ಈ ತಿಂಗಳ ಕೊನೆಯ ಒಳಗೆ ಈ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಸಿಗುತ್ತದೆ.

home loans

ಮನೆ ಕಟ್ಟುವುದು ಪ್ರತಿಯೊಬ್ಬನ ಕನಸು ತನ್ನ ಜೀವಿತ ಅವಧಿಯಲ್ಲಿ ತನಗೆ ತನ್ನ ಕುಟುಂಬದವರಿಗೆ ಒಂದು ಸೂರು ನಿರ್ಮಾಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ಮಾರುಕಟ್ಟೆಯ ಬೆಲೆ ಏರಿಕೆಯ ಬಿಸಿಯಲ್ಲಿ ನಾವು ದುಡಿದ ಹಣವನ್ನು ಉಳಿಸಿ ಮನೆ ಕಟ್ಟುವುದು ನಿಜಕ್ಕೂ ಕಷ್ಟ. ಅದರಿಂದ ನಾವು ಸಾಲ ಮಾಡಿ ಮನೆ ಕಟ್ಟಬೇಕಾಗುತ್ತದೆ. ಆದರೆ ಸಾಲ ಮಾಡಿದರೆ ಸಾಲದ ಮೊತ್ತಕ್ಕಿಂತ ಬಡ್ಡಿದರವೇ ಹೆಚ್ಚು ಹೀಗಿದ್ದಾಗ ಸಾಲ ಮಾಡಲು ನಮಗೆ ಭಯ ಆಗುತ್ತದೆ. ಆದರೆ ಈಗ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ನೀಡಲು ಮುಂದಾಗಿದೆ. ಈ ಆಫರ್ ಸ್ವಲ್ಪ ದಿನಗಳು ಮಾತ್ರ ಇರಲಿದ್ದು ಆಫರ್ ಮುಗಿಯುವ ಒಳಗಾಗಿ ನೀವು ಸಾಲ ಪಡೆಯಲು ಅರ್ಜಿ ಹಾಕಿ ಗೃಹಸಾಲ ಪಡೆಯಿರಿ. ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಈ ಆಫರ್ ಲಭ್ಯವಿದೆ ಎಂಬುದನ್ನು ನೋಡೋಣ.

WhatsApp Group Join Now
Telegram Group Join Now

ಈ ಆಫರ್ ಯಾವ ಬ್ಯಾಂಕ್ ನಲ್ಲಿ ಲಭ್ಯವಿದೆ?

ಹೊಸದಾಗಿ ಗೃಹ ಸಾಲ ಮಾಡುವವರಿಗೆ ಈ ಸಮಯ ಬಹಳ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಸಾಲ ಮಾಡಿದರೆ ನಿಮಗೆ ಬಡ್ಡಿದರವು ಕಡಿಮೆ ಆಗುತ್ತದೆ. ಈ ಆಫರ್ ನೀಡುತ್ತಿರುವುದು ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ. ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಈ ಘೋಷಣೆ ಮಾಡಿದ್ದು, ಗೃಹಸಾಲದ ಬಡ್ಡಿಯನ್ನು ಶೇಕಡಾ 0.15 ರಷ್ಟು ಇಳಿಸಿದೆ. ಅಂತಕೆ ಪ್ರಸ್ತುತ ಇರುವ ಗೃಹ ಸಲದ ಬಡ್ಡಿದರ 8.45 ಆಗಿದ್ದು , ಆಫರ್ ನಲ್ಲಿ ನಿಮ್ಮ ಸಾಲದ ಬಡ್ಡಿದರವು ಶೇಕಡಾ 8.30 ಆಗುತ್ತದೆ.

ಈ ಆಫರ್ ನಿಮಗೆ ಮಾರ್ಚ್ 31 ರ ವರೆಗೆ ಮಾತ್ರ ಲಭ್ಯವಿದ್ದು, ಈ ಆಫರ್ ಪಡೆಯಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಗೃಹ ಸಾಲ ಪಡೆಯಬಹುದಾಗಿದೆ. ಇದರ ಜೊತೆಗೆ ಗೃಹ ಸಾಲ ಪಡೆಯುವ ಫಲಾನುಭವಿಗಳಿಗೆ ಇನ್ನೊಂದು ಆಫರ್ ನೀಡುತ್ತಿದೆ . ಅದೇನೆಂದರೆ ಮಾರ್ಚ್ 31 ರ ಒಳಗೆ ಸಾಲ ಪಡೆಯುವವರಿಗೆ ಯಾವುದೇ ರೀತಿಯ ಸಂಸ್ಕರಣಾ ಶುಲ್ಕ ವಿಧಿಸಲಾಗುವುದಿಲ್ಲ. ಆಫರ್ ನಲ್ಲಿ ವಿಧಿಸಲಾಗಿರುವ ಬಡ್ಡಿದರದ ಪ್ರಕಾರ ಫಲಾನುಭವಿಗಳಿಗೆ 30 ವರ್ಷಗಳ ಗೃಹ ಸಾಲದ ಮಾಸಿಕ ಕಂತು (ಇಎಂಐ) ಕೇವಲ 755 ಆಗಿರುತ್ತದೆ ಬ್ಯಾಂಕ್ ತಿಳಿಸಿದೆ. ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ನೀಡುತ್ತಾ ಇದ್ದೇವೆ ಎಂದು ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಸೋಲಾರ್ ಮೇಲ್ಛಾವಣಿಗೆ ಆಫರ್ :-

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವುದರ ಜೊತೆಗೆ ಸೋಲಾರ್ ಮೇಲ್ಛಾವಣಿಗೆ ಸಾಲ ಪಡೆಯುವವರಿಗೆ ಸಹ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಬ್ಯಾಂಕ್ ಮುಂದಾಗಿದ್ದು, ಸೋಲಾರ್ ಮೇಲ್ಛಾವಣಿಯ ಸಾಲಕ್ಕೆ ಕೇವಲ 7% ಬಡ್ಡಿದರವನ್ನು ನಿಗದಿ ಮಾಡಲಾಗಿದೆ. ಹಾಗೂ ಇದರ ಜೊತೆಗೆ ಸೋಲಾರ್ ಮೇಲ್ಛಾವಣಿಯ ಸಾಲಕ್ಕೆ ಯಾವುದೇ ರೀತಿಯ ಸಂಸ್ಕರಣಾ ಶುಲ್ಕ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ.

ಗೃಹ ಸಾಲ ಪಡೆಯಬೇಕು ಎಂದು ಬಯಸುವವರು ಮಾರ್ಚ್ 31 ರ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಪೂರ್ಣ ವಿವರ ಪಡೆದು ನೀಡಬೇಕಾದ ದಾಖಲೆಗಳನ್ನು ಸಲ್ಲಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಿರಿ. ಹೆಚ್ಚಿನ ಮಾಹಿತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಫೀಷಿಯಲ್ ವೆಬ್ಸೈಟ್ ಗೆ ಅಥವಾ ಶಾಖೆಗೆ ಭೇಟಿ ನೀಡಿ.