ಮನೆ ಕಟ್ಟುವಾಗ ನಾವು ಅಂದುಕೊಂಡ ಬಜೆಟ್ ಗಿಂತ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ನಾವು ಕೂಡಿಟ್ಟ ಹಣವೂ ಮನೆ ಕಟ್ಟಲು ಸಾಕಾಗುವುದಿಲ್ಲ. ಹಾಗೆ ಇರುವಾಗ ನಾವು ಮನೆ ಕಟ್ಟಲು ಬ್ಯಾಂಕ್ ಅಥವಾ ಇನ್ನಿತರ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸಾಲದ ಮೊತ್ತಕ್ಕಿಂತ ಬಡ್ಡಿಯ ಮೊತ್ತವೇ ಹೆಚ್ಚಾಗಿ ಇರುವಾಗ ಎಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂಬುದನ್ನು ನಾವು ನೋಡುವುದು ಸಹಜ. ಭಾರತದಲ್ಲಿ ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿವೆ. ಆ ಬ್ಯಾಂಕ್ ಗಳ ವಿವರಗಳನ್ನು ತಿಳಿಯೋಣ.
ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್ ಗಳು ಯಾವುದು?
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ :- ಭಾರತದಲ್ಲಿ ಆತು ಹೆಚ್ಚು ಬ್ರಾಂಚ್ ಗಳನ್ನು ಹೊಂದಿರುವ ಬ್ಯಾಂಕ್ ಇದಾಗಿದೆ. ಈ ಬ್ಯಾಂಕ್ ನಲ್ಲಿ ನೀವು ಮಾಡಿರುವ ಗೃಹ ಸಾಲದ ಮೊತ್ತದ ಮೇಲೆ ವಾರ್ಷಿಕಬಾಗಿ ಶೇಕಡಾ 9.15% ಇಂದ 10.05% ಬಡ್ಡಿದರ ನೀಡಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಲ್ಲಿ ಬಡ್ಡಿದರವು ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ.
2) ಬ್ಯಾಂಕ್ ಆಫ್ ಬರೋಡಾ :- ಇದು ಸಹ ಭಾರತದಾದ್ಯಂತ ತನ್ನ ಶಾಖೆಯನ್ನು ಹೊಂದಿದೆ. ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್‌ನಲ್ಲಿ ಗೃಹ ಸಾಲಕ್ಕೆ ಶೇಕಡಾ 8.40 % ಇಂದ 10.60/% ರವರೆಗೆ ಬಡ್ಡಿ ನೀಡಬೇಕು. ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಲ್ಲಿಯೂ ಸಹ ಸಿಬಿಲ್ ಸ್ಕೋರ್ ಆಧರಿಸಿ ಬಡ್ಡಿದರ ನಿರ್ಧಾರ ಆಗುತ್ತದೆ.
3) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ :- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ಪಡೆಯಬೇಕು ಎಂದಾದರೆ ನೀವು ತೆಗೆದುಕೊಂಡ ಸಾಲದ ಮೊತ್ತಕ್ಕೆ ಶೇಕಡಾ 9.35% ಇಂದ 10.75% ತನಕ ಪಾವತಿಸಬೇಕು. ಸಿಬಿಲ್ ಸ್ಕೋರ್ ಆಧಾರದ ಮೇಲೆ ನಿಮ್ಮ ಬಡ್ಡಿದರ ನಿಗದಿ ಪಡಿಸುತ್ತಾರೆ.
4) ಪಂಜಾಬ್ ನ್ಯಾಷನಲ್ ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ಪಡೆದರೆ ನಿಮ್ಮ ಸಾಲದ ಮೊತ್ತದ ಮೇಲೆ ಶೇಕಡಾ 8.40% ಇಂದ 10.10% ರವರೆಗೆ ಬಡ್ಡಿದರ ನಿಗದಿ ಆಗಿರುತ್ತದೆ. 10 ವರ್ಷಗಳ ಅವಧಿಗೆ ಇದೆ ಬಡ್ಡಿದರ ಇರುತ್ತದೆ. ನಿಮ್ಮ ಸಾಲವನ್ನು ತೀರಿಸಲು ನೀವು ಹೆಚ್ಚಿನ ಸಮಯ ತೆಗೆದುಕೊಂಡರೆ ನೀವು ಪಾವತಿಸಬೇಕಾದ ಬಡ್ಡಿ ಜಾಸ್ತಿ ಆಗುತ್ತದೆ.
5) ಬ್ಯಾಂಕ್ ಆಫ್ ಇಂಡಿಯಾ :- ಈ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲಕ್ಕೆ ಹಲವು ರೀತಿಯ ಗೃಹ ಸಾಲವನ್ನು ಪರಿಚಯಿಸಿದೆ. ನೀವು ತೆಗದುಕೊಂಡ ಗೃಹ ಸಾಲದ ಮೊತ್ತಕ್ಕೆ ಶೇಕಡಾ 8.40 % ಇಂದ ಶೇಕಡಾ 10.85 % ಬಡ್ಡಿದರ ಪಾವತಿ ಮಾಡಬೇಕು. ನೀವು ತೆಗೆದುಕೊಂಡ ಸಾಲದ ಮೇಲೆ ನಿಮಗೆ ಬಡ್ಡಿದರ ನಿಗದಿ ಆಗುತ್ತದೆ. ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಆಧರಿಸಿ ನಿಮಗೆ ಬ್ಯಾಂಕ್ ಬಡ್ಡಿದರವನ್ನು ನಿಗದಿ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ತಿಳಿಸಿದ ಎಲ್ಲ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರ ವಿವರಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಗೃಹ ಸಾಲ ಮಾಡುವಾಗ ಸಾಲದ ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಅಪಘಾತದ ಸಮಯದಲ್ಲಿ ರಕ್ಷಣೆ ಪಡೆಯಿರಿ! ಅಂಚೆ ಕಚೇರಿಯಲ್ಲಿ ಕೇವಲ ₹520ಕ್ಕೆ ₹10 ಲಕ್ಷ ವಿಮೆ!