ರೈತರು ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುವ ಏಷ್ಟೋ ಪ್ರಕರಣಗಳು ನಡೆಯುತ್ತಾ ಇರುತ್ತವೆ. ರೈತರು ದೇಶದ ಬೆನ್ನೆಲುಬು ಎಂದು ಏಷ್ಟು ಪೇಪರ್ ಪುಸ್ತಕ ಹಾಗೂ ಭಾಷಣದಲ್ಲಿ ಹೇಳಿದರು ರೈತರ ಕಷ್ಟ ಮಾತ್ರ ಕಡಿಮೆ ಆಗುವುದಿಲ್ಲ. ಇಡೀ ದೇಶಕ್ಕೆ ಅನ್ನವನ್ನು ಹಾಕುವ ರೈತ ಸಾಮಾನ್ಯ ಜೀವನ ನಡೆಸುವುದು ಕಷ್ಟ ಆಗಿದೆ. ರೈತರ ಬದುಕಿಗೆ ಬೆಳೆಯುವ ಬೆಳೆಗೆ ಬಂಡವಾಳ ಹಾಕಲು ರೈತ ಸಾಲ ಮಾಡಬೇಕು. ರೈತನಿಗೆ ಬಂದ ಬೆಳೆಗೆ ಮಾರುಕಟ್ಟೆಯಲ್ಲಿ ಸಿಗುವ ಬೆಲೆಯೇ ಅವನ ಜೀವನಕ್ಕೆ ಆಧಾರ. ರೈತನಿಗೆ ಇಡೀ ವರುಷದ ಆದಾಯ ನಿಂತಿರುವುದು ಅವನು ಬೆಳೆದ ಬೆಳೆಗೆ ಸಿಗುವ ಲಾಭಗಳ ಮೇಲೆ. ಆದರೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತ ಸಾಲದ ಸುಳಿಗೆ ಸಿಲುಕುತ್ತಾರೆ.
ಈಗಾಗಲೇ ಹಲವು ವರ್ಷಗಳಿಂದ ಬೆಲೆ ಸಾಲಾ ಮನ್ನಾವು ಆಗಿದೆಯೇ ರೈತನ ಜೀವನ ಬಹಳ ಕಷ್ಟವಾಗಿದೆ. ಈಗ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವ ಬಗ್ಗೆ ತಿಳಿಸಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾಲದ ಬಡ್ಡಿಯನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ರೈತನ ಸಾಲದ ಬಡ್ಡಿಯ ಹಣವೂ ಮನ್ನಾ ಆಗ್ಬೇಕು ಅಂದರೆ ಹಲವರು ಮಾನದಂಡಗಳು ಇವೆ. ಏನೇನು ರೂಲ್ಸ್ ಗಳು ಇವೆ ಎಂಬುದನ್ನು ತಿಳಿಯಿರಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾರ ಯಾರ ಸಾಲ ಮನ್ನಾ ಆಗುತ್ತದೆ?
- ಸಹಕಾರಿ ಸಂಘಗಳಲ್ಲಿ ಸಾಲ ಪಡೆದಿರಬೇಕು.
- ಕೃಷಿ ಸಾಲ ಮಾತ್ರ ಮನ್ನಾ ಆಗುತ್ತದೆ. ಗೃಹ ಸಾಲ ಅಥವಾ ವಯಕ್ತಿಕ ಸಾಲಗಳಿಗೆ ಇದು ಅನ್ವಯ ಆಗುವುದಿಲ್ಲ.
- ರೈತರಿಗೆ ಸಂಭಂದಿಸಿದಂತೆ ರೈತರ ಮಧ್ಯಾವಧಿ ಅಥವಾ ವರ್ಷಾವಧಿ ಸಾಲಗಳಿಗೆ ಇದು ಅನ್ವಯ ಆಗುತ್ತದೆ.
- ಡಿಸೆಂಬರ್ 31 2023 ರಂದು ಸಾಲದ ಅಸಲು ಹಣವನ್ನು ಪಾವತಿ ಮಾಡಿದಲ್ಲಿ ಅದರ ಮೇಲಿನ ಬಡ್ಡಿದರವನ್ನು ಸರ್ಕಾರ ಪಾವತಿಸುತ್ತದೆ.
