ಒಂದು ಊರಿನಲ್ಲಿ ಒಬ್ಬ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಇದ್ದರೆ ಅದು ಇಡೀ ಊರು ಹೆಮ್ಮೆ ಪಡುವ ವಿಷಯ. ಅಂತಹದರಲ್ಲಿ ಒಂದು ಊರಿನಲ್ಲಿ 51 ಐಎಎಸ್ ಹಾಗೂ ಐಪಿಎಸ್ ಆಫೀಸರ್ ಗಳನ್ನೂ ನೀಡಿದೆ ಎಂದರೆ ಅದು ಬಹಳ ಅಚ್ಚರಿ ಪಡುವ ವಿಷಯವಾಗಿದೆ. ಐಎಎಸ್ ಮತ್ತು ಐಪಿಎಸ್ ಪರೀಕ್ಷೆ ಬಹಳ ಕಠಿಣವಾಗಿರುತ್ತದೆ. 1000 ಜನರು ಪರೀಕ್ಷೆ ಬರೆದರೆ ಬೆರಳಣಿಕೆಯಷ್ಟು ಜನರು ಮಾತ್ರ ಈ ಪರೀಕ್ಷೆಯನ್ನು ಪಾಸ್ ಆಗುತ್ತಾರೆ. ಹಾಗಿದ್ದಾಗ ಇಂತಹ ವಿಶಿಷ್ಟ ಸಾಧನೆ ಮಾಡಿರುವ ಹಳ್ಳಿ ಯಾವುದು ಹಾಗಾದರೆ ಅದು ಯಾವ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಪಡೆಯೋಣ.. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆ ಹೊಂದಿದ ಈ ಹಳ್ಳಿ ಯಾವುದು?
ಉತ್ತರ ಪ್ರದೇಶ ರಾಜ್ಯದ ಮಧೋಪಟ್ಟಿ ಗ್ರಾಮದಲ್ಲಿ ಈ ವಿಶೇಷತೆಯನ್ನು ಸಾಧಿಸಲಾಗಿದೆ. ಈ ಗ್ರಾಮವು ಉತ್ತರಪ್ರದೇಶದ ರಾಜಧಾನಿ ಲಕ್ನೊದಿಂದ 300 ಕಿಲೋಮೀಟರ್ ದೂರದಲ್ಲಿದೆ. ಇಂತಹ ವಿಶೇಷ ಸಾಧನೆ ಮಾಡಿರುವ ಆ ಗ್ರಾಮಕ್ಕೆ ಐಎಎಸ್ ಫ್ಯಾಕ್ಟರಿ ಎಂಬ ಹೆಸರು ನೀಡಲಾಗಿದೆ. ಈ ಗ್ರಾಮವು ವರುಷದಿಂದ ವರುಷಕ್ಕೆ ಹೆಚ್ಚೆಚ್ಚು ಅಧಿಕಾರಿಗಳನ್ನು ನೀಡುತ್ತಿರುವ ಈ ಹಳ್ಳಿಯು ದೇಶಕ್ಕೆ ಮಾದರಿಯಾಗಿದೆ. ಜೌನ್‌ಪುರ ಜಿಲ್ಲೆಯ ಈ ಗ್ರಾಮದಲ್ಲಿ ಕೇವಲ 75 ಮನೆಗಳಿವೆ. ಕೇವಲ 75 ಮನೆಗಳಲ್ಲಿ 51 ಅಧಿಕಾರಿಗಳು ಇರುವುದು ಗ್ರಾಮದ ಸಾಕ್ಷರತೆಯ ಪ್ರಮಾಣವು ಎಸ್ಟಿದೆ ಎಂಬುದನ್ನು ತಿಳಿಸುತ್ತದೆ. ಇನ್ನೊಂದು ವಿಶೇಷತೆ ಎಂದರೆ ಈ ಗ್ರಾಮದಲ್ಲಿ ಯಾವುದೇ ಕೋಚಿಂಗ್ ಸೆಂಟರ್ ಇಲ್ಲ. ಇಷ್ಟೊಂದು ಅಧಿಕಾರಿಗಳನ್ನು ನೀಡಿದ ಗ್ರಾಮದಲ್ಲಿ ಕೋಚಿಂಗ್ ಸೆಂಟರ್ ಇಲ್ಲದೆ ಇರುವುದು ಇನ್ನೊಂದು ಅಚ್ಚರಿಯಾಗುತ್ತದೆ.
ಈ ಗ್ರಾಮವು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಈ ಗ್ರಾಮದಿಂದ ಅಧಿಕಾರಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಪರಮಾಣು ಸಂಶೋಧನೆಯ ವಿಭಾಗದಲ್ಲಿ ನ್ಯಾಯಾಂಗ ಸೇವೆಯನ್ನು ನೀಡುತ್ತಾ ಮತ್ತು ಬ್ಯಾಂಕಿಂಗ್‌ನಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಈ ಗ್ರಾಮದ ಇನ್ನೊಂದು ವಿಶೇಷತೆ ಎಂದರೆ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್, ಮತ್ತು ಶಶಿಕಾಂತ್ ಸಿಂಗ್ ನಾಲ್ಕು ಒಡಹುಟ್ಟಿದ ಐಎಎಸ್ ಅಧಿಕಾರಿಗಳ ನೆಲೆಯಾಗಿದೆ. ಒಂದೇ ಕುಟುಂಬದಲ್ಲಿ ಇಂತಹ ಅನನ್ಯ ಸಾಧನೆ ಮಾಡಿರುವುದು ಆಶ್ಚರ್ಯದ ಸಂಗತಿ.
ಗ್ರಾಮವು ಐತಿಹಾಸಿಕವಾಗಿಯೂ ಹೆಸರುವಾಸಿಯಾಗಿದೆ. ಸ್ವಾಂತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಠಾಕೂರ್ ಭಗವತಿ ದಿನ್ ಸಿಂಗ್ ಹಾಗೂ ಅವರ ಪತ್ನಿ ಶ್ಯಾಮರತಿ ಸಿಂಗ್ 1917 ನೇ ಇಸವಿಯಲ್ಲಿ ಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು ಎಂದು ಹೇಳಲಾಗುತ್ತದೆ. ಠಾಕೂರ್ ಭಗವತಿ ದಿನ್ ಸಿಂಗ್ ಅವರ ಪತ್ನಿ ಶ್ಯಾಮರತಿ ಅವರು ಹೆಣ್ಣು ಮಕ್ಕಳಿಗೆ ಪಾಠ ಕಲಿಸುತ್ತ ಇದ್ದರೂ. ನಂತರ ದಿನಗಳಲ್ಲಿ ಹುಡುಗರಿಗೂ ಕಲಿಸುತ್ತ ಇದ್ದರು. ಹಲವರು ವರ್ಷಗಳ ಹಿಂದೆ ಹುಟ್ಟುಹಾಕಿದ ಈ ಕಲಿಕೆಯ ಆಸಕ್ತಿಯೂ ಈಗಲೂ ಮುಂದುವರೆದುಕೊಂಡು ಬಂದಿದೆ. ಈ ಗ್ರಾಮದ ಜನರ ಜೀವನಶೈಲಿಯಲ್ಲಿ ಶಿಕ್ಷಣ ಎನ್ನುವುದು ಗಾಢವಾಗಿ ನೆಲೆಯೂರಿದೆ. ರಾಷ್ಟ್ರದ ಮೇಲಿನ ಅಭಿಮಾನ ಮತ್ತು ನಿರಂತರ ಕಲಿಯುವ ಆಸಕ್ತಿ ಶೈಲಿಗಳೂ ಅಲ್ಲಿಂದ ದೇಶದ ಸೇವೆಗೆ ಹೆಚ್ಚಿನ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೀಡುತ್ತಿದೆ.
ಈ ಗ್ರಾಮದ ಸಾಧನೆಯು ಇಂದಿನ ಯುವಕರಿಗೆ ಜೀವನದಲ್ಲಿ ಸಾಧನೆ ಮಾಡಲು ಸ್ಫೂರ್ತಿಯಾಗಿದೆ. ಈ ಸಾಧಕರ ಜೀವನಶೈಲಿಯನ್ನು ಹಾಗೂ ಕಲಿಕೆಯ ಮೇಲಿರುವ ಆಸಕ್ತಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅಳವಡಿಸಿಕೊಂಡರೆ ಭಾರತ 100% ಸಾಕ್ಷರತೆಯನ್ನು ಸಾಧಿಸುತ್ತದೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ.