ಹೋಟೆಲ್ ಕಾರ್ಮಿಕ ವರ್ಗದವರಿಗೆ ಬೇರೆ ಕಾರ್ಮಿಕ ವರ್ಗಕ್ಕೆ ಹೋಲಿಸಿದರೆ ಆದಾಯ ಕಡಿಮೆ ಇರುತ್ತದೆ. ಚಿಕ್ಕ ಪುಟ್ಟ ಹೋಟೆಲ್ ಗಳಲ್ಲಿ ಕಾರ್ಮಿಕರಿಗೆ ನೀಡುವ ಸಂಬಳ ಕಡಿಮೆ. ಆದ್ದರಿಂದ ಕಾರ್ಮಿಕ ವರ್ಗದವರ ಮಕ್ಕಳ ಭವಿಷ್ಯಕ್ಕೆ ಈಗ ಹೊಟೇಲ್ ಕಾರ್ಮಿಕ ಸಂಘವು ಸಹಾಯಧನ ನೀಡಲು ಮುಂದಾಗಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
scholarship ಗೆ ಅರ್ಜಿ ಸಲ್ಲಿಸಲು ಇರುವ ನಿಯಮಗಳು:-
ಹೋಟೆಲ್ ಕಾರ್ಮಿಕ ಸಂಘವು ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳನ್ನು ತಿಳಿಸಿದೆ. ಅವು ಯಾವುದೆಂದರೆ
- ಹೋಟೆಲ್ ಕಾರ್ಮಿಕ ಸಂಘದ ID ಕಾರ್ಡ್ ಕಡ್ಡಾಯ :- scholarship ಪಡೆಯಲು ವಿದ್ಯಾರ್ಥಿಯ ತಂದೆ ಅಥವಾ ತಾಯಿ ಹೊಟೇಲ್ ಕಾರ್ಮಿಕರು ಎಂದು ದಿನಾಂಕ ಏಪ್ರಿಲ್ 30, 2024ರ ಒಳಗೆ ಹೊಟೇಲ್ ಕಾರ್ಮಿಕ ಸಂಘ ನೀಡುವ ಐಡಿ ಕಾರ್ಡ್ ಪಡೆದಿರಬೇಕು.
- ವಿದ್ಯಾರ್ಥಿ ಉತ್ತೀರ್ಣ ಪ್ರಮಾಣ ಪತ್ರ ನೀಡಬೇಕು :- scholarship ಪಡೆಯಲು ಕಾರ್ಮಿಕರ ಮಕ್ಕಳು ಕಡ್ಡಾಯವಾಗಿ 2023-24 ರ ಶೈಕ್ಷಣಿಕ ವರ್ಷದಲ್ಲಿ SSLC ಅಥವಾ ಪಿಯುಸಿ ಉತ್ತೀರ್ಣ ಆಗಿರುವ ಬಗ್ಗೆ ಪ್ರಮಾಣ ಪತ್ರ ನೀಡಿಬೇಕು.
- ಅಂಕಗಳಿಗೆ :- ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಯು 2023-24 ರ ಶೈಕ್ಷಣಿಕ ವರ್ಷದಲ್ಲಿ SSLC ಅಥವಾ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 80% ಅಂಕ ಗಳಿಸಿರಬೇಕು.
- ಅರ್ಜಿ ಜೊತೆ documents ನೀಡಬೇಕು :- ಅರ್ಜಿ ನಮೂನೆಯ ಜೊತೆಗೆ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಅಟ್ಯಾಚ್ ಮಾಡಬೇಕು.
- ಕೊನೆಯ ದಿನದ ಒಳಗೆ ಅರ್ಜಿ ಸಲ್ಲಿಸಿ :- ಮೇಲಿನ ಅರ್ಹತೆಗಳನ್ನು ಪೂರೈಸಿರುವ ಹೋಟೆಲ್ ಕಾರ್ಮಿಕರ ಮಕ್ಕಳು ಜೂನ್ 15 2024 ರ ಒಳಗೆ ಅರ್ಜಿ ಸಲ್ಲಬೇಕು.
ಅರ್ಜಿ ಪಡೆಯುವುದು ಹೇಗೆ?: ಅರ್ಹ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅರ್ಜಿಗಳನ್ನು ಪಡೆಯಲು 9035655406 ಅಥವಾ 9743539990 ನಂಬರ್ ಗೆ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ಅರ್ಜಿ ನಮೂನೆ ಕಳುಹಿಸುವಂತೆ ವಿನಂತಿ ಮಾಡಿಕೊಂಡರೆ ನಿಮಗೆ ವಾಟ್ಸಾಪ್ ಮೂಲಕವೇ ಅರ್ಜಿ ನಮೂನೆಯನ್ನು ಕಳುಹಿಸಿ ಕೊಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ;-
ಇಲಾಖೆಯು ಕಳುಹಿಸಿದ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ವಯಸ್ಸು, ನಿಮ್ಮ ತಂದೆ ತಾಯಿಯ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ವಿಳಾಸ, ಹಾಗೂ ನಿಮ್ಮ ಶೈಕ್ಷಣಿಕ ವಿವರಗಳು ಹಾಗೂ ಪಾಲಕರಿಗೆ ಹೋಟೆಲ್ ಕಾರ್ಮಿಕ ಸಂಘ ನೀಡಿರುವ ID ಕಾರ್ಡ್ ಹಾಗೂ ಇನ್ನಿತರ ವಿವರಗಳನ್ನು ಭರ್ತಿ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಝೆರಾಕ್ಸ್ ಹಾಗೂ ನಿಮ್ಮ ಶೈಕ್ಷಣಿಕ ಅಂಕಪಟ್ಟಿಯ ಝೆರಾಕ್ಸ್ ಹಾಗೂ ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಅರ್ಜಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಳಾಸ :- ಅನಫಾ ಗ್ರಾಂಡ್, ನಂ 1353 29 ನೇ ಮುಖ್ಯ ರಸ್ತೆ, ಉತ್ತರಹಳ್ಳಿ, ಪೂರ್ಣಪ್ರಜ್ಞಾ ಬಡಾವಣೆ ಬೆಂಗಳೂರು 560061
ಜೂನ್ 15 ರ ಒಳಗಾಗಿ ಮೇಲಿರುವ ವಿಳಾಸಕ್ಕೆ ನಿಮ್ಮ ಅರ್ಜಿ ಸಲ್ಲಿಕೆ ಆಗುವಂತೆ ನೋಡಿಕೊಳ್ಳಿ. ನಿಮ್ಮ ಅರ್ಜಿ ನಮೂನೆಯನ್ನು ಪರಿಶೀಲಿಸಿದ ನಂತರ ಆಯ್ದ ಅಭ್ಯರ್ಥಿಗಳಿಗೆ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘವು ಸಹಾಯಧನ ನೀಡುತ್ತಿದೆ. ಅರ್ಜಿ ನಮೂನೆಯಲ್ಲಿ ಯಾವುದೇ ರೀತಿಯ ತಪ್ಪಾದ ಅಥವಾ ಸುಳ್ಳು ಮಾಹಿತಿ ಭರ್ತಿ ಮಾಡಿದರೆ ಅರ್ಜಿ ತಿರಸ್ಕರಿಸಲಾಗುತ್ತದೆ.
ಇದನ್ನೂ ಓದಿ: 20 ವರ್ಷಗಳ ಅವಧಿಗೆ ಹೊಮ್ ಲೋನ್ ತೆಗೆದುಕೊಂಡರೆ EMI ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿಯೋಣ
ಇದನ್ನೂ ಓದಿ: ತಿಂಗಳಿಗೆ ದಿನಕ್ಕೆ 333 ರೂಪಾಯಿ ಹೂಡಿಕೆ ಮಾಡಿ 17 ಲಕ್ಷ ರೂಪಾಯಿ ಹಿಂಪಡೆಯುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.