- ಯಾವುದೇ ವ್ಯಕ್ತಿಗಳನ್ನು ಅಥವಾ ಪ್ರೈವೇಟ್ ಕಂಪನಿಗಳಿಂದ ಸಾಲ ತೆಗೆದು ಕೊಂಡರೆ ಸಾಲ ಮನ್ನಾ ಆಗುವುದಿಲ್ಲ.
- ತೋಟಗಾರಿಕಾ ಸಾಲಗಳಿಗೆ ಅಂದರೆ ನೀರಾವರಿ, ಪಶು ಸಂಗೋಪನೆ , ಹೈನುಗಾರಿಕೆ , ಮೀನು ಕೃಷಿ, ಕೃಷಿ ಯಂತ್ರ ತೆಗೆದುಕೊಳ್ಳಲು ಪಡೆದಿರುವ ಸಾಲಗಳಿಗೆ ಇದು ಅನ್ವಯ.
- ಮೇಟರಿಯಂ ಅವಧಿಯಲ್ಲಿ ಸುಸ್ತಿರವಾದ ಬಡ್ಡಿಗೆ ಈ ಸಲ ಅನ್ವಯ.
- ಕರ್ನಾಟಕ ರಾಜ್ಯದ ರೈತರಿಗೆ ಮಾತ್ರ ಇದು ಅನ್ವಯ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ .. ಆಧಾರ್ ಕಾರ್ಡ್ ರೇಶನ್ ಕಾರ್ಡ್ ಇದ್ದರೆ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ..
ರೈತರ ಬಡ್ಡಿ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಆಗುವ ಲಾಭಗಳೇನು?
- ರೈತರ ಆರ್ಥಿಕ ಹೊರೆ ಕಡಿಮೆ ಆಗುತ್ತದೆ.
- ಅಲ್ಪ ಮತ್ತು ಬಡ ರೈತರ ನಿತ್ಯ ಜೀವನಕ್ಕೆ ಅನುಕೂಲ.
- ರೈತ ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲಾ ಮರುಪಾವತಿ ಮಾಡಿದ ರೈತನಿಗೆ ಹಣದುಬ್ಬರದ ಹೊಡೆತ ಕಡಿಮೆ ಆಗುತ್ತದೆ.
- ರೈತಾಪಿ ಬದುಕು ಬಿಟ್ಟು ಬೇರೆ ಉದ್ಯೋಗ ಹೋಗುವವರಿಗೆ ಇದು ರೈತ ವೃತಿಗೆ ಮತ್ತೆ ಬರಲು ಅನುಕೂಲ.
ಬಡ್ಡಿ ಸಾಲ ಮನ್ನಾ ಅರ್ಜಿಗೆ ನೀಡಬೇಕಾದ ದಾಖಲೆಗಳು ಏನೇನು?
- ಆಧಾರ್ ಕಾರ್ಡ್(Aadhar card).
- ಭೂಮಿಯ ವಿವರ.
- ಸಾಲವನ್ನು ಪಡೆದಿರುವ ಬಗ್ಗೆ ಮತ್ತು ಸಾಲದ ಮೂಲ ಬೆಲೆಯನ್ನು ಸರಿಯಾದ ಸಮಯಕ್ಕೆ ಕಟ್ಟಿರುವ ಬಗ್ಗೆ ನಿಖರವಾದ ಮಾಹಿತಿ.
- ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ (statement).
- ಆದಾಯ ಪ್ರಮಾಣ ಪತ್ರ.
- ಸಾಲ ಪಡೆದಿರುವ ಬ್ಯಾಂಕ್ ಅಥವಾ ಸಂಸ್ಥೆಯ ಹೆಸರು.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಅತ್ಯಂತ ಜನಪ್ರಿಯತೆಯ ಸ್ಮಾರ್ಟ್ ಫೋನ್ Realme ಈಗ ನಿಮ್ಮ ಕೈಯಲ್ಲಿ