ಮಹಿಳೆಯರೇ ಮೆಹೆಂದಿಯನ್ನು ಹಾಕಿಕೊಳ್ಳುತ್ತೀರಾ ಹಾಗಾದರೆ ಎಚ್ಚರ! ಈ ಲೇಖನವನ್ನು ಒಮ್ಮೆ ಓದಿ.

ಹಬ್ಬ ಹರಿ ದಿನಗಳಲ್ಲಿ ಮೆಹೆಂದಿ(Mehendi) ಹಾಕಿಕೊಳ್ಳುವುದು ಸರ್ವೇಸಾಮಾನ್ಯ ಹಬ್ಬಗಳು ಬಂತೆಂದರೆ ಮಹಿಳೆಯರಿಗೆ ಮೆಹಂದಿಯ ಸಂಭ್ರಮ ಎದ್ದು ಕಾಣಿಸುತ್ತದೆ. ಅದರಲ್ಲೂ ದಸರಾ ನವರಾತ್ರಿ, ದೀಪಾವಳಿ ಇನ್ನು ಮುಂತಾದ ಹಬ್ಬಗಳಲ್ಲಿ ಮೆಹಂದಿಯನ್ನು ಹಾಕಿಕೊಳ್ಳುತ್ತಾರೆ ಅವರವರ ಪದ್ಧತಿಗಳಿಗೆ ಅನುಗುಣವಾಗಿ ಮೆಹಂದಿಯನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ. ಎಲ್ಲಕ್ಕಿಂತ ಮಹಿಳೆಯರಿಗೆ ಮೆಹಂದಿಯನ್ನು ಕಂಡರೆ ಅಷ್ಟಿಷ್ಟು ಖುಷಿಯಲ್ಲ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೆಹೆಂದಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ ಆದರೆ ಮಾರುಕಟ್ಟೆಯಿಂದ ತರುವ ಮೆಹೆಂದಿಯಲ್ಲಿ ರಾಸಾಯನಿಕ ಅಂಶಗಳು ಇದರಿಂದ ಅಪಾಯವು ಕೂಡ ಸಂಭವಿಸಬಹುದು ಆದ್ದರಿಂದ ಮನೆಯಲ್ಲೇ ಮೆಹಂದಿಯನ್ನು ತಯಾರಿಸಿಕೊಳ್ಳಬಹುದು. ಮನೆಯಲ್ಲಿ ತಯಾರಿಸಿದ ಮೆಹೆಂದಿಯೂ ಅಷ್ಟು ಕೆಂಪಾಗಿ ಇಲ್ಲದೆ ಇರಬಹುದು ಆದರೆ ಅದು ಅಪಾಯವನ್ನ ತಂದೊಡ್ಡುವುದಿಲ್ಲ. ಇವತ್ತಿನ ಲೇಖನದಲ್ಲಿ ನಾವು ಮೆಹೆಂದಿಯ ಬಗ್ಗೆ ಸ್ವಲ್ಪ ವಿಚಾರವನ್ನ ತಿಳಿಸಿ ಕೊಡುತ್ತೇವೆ.

WhatsApp Group Join Now
Telegram Group Join Now

ಮೆಹೆಂದಿ ಹಾಕುವ ಮೊದಲು ಹೀಗೆ ಮಾಡಿ: ನಿಮ್ಮ ಕೈಗೆ ಮೆಹೆಂದಿ(Mehendi) ಹಾಕಿಕೊಳ್ಳುವ ಮೊದಲು ನೀಲಗಿರಿ ಎಣ್ಣೆಯನ್ನು ಕೈಗೆ ಹಚ್ಚಿಕೊಳ್ಳಿ ಇದು ಸ್ವಲ್ಪ ನಿಮ್ಮ ಕೈಯಿಂದ ಬೆಚ್ಚಗೆ ಮಾಡುವುದರಿಂದ ನಿಮ್ಮ ಮೆಹೆಂದಿ ಕೆಂಪಾಗುವುದರಲ್ಲಿ ಸಹಾಯ ಮಾಡುತ್ತದೆ. ಈ ರೀತಿಯಾಗಿ ಮಾಡಿದರೆ ನಿಮ್ಮ ಕೈಯಲ್ಲಿ ಮೆಹಂದಿ ಹೆಚ್ಚು ದಿನಗಳ ಕಾಲ ಉಳಿಯುವುದಲ್ಲದೆ ಹೆಚ್ಚು ಕೆಂಪನ್ನು ಸಹ ತಂದುಕೊಡುತ್ತದೆ.

Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮೆಹಂದಿಯನ್ನು ಹಾಕಿಕೊಳ್ಳುವ ಮುಂಚೆ ಮಾಡಬಾರದ ಕೆಲಸಗಳು

ಸಾಸಿವೆ ಎಣ್ಣೆಯ ಉಪಯೋಗವನ್ನು ದಯವಿಟ್ಟು ಮಾಡಬೇಡಿ ಇದರಿಂದ ನಿಮ್ಮ ಮೆಹೆಂದಿಯ(Mehendi) ಬಣ್ಣ ಹಾಳಾಗುತ್ತದೆ. ಇನ್ನಿತರ ಯಾವುದೇ ಜಿಡ್ಡಿನ ಅಂಶವನ್ನು ನೀವು ಬಳಸಬಾರದು ಕೆಲವರು ಲವಂಗದ ಎಣ್ಣೆ, ಹಾಲಿನ ಕೆನೆಗಳನ್ನ ಉಪಯೋಗಿಸುತ್ತಾರೆ ಆದರೆ ಇದು ಖಂಡಿತವಾಗಲೂ ತಪ್ಪು ಇದು ಮೆಹೆಂದಿಯ ಬಣ್ಣವನ್ನು ಹಾಳು ಮಾಡುತ್ತದೆ.

ಮೆಹೆಂದಿ ಕೆಂಪಗಾಗಲು ಇನ್ನೊಂದು ಪ್ರಮುಖವಾದ ಅಂಶವೇನೆಂದರೆ ಲವಂಗವನ್ನು ಬಿಸಿ ಮಾಡಿ ಅದರಲ್ಲಿ ನಿಮ್ಮ ಕೈಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ ಇನ್ನು ಮತ್ತೊಂದು ಪ್ರಮುಖವಾದ ಅಂಶ ಏನೆಂದರೆ ಒಂದು ಲೋಟದಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ಸೇರಿಸಿ ದ್ರಾವಣವನ್ನು ತಯಾರಿ ಮಾಡಿಟ್ಟುಕೊಳ್ಳಿ ನೀವು ಮೆಹೆಂದಿ ಹಾಕಿದ ನಂತರ ಆ ದ್ರಾವಣವನ್ನು ಸ್ವಲ್ಪ ಸ್ವಲ್ಪವಾಗಿ ಮೆಹಂದಿಯ ಮೇಲೆ ಅಪ್ಲೈ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ಮೆಹೆಂದಿ ತುಂಬಾ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಅಷ್ಟೇ ಅಲ್ಲದೆ ಮೆಹೆಂದಿ ಒಣಗಿ ತೊಳೆದ ನಂತರ ಕೈಗಳಿಗೆ ನೀರನ್ನ ಹಾಕಬಾರದು ಬದಲಾಗಿ ಸ್ವಲ್ಪ ತೆಂಗಿನೆಣ್ಣೆಯನ್ನು ಹಚ್ಚಿ ಹತ್ತು ನಿಮಿಷ ಬಿಟ್ಟು ಕೈಯನ್ನ ತೊಳೆಯಬೇಕು ಇದರಿಂದ ನಿಮ್ಮ ಮೆಹಂದಿಯ ಬಣ್ಣ ಗಾಢವಾಗಿರುತ್ತದೆ. ಮತ್ತೊಂದು ಪ್ರಮುಖವಾದ ಎಚ್ಚರಿಕೆ ಏನೆಂದರೆ ನೀವು ಮೆಹೆಂದಿಯನ್ನು ತರುವಾಗ ಸ್ವಲ್ಪ ನೋಡಿ ತಿಳಿದು ತರುವುದು ಒಳಿತು. ಇಲ್ಲದೆ ಇದ್ದಲ್ಲಿ ಇದು ನಿಮ್ಮ ಕೈಗೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ: ದೀಪಾವಳಿ ಕೊಡುಗೆ : ಹೋಂಡಾ ಎಸ್ ಪಿ 125 ನಲ್ಲಿ ಭರ್ಜರಿ ರಿಯಾಯಿತಿ, ಲಿಮಿಟೆಡ್ ಆಫರ್

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 6 ಸಾವಿರ ಯಾರಿಗೆಲ್ಲಾ ಸಿಗಲಿದೆ ಈ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ

ಇದನ್ನೂ ಓದಿ: ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram