ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕರಾಗಿರುವ ಟೆಸ್ಲಾದ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಈ ತಿಂಗಳು ಭಾರತಕ್ಕೆ ಭೇಟಿ ಬರುತ್ತಿದ್ದಾರೆ. ಅವರು ಭಾರತದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತಾರೆ. ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಮೋದಿಯವರ ಜೊತೆ ಮೀಟಿಂಗ್ ನಂತರ ಭಾರತಕ್ಕಾಗಿ ಟೆಸ್ಲಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸಲು ಸಾಧ್ಯತೆ ಇವೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡ ಎಲೋನ್ ಮಸ್ಕ್
ಟೆಸ್ಲಾ ಮುಖ್ಯಸ್ಥರಾದ ಎಲೋನ್ ಮಸ್ಕ್ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಭಾರತದ ಹಲವು ಬೆಳವಣಿಗೆಗೆ ಉತ್ತಮ ರೀತಿಯ ಪ್ರಯೋಜನವನ್ನು ಕಾಣಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ. ಭಾರತದ ಕಂಪನಿಗಳು ಹಾಗೂ ಮುಂದಿನ ಹಲವು ಯೋಜನೆಗಳ ಬಗ್ಗೆ ಪ್ರಧಾನಿ ಅವರ ಬಳಿ ಚರ್ಚಿಸುವ ಸಾಧ್ಯತೆ ಇರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಕಾಯುತ್ತಿರುವ ಎಲೋನ್ ಮಸ್ಕ್ :- ಬುಧವಾರ ರಾತ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಲೋನ್ ಮಸ್ಕ್ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಆಗಲೂ ಕಾತುರದಿಂದ ಕಾಯ್ತಾ ಇದ್ದೇನೆ. ನಾನು ಭಾರತಕ್ಕೆ ಬರಲಿದ್ದೇನೆ ಎಂದು ಸಂತಸದಿಂದ ಹಚ್ಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಲವರು ಯೋಜನೆಗಳು ಜಾರಿಯಾಗುವ ಸಾಧ್ಯತೆ ಇದೆ. :- ಎಲೋನ್ ಅವರು ಭಾರತಕ್ಕೆ ಭೇಟಿ ನೀಡುವುದರಿಂದ ಹಲವಾರು ಯೋಜನೆಗಳು ಜಾರಿಯಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭಾರತಕ್ಕೆ ಭೇಟಿ ನೀಡುವ ಮಸ್ಕ್ ಅವರು ದೇಶದಲ್ಲಿ ಟೆಸ್ಲಾದ ಮೊದಲ ಸ್ಥಾವರವನ್ನು ಸ್ಥಾಪಿಸುವ ಬಹು ನಿರೀಕ್ಷಿತ ಘೋಷಣೆ ಮಾಡ್ಬಹುದು. ಹಾಗೂ ಇದರ ಜೊತೆಗೆ ಮಸ್ಕ್ ಅವರು ದೇಶಕ್ಕಾಗಿ ಆಟೋಮೊಬೈಲ್ ಪ್ರಮುಖ ಯೋಜನೆಗಳ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಟೆಸ್ಲಾದ ಮೊದಲ ಸ್ಥಾವರ ಸ್ಥಾಪನೆಗೆ ಏಷ್ಟು ಹೂಡಿಕೆ ಹಣ ಬೇಕಾಗಬಹುದು?
ಟೆಸ್ಲಾದ ಮೊದಲ ಸ್ಥಾವರ ಸ್ಥಾಪನೆಯ ಬಗ್ಗೆ ಮಸ್ಕ್ ಅವರು ಘೋಷಣೆ ಮಾಡಿದರೆ ಈ ಯೋಜನೆಯು ಜಾರಿಗೆ ಬರಲು ಹೂಡಿಕೆಯ ಮೊತ್ತ US$2 ಶತಕೋಟಿ ಎಂದು ಅಂದಾಜಿಸಲಾಗಿದೆ. ಉನ್ನತ ಮೂಲಗಳ ವರದಿಯ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಟೆಸ್ಲಾ ಆಸಕ್ತಿಯು ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಕಂಪನಿಯು ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದೆ ಎಂಬ ಮಾಹಿತಿ ಇದೆ.
ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಈ ಉದ್ದೇಶಕ್ಕಾಗಿ ಟೆಸ್ಲಾಗೆ ಆಕರ್ಷಕ ಭೂಮಿಯನ್ನು ನೀಡಲು ಮುಂದಾಗಿವೆ ಎಂಬ ಮಾಹಿತಿಯೂ ಲಭ್ಯವಿದೆ . ವರದಿಗಳ ಪ್ರಕಾರ ಟೆಸ್ಲಾ ಆರಂಭದಲ್ಲಿ ಭಾರತದಲ್ಲಿ ಸುಮಾರು 25 ಲಕ್ಷ ರೂ ಬೆಲೆಯ ಕಾರುಗಳನ್ನು ತಯಾರಿಸುತ್ತದೆ ಹಾಗೂ ವಾರ್ಷಿಕ 5 ಲಕ್ಷ ಯುನಿಟ್‌ಗಳ ಸಾಮರ್ಥ್ಯವನ್ನು ಹೊಂದಿರಲಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ.
ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ಅವರ ಭೇಟಿ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಹೂಡಿಕೆ ಮತ್ತು ಭಾರತದ ಹಲವು ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಏಪ್ರಿಲ್ 22 ರಂದು ನವದೆಹಲಿ ಸಭೆ ಹೊಸ ಯೋಜನೆಗಳಿಗೆ ಇದು ಶುಭಾರಂಭ ಆಗಲಿದೆ. ಭಾರತದ ಪ್ರಗತಿಗೆ ಇನ್ನಷ್ಟು ಹೆಚ್ಚಿನ ಸಹಾಯ ಸಿಗಲಿದೆ ಎಂದು ಹಲವು ತಜ್ಞರ ಅಭಿಪ್ರಾಯ ಆಗಿದೆ.
ಇದನ್ನೂ ಓದಿ: ತಂದೆಯಿಂದ BMW ಕಾರನ್ನು ಗಿಫ್ಟ್ ಆಗಿ ಪಡೆದ ಅಲ್ಲು ಅರ್ಜುನ್, ಇದರಲ್ಲಿರುವ ವಿಶೇಷತೆಯನ್ನು ತಿಳಿದರೆ ಬೆಚ್ಚಿಬಿಳ್ತೀರಾ!
ಇದನ್ನೂ ಓದಿ: ಬರೋಬ್ಬರಿ 304KM ಮೈಲೇಜ್ ಕೊಡುವ ಅಲ್ಟ್ರಾ ವೈಲೆಟ್ F77 ಎಲೆಕ್ಟ್ರಿಕ್ ಬೈಕ್, ಇದರ ವಿಶೇಷತೆ ಏನು ಗೊತ್ತಾ?