ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಗೆ ಆದಂತೆ ಮಹಿಳೆಯರು ಸ್ವಂತ ಮನೆಯನ್ನು ತೆಗೆದುಕೊಳ್ಳುವದು ಹೆಚ್ಚಾಗಿದೆ ಎಂದು ವರದಿ ಆಗಿದೆ. ಈ ವರದಿಯನ್ನು 2019 ರಲ್ಲಿ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ANAROCK ಬಿಡುಗಡೆ ಮಾಡಿದೆ. ANAROCK ಕಂಪನಿಯು ನಡೆಸಿದ ಅಧ್ಯಯನದ ಪ್ರಕಾರ 30% ರಿಂದ 35% ಮಹಿಳೆಯರು ಮನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಶೇಕಡಾ 78% ಮಹಿಳೆಯರು ವಾಸಕ್ಕೆ ಮನೆಯನ್ನು ಪಡೆದರೆ ಇನ್ನೂ 22% ಮಹಿಳೆಯರು ಬ್ಯುಸಿನೆಸ್ ಮಾಡಲು ಅಥವಾ property ಗಾಗಿ ಮನೆಯನ್ನು ತೆಗೆದುಕೊಳ್ಳುತ್ತಾ ಇದ್ದರೆ.
ಮೊದಲನೇ ಬಾರಿ ಮನೆ ತೆಗೆದುಕೊಳ್ಳುವ ಮಹಿಳೆಯರಿಗೆ ವಿಶೇಷ ಲಾಭವಿದೆ :- ಇದರ ಬಗ್ಗೆ ಮಾತನಾಡಿದ ಬೇಸಿಕ್ ಹೋಮ್ ಲೋನ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಅತುಲ್ ಮೊಂಗಾ ಅವರು ಹೋಮ್ ಲೋನ್ ತೆಗೆದುಕೊಳ್ಳುವವರು ಈಗ ಹೆಚ್ಚಾಗಿದ್ದು ಅದರಂತೆಯೇ ಈಗ ಹಲವು ಬ್ಯಾಂಕ್ ಗಳು ಕಂಪನಿಗಳು ಮಹಿಳೆಯರಿಗೆ ಹೋಮ್ ಲೋನ್ ಪಡೆಯಲು ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಅದರಲ್ಲೂ ಮೊದಲ ಬಾರಿಗೆ ಮನೆ ತೆಗೆದುಕೊಳ್ಳುವ ಮಹಿಳೆಯರಿಗೆ ಹೆಚ್ಚಿನ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತಿವೆ ಎಂದು ಮಾಹಿತಿ ನೀಡಿದರು.
ಮಹಿಳೆಯರು ತೆಗೆದುಕೊಂಡ ಗೃಹ ಸಾಲಕ್ಕೆ ಬಡ್ಡಿದರ ಕಡಿಮೆ :- ಯಾವುದೇ ಸಂಸ್ಥೆಯಲ್ಲಿ ಗೃಹ ಸಾಲಕ್ಕೆ ಅರ್ಜಿ ಹಾಕಿದರೆ ಮಹಿಳೆಯರಿಗೆ ಸಾಲದ ಮೇಲಿನ ಬಡ್ಡಿದರ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ನೀಡುವ ಬಡ್ಡಿಗೆ ಹೋಲಿಸಿದರೆ ಮಹಿಳೆಯರು ತೆಗೆದುಕೊಂಡ ಸಾಲಕ್ಕೆ ಶೇಕಡಾ 0.05% ರಿಂದ 0.10% ಬಡ್ಡಿದರ ಕಡಿಮೆ ಇರುತ್ತದೆ. ಇದು ಮಹಿಳೆಯರಿಗೆ ಆರ್ಥಿಕವಾಗಿ ಇನ್ನಷ್ಟು ಪ್ರಭಲ ಆಗಲೂ ಸಹಾಯ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತೆರಿಗೆ ಪ್ರಯೋಜನಗಳು ಸಿಗುತ್ತದೆ :-
