ರಕಾರವಾಗಿ 1ರಿಂದ 2ನೇ ತರಗತಿಗೆ 1.5 ರಿಂದ 2 ಕೆ.ಜಿ. ಹಾಗೂ ಅಂತಿಮವಾಗಿ 9ರಿಂದ 10ನೇ ತರಗತಿಗೆ 4ರಿಂದ 5 ಕೆ.ಜಿ. ನಿಗದಿ ಮಾಡಿದೆ. ಎನ್‌ಎಲ್‌ಎಸ್‌ಯುಐ ಮಗು ಮತ್ತು ಕಾನೂನು ಕೇಂದ್ರ ನಿಗದಿಪಡಿಸಿರುವ ಬ್ಯಾಗ್ ತೂಕದ ವರದಿ ಆಧರಿಸಿ ಸುತ್ತೋಲೆ ಹೊರಡಿಸಲಾಗಿದ್ದು, ಅತಿಯಾದ ಹೊರೆ ಇರುವ ಶಾಲಾ ಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪಪರಿಣಾಮಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಬ್ಯಾಗ್ ತೂಕದ ಅನುಷ್ಠಾನ ಕುರಿತು ಅಧಿಕಾರಿಗಳು ಉಸ್ತುವಾರಿ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಪುಸ್ತಕಗಳನ್ನು ತರುವುದನ್ನು ತಪ್ಪಿಸಲು ವೇಳಾಪಟ್ಟಿ ರೂಪಿಸಿ ಆ ಪ್ರಕಾರವೇ ತರಗತಿಗಳನ್ನು ನಡೆಸಬೇಕು. ಸಾಧ್ಯವಾದಷ್ಟು ಅಭ್ಯಾಸ ಹಾಳೆಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಸೂಚಿಸಬೇಕು. ಶಾಲಾ ಗ್ರಂಥಾಲಯಗಳಲ್ಲಿ ಶಬ್ಧಕೋಶ, ಸಮಾನಾರ್ಥಕ ಪದಕೋಶ, ಅಟ್ಲಾಸ್, ಜ್ಞಾನ ವಿಜ್ಞಾನ ಕೋಶಗಳಂತಹ ಪರಾಮರ್ಶ ಸಾಮಗ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಹಾಗೂ ಮಕ್ಕಳು ಇವುಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಇಲಾಖೆ ಸೂಚಿಸಿದೆ. ಇನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಕುರಿತು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಪ್ರತಿ ವಿಷಯದ ಪಠ್ಯಪುಸ್ತಕವೂ ಸೆಮಿಸ್ಟರ್ 1, ಸೆಮಿಸ್ಟರ್ 2 ಎಂದು ಮುದ್ರಣವಾಗಲಿದೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎಂದು ಹೇಳಿದೆ.
ಈ ಮಧ್ಯೆ ರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದ್ದು, 2024-25ನೇ ಸಾಲಿನಿಂದಲೇ ಅಳವಡಿಸಲಾಗುತ್ತಿದೆ ಎನ್ನಲಾಗಿದೆ. ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಹೇಳಲಾಗಿದೆ. ಒಟ್ಟಿನಲ್ಲಿ ಬಹು ಕಾಲದ ಬೇಡಿಕೆಯಾಗಿದ್ದ ಶಾಲಾ ಮಕ್ಕಳ ಬ್ಯಾಗ್ ಹೊರೆ ಸಮಸ್ಯೆಗೆ ಕೊಂಚ ಬ್ರೇಕ್ ಸಿಕ್ಕಿದ್ದು ಇದು ಎಷ್ಟರ ಮಟ್ಟಕ್ಕೆ ಅನುಷ್ಠಾನಕ್ಕೆ ಬಂದು ವರ್ಕ್ ಆಗುತ್ತೋ ಇಲ್ವೋ ಕಾದು ನೋಡಬೇಕಿದೆ.