The Kerala Story Collection: ಕೇವಲ 5 ದಿನಕ್ಕೆ 50 ಕೋಟಿ ದಾಟಿದ ಕೇರಳ ಸ್ಟೋರಿ ಕಲೆಕ್ಷನ್! ಕಾಶ್ಮೀರ್ ಫೈಲ್ಸ್ ನೇ ಹಿಂದೆ ಹಾಕಿದ ಕೇರಳ ಸ್ಟೋರಿ

The Kerala Story Collection: ವಿವಾದಾತ್ಮಕ ಸಿನಿಮಾ ‘ದಿ ಕೇರಳ ಸ್ಟೋರಿ’ ಮೇ 5ರಂದು ಇಡಿ ದೇಶಾದ್ಯಂತ ರಿಲೀಸ್ ಆಗಿದ್ದರು ಕೂಡ ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಯ್ತು. ಆದರು ಕೂಡ ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಇದೀಗ ಚರ್ಚೆಯಾಗುತ್ತಿದೆ ಕಾರಣ ಇಷ್ಟೇ ಈ ಸಿನಿಮಾದ ಮುಖ್ಯ ಅಂಶ ಮತಾಂತರದ ಕುರಿತು ಇರೋದ್ರಿಂದ ಈ ಸಿನಿಮಾ ಇದೀಗ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ.

WhatsApp Group Join Now
Telegram Group Join Now

ಹೌದು ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ ಇಸ್ಲಾಂಗೆ ಮತಾಂತರಗೊಂಡಿದ್ದು, ಭಯೋತ್ಪಾದನೆ ಸಂಘಟನೆ ಸೇರಿಕೊಂಡಿದ್ದಾರೆಂದು ಆರೋಪ ಮಾಡಲಾಗಿತ್ತು. ಹೀಗಾಗಿ ಕೇರಳದಲ್ಲಿ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಸಿನಿಮಾ ಬಿಡುಗಡೆ ಮಾಡಬಾರದು ಅಂತ ಸುಪ್ರೀಂ ಕೋರ್ಟ್ ವರೆಗೂ ಕೂಡ ಸಿನಿಮಾ ವಿವಾದ ಮುಟ್ಟಿತ್ತು. ಆದರೆ ಸಿನಿಮಾ ಬಗ್ಗೆ ಸುಪ್ರೀಂ ಕೋರ್ಟ್ ತಲೆ ಹಾಕಲಿಲ್ಲ ಹೀಗಾಗಿ ಸಿನಿಮಾ ಮೇ 5ರಂದು ಇಡಿ ದೇಶದಾದ್ಯಂತ ರಿಲೀಸ್ ಆಯ್ತು ಅಲ್ಲದೆ ಸಾಕಷ್ಟು ಚರ್ಚೆಗೂ ಕಾರಣವಾಗಿ ಪರ ವಿರೋಧಗಳ ಅಲೆ ಜೋರಾಯ್ತು. ಆದರೂ ಕೂಡ ಸಿನಿಮಾ ಗೆ ಎಲ್ಲ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು ಸಿನಿಮಾ ಬಿಡುಗಡೆ ಆಗಿ ಇಲ್ಲಿಯವರೆಗೂ ಅಂದರೆ 5ದಿನಗಳ ಕೆಲೆಕ್ಷನ್ ಎಷ್ಟು ಸಿನಿಮಾ ಕಥಾ ವಿಚಾರ ಏನು ಎಲ್ಲವನ್ನ ನೋಡೋಣ ಬನ್ನಿ.

‘ದಿ ಕೇರಳ ಸ್ಟೋರಿ’ ಸಿನಿಮಾಗೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ವಿಜಯ್​ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾದ ಮುಖ್ಯ ಕಥಾ ವಸ್ತು ಶಾಲಿನಿ ಉನ್ನಿ ಕೃಷ್ಣನ್ ಎಂಬ ಹುಡುಗಿ, ಫಾತಿಮಾ ಆದ ಕಥೆಯಾಗಿದೆ. ಸಿನಿಮಾ ಟೀಮ್ ಇದನ್ನು ಸತ್ಯ ಘಟನೆಗಳನ್ನು ಆಧಾರಿಸಿದ ಕಥೆಯೆಂದು ಹೇಳ್ತಿರೋದು ಇದೀಗ ತೀವ್ರ ವಿರೋಧಕ್ಕೆ ಕಾರಣವಾಗ್ತಿದೆ. ಕೇರಳದ ಶಾಲಿನಿ ಎಂಬ ಮುದ್ದಾದ ಹುಡುಗಿ ಓದಲು ಕಾಸರಗೋಡಿನ ಕಾಲೇಜಿಗೆ ಸೇರಿ ಹಾಸ್ಟೆಲ್‌ಗೂ ಸೇರುತ್ತಾಳೆ. ಅವಳಿಗೆ ಹೊಸ ಸ್ನೇಹಿತರು ಪರಿಚಯ ಆಗುತ್ತಾರೆ. ಅವರಲ್ಲಿ ಒಬ್ಬರು ಹಿಂದೂ, ಮತ್ತೊಬರು ಕ್ರಿಶ್ಚಿಯನ್ ಹಾಗೂ ಇನ್ನೊಬ್ಬರು ಮುಸ್ಲಿಂ. ಇದರಲ್ಲಿ ಮುಸ್ಲಿಂ ಹುಡುಗಿ, ಹಿಂದೂ ಯುವತಿಗೆ ಇಸ್ಲಾಂ ಧರ್ಮದ ಬಗ್ಗೆ ತುಂಬಿ, ಮತಾಂತರಗೊಳ್ಳುವಂತೆ ಮಾಡುತ್ತಾಳೆ. ಇದು ಯಾರ ಕೃತ್ಯ? ಸಂಚು ರೂಪಿಸಿದವರು ಯಾರು? ಈ ಸಂಘಟನೆ ಯುವತಿಯನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತೆ? ಅನ್ನೋದನ್ನು ಎಳೆ ಎಳೆಯಾಗಿ ಸಿನಿಮಾದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಸಿಡಿಲು ಹೇಗೆ ಉಂಟಾಗುತ್ತೆ, ಆಗ ಏನ್ ಮಾಡ್ಬೇಕು ಗೊತ್ತಾ? ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?

‘ದಿ ಕೇರಳ ಸ್ಟೋರಿ’ ಸಿನಿಮಾದ 5 ದಿನದ ಕಲೆಕ್ಷನ್ ರಿಪೋರ್ಟ್

ಇನ್ನು ಈ ಸಿನಿಮಾ ಸಾಕಷ್ಟು ವಿವಾದಗಳ ಮಧ್ಯೆ ರಿಲೀಸ್ ಆಗಿರೋದ್ರಿಂದಲೇ ಸಿನಿಮಾ ಮೇಲೆ ಪ್ರೇಕ್ಷಕರ ರೆಸ್ಪಾನ್ಸ್ ದುಪ್ಪಟ್ಟಾಗಿದೆ ಅಂತ ಹೇಳಬಹುದು. ಇನ್ನು ಸಿನಿಮಾದಲ್ಲಿ ಕೆಲವೊಂದಿಷ್ಟು ಸೂಕ್ಷ್ಮ ವಿಚಾರಗಲಿರೋದ್ರಿಂದ ಚಿತ್ರವನ್ನ ನೋಡಲೇ ಬೇಕು ಅಂತ ಥಿಯೇಟರ್ ಕಡೆ ಬರುವವರು ಇದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆಯದಾಗಿನಿಂದ ಇಲ್ಲಿಯವರೆಗೂ ದಾಖಲೆಯ ಕಲೆಕ್ಷನ್ ಮಾಡಿದೆ. ದಿ ಕೇರಳ ಸ್ಟೋರಿ ಸಿನಿಮಾದ 5 ದಿನದ ಕಲೆಕ್ಷನ್ ಬಗ್ಗೆ ಹೇಳೋದಾದ್ರೆ, ಬಿಡುಗಡೆಯಾದ ಐದು ದಿನದಲ್ಲಿ ₹56.86 ಕೋಟಿ ಕಲೆಕ್ಷನ್ ಮಾಡಿರುವ ದಿ ಕೇರಳ ಸ್ಟೋರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

  • ಮೊದಲ ದಿನದ ಕಲೆಕ್ಷನ್ : 8.03 Cr.
  • ಎರಡನೇ ದಿನದ ಕಲೆಕ್ಷನ್ : 11.22Cr.
  • ಮೂರನೇ ದಿನದ ಕಲೆಕ್ಷನ್ : 16.40Cr.
  • ನಾಲ್ಕನೇ ದಿನದ ಕಲೆಕ್ಷನ್ : 10.07Cr.
  • ಐದನೇ ದಿನದ ಕಲೆಕ್ಷನ್ : 11.14Cr.

ಈ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಮಾಡಲಿದೆ ಅಂತ ಅಂದಾಜು ಮಾಡಲಾಗಿದ್ದು. ಸಿನಿಮಾಗೆ ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವುದನ್ನ ನೋಡ್ತಿದ್ರೆ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡೋದ್ರಲ್ಲಿ ಸಂದೇಹವೇ ಇಲ್ಲ ಅಂತ ಹೇಳಬಹುದು.

ಇದನ್ನೂ ಓದಿ: ನಿರ್ಮಾಪಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಯಾವ ನಿರ್ಮಾಪಕ ನನ್ನ ಬೆಳಸಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram