ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ; ಕಾರಣವೇನು?

electric bike taxi scheme

2021 ರ ಜುಲೈ 14 ರಂದು, ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಸ್ಕೀಮ್ ಅನ್ನು ಜಾರಿಗೆ ತಂದಿತ್ತು. ಈಗ ಈ ಯೋಜನೆಯನ್ನು ರಾಜ್ಯ ಸರ್ಕಾರವು ರದ್ದು ಮಾಡಿದೆ. ಈ ಯೋಜನೆಯನ್ನು ರದ್ದು ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರವು ಹಲವು ಕಾರಣಗಳನ್ನು ನೀಡಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರವು ನೀಡಿರುವ ಕಾರಣಗಳು:-

ರಾಜ್ಯ ಸರ್ಕಾರವು ನಿನ್ನೆ ಆದೇಶವನ್ನು ಹೊರಡಿಸಿದ್ದು ಆದೇಶದ ಪ್ರತಿಯಲ್ಲಿ ಯೋಜನೆಯನ್ನು ಹಿಂಪಡೆಯಲು ಹಲವು ಕಾರಣಗಳನ್ನು ನೀಡಿದೆ.

  • ಯೋಜನೆಯ ನಿಯಮಗಳ ಪಾಲನೆಯನ್ನು ಮಾಡದಿರುವ ಬಗ್ಗೆ ಹಲವು ಘಟನೆಗಳು ಗಮನಕ್ಕೆ ಬಂದಿದೆ ಆದ್ದರಿಂದ ಈ ಯೋಜನೆಯನ್ನು ರದ್ದು ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
  • ಯೋಜನೆಯ ಫಲಾನುಭವಿಗಳು ನಿಯಮವನ್ನು ಮೀರಿ ಟ್ಯಾಕ್ಸಿಗಳ ಮಾಲೀಕರೊಂದಿಗೆ ಜಗಳ ಮಾಡುವ ಘಟನೆಗಳು ಬಹಿರಂಗವಾಗಿದೆ ಹಾಗೂ ಮಹಿಳೆಯರ ಸುರಕ್ಷತೆಯೂ ಒಂದು ಮುಖ್ಯ ಕಾರಣವಾಗಿದೆ.
  • * ಹಲವು ಬಾರಿ ಯೋಜನೆಯ ದುರುಪಯೋಗ ಮಾಡಿಕೊಂಡು ಇ ಬೈಕ್ ಟ್ಯಾಕ್ಸಿಯ ಬದಲಾಗಿ ಬೈಕ್ ಟ್ಯಾಕ್ಸಿ ಹಾಗೂ ಸ್ಕೂಟರ್ ಟ್ಯಾಕ್ಸಿ ಯಾಗೀ ಬಳಸುತ್ತಾ ಇರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: 100 KM ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ₹69,000 ರೂಪಾಯಿಗೆ ಖರೀದಿಸಿ

ಯೋಜನೆಯ ಆರಂಭ ಮಾಡುವಾಗ ಯೋಜನೆಯ ಉದ್ದೇಶ ಗಳು:-

  • ಜೀವನವನ್ನು ಸರಳಗೊಳಿಸಲು :- ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಜೀವನವನ್ನು ಸರಳಗೊಳಿಸಲು ಮತ್ತು ನಗರದಲ್ಲಿ ಚಲನಶೀಲತೆ ಹೆಚ್ಚಿಸುವ ಉದ್ದೇಶ ಹಾಗೂ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ನಿರುದ್ಯೋಗಿ ಪ್ರಮಾಣವನ್ನು ಹೆಚ್ಚಿಸಲು ಮಾಡುವ ಉದ್ದೇಶವನ್ನು ಹೊಂದಿತ್ತು.
  • ಸಾರ್ವಜನಿಕ ಸಾರಿಗೆ ಸಂಪರ್ಕ ಸಾಧಿಸಲು:- ಸಾರ್ವಜನಿಕರು ತಮ್ಮ ಮನೆಗಳಿಂದ ಬಸ್ ನಿಲ್ದಾಣಗಳಿಗೆ ಹಾಗೂ ರೈಲ್ವೆ ಮತ್ತು ಮೆಟ್ರೋ ಸ್ಟೇಷನ್‌ಗಳಿಗೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಲುಪಲು ಉಪಯೋಗ ಆಗುವಂತೆ ಮಾಡುವುದು.
  • ಪರಿಸರ ಸ್ನೇಹಿ: ಎಲೆಕ್ಟ್ರಿಕ್ ಬೈಕ್‌ಗಳು ಪರಿಸರಕ್ಕೆ ಹಾನಿಕಾರಕವಾದ ಹೊಗೆ ಅಥವಾ ವಾಯುಮಾಲಿನ್ಯವನ್ನು ಮಾಡುವುದಿಲ್ಲ.
  • ಇಂಧನ ಸಂರಕ್ಷಣೆ: ಪೆಟ್ರೋಲ್ ರೀತಿಯ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.‌ ಇದು ಇಂಧನವನ್ನು ಉಳಿಸಲು ಸಹಾಯಕ ಆಗುತ್ತದೆ.
  • ವಿಮಾ ರಕ್ಷಣೆ:-ಇ-ಬೈಕ್ ಟ್ಯಾಕ್ಸಿ ಕಂಪನಿಗಳು ಸವಾರ ಮತ್ತು ಮಾಲೀಕರಿಗೆ ವಿಮಾ ರಕ್ಷಣೆ ಒದಗಿಸುತ್ತವೆ. ಇದರಿಂದ ಮಾಲೀಕರು ಹಾಗೂ ಸವಾರರಿಗೆ ಭದ್ರತೆ ದೊರೆಯುತ್ತದೆ.

ಬೈಕ್ ಟ್ಯಾಕ್ಸಿ, ಮೋಟಾರ್‌ಸೈಕಲ್ ಟ್ಯಾಕ್ಸಿ ಅಥವಾ ಮೋಟೋ-ಟ್ಯಾಕ್ಸಿ ಎಂದೂ ಕರೆಯಲ್ಪಡುವ ಒಂದು ಸಾರಿಗೆ ವಿಧಾನವಾಗಿದ್ದು, ಸಾಂಪ್ರದಾಯಿಕ ನಾಲ್ಕು ಚಕ್ರಗಳ ವಾಹನಗಳ ಬದಲಿಗೆ ಮೋಟಾರ್‌ಸೈಕಲ್‌ಗಳು ಅಥವಾ ಮೋಟಾರ್‌ಬೈಕ್‌ಗಳಲ್ಲಿ ಪ್ರಯಾಣಿಕರನ್ನು ಸಾಗಿಸಲಾಗುತ್ತದೆ. ಇದು ಅನೇಕ ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ ಮತ್ತು ಟ್ರಾಫಿಕ್ ಮೂಲಕ ನ್ಯಾವಿಗೇಟ್ ಮಾಡಲು ತ್ವರಿತ ಮತ್ತು ಅನುಕೂಲಕರ ಮಾರ್ಗವನ್ನು ಒದಗಿಸುತ್ತದೆ. ಸವಾರರು ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಬೀದಿ ಬದಿಯ ಸ್ಟ್ಯಾಂಡ್‌ಗಳ ಮೂಲಕ ಬೈಕ್ ಟ್ಯಾಕ್ಸಿಗಳನ್ನು ಸ್ವಾಗತಿಸುತ್ತಾರೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಕಡಿಮೆ-ದೂರ ಪ್ರಯಾಣಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ನಿಯಮಗಳು ಮತ್ತು ಸುರಕ್ಷತೆಯ ಕಾಳಜಿಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಿಳಾ ದಿನಾಚರಣೆ ಪ್ರಯುಕ್ತ LPG ಸಿಲಿಂಡರ್ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಇದನ್ನೂ ಓದಿ: ಅತಿ ಕಡಿಮೆ ಬೆಲೆಯಲ್ಲಿ ಇಡೀ ಕುಟುಂಬವು ಪ್ರಯಾಣಿಸುವಂತಹ ಏಕೈಕ ಕಾರು ಎಂದರೆ ಅದುವೇ ಮಾರುತಿ ಸುಜುಕಿ ಇಕೋ