ಮಹಿಳೆಯರು ಗೃಹ ಸಾಲ ಪಡೆದರೆ ಅವರಿಗೆ ತೆರಿಗೆ ಸೌಲಭ್ಯಗಳು ಸಿಗುತ್ತವೆ. ಸಾಮಾನ್ಯವಾಗಿ ಪುರುಷರು ಕಟ್ಟಬೇಕಾದ ತೆರಿಗೆಗೆ ಹೋಲಿಸಿದರೆ ಮಹಿಳೆಯರಿಗೆ ನಿಗದಿ ಮಾಡುವ ತೆರಿಗೆಗಳು ಕಡಿಮೆ ಇರುತ್ತವೆ. ಇದು ಸಹ ಮಹಿಳಾ ಸಬಲೀಕರಣಕ್ಕೆ ನೀಡುವ ಕೊಡುಗೆ ಆಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24(b) ಅಡಿಯಲ್ಲಿ ಮಹಿಳೆಯರು ಗೃಹ ಸಾಲಗಳ ಮೇಲೆ ಪಾವತಿಸಿದ ಬಡ್ಡಿಯ ಮೇಲೆ 2 ಲಕ್ಷ ರೂಪಾಯಿಯವರೆಗೆ ವಾರ್ಷಿಕ ಕಡಿತಗಳು ಸಿಗುತ್ತವೆ. ಹಾಗೂ ಸೆಕ್ಷನ್ 80C ಗೃಹ ಸಾಲಗಳಿಗೆ ಮರುಪಾವತಿಸಲಾದ ಅಸಲು ಮೊತ್ತದ ಮೇಲೆ 1,50,000 ಲಕ್ಷ ರೂಪಾಯಿ ವಾರ್ಷಿಕ ಕಡಿತಗಳನ್ನು ನೀಡಲಾಗುತ್ತದೆ.
ಇದರ ಜೊತೆಗೆ ಮಹಿಳೆಯರು ಸೇರಿದಂತೆ ಜಂಟಿ ಗೃಹ ಸಾಲದಲ್ಲಿ ಸಹ-ಅರ್ಜಿದಾರರು ವೈಯಕ್ತಿಕವಾಗಿ ಈ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಹಾಗೂ ಭಾರತದ ಕೆಲವು ರಾಜ್ಯಗಳಲ್ಲಿ ಕೆಲವು ರಾಜ್ಯಗಳು ಮಹಿಳಾ ಖರೀದಿದಾರರಿಗೆ ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳ ಮೇಲೆ ಜಾರಿ ಅಥವಾ ಪೂರ್ಣ ವಿನಾಯಿತಿಗಳನ್ನು ನೀಡುತ್ತವೆ.
ಉತ್ತಮ ಕ್ರೆಡಿಟ್ ಸ್ಕೋರ್ :-
ಮಹಿಳೆಯರು ಸಾಮಾನ್ಯವಾಗಿ ತಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾರೆ, ಇದು ಅವರ ಕ್ರೆಡಿಟ್ ಸ್ಕೋರ್‌ಗಳನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಹಣಕಾಸಿನ ವಿಷಯಗಳಲ್ಲಿ ಜವಾಬ್ದಾರಿಯುತವಾಗಿರುತ್ತಾರೆ ಮತ್ತು ಖರ್ಚು ಮಾಡುವ ಮುನ್ನ ಯೋಚಿಸುತ್ತಾರೆ. ಇದರಿಂದ ಬ್ಯಾಂಕ್ ಗೆ ಮಹಿಳೆಯರ ಮೇಲೆ ಹೆಚ್ಚಿನ ವಿಶ್ವಾಸ ಬರುತ್ತದೆ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಹೆಚ್ಚಾಗುತ್ತದೆ. ಈ ಕ್ರೆಡಿಟ್ ಸ್ಕೋರ್ ಆಧರಿಸಿ ಹೆಚ್ಚಿನ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ವಿಶೇಷವಾಗಿ ಐಪಿಎಲ್ ವೀಕ್ಷಕರಿಗೆ: ಹೊಸ ರಿಚಾರ್ಜ್ ಯೋಜನೆಯನ್ನು ಪಡೆಯಿರಿ ತಡೆರಹಿತ ವೀಕ್ಷಣೆಯನ್ನು ಆನಂದಿಸಿ