ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ ಪರ್ಸನಲ್ ಲೋನ್…

personal loan interest rate

ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದ ಬಹಳ ಎಚ್ಚರಿಕೆ ವಹಿಸಬೇಕು. ಸಾಲ ತೇಗೆದುಕೊಳ್ಳುವ ಮೊತ್ತದ ಮೂರುಪಟ್ಟು ಬಡ್ಡಿದರವೇ ಆಗುವ ಸಾಧ್ಯತೆ ಇರುತ್ತದೆ. ಸಾಲ ತೆಗೆದುಕೊಳ್ಳುವುದು ಸಾಕು ಪ್ರತಿ ತಿಂಗಳು ಬಡ್ಡಿ ಕಟ್ಟುವುದು ಸಾಕು ಎನ್ನಿಸುತ್ತದೆ. ಸಾಲ ತೆಗೆದುಕೊಳ್ಳುವ ಅನಿವಾರ್ಯ ಇದ್ದರೂ ಅನೇಕ ಜನ ಬಡ್ಡಿಯ ಹಣದ ಬಗ್ಗೆ ಚಿಂತಿಸುತ್ತಾರೆ. ಇಂದು ಸ್ಮಾರ್ಟ್ ಫೋನ್ ಗಳಲ್ಲಿ ಹಲವಾರು ಸಾಲ ನೀಡುವ ಆ್ಯಪ್ ಗಳು ಇವೆ ಆದರೆ. ಬಡ್ಡಿ ಇಲ್ಲದೆಯೇ ಸಾಲ ನೀಡುತ್ತೇವೆ ಎಂಬ ಫೇಕ್ ಕಂಪನಿಗಳು ಸಹ ಇವೆ. ಆದರೆ ಯಾವುದೇ ಭಯ ಇಲ್ಲದೆ ಸರಕಾರಿ ಅಥವಾ ಪ್ರೈವೇಟ್ ಬ್ಯಾಂಕ್ ಗಳಲ್ಲಿ ಸಾಲ ಪಡೆಯಬಹುದು. ಬಡ್ಡಿದರ ಕಡಿಮೆ ಇರುವ ಕಡೆ ಹಾಗೂ ನೀಡಬೇಕಾದ ಶ್ಯೂರಿಟಿ ಡಾಕ್ಯುಮೆಂಟ್ ನೀಡುವುದರ ಬಗ್ಗೆ ಯೋಚಿಸಿ ಹೆಜ್ಜೆ ಇಡಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಪರ್ಸನಲ್ ಲೋನ್ ಗೆ ಬ್ಯಾಂಕ್ ನಲ್ಲಿರುವ ಬಡ್ಡಿದರದ ವಿವರಗಳು ಹೀಗಿವೆ :-

  • ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಂದು ಹೆಸರುವಾಸಿಯಾಗಿರುವ ಖಾಸಗಿ ಬ್ಯಾಂಕ್ ಎಂದರೆ ಅದು ICICI. ICICI bank ನಲ್ಲಿ ಪರ್ಸನಲ್ ಲೋನ್ ಗೆ ವಾರ್ಷಿಕ ಬಡ್ಡಿದರ 10.65 ಪರ್ಸೆಂಟ್ ಇಂದ 16 ಪರ್ಸೆಂಟ್ ಹಾಗೂ ಪ್ರೊಸೆಸಿಂಗ್ ಚಾರ್ಜ್ ಯಿಂದ 2.50 ಪರ್ಸೆಂಟ್ ತೆರಿಗೆ ಕಟ್ಟಬೇಕು.
  • ದೇಶದ ಮತ್ತೊಂದು ಅತಿದೊಡ್ಡ ಬ್ಯಾಂಕ್ ಆಗಿರುವ HDFC ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ ವಾರ್ಷಿಕವಾಗಿ 10.5 ಪರ್ಸೆಂಟ್ ನಿಂದ 24 ಪರ್ಸೆಂಟ್ ವರೆಗೆ ಬಡ್ಡಿ ಕಟ್ಟಬೇಕು ಹಾಗೂ 4,999 ರೂಪಾಯಿ ಪ್ರೊಸೆಸಿಂಗ್ ಚಾರ್ಜ್ ಕಟ್ಟಬೇಕು.
  • ಭಾರತದ ಪ್ರತಿ ಹಳ್ಳಿ ಹಳ್ಳಿಗೂ ತನ್ನ ಶಾಖೆಯನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಲೋನ್ ತೆಗೆದುಕೊಂಡರೆ, ನಿಯಮದ ಪ್ರಕಾರ ಖಾಸಗಿ ಅರ್ಜಿದಾರರು 12.30 ರಿಂದ 14.30 ಪರ್ಸೆಂಟ್ ಬಡ್ಡಿದರ ಹಾಗೂ ಯಾವುದೇ ಸರ್ಕಾರಿ ನೌಕರರಿಗೆ 11.30 ರಿಂದ 13.80 ಪರ್ಸೆಂಟ್ ಬಡ್ಡಿದರವನ್ನು ಕಟ್ಟಬೇಕು. ಇನ್ನೂ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರು 11.15 ರಿಂದ 12.60 ಪರ್ಸೆಂಟ್ ಬಡ್ಡಿದರವನ್ನು ಕಟ್ಟಬೇಕು.
  • ಬ್ಯಾಂಕ್ ಆಫ್ ಬರೋಡಾ ಸರ್ಕಾರಿ ನೌಕರಿಗೆ ವಾರ್ಷಿಕವಾಗಿ 12.40ರಿಂದ 16.75 ಪರ್ಸೆಂಟ್ ವರೆಗೆ ಬಡ್ಡಿದರ ವಿಧಿಸುತ್ತದೆ. ಹಾಗೆ ಸರಕಾರಿ ಖಾಸಗಿ ನೌಕರರಿಗೆ 15.15 ರಿಂದ 18.75 ಪರ್ಸೆಂಟ್ ವರೆಗೆ ಬಡ್ಡಿದರ ನಿಗದಿ ಮಾಡಿದೆ.
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಕ್ರೆಡಿಟ್ ಸ್ಕೋರ್ (credit score) ಆಧಾರದ ಮೇಲೆ ಸಾಲ ಪಡೆದವರಿಗೆ ವಾರ್ಷಿಕವಾಗಿ 13.75 ಪರ್ಸೆಂಟ್ ನಿಂಡ 17.25 ಪರ್ಸೆಂಟ್ ವರೆಗೆ ಬಡ್ಡಿದರ ವಿಧಿಸುತ್ತದೆ. ಸರ್ಕಾರಿ ನೌಕರ ಆಗಿದ್ದಲ್ಲಿ 12.75 ಪರ್ಸೆಂಟ್ ನಿಂದ 15. 25 ಪರ್ಸೆಂಟ್ ವರೆಗೆ ಬಡ್ಡಿ ಕಟ್ಟಬೇಕು.
  • ಕೋಟಕ್ ಮಹೇಂದ್ರ ಬ್ಯಾಂಕ್ ನಲ್ಲಿ ಸಾಲ ಪಡೆದರೆ ವರ್ಷಕ್ಕೆ 10.99 ಬಡ್ಡಿ ಕಟ್ಟಬೇಕು. ಕಡಿಮೆ ಬಡ್ಡಿದರ ಅನ್ನಿಸಿದರೂ ಪ್ರೋಸೇನಿಂಗ್ ಫೀಸ್ ಮತ್ತು ತೆರಿಗೆ ಶುಲ್ಕ ಹೆಚ್ಚಿದೆ.
  • ಆಕ್ಸಿಸ್ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕೆ 10.65 ರಿಂದ 22 ಪರ್ಸೆಂಟ್ ವರೆಗೆ ಬಡ್ಡಿದರ ಇದೆ. ಹಾಗೆಯೇ ಇಂಡೆಸ್ಇಂಡ್ ಬ್ಯಾಂಕ್ ನಲ್ಲಿ ವಾರ್ಷಿಕವಾಗಿ 10.49 ಪರ್ಸೆಂಟ್ ಬಡ್ಡಿದರ ಇದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ನಲ್ಲಿ 51 ಫೆಲೋಶಿಪ್ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 61,500 ರೂಪಾಯಿ ಸಂಬಳ

ಇದನ್ನೂ ಓದಿ: 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ದರ ನಂಬಲಾಗದಷ್ಟು ಕಡಿಮೆ! ಸರ್ಕಾರದ ಬೃಹತ್ ಪ್ರಯೋಜನಗಳನ್ನು ಪಡೆದುಕೊಳ್ಳಿ