ನವೆಂಬರ್ ತಿಂಗಳಿನಲ್ಲಿ ಈ ನಾಲ್ಕು ಗ್ರಹಗಳ ಸಂಚಾರದಿಂದ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ..

ನಮ್ಮ ಹಿಂದೂ ಶಾಸ್ತ್ರದ ಪ್ರಕಾರ ಗ್ರಹಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಗ್ರಹಗಳು ಬೇರೆ ರಾಶಿಗೆ ಸಂಚರಿಸಿದಾಗ ಪ್ರತಿಯೊಂದು ರಾಶಿಯಲ್ಲಿಯೂ ಕೂಡ ಬದಲಾವಣೆ ಉಂಟಾಗುತ್ತದೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ನಡೆಯುವ ನಾಲ್ಕು ಗ್ರಹಗಳ ಬದಲಾವಣೆಯಿಂದ ಯಾವ ಯಾವ ರಾಶಿಗಳಿಗೆ ಅದೃಷ್ಟ ಎಂಬುದನ್ನ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅದೃಷ್ಟದ ರಾಶಿಗಳಿವು:

ನವೆಂಬರ್ ಮೂರನೇ ತಾರೀಕು 4:58 ನಿಮಿಷಕ್ಕೆ ಶುಕ್ರನು ಕನ್ಯಾ ರಾಶಿಗೆ ಸಂಚಾರ ಮಾಡುತ್ತಾನೆ. ಶುಕ್ರ, ಸಮೃದ್ಧಿ ಹಾಗೂ ವೈಭೋಗದ ಗ್ರಹ ಎಂದು ಹೇಳಬಹುದು. ಈ ರೀತಿ ಶುಕ್ರನ ಸಂಚಾರದಿಂದ ವೃಷಭ ರಾಶಿ, ಕನ್ಯಾ ರಾಶಿ ಹಾಗೂ ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತಾನೆ ಅಂದರೆ ನಿಮಗೆ ಯಾವುದಾದರು ಕಡೆಯಿಂದ ಆದಾಯ ಬಂದು ದೊರೆಯುತ್ತದೆ ಹಾಗೆ ಉದ್ಯೋಗದಲ್ಲಿಯೂ ಕೂಡ ನೀವು ಪ್ರಗತಿಯನ್ನು ಕಾಣುತ್ತೀರಾ ವೃತ್ತಿಯಲ್ಲಿ ಬಡ್ತಿ ದೊರೆಯುವುದು ಈ ರೀತಿ ಶುಕ್ರನ ಸಂಚಾರದಿಂದ ನಿಮಗೆ ನವೆಂಬರ್ ತಿಂಗಳಿನಲ್ಲಿ ಎಲ್ಲಿಂದಲಾದರೂ ಹಣವು ಬಂದೊದಗುತ್ತದೆ.

ಯಾವ ಮೂಲದಿಂದ ಸಮೃದ್ಧಿ ಬಂದು ಒದಗುತ್ತದೆ ಅಂತ ಹೇಳೋಕೆ ಆಗೋದಿಲ್ಲ ಎಲ್ಲಿಂದಲಾದರೂ ಶುಕ್ರ ನಿಮಗೆ ಆರ್ಥಿಕತೆಯನ್ನು ಒದಗಿಸಿಕೊಡುತ್ತಾನೆ ಸಂಬಳದಲ್ಲಿ ಹೆಚ್ಚಳವಾಗಿರಬಹುದು ವ್ಯಾಪಾರದಲ್ಲಿ ಅಭಿವೃದ್ಧಿ ಆಗಿರಬಹುದು ಹೀಗೆ ಹಲವು ಮೂಲಗಳಿಂದ ಹಣವು ಬಂದೊದಗುತ್ತದೆ. ಹಾಗೆ ಏನಾದರೂ ವ್ಯವಹಾರವನ್ನು ವ್ಯಾಪಾರವನ್ನು ನಡೆಸುತ್ತಿದ್ದರೆ ನಿಮಗೆ ಅದರಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಹಾಗೆ ಇನ್ನೊಂದು ಪ್ರಮುಖ ವಿಚಾರ ಏನೆಂದರೆ ನೀವು ಈ ಸಮಯದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಶುಕ್ರನು ಕನ್ಯಾ ರಾಶಿಯಲ್ಲಿ ಸಂಚಾರ ಮಾಡುವುದರಿಂದ ನಿಮಗೆ ಹೂಡಿಕೆಯಲ್ಲಿ ಲಾಭವನ್ನು ತಂದುಕೊಡುತ್ತಾನೆ ಆದ್ದರಿಂದ ಇದು ಹೂಡಿಕೆ ಮಾಡಲು ಒಳ್ಳೆಯ ಸಮಯ ಅಂತಾನೆ ಹೇಳಬಹುದು. ಅಷ್ಟೇ ಅಲ್ಲದೆ ನವೆಂಬರ್ ತಿಂಗಳಲ್ಲಿ ಇನ್ನೊಂದು ಗ್ರಹದ ಬದಲಾವಣೆ ಉಂಟಾಗುತ್ತಿದೆ. ಬುಧನು ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ನವೆಂಬರ್ 6 ನೇ ತಾರೀಖಿನಂದು 4:11 ನಿಮಿಷಕ್ಕೆ ಬುಧನು ವೃಶ್ಚಿಕ ರಾಶಿಗೆ ಸಂಚಾರವನ್ನು ನಡೆಸುತ್ತಾನೆ. ವೃಶ್ಚಿಕ ರಾಶಿ, ಕರ್ಕ ರಾಶಿ ಮತ್ತು ಮೀನ ರಾಶಿಯವರಿಗೆ ಬುಧ ಗ್ರಹದ ಸಂಚಾರದಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತವೆ. ಈ ಮೂರು ರಾಶಿಯವರಿಗೆ ಬುಧನ ಸಂಚಾರದಿಂದ ಅನೇಕ ರೀತಿಯಲ್ಲಿ ಲಾಭಗಳಿವೆ ನೀವು ಆರ್ಥಿಕ ಹೂಡಿಕೆಯಲ್ಲಿ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಹೂಡಿಕೆ ಮಾಡುವುದಕ್ಕೆ ಒಳ್ಳೆಯ ಸಮಯವಾಗಿದೆ ಈ ಸಮಯದಲ್ಲಿ ಹೂಡಿಕೆಯನ್ನು ಮಾಡಿದರೆ ಅತ್ಯಧಿಕ ಲಾಭವನ್ನು ಪಡೆಯಬಹುದು. ಇವತ್ತಿನ ಹೂಡಿಕೆಯ ಲಾಭವು ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ನಿಮಗೆ ನೆರಳಾಗುತ್ತದೆ. ಈ ಸಮಯದಲ್ಲಿ ನೀವು ಹೊಸ ಹೊಸ ಮೂಲಗಳಿಂದ ಆದಾಯವನ್ನು ಪಡೆಯುತ್ತೀರಿ.

ಇದನ್ನೂ ಓದಿ: 2024ರಲ್ಲಿ ಶನಿಯ ಕೃಪೆಯಿಂದಾಗಿ ಈ ಮೂರು ರಾಶಿಗಳಿಗೆ ಅದೃಷ್ಟ, ರಾಜಯೋಗವನ್ನು ಪಡೆಯುವಂತಹ ಆ ಮೂರು ರಾಶಿಗಳು ಯಾವವು?

ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ

ವೃಶ್ಚಿಕ ರಾಶಿಗೆ ಬುಧನ ಜೊತೆ ಮಂಗಳನು ಕೂಡ ಸಂಚಾರವನ್ನು ಮಾಡುತ್ತಾನೆ ನವೆಂಬರ್ 16ನೇ ತಾರೀಕು 10:04 ನಿಮಿಷಕ್ಕೆ ಮಂಗಳನು ವೃಶ್ಚಿಕ ರಾಶಿಗೆ ಪಾದಾರ್ಪಣೆ ಮಾಡುತ್ತಾನೆ. ಈ ಸಮಯದಲ್ಲಿ ಮೇಷ ರಾಶಿ ಮತ್ತು ವೃಶ್ಚಿಕ ರಾಶಿಗೆ ಬಹಳ ಉತ್ಸಾಹವನ್ನು ತಂದುಕೊಡುತ್ತಾನೆ ಮೇಷ ಮತ್ತು ವೃಶ್ಚಿಕ ರಾಶಿಯವರು ಬಹಳ ಉತ್ಸಾಹಯುಕ್ತರಾಗಿರುತ್ತಾರೆ. ಈ ಉತ್ಸಾಹವು ಇವೆರಡೂ ರಾಶಿಗಳಿಗೆ ಆರ್ಥಿಕತೆಯನ್ನು ತಂದುಕೊಡುತ್ತದೆ ಈ ಸಮಯದಲ್ಲಿ ನಿಮಗೆ ಕಠಿಣ ಪರಿಶ್ರಮದ ಅಗತ್ಯತೆ ಇದೆ. ಪರಿಶ್ರಮವನ್ನು ಪಟ್ಟರೆ ನೀವು ಉತ್ತಮವಾದ ಆದಾಯವನ್ನು ತಂದುಕೊಳ್ಳಬಹುದು.

ಅಷ್ಟೇ ಅಲ್ಲದೆ ವೃಶ್ಚಿಕ ರಾಶಿಗೆ ಸೂರ್ಯನು ಕೂಡ ಸಂಚಾರ ಮಾಡುತ್ತಿದ್ದಾನೆ ನವೆಂಬರ್ 17ರಂದು ಸೂರ್ಯ ವೃಶ್ಚಿಕ ರಾಶಿಗೆ ಸಂಚಾರ ಮಾಡುವ ಒಂದು ಸುದಿನ ಅಂತ ಹೇಳಬಹುದು ವೃಶ್ಚಿಕ ರಾಶಿಗೆ ಸೂರ್ಯನ ಸಂಚಾರದಿಂದ ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿಯವರು ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತಾರೆ ಇವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಹೋದಲ್ಲಿ ಯಶಸ್ಸು ಸಿಗುತ್ತದೆ ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಕೂಡ ಉನ್ನತ ಮಟ್ಟದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸಿಂಹ ರಾಶಿಯವರಿಗೆ ಕೀರ್ತಿ ಸಿಗುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಹಾಯವಾಗುತ್ತದೆ. ಈ ಸಮಯದಲ್ಲಿ ನಿಮಗೆ ಬಹಳಷ್ಟು ಆರ್ಥಿಕತೆ ಒದಗಿಬರುತ್ತದೆ. ನವೆಂಬರ್ ನಲ್ಲಿ ಈ ನಾಲ್ಕು ಗ್ರಹಗಳ ಸಂಚಾರದಿಂದ ಈ ರಾಶಿಗಳಿಗೆ ಅದೃಷ್ಟ ಒದಗಿ ಬರುತ್ತದೆ.

ಇದನ್ನೂ ಓದಿ: ಎಲ್. ಪಿ. ಜಿ. ಸಿಲಿಂಡರ್ ಉಚಿತವಾಗಿ ನೀಡಲಿದ ಕೇಂದ್ರ; ಯಾರಿಗೆಲ್ಲ ಉಚಿತ ಸಿಲಿಂಡರ್ ಸಿಗುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram