ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಪ್ರತಿಯೊಂದು ಆಚರಣೆಗು ಅದರದ್ದೇ ಆದ ಮಹತ್ವವಿದೆ. ಇನ್ನು ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಅಂದ್ರೆ ಆ ಒಂದು ಕೆಲಸಗಳನ್ನು ಅವತ್ತಿನ ದಿನ ಮಾಡಲೆಬಾರದು ಅಂತ ಹಿರಿಯರು ಹಾಗೂ ತಿಳಿದವರು ಹೇಳ್ತಾರೆ. ಹೌದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಷೌರ ಮಾಡಿಸಿಕೊಳ್ಳುವುದು, ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ. ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ ಮಾಡುತ್ತಾರೆ. ಇಲ್ಲವೇ ಒಂದು ಹೊತ್ತು ಮಾತ್ರ ಭೋಜನ ಮಾಡುತ್ತಾರೆ. ಹೀಗೆ ಹಲವು ಸಂಪ್ರದಾಯದಗಳನ್ನು ಆಚರಿಸುವವರು ಕೆಲವರೇ ಆದರೂ ಕೂಡ ಅದರ ಮಹತ್ವ ತಿಳಿದು ಪಾಲಿಸಿದರೆ ಇನ್ನು ಹೆಚ್ಚು ಅನುಕೂಲವಾಗುತ್ತೆ.

WhatsApp Group Join Now
Telegram Group Join Now

ಇನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದ್ದು, ಪಿತೃಕಾರ್ಯಗಳಿಗೆ ಪ್ರಶಸ್ತವಾದ ದಿನ ಇದಾಗಿದ್ದು, ದಾನ, ಧರ್ಮ, ಪಿತೃ ತರ್ಪಣ ಮುಂತಾದ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಹಾಗಾಗಿ ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಅಥವಾ ಹೊಸ ಕೆಲಸಗಳನ್ನು ಆರಂಭಿಸುವುದಿಲ್ಲ. ಕೆಲವು ವಸ್ತುಗಳನ್ನು ಸಹ ಖರೀದಿಸುವುದು ಅಶುಭವೆಂದು ಹೇಳಲಾಗುತ್ತದೆ. ಯಾಕಂದ್ರೆ ಅಮವಾಸ್ಯೆ ತಿಥಿಯು ಪಿತೃಗಳಿಗೆ ಅರ್ಪಿತವಾದ ದಿನ. ಹಾಗಾಗಿ ಆ ದಿನ ರಾತ್ರಿ ಹೊರಗಡೆ ಯಾರೂ ಹೆಚ್ಚು ಓಡಾಡುತ್ತಿರಲಿಲ್ಲ.ಅಲ್ದೇ ಅಮಾವಾಸ್ಯೆ ಎಂದರೆ ಉತ್ತಮ ಕಾರ್ಯಗಳನ್ನು ಮಾಡಲು ಒಳ್ಳೆಯ ದಿನವಲ್ಲ ಎಂಬ ನಂಬಿಕೆ ಆಗಿನಿಂದಲೂ ಇದೆ ಹೀಗಾಗಿ ಅಮಾವಾಸ್ಯೆಯ ದಿನ ಕೆಲವೊಂದು ಕೆಲಸಗಳನ್ನ ಅಪ್ಪಿ ತಪ್ಪಿಯು ಮಾಡಬಾರದು. ನೀವು ಅಂತಹ ಕೆಲಸಗಳನ್ನ ಮಾಡಿದ್ದೆ ಆದಲ್ಲಿ ಮಾತೆ ಮಹಾಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾರೆ. ಹಾಗಾದರೆ ಅಮಾವಾಸ್ಯ ದಿನ ಮನೆಗೆ ಯಾವ ವಸ್ತುಗಳನ್ನ ತರಬಾರದು? ಯಾಕೆ ಆ ವಸ್ತುಗಳನ್ನ ತರಲೇಬಾರ್ದು ಅನ್ನೋದನ್ನ ಕೂಡ ನೋಡೋಣ ಬನ್ನಿ.

ಮೊದಲಿಗೆ ಸ್ನೇಹಿತರೆ ಅಮಾವಾಸ್ಯೆಯ ಈ ದಿನ ಮರೆತು ಕೂಡ ಈ ತಪ್ಪುಗಳನ್ನ ಮಾಡಲೇ ಬಾರದು ಈ 3ವಸ್ತುಗಳನ್ನ ಮನೆಗೆ ತರ್ಲೆ ಬಾರ್ದು ಅನ್ನೋ ನಿಯಮವಿದೆ. ತಂದಿದ್ದೆ ಆದಲ್ಲಿ ದಾರಿದ್ರ್ಯ ಮನೆಯನ್ನ ಅವರಿಸಿಕೊಂಡು ಋಣಾತ್ಮಕ ಶಕ್ತಿ ಮನೆಯನ್ನ ಸುತ್ತಿಕೊಂಡು ವಾಸಿಸೋದಕ್ಕೆ ನಾವೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.

ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಈ ಮೂರು ವಸ್ತುಗಳನ್ನು ಮನೆಗೆ ತರಬಾರದು

ಮೊದಲಿಗೆ ಪೊರಕೆ. ಪೊರಕೆಯನ್ನ ಯಾವುದೇ ಕಾರಣಕ್ಕೂ ಮನೆಯ ಒಳಗೆ ತರಲೆಬಾರ್ದು ಅಂತ ತಿಳಿದವರು ಹೇಳುತ್ತಾರೆ. ಹೌದು ಈಗಾಗ್ಲೇ ಹೇಳಿರುವಂತೆ ಅಮಾವಾಸ್ಯೆಯು ಪಿತೃಗಳ ದಿನವೆಂದು ಹೇಳಲಾಗುತ್ತದೆ. ಆ ದಿನ ಶನಿದೇವರ ದಿನವೂ ಆಗಿದೆ. ಲಕ್ಷ್ಮೀದೇವಿಗೂ ಪೊರಕೆಗೂ ಸಂಬಂಧವಿರುವ ಕಾರಣ, ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತಂದರೆ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚುವುದರಿಂದ ಅನಗತ್ಯ ವಸ್ತುಗಳ ಮೇಲೆ, ಅನಾರೋಗ್ಯಗಳಿಗೆ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಭಿವೃದ್ಧಿ ಹೊಂದುವುದು ಕಷ್ಟಕರವಾಗುತ್ತದೆ. ಅಲ್ದೇ ಲಕ್ಷ್ಮೀ ದೇವಿ ಮುನಿಸಿಕೊಂಡು ಶಾಶ್ವತವಾಗಿ ನಿಮ್ಮ ಮನೆಯಿಂದ ಹೊರಟುಹೋಗುತ್ತಾರೆ ಅನ್ನೋದು ಅನಾದಿ ಕಾಲಾದಿಂದಲೂ ಇರುವ ನಂಬಿಕೆ. ಹಾಗಾಗಿ ಅಮಾವಾಸ್ಯೆಯಂದು ಪೊರಕೆಯನ್ನು ಮನೆಗೆ ತರುವುದು ಶುಭವಲ್ಲ ಅಶುಭ ಅಂತ ನಂಬಲಾಗಿದೆ.

ಇನ್ನು ಎರಡನೆಯದಾಗಿ ಹಿಟ್ಟುಗಳು. ಹೌದು ಯಾವುದೇ ತೆರನಾದ ಹಿಟ್ಟುಗಳು ಅಂದ್ರೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಹೀಗೆ ಯಾವುದನ್ನೂ ಅಮಾವಾಸ್ಯೆಯಂದು ಮನೆಗೆ ತರುವುದು ಶುಭವಲ್ಲ ಅಂತ ತಿಳಿದವರು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯಂದು ಇದನ್ನು ಪಾಲಿಸಲೇಬೇಕೆಂದು ಶಾಸ್ತ್ರ ಹೇಳುತ್ತದೆ. ಈ ದಿನ ಹಿಟ್ಟನ್ನು ಕೊಳ್ಳುವುದು ಪಿತೃಗಳಿಗೆ ಮಾತ್ರ ಎಂಬ ನಂಬಿಕೆ ಇದೆ. ಹಾಗಾಗಿ ಅಮಾವಾಸ್ಯೆಯ ಹಿಟ್ಟನ್ನು ಕೊಳ್ಳುವುದು ಅಶುಭವಾಗಿದೆ. ಒಂದು ವೇಳೆ ನೀವು ಕೊಂಡು ಬಂದಿದ್ದೆ ಆದಲ್ಲಿ ನೆಗೆಟಿವ್ ಎನರ್ಜಿಯನ್ನ ಮನೆಗೆ ಕರೆತಂದಂತಾಗುತ್ತದೆ. ಅಲ್ದೇ ಪಿತ್ರುಗಳಿಗೆ ದ್ರೋಹ ಮಾಡಿದಂತಾಗುತ್ತದೆಯಂತೆ. ಇದರಿಂದ ಪಿತ್ರುಗಳ ಕೋಪಕ್ಕೆ ಗುರಿಯಗಬೇಕಾಗುತ್ತೆ ಎಚ್ಚರ. ಅಲ್ದೇ ಪಿತ್ರುಗಳ ಆಶೀರ್ವಾದ ನಮ್ಮ ಮೇಲೆ ಇಲ್ಲದಂತೆ ಆಗುತ್ತದ್ಯಂತೆ.

ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಎಣ್ಣೆಯನ್ನ ಮನೆಗೆ ತರಬಾರದು. ಹೌದು ಅದು ಅಡುಗೆ ಎಣ್ಣೆ ಆಗಿರಬಹುದು ಇಲ್ವೇ ದೀಪದ ಎಣ್ಣೆಯಗಿರಬಹುದು ಯಾವುದನ್ನೂ ಕೂಡ ಈ ದಿನ ತರಲೇಬಾರದು. ತಂದ್ರೆ ದುಷ್ಟ ಶಕ್ತಿಗಳ ಶಕ್ತಿ ಹೆಚ್ಚಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ದೇ ಎಣ್ಣೆ ಸ್ನಾನವನ್ನು ಕೂಡ ಮಾಡಿಕೊಳ್ಳಬಾರದು. ಜೊತೆಗೆ ಅಮವಾಸ್ಯೆಯಂದು ಉಗುರು ಮತ್ತು ಕೂದಲು ಕತ್ತರಿಸಬಾರದು ಅನ್ನೋ ನಿಯಮವಿದೆ. ಯಾಕಂದ್ರೆ ಅಮವಾಸ್ಯೆಯ ದಿನ ತಂತ್ರ ಮಂತ್ರಗಳನ್ನ ಮಾಡುವ ಕಾರಣಕ್ಕಾಗಿ ಅಂದು ಉಗುರು ಮತ್ತು ಕೂದಲು ಕತ್ತರಿಸಲಾಗುವುದಿಲ್ಲ. ಅಲ್ಲದೇ ಅಮವಾಸ್ಯೆಯಂದು ಕಪ್ಪು ಬಣ್ಣದ ಬಟ್ಟೆಯನ್ನು ಕೂಡ ಧರಿಸಲಾಗುವುದಿಲ್ಲ. ಈ ದಿನ ಮದ್ಯ ಮಾಂಸ ಸೇವನೆ ಮಾಡುವುದು ಕೂಡ ನಿಷಿದ್ಧವಾಗಿದೆ. ಯಾಕಂದ್ರೆ ಅಮವಾಸ್ಯೆ ಎಂದರೆ ಸ್ವರ್ಗಸ್ಥರಾದವರಿಗೆ ಸೇರಿದ ದಿನ.

ಹಾಗಾಗಿ ಈ ದಿನ ಪೂಜಾ ಸಾಮಗ್ರಿಯನ್ನ ಖರೀದಿಸಬಾರದು. ಅಮವಾಸ್ಯೆಯಂದು ಎಣ್ಣೆಯನ್ನ ಹಚ್ಚಬಾರದು. ಆದ್ರೆ ಮೊದಲ ದಿನವೇ ಅಂದ್ರೆ ಹಿಂದಿನ ದಿನವೇ ಎಣ್ಣೆ ಹಚ್ಚಿ, ಅಮವಾಸ್ಯೆಯಂದು ತಲೆ ಸ್ನಾನ ಮಾಡಬಹುದು. ಆದ್ರೆ ಅಮವಾಸ್ಯೆಯ ದಿನ ಎಣ್ಣೆ ಹಚ್ಚಬಾರದು. ಬದಲಾಗಿ ಎಣ್ಣೆಯನ್ನ ದಾನ ಮಾಡಬೇಕು. ಇದರಿಂದ ಶನಿಯ ಅನುಗ್ರಹ ನಿಮ್ಮ ಮೇಲಿರುತ್ತದೆ. ಜೊತೆಗೆ ಮನೆಗೆ ಏನೇ ಬೇಕಿದ್ದರು ಅಮವಾಸ್ಯೆಯ ಹಿಂದಿನ ದಿನ ಅಥವಾ ಮುಂದಿನ ದಿನ ತರಬೇಕು. ಇಲ್ಲ ಅಮವಾಸ್ಯೆಯ ತರಲೇಬೇಕು ಅಂದ್ರು ಅವತ್ತಿಗೆ ಎಷ್ಟು ಬೇಕೋ ಅಷ್ಟು ತರೋದು ಉತ್ತಮ. ಯಾಕಂದ್ರೆ ಅಮಾವಾಸ್ಯೆಯ ದಿನ ಏನೇ ತಂದ್ರು ಕೂಡ ಅದು ಪಿತೃಗಳಿಗೆ ಸಮರ್ಪಣೆ ಮಾಡಿದಂತೆ. ಹೀಗಾಗಿ ಅಮವಾಸ್ಯೆಯ ದಿನ ಜಾಗರುಕರಾಗಿ ಕೆಲವು ನಿಯಮಗಳನ್ನ ಪಾಲಿಸೋದು ಉತ್ತಮ.