The Kerala Story OTT Release: ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹೊತ್ತು ಬಿಡುಗಡೆ ಭಾಗ್ಯವೇ ಇಲ್ಲವೇನೋ ಅನ್ನುವಂತಾಗಿಬಿಟ್ಟಿತ್ತು. ಕೊನೆಗೆ ನ್ಯಾಯಾಲಯದ ಮೂಲಕ ಸಿನಿಮಾ ಬಿಡುಗಡೆಗೆ ಫೈನಲಿ ಗ್ರೀನ್ ಸಿಗ್ನೇಲ್ ಸಿಕ್ಕಿ ಕಳೆದ ಮೇ 5ರ ಶುಕ್ರವಾರ ಇಡೀ ದೇಶದಾದ್ಯಂತ ಬಿಡುಗಡೆ ಆಗಿ, ಗೊಂದಲಗಳ ಮಧ್ಯೆಯೇ, ವಿವಾದಗಳ ಸುಳಿಯಲ್ಲಿದ್ರೂ ಸಖತ್ ರೆಸ್ಪಾನ್ಸ್ ಪಡೆದುಕೊಂಡು ಗಳ್ಳಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಮತಾಂತರ ಹಾಗೂ ಕೆಲವೊಂದಿಷ್ಟು ಉಗ್ರ ಸಂಘಟನೆಗಳ ಕುರಿತಾದ ಕಥಾ ವಸ್ತುವನ್ನ ಸಿನಿಮಾ ಹೊಂದಿದ್ದರಿಂದ ಸಿನಿಮಾದ ಟ್ರೈಲರ್ ಹಾಗೂ ಟೀಸರ್ ರಿಲೀಸ್ ಅದಾಗಿನಿಂದ ಸಿನಿಮಾ ರಿಲೀಸ್ ಬಗ್ಗೆ ಸಾಕಷ್ಟು ಕಾಣದ ಕೈಗಳು ಕೆಲಸ ಮಾಡಿ ಸಿನಿಮಾ ಯಾವ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಪಟ್ಟು ಹಿಡಿದಿದ್ರು ಆದ್ರೆ ನ್ಯಾಯಾಲಯ ಸಿನಿಮಾ ಬಿಡುಗಡೆಗೆ ಅಸ್ತು ಅಂದಿತ್ತು. ಹೀಗಾಗಿ ಇದೀಗ ಎಲ್ಲ ಭಾಷೆಗಳಲ್ಲಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆ ಆಗಿ 6ದಿನಗಳಗ್ತಿದ್ದು, ಇದೀಗ ಸಿನಿಮಾದ ott ರೈಟ್ಸ್ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದ್ದೂ, ott ರೈಟ್ಸ್ ಯಾರಿಗೆ ಸಿಕ್ಕಿದೆ ott ಯಲ್ಲಿ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಇದೆಲ್ಲವನ್ನ ಸಂಪೂರ್ಣವಾಗಿ ನೋಡೋಣ ಬನ್ನಿ.
ಹೌದು ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ ‘ದಿ ಕೇರಳ ಸ್ಟೋರಿ’ ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಇದೀಗ ರಿಲೀಸ್ ಆಗಿ 6ನೆ ದಿನಕ್ಕೆ ಕಾಲಿಟ್ಟಿದ್ದು ಕಲೆಕ್ಷನ್ ವಿಚಾರದಲ್ಲಿ ಗಳ್ಳಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಇನ್ನು ಸುದೀಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದು, ಚಿತ್ರರಸಿಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ರಿಲೀಸ್‌ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಅಂತ ಕೇರಳದಲ್ಲಿ ಒತ್ತಡ ಶುರುವಾಗಿತ್ತು ಜೊತೆಗೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳೇ ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು.
ಇದೀಗ ಫಸ್ಟ್ ವೀಕೆಂಡ್ ಮುಗಿಸಿ 6ನೇ ದಿನ ಸಿನಿಮಾ ಪ್ರದರ್ಶನ ಕಾಣ್ತಿದೆ. ಇನ್ನು ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಆದರೂ ಕೂಡ ಎಲ್ಲ ಅಡೆತಡೆಗಳನ್ನ ಮೀರಿ ಸಿನಿಮಾ ರಿಲೀಸ್ ಆಗೋದ್ರ ಜೊತೆಗೆ ಐಪಿಎಲ್ ಭರಾಟೆ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುತ್ತಿರೋದು ನಿಜಕ್ಕೂ ಸಿನಿಮಾ ಮಾಡ್ತಿರೋ ಸದ್ದು ಎಷ್ಟರ ಮಟ್ಟಿಗಿದೆ ಅನ್ನೋದನ್ನ ತೋರಿಸುತ್ತಿದೆ. ಇದರ ಜೊತೆಗೆ ಸಿನಿಮಾವನ್ನ ಸ್ಮಾಲ್ ಸ್ಕ್ರೀನ್ ಮೇಲೆ ನೋಡಲು ಪ್ರೇಕ್ಷಕರು ಕೂಡ ತುದಿಗಾಳಿನಲ್ಲಿ ಕಾಯುತ್ತಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾದ OTT ರೈಟ್ಸ್ ತೆಗೆದುಕೊಂಡಿರೋದ್ಯಾರು
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಶುಕ್ರವಾರ ಅಂದ್ರೆ ಮೇ 5ರಂದು ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ ಪಶ್ಚಿಮ ಬಂಗಾಳ, ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರವೇ ಚಿತ್ರವನ್ನ ನಿಷೇಧ ಮಾಡಿದ್ರೆ, ತಮಿಳುನಾಡಿನಲ್ಲಿ ಕಲೆಕ್ಷನ್ ಇಲ್ಲ ಅಂತ ಚಿತ್ರವನ್ನ ಪ್ರದರ್ಶನ ಮಾಡ್ತಿಲ್ಲ ಆದ್ರೂ ಕೂಡ ಚಿತ್ರ ಕಲೆಕ್ಷನ್ ವಿಚಾರ ಸೇರಿದಂತೆ ಜನರನ್ನ ತಲುಪುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಚಿತ್ರಕ್ಕೆ ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರೋದನ್ನ ನೋಡ್ತಿದ್ರೆ ಚಿತ್ರವನ್ನ ಆದಷ್ಟು ಬೇಗ ಓಟಿಟಿಯಲ್ಲಿ ನೋಡುವ ಸಾಧ್ಯತೆ ಹೆಚ್ಚಿಗೆ ಇದೆ ಅಂತ ಹೇಳಬಹುದು.
ಹೌದು ಈಗಾಗಲೇ ಭಾರೀ ಮೊತ್ತಕ್ಕೆ ‘ದಿ ಕೇರಳ ಸ್ಟೋರಿ’ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ. ಜೀ5 ಸಂಸ್ಥೆ ‘ದಿ ಕೇರಳ ಸ್ಟೋರಿ’ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಹೀಗಾಗಿ ott ಯಲ್ಲಿ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿದೆ. ಇನ್ನು ಸಾಮಾನ್ಯವಾಗಿ ಯಾವುದೇ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ 7 ವಾರಗಳ ನಂತರ ಓಟಿಟಿಗೆ ಬರುತ್ತದೆ. ಆದರೆ ‘ದಿ ಕೇರಳ ಸ್ಟೋರಿ’ ಅದಕ್ಕಿಂತ ಬೇಗ ಬರುವ ಸಾಧ್ಯತೆಯಿದೆ ಅಂತ ಹೇಳಲಾಗ್ತಿದ್ದು, ಅದಕ್ಕೆ ಈಗಿರುವ ವಿವಾದಗಳ ಕಾರಣ ಅಂತಲೂ ಚೆರ್ಚೆಗಳು ನಡೀತಿದೆ. ಇನ್ನು ಥಿಯೇಟರ್‌ಗೆ ಬಂದು 7 ವಾರಗಳ ನಂತರ ಸಿನಿಮಾಗಳು ಓಟಿಟಿಗೆ ಬರುತ್ತವೆ. ಆ ಲೆಕ್ಕದಲ್ಲಿ ‘ದಿ ಕೇರಳ ಸ್ಟೋರಿ’ ಜೂನ್ 3ನೇ ವಾರ ಸ್ಟ್ರೀಮಿಂಗ್ ಆಗಬೇಕು. ಆದರೆ ಸಿನಿಮಾ ಇಷ್ಟೆಲ್ಲಾ ವಿವಾದ ಸೃಷ್ಟಿಸಿರುವುದು, ಶೋಗಳು ಕ್ಯಾನ್ಸಲ್ ಆಗ್ತಿರುವುದು ನೋಡಿದರೆ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಸ್ಮಾಲ್ ಸ್ಕ್ರೀನ್‌ಗೆ ಬರುವ ಸುಳಿವು ಸಿಕ್ತಿದೆ. ಆದರೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಓಟಿಟಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗುತ್ತಾ ಅನ್ನುವಂತಹ ಸಂದೇಹಗಳಿದ್ದು, ott ಪ್ರದರ್ಶನದ ನಂತರವೇ ಇದಕ್ಕೆ ಉತ್ತರ ಸಿಗಲಿದೆ.
ಒಟ್ಟಿನಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಭಾರೀ ವಿರೋಧದ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. 3 ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಹೀಗಾಗಿ ಕೇವಲ 5 ದಿನಗಳಲ್ಲಿ ಸಿನಿಮಾ 56 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಕಲೆಕ್ಷನ್ ಹೆಚ್ಚಿಸಿಕೊಂಡು ಸಾಗಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಹಾಗೂ ಮಂಗಳವಾರ 11.14 ಕೋಟಿ ರೂ. ಸೇರಿ ಭಾರತದಲ್ಲಿ ಮೊದಲ 5 ದಿನಕ್ಕೆ ಒಟ್ಟು 56.86 ಕೋಟಿ ರೂ. ಗಳಿಸಿದೆ. ಇನ್ನು ಇಂದು ಕೂಡ ಒಳ್ಳೆ ಮೊತ್ತವನ್ನೇ ಕಲೆಕ್ಟ್ ಮಾಡುತ್ತೆ ಅನ್ನೋ ಲೆಕ್ಕಾಚಾರ ನಡೀತಿದೆ. ಅಲ್ಲದೆ ott ಯಲ್ಲಿ ಸಿನಿಮಾ ರಿಲೀಸ್ ಆದ್ರೆ ಇನ್ನು ಎಲ್ಲ ವರ್ಗದ ಜನರನ್ನ ತಲುಪುವ ನಿರೀಕ್ಷೆ ಇದ್ದು ಸಿನಿ ಪ್ರೇಕ್ಷಕರಂತು ಕಾದುಕುಳಿತ್ತಿದ್ದಾರೆ.
ಇದನ್ನೂ ಓದಿ: ಕೇವಲ 5 ದಿನಕ್ಕೆ 50 ಕೋಟಿ ದಾಟಿದ ಕೇರಳ ಸ್ಟೋರಿ ಕಲೆಕ್ಷನ್!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram