UPI Payment: ಇತ್ತೀಚೆಗೆ online payment ನಲ್ಲಿ ಹೆಚ್ಚಿನ ವಂಚನೆಗಳು ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಂಚನೆ ಪ್ರಕರಣ ಹೆಚ್ಚುತ್ತಿರುವ ನಿಟ್ಟಿನಲ್ಲಿ ಸರ್ಕಾರ ಹಾಗೂ RBI ಸೇರಿದಂತೆ, ಈ ವಂಚನೆ ಪ್ರಕರಣವನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಇಬ್ಬರೂ ವ್ಯಕ್ತಿಗಳು ಮೊದಲ ವಹಿವಾಟನ್ನು ನಡೆಸಿದರೆ, ಅಂದರೆ ರೂ.2000 ಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ನಡೆಸಿದರೆ ಹಣವು ಖಾತೆಗೆ ಜಮಾ ಆಗಲು ಕನಿಷ್ಠ ನಾಲ್ಕು ಗಂಟೆಗಳ ಕಾಲಾವಕಾಶಗಳು ಬೇಕಾಗುತ್ತೆ. ಎಂದು ಸರಕಾರ ಮಾಧ್ಯಮಗಳಿಗೆ ತಿಳಿಸಿದೆ.
ಸರಕಾರದ ನಿಯಂತ್ರಣ:
ಇನ್ನು ಡಿಜಿಟಲ್ ಪಾವತಿಗಳಲ್ಲಿ ಅಡ್ಡಿಗಳು ಉಂಟಾಗುವಂತಹ ಸಂದರ್ಭದಲ್ಲಿ ಗ್ರಾಹಕರು ತ್ವರಿತ ಪಾವತಿ ಸೇವೆ (IMPS), ಏಕೀಕೃತ ಪಾವತಿ ಇಂಟರ್ಫೇಸ್ (UPI), ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಮೂಲಕ ಪಾವತಿಗಳನ್ನು ಮಾಡಬಹುದು. ನಡೆಯುತ್ತಿರುವ ವಂಚನೆಯನ್ನು ತಪ್ಪಿಸಲು ಸರ್ಕಾರ ಮೊತ್ತದ ಮಿತಿಯನ್ನು ಕೂಡ ಜಾರಿಗೊಳಿಸಲಿದೆ ಎನ್ನುವ ಮಾಹಿತಿ ಇದೆ.
ಹೌದು, UPI ಖಾತೆಯ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000 ರೂಪಾಯಿ ವಹಿವಾಟನ್ನು ನಡೆಸಬಹುದು. NEFT ಖಾತೆ ತೆರೆದ ಸಮಯದಲ್ಲಿ ಮೊದಲ 24 ಗಂಟೆಗಳಲ್ಲಿ 50,000 ರೂಪಾಯಿ ವಹಿವಾಟು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಖಂಡಿತ, ಹೌದು. ನವೆಂಬರ್ 28 ರಂದು ಕೇಂದ್ರ ಹಣಕಾಸು ಸಚಿವಾಲಯದ ಸಭೆಯಲ್ಲಿ ತೀರ್ಮಾನ ನಡೆಸಲಾಗುತ್ತದೆ. ಈ ಸಭೆಯಲ್ಲಿ ಸಮಯದ ಮಿತಿಯ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ ಹಾಗೂ ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದ್ದು ತೀರ್ಮಾನವನ್ನು ಕೈಗೊಳ್ಳುವ ಕೆಲಸವನ್ನು ಮಾಡಲಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ Whats App ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ; ಇಂತವರಿಗೆ ಸಿಗಲ್ಲ 2ಸಾವಿರ! ಯೋಜನೆಯಿಂದ ಹೊರಗಿಡಲಿದೆ ಸರ್ಕಾರ.
UPI ಮೂಲಕ ಅತಿ ಹೆಚ್ಚು ವಂಚನೆ
ಸಾಲ ವ್ಯವಸ್ಥೆಯಲ್ಲಿ 2022-23 ರಲ್ಲಿ ಡಿಜಿಟಲ್ ಪಾವತಿ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯ ವಂಚನೆ ಪ್ರಕರಣಗಳು ದಾಖಲಾಗಿದ್ದು, 13,530 ವಂಚನೆ ಪ್ರಕರಣ ಗಳಲ್ಲಿ 6,659 ಪ್ರಕರಣಗಳು ಡಿಜಿಟಲ್ ಪಾವತಿ – ಕಾರ್ಡ್ ಹಾಗೂ ಇಂಟರ್ನೆಟ್ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 2023 ರಲ್ಲಿ ಒಟ್ಟು 30,252 ಕೋಟಿ ರೂಪಾಯಿ ಮೊತ್ತದಲ್ಲಿ 13,530 ವಂಚನೆ ಪ್ರಕರಣಗಳು ದಾಖಲಾಗಿದ್ದು ಇವುಗಳಲ್ಲಿ ಶೇ.49 ರಷ್ಟು ಅಥವಾ 6,659 ಪ್ರಕರಣಗಳು ಡಿಜಿಟಲ್ ಪಾವತಿ – ಕಾರ್ಡ್/ಇಂಟರ್ನೆಟ್ ವಿಭಾಗಕ್ಕೆ ಸಂಬಂಧಿಸಿದವುಗಳಾಗಿವೆ.
ವಂಚಕರು ಆನ್‌ಲೈನ್ ವಂಚನೆಗಳಿಂದ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಇದರಿಂದ ವಿದ್ಯಾವಂತರಿಗೂ ಹಾನಿಯಾಗಿದೆ. ಯುಪಿಐ ಪಾವತಿ ವ್ಯವಸ್ಥೆ ಯಲ್ಲಿ ವಂಚನೆ ಹೆಚ್ಚಿದರೆ ಸರ್ಕಾರ ನಿಯಂತ್ರಣವನ್ನು ಹೆಚ್ಚಿಸಿದೆ. ವೀಕ್ಷಕರೆ ನೀವು ಸಹ ಯುಪಿಐ ಪೇಮೆಂಟ್ (UPI Payment) ಮಾಡುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ.
ಇದನ್ನೂ ಓದಿ: ಅನ್ನದಾತ ರೈತನಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ; 3 ಲಕ್ಷದವರೆಗೆ ಅನ್ನದಾತನಿಗೆ ಸಿಗಲಿದೆ ಸಾಲ ಸೌಲಭ್ಯ
ಇದನ್ನೂ ಓದಿ: ಪದವಿಯಲ್ಲಿ ಓದುತ್ತಿರುವವರಿಗೆ ಸಿಹಿ ಸುದ್ದಿ, U go ದಿಂದ 40,000 ಇಂದ 60,000 ವರೆಗೆ ವಾರ್ಷಿಕ ವೇತನವನ್ನು ಪಡೆಯಿರಿ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗೆ ಜಾಯಿನ್ ಆಗಿ: Click Here To Join Telegram