ಸಾಕಷ್ಟು ಯೋಜನೆಗಳನ್ನ ರದ್ದು ಮಾಡಿದ ಸಿದ್ದು ಸರ್ಕಾರ! ಬಜೆಟ್ ನಲ್ಲಿ ಅನುದಾನ ನೀಡದೆ ಯೋಜನೆಗಳಿಗೆ ಬಿತ್ತು ಬ್ರೇಕ್..

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಹುನಿರೀಕ್ಷಿತ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಶುಕ್ರವಾರವೇ ಮಂಡಿಸಿದ್ದಾರೆ ಹೌದು ತಮ್ಮ ದಾಖಲೆಯ 14ನೇ ಬಜೆಟ್‌ನಲ್ಲಿ ಸುಮಾರು 3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ದೊಡ್ಡ ಆಯವ್ಯಯವನ್ನ ಸಿಎಂ ಮಂಡಿಸಿದ್ದಾರೆ. ಹೌದು ಸಿಎಂ ಸಿದ್ದರಾಮಯ್ಯ ಕಳೆದ ಶುಕ್ರವಾರ 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಸರ್ಕಾರವು ಈ ಬಾರಿಯ ಬಜೆಟ್​​ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಕೊಕ್ ಹಾಕಿದ್ದಾರೆ. ಕೆಲವೊಂದಷ್ಟು ಪ್ರಮುಖ ಯೋಜನೆಗಳಿಗೆ ಸಿದ್ದು ಸರ್ಕಾರ ಅನುದಾನವನ್ನ ನಿಲ್ಲಿಸಿದ್ದು, ಇನ್ಮುಂದೆ ಆ ಯೋಜನೆಗಳ ಅನುಷ್ಠಾನ ಕಷ್ಟ ಅಂತ ಹೇಳಲಾಗುತ್ತಿದೆ. ಹೌದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ವಿದ್ಯಾನಿಧಿ ಯೋಜನೆಗೆ ಕಾಂಗ್ರೆಸ್​ ಸರ್ಕಾರ ಕೊಕ್ ನೀಡಿದೆ. ಜೊತೆಗೆ ವಿವಾದಿತ ವಿವೇಕ ಶಾಲೆ ಅಭಿವೃದ್ಧಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಪ್ರಸ್ತಾಪ ಮಾಡಿಲ್ಲ. ಇವಿಷ್ಟೇ ಅಲ್ಲ ಇದೆ ರೀತಿ ಸಿದ್ದು ಸರ್ಕಾರ ಸಾಕಷ್ಟು ಯೋಜನೆಗಳಿಗೆ ಬ್ರೇಕ್ ಹಾಕಿದ್ದು, ಅನುದಾನವನ್ನ ನೀಡದೆ ಕೈ ಬಿಟ್ಟಿದ್ದಾರೆ. 

WhatsApp Group Join Now
Telegram Group Join Now

ಆದ್ರೆ ಇದೆ ಮೊದಲ ಬಾರಿಗೆ ಈ ರೀತಿಯ ನಿರ್ಧಾರಗಳನ್ನ ಸರ್ಕಾರಗಳು ತೆಗೆದುಕೊಂಡಿಲ್ಲ. ಒಂದೊಂದು ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರದ ಕೆಲವೊಂದು ಯೋಜನೆಗಳಿಗೆ ಕೋಕ್ ನೀಡೋದು ಸಹಜ, ಬಿಜೆಪಿ ಸರ್ಕಾರದ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕೋದು, ಕಾಂಗ್ರೆಸ್ ಪಕ್ಷದ ಯೋಜನೆಗಳಿಗೆ ಬಿಜೆಪಿ ಸರ್ಕಾರ ಕೋಕ್ ನೀಡಿ ಹೊಸ ಯೋಜನೆಗಳನ್ನ ಅನುಷ್ಠಾನಗೊಳಿಸುವುದು ಇವೆಲ್ಲ ಸಾಮಾನ್ಯ. ಅಂತೆಯೇ ಇದೀಗ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕೆಲವೊಂದು ಯೋಜನೆಗಳಿಗೆ ಕೋಕ್ ನೀಡಿದೆ, ಅಲ್ದೇ ಅದೇ ಜಾಗಕ್ಕೆ ಹೊಸ ಯೋಜನೆಗಳನ್ನು ಕೂಡ ಜಾರಿಗೋಳಿಸಿದೆ. ಹಾಗಾದ್ರೆ ಯಾವ ಯೋಜನೆಗಳಿಗೆ ಕೋಕ್ ಕೊಟ್ಟಿದೆ ರಾಜ್ಯ ಸರ್ಕಾರ ಎಲ್ಲವನ್ನು ಸಂಪೂರ್ಣವಾಗಿ ನೋಡೋಣ ಬನ್ನಿ.

ಇದನ್ನೂ ಓದಿ: ಎರಡನೇ ಮಗುವಿನ ತಂದೆಯಾದ ನಟ ವಿಜಯ್ ಸೂರ್ಯ.. ಮಗು ಹುಟ್ಟಿದ್ದು ಅಯ್ತು.. ನಮಕಾರಣವೂ ಮುಗಿತು!ಹೆಸರೇನು ಗೊತ್ತಾ?

ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಯೋಜನೆಗಳಿಗೆ ಕೋಕ್

ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೆಲವೊಂದಷ್ಟು ಜನಪರ ವಿದ್ಯಾರ್ಥಿಪರ, ಮಹಿಳೆಯರ ಹಾಗು ರೈತರ ಪರ ಯೋಜನೆಗಳನ್ನ ಜಾರಿಗೋಳಿಸಿಟ್ಟು ಆದ್ರೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಸರ್ಕಾರದ ಯೋಜನೆಗಳಿಗೆ ಕೋಕ್ ಕೊಟ್ಟಿದೆ ಅಂದ್ರೆ ಕೆಲವೊಂದು ಯೋಜನೆಗಳಿಗೆ ಅನುದಾನ ಘೋಷಿಸದೆ ಅವುಗಳನ್ನ ರದ್ದು ಮಾಡಿದೆ. ಅದರಲ್ಲಿ ಪ್ರಮುಖವಾಗಿ ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾನಿಧಿ ಯೋಜನೆ, ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ಕಾಯ್ದೆ ರದ್ದು,
ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು, ವಿವಾದಿತ ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ ಅಂದ್ರೆ ಮಹಿಳೆಯರ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ ಸಹಾಯಧನ ನೀಡುವುದು.ಇದನ್ನ ಕೂಡ ರದ್ದು ಮಾಡಿದೆ. ಇನ್ನು ಭೂಸಿರಿ ಯೋಜನೆ – ಇದರ ಅಡಿಯಲ್ಲಿ ರೈತರಿಗೆ 10 ಸಾವಿರ ರೂ ಕೊಡಲಗುತ್ತಿತ್ತು ಇದಕ್ಕೂ ಕೂಡ ಬ್ರೇಕ್ ಬಿದಿದ್ದೆ. ಶ್ರಮಶಕ್ತಿ ಯೋಜನೆ – ಕೃಷಿ ಮಹಿಳೆಯರಿಗೆ ಪ್ರತಿ ತಿಂಗಳು 500ರೂಪಾಯಿ ನೀಡುತ್ತಿದ್ದ ಯೋಜನೆ, ಅಗ್ನಿ ವೀರ ಯೋಜನೆಗೆ ಸೇರುವ ಎಸ್ ಸಿ/ ಎಸ್ ಟಿ ಯುವಕರಿಗೆ ತರಬೇತಿ ನೀಡುವ ಯೋಜನೆಗು ಕೊಕ್ ನೀಡಲಾಗಿದೆ. ಅಲ್ದೇ ಮಕ್ಕಳ‌ ಉಚಿತ ಬಸ್ ಯೋಜನೆಗೆ ಕೊಕ್ ನೀಡಿದೆ ರಾಜ್ಯ ಸರ್ಕಾರ.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವ್ರ ಬಹಳ ಜನಪ್ರಿಯ ಯೋಜನೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಬಹಳ ಜನರನ್ನ ರೀಚ್ ಆಗಿತ್ತು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಭಾಗ್ಯಲಕ್ಷ್ಮಿ ಯೋಜನೆಗೂ ಕೊಕ್ ನೀಡಿದೆ. ಹೌದು ಯಡಿಯೂರಪ್ಪ ಜಾರಿಗೆ ತಂದಿದ್ದ ಈ ಭಾಗ್ಯಲಕ್ಷ್ಮಿ ಯೋಜನೆಯನ್ನು ಬೊಮ್ಮಾಯಿ ಸರ್ಕಾರ ಮುಂದುವರೆಸಿಕೊಂಡು ಬಂದಿತ್ತು. ಆದರೆ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಆ ಯೋಜನೆಗೆ ಕೊಕ್ ನೀಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಕೈ ಬಿಟ್ಟಿರುವ ಸಿದ್ದರಾಮಯ್ಯ ಬಜೆಟ್​​ನಲ್ಲೂ ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಎಲ್ಲೂ ಕೂಡ ಪ್ರಸ್ತಾಪ ಮಾಡಿಲ್ಲ. ಇನ್ನು, ಜಿಲ್ಲೆಗೊಂದು ಗೋಶಾಲೆ ಯೋಜನೆಗೂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಬ್ರೇಕ್‌ ಹಾಕಿದ್ದು, ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂಪಾಯಿ ಸಹಾಯ ಧನ ನೀಡುವ ಯೋಜನೆಯನ್ನು ಕೂಡ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ. ಹೀಗೆ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲೋ ಸಾಕಷ್ಟು ಜನಪ್ರಿಯ ಯೋಜನೆಗಳಿಗೆ ಕೋಕ್ ಕೊಟ್ಟಿದ್ರು, ಹೊಸ ಯೋಜನೆಗಳ ಜೊತೆಗೆ ತಮ್ಮ ಸರ್ಕಾರದ ಹಿಂದಿನ ಯೋಜನೆಗಳನ್ನ ಮುಂದುವರೆಸಿಕೊಂಡು ಹೋಗುವ ಪ್ಲಾನ್ ನಲ್ಲಿದ್ದಾರೆ.

ಇದನ್ನೂ ಓದಿ: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram