ಭಾಗ್ಯಲಕ್ಷ್ಮೀ TRPಯಲ್ಲಿ ಏರಿಕೆ! ಬಿಗ್ ಬಾಸ್ TRP ಎಷ್ಟು? ಈ ವಾರದ ಟಾಪ್ ಧಾರಾವಾಹಿಗಳು ಯಾವುವು ಗೊತ್ತಾ?

Kannada Serial TRP

ವಾರ, ವಾರ ಟಿ ಆರ್ ಪಿ ಕಾಳಗ ಇದ್ದೇ ಇರುತ್ತೆ ಕಳೆದ ವಾರ ಟಾಪ್ ನಲ್ಲಿ ಇರುವ ಧಾರವಾಹಿಗಳು ಈ ವಾರ ಕೆಳಗೆ ಬರಬಹುದು ಕೆಳಗೆ ಇರುವ ಧಾರಾವಾಹಿಗಳು ತಮ್ಮ ಕಥೆಯಲ್ಲಿ ಟ್ವಿಸ್ಟ್ ಕೊಡುವ ಮುಖಾಂತರ ಜನರನ್ನು ಸೆಳೆದು ಆ ವಾರ ಟಾಪ್ ಗೆ ಹೋದ ಹಲವಾರು ಧಾರವಾಹಿಗಳು ಇವೆ. ಧಾರಾವಾಹಿ ಶುರುವಾದಗಿನಿಂದಲೂ ಮೊದಲ ಸ್ಥಾನವನ್ನು ಆಗೊಮ್ಮೆ, ಈಗೊಮ್ಮೆ ಬಿಟ್ಟುಕೊಟ್ಟರು ಟಾಪ್ ಸ್ಥಾನದಲ್ಲಿ ಸದಾಕಾಲ ಕಾಣುವ ‘ಪುಟ್ಟಕ್ಕನ ಮಕ್ಕಳು’ ಈ ವಾರ ಎಷ್ಟನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯು ಈ ವಾರ ಭರ್ಜರಿ ಟಿ.ಆರ್.ಪಿ ಪಡೆದಿದ್ದು ಯಾವ ಧಾರವಾಹಿಗಳನ್ನು ಹಿಂದಿಕ್ಕಿದೆ ಮತ್ತು ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಎಷ್ಟು TRP ಪಡೆದಿದೆ ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಟಾಪ್ 10 ಧಾರಾವಾಹಿಗಳು

ಪುಟ್ಟಕ್ಕನ ಮಕ್ಕಳು

10.3 TVR ಪಡೆದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಧಾರಾವಾಹಿ ಶುರುವಾಗಿ ಎರಡು ವರ್ಷಗಳು ಕಳೆದರೂ ತನ್ನ ಮೊದಲ ಸ್ಥಾನವನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಟ್ಟು ಕೊಟ್ಟಿಲ್ಲ. ಉಮಾಶ್ರೀ, ಧನುಷ್, ಸಂಜನಾ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಭಾಗ್ಯಲಕ್ಷ್ಮೀ

ಕಲರ್ಸ್ ಕನ್ನಡ ವಾಹಿನಿಯ ನಂ1 ಧಾರಾವಾಹಿ ಹಾಗೂ ಕರ್ನಾಟಕದ 2ನೇ ಧಾರಾವಾಹಿಯಾಗಿ ಈ ವಾರ ಭಾಗ್ಯಲಕ್ಷ್ಮೀ ಧಾರಾವಾಹಿಯಾಗಿದ್ದೆ. ಈ ವಾರ 8.2 TVR ಪಡೆದು 2ನೇ ಸ್ಥಾನದಲ್ಲಿದೆ. ಕಥೆಯಲ್ಲಿ ಟ್ವಿಸ್ಟ್ ಕೊಡುತ್ತಾ ಮತ್ತೆ ಕಥೆಯಲ್ಲಿ ಗಟ್ಟಿತನವನ್ನು ಕೊಟ್ಟಿದೆ.

ಗಟ್ಟಿಮೇಳ

7.2 TVR ಪಡೆದು ಈ ವಾರ ಗಟ್ಟಿಮೇಳ ಧಾರಾವಾಹಿ 3ನೇ ಸ್ಥಾನದಲ್ಲಿದೆ. ಕಳೆದ 5 ವರ್ಷಗಳಿಂದ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯು ಈಗ ಅಂತಿಮ ಸಂಚಿಕೆಯಲ್ಲಿ ಇದೆ. ಸತತ 2 ವರ್ಷಗಳು ನಂ1 ಸ್ಥಾನದಲ್ಲಿದ್ದ ಈ ಧಾರಾವಾಹಿ ಯಾವ ಹೊಸ ಧಾರಾವಾಹಿ ಬಂದರೂ ಕೂಡ ತನ್ನ ಸ್ಥಾನವನ್ನು ಬಿಟ್ಟು ಕೊಡುತ್ತಿರಲಿಲ್ಲ. ಅಂತಿಮ ಸಂಚಿಕೆಯಲ್ಲಿ ಧಾರಾವಾಹಿ ನಾಯಕ ರಕ್ಷ್ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಾಗಿ ಹೇಳಿದ್ದಾರೆ ಅದೇನು ಸರ್ಪ್ರೈಸ್ ಎಂದು ಕಾದು ನೋಡಬೇಕಿದೆ.

ಅಮೃತಧಾರೆ ಮತ್ತು ಸತ್ಯ

7.1 TVR ಪಡೆದು ಜೀ ಕನ್ನಡ ವಾಹಿನಿಯ ಅಮೃತಧಾರೆ ಹಾಗೂ ಸತ್ಯ ಧಾರಾವಾಹಿಗಳು 4ನೇ ಸ್ಥಾನದಲ್ಲಿವೆ. ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ವನಿತಾ ವಾಸು, ಛಾಯಾ ಸಿಂಗ್, ಚಿತ್ರಾ ಶೆಣೈ, ಸಾರಾ ಅಣ್ಣಯ್ಯ, ಸಿಹಿ ಕಹಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಸಾಗರ್ ಬಿಳಿಗೌಡ ಹಾಗೂ ಗೌತಮಿ ಜಾಧವ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು

6.7 TVR ಪಡೆದು ಶ್ರೀರಸ್ತು ಶುಭಮಸ್ತು ಧಾರಾವಾಹಿ 5ನೇ ಸ್ಥಾನದಲ್ಲಿದೆ. ಸುಧಾರಾಣಿ, ಅಜಿತ್ ಹಂದೆ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • 6.4TVR ಪಡೆದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಆರನೇ ಸ್ಥಾನದಲ್ಲಿದೆ.
  • 6 TVR ಪಡೆದು ಹಿಟ್ಲರ್ ಕಲ್ಯಾಣ ಧಾರಾವಾಹಿ ಏಳನೇ ಸ್ಥಾನದಲ್ಲಿದೆ.
  • 5.9 TVR ಪಡೆದು ಬೃಂದಾವನ ಧಾರಾವಾಹಿ ಎಂಟನೇ ಸ್ಥಾನದಲ್ಲಿದೆ.
  • 5.7 TVR ಪಡೆದು ಸೀತಾರಾಮ ಧಾರಾವಾಹಿ ಒಂಬತ್ತನೇ ಸ್ಥಾನದಲ್ಲಿದೆ.
  • 5.3 TVR ಪಡೆದು ಕೆಂಡಸಂಪಿಗೆ ಧಾರಾವಾಹಿ ಹತ್ತನೇ ಸ್ಥಾನದಲ್ಲಿದೆ.

ಬಿಗ್ ಬಾಸ್ ಸೀಸನ್ 10 ಶೋ ಈ ವಾರ ಭರ್ಜರಿಯಾಗಿಯೇ TRP ಪಡೆದಿದ್ದು ಸೋಮವಾರ ದಿಂದ ಶುಕ್ರವಾರದ ವರೆಗೆ 7.2TVR ಪಡೆದಿದೆ, ಶನಿವಾರ 9.2 TVR ಪಡೆದಿದೆ, ಭಾನುವಾರ 9.0 TVR ಪಡೆದುಕೊಂಡಿದೆ. ಈ TVR Urban Market ನದ್ದು ಆಗಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬ್ಯಾಂಕ್ ಗಳು ಸಾಲದ ಮರುಪಾವತಿಗೆ ಉಪಯೋಗಿಸಿಕೊಳ್ಳುವಂತಿಲ್ಲ