The Kerala Story: ಸಾಕಷ್ಟು ವಿವಾದದ ಮೂಲಕ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿ 10ದಿನಗಳನ್ನ ಪೂರೈಸಿದ್ದು 12ದಿನಕ್ಕೆ ದಾಪುಗಲು ಇಡುತ್ತಿದೆ. ಹೀಗಿರುವಾಗ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆಯನ್ನ ತೆಗೆದಿದೆ ಅಂದ್ರೆ ಈ ಸಿನಿಮಾದ ಬಾಕ್ಸ್ ಆಫೀಸ್ ಬೇಟೆ ಕೋಟಿಗಳಲ್ಲೇ ಮುಂದುವರಿದಿದೆ. ಸತತ 12 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಆದಾಯ ಬರ್ತಿದೆ. ಅದರಲ್ಲೂ ಕೇವಲ 10ದಿನಕ್ಕೆ 150ಕೋಟಿ ಬಾಚ್ಚಿಕೊಂಡಿದೆ, ಚಿತ್ರದ ಕಲೆಕ್ಷನ್ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳನ್ನ ನೋಡೋಣ ಬನ್ನಿ.
ಈಗ ದಿ ಕೇರಳ ಸ್ಟೋರಿ ಸಿನಿಮಾ ಇದೀಗ 150 ಕೋಟಿ ರೂಪಾಯಿ ಗಳಿಸಿದೆ. ಒಂದು ವಾರ ಭರ್ಜರಿಯಾಗಿ ಪ್ರದರ್ಶನಗೊಂಡು 3ನೇ ವಾರಕ್ಕೆ ಮುನ್ನುಗ್ಗುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಭಾರೀ ವಿರೋಧದ ನಡುವೆಯೂ ‘ದಿ ಕೇರಳ ಸ್ಟೋರಿ’(The Kerala Story) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುದೀಪ್ತೋ ಸೇನ್ ನಿರ್ದೇಶಿಸಿ, ವಿಪುಲ್ ಶಾ ನಿರ್ಮಿಸಿದ ಈ ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಕೇರಳದ ಹಿಂದು ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಸಿರಿಯ, ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ ಅಥವಾ ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ. ಆದ್ರೆ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ರು, ಅಲ್ಲದೆ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ, ತಮಿಳುನಾಡಿನ ಕೆಲವು ಮಲ್ಟಿಪ್ಲೆಕ್ಸ್‌ಗಳು ಕೇರಳ ಸ್ಟೋರಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದ್ದರು. ಇದರ ನಡುವೆಯೂ ಭಾರಿ ಕಲೆಕ್ಷನ್‌ನತ್ತ ಸಿನಿಮಾ ಸಾಗುತ್ತಿದೆ. ಇದರ ಜೊತೆಗೆ ಚಿತ್ರದ ಬಿಡುಗಡೆಗೆ ಕಾಂಗ್ರೆಸ್, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿಗಳನ್ನ ಕೂಡ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಹೀಗಾಗಿ ಇದೀಗ ಸಿನಿಮಾಗೆ ಭರಪೂರಾ ಕಲೆಕ್ಷನ್ ಸಿಕ್ತಿದೆ.
ಇದನ್ನೂ ಓದಿ: ಹೆಣ್ಣು ಮಗುವನ್ನ ದತ್ತು ಪಡೆದ ನಟಿ ಅಭಿರಾಮಿ.. ರಕ್ತ ಕಣ್ಣೀರು ಸಿನಿಮಾ ಖ್ಯಾತಿಯ ನಟಿ ಅಭಿರಾಮಿ ಅವ್ರ ಮಾತೃ ಪ್ರೀತಿ
ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿದೆ.
ಹೌದು ಮೊದಲ ದಿನ ಸಾಧಾರಣ ಗಳಿಕೆ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಭರ್ಜರಿ ಸಾಧನೆ ಮಾಡಿದೆ. 2ನೇ ವಾರದಲ್ಲಿ ಸ್ಟಾರ್ ಹೀರೋಗಳ ಚಿತ್ರಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಮಾಡುತ್ತಿರುವುದು ‘ದಿ ಕೇರಳ ಸ್ಟೋರಿ’ ಸಿನಿಮಾದ ಹೆಚ್ಚುಗಾರಿಕೆ ಅಂದ್ರೆ ತಪ್ಪಾಗಲ್ಲ. ದಿ ಕೇರಳ ಸ್ಟೋರಿ(The Kerala Story) ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿರುವುದು ಅನುಕೂಲ ಆಗಿದೆ. ಅಂದ್ರೆ ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಇದೀಗ ಸಿನಿಮಾಗೆ ಒಳ್ಳೆ ಪ್ರಚಾರವನ್ನ ಮಾಡ್ತಿದ್ದಾರೆ ಅಂದ್ರೆ ತಪ್ಪಾಗಲ್ಲ. ಅದರಲ್ಲೂ ಅಚ್ಚರಿ ಎಂದರೆ 2ನೇ ಭಾನುವಾರ ಈ ಸಿನಿಮಾಗೆ ಅತಿ ಹೆಚ್ಚು ಹಣ ಹರಿದುಬಂದಿದೆ. ಮೇ 14ರ ಭಾನುವಾರ ಒಂದೇ ದಿನ ದಿ ಕೇರಳ ಸ್ಟೋರಿ ಸಿನಿಮಾ ಬರೋಬ್ಬರಿ 23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್ 150ಕೋಟಿ ರೂಪಾಯಿಗಳ ಗಡಿ ತಲುಪಿದೆ.
ಇನ್ನು ಸಿನಿಮಾ ರಿಲೀಸ್ ಆದ ದಿನದಿಂದ ಆದ ಕಲೆಕ್ಷನ್ ನೋಡೋದಾದ್ರೆ, ಮೊದಲ ದಿನ 8.03 ಕೋಟಿ ರೂ, 2ನೇ ದಿನ 11.22 ಕೋಟಿ ರೂ, 3ನೇ ದಿನ: 16.40 ಕೋಟಿ ರೂ, 4ನೇ ದಿನ: 10.07 ಕೋಟಿ ರೂ, 5ನೇ ದಿನ: 11.14 ಕೋಟಿ ರೂ, 6ನೇ ದಿನ: 12 ಕೋಟಿ ರೂ, 7ನೇ ದಿನ: 12.50 ಕೋಟಿ ರೂ, 8ನೇ ದಿನ: 12.23 ಕೋಟಿ ರೂ, 9ನೇ ದಿನ: 19.50 ಕೋಟಿ ರೂ, ಇನ್ನು 10ನೇ ದಿನ: 23.75 ಕೋಟಿ ರೂಪಾಯಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಾಮಾಯಿ ಮಾಡ್ತಿದೆ.
ಒಟ್ಟಿನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವಿವಾದದ ನಡುವೆಯೇ ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನ ಕಾಣುತ್ತಿದೆ. ಜೊತೆಗೆ ಸಿನಿಪ್ರೇಕ್ಷಕರ ಚಪ್ಪಾಳೆಯನ್ನ ಗಿಟ್ಟಿಸಿಕೊಳ್ಳುತ್ತಿದೆ. ಸಾಲದಕ್ಕೆ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಿದೆ. ಇದೀಗ 150ಕೋಟಿಗೂ ಅಧಿಕ ಗಳಿಕೆ ಮಾಡಿ ಹೆಚ್ಚಿನ ಗಳಿಕೆಯತ್ತ ದಾಪುಗಲು ಇಡುತ್ತಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ! ಫೋಟೋ ಶೂಟ್ ಹೇಗಿದೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram