ಸರ್ಕಾರದಿಂದ ಹೊಸದೊಂದು ವಿನೂತನ ಪ್ರಯತ್ನ ಸಂವಿಧಾನದ ಬಗ್ಗೆ ಉತ್ತಮ ರೀಲ್ಸ್ ಮಾಡಿದವರಿಗೆ ಸಿಗಲಿದೆ ಬರೋಬ್ಬರಿ 50,000 ರೂಪಾಯಿ..

Those who make reels will get 50 thousand prize from the government

ಈಗ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳದ್ದೇ ಕಾರುಬಾರು. ಹೆಚ್ಚಿನ views ಪಡೆಯಲು ಜನರು ನಾನಾ ಪ್ರಯತ್ನಗಳನ್ನು ಮಾಡುತ್ತಲೆ ಇರುತ್ತಾರೆ. ಹಾಗೆಯೇ ಈಗ ಜನರಿಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಹೆಚ್ಚಿನ ಜನರು ವೀಕ್ಷಣೆ ಮಾಡುವ ರೀಲ್ಸ್ ಬಳಸಿಕೊಂಡು ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ವಿನೂತನ ಪ್ರಯತ್ನಕ್ಕೆ ಸರ್ಕಾರ ಮುನ್ನುಡಿ ಹಾಡಿದೆ. ಈ ವಿನೂತನ ಕಾರ್ಯಕ್ರಮವಾನ್ನು ಮತದಾನ ಜಾಗೃತಿಗಾಗಿ ಧಾರವಾಡ ಜಿಲ್ಲಾ ಸ್ವೀಪ್‌ ಸಮಿತಿ ಆಯೋಜಿಸಿದೆ..

WhatsApp Group Join Now
Telegram Group Join Now

ಸಂವಿಧಾನದ ಬಗ್ಗೆ ಪಠ್ಯ ಪುಸ್ತಕದಲ್ಲಿ ಇರುತ್ತದೆ ಆದರೆ ಇಂದಿನ ಟ್ರೆಂಡ್ ಗೆ ತಕ್ಕಂತೆ ರೀಲ್ಸ್ ಮೂಲಕ ಜನಜಾಗೃತಿ ಮೂಡಿಸುವುದು ಉತ್ತಮ ಎನ್ನಿಸಿ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಇದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಡಿಯಲ್ಲಿ ಬರುವಂತಹ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಇ.ಎಲ್.ಸಿ ಕ್ಯಾಂಪಸ್ ಅಂಬಾಸಿಡರ್ಗಳನ್ನು ಬಳಸಿಕೊಂಡು ರೀಲ್ಸ್ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಹುಮಾನಗಳ ವಿವರ :- ವಿಜೇತರಿಗೆ ನಗದು ರೂಪದಲ್ಲಿ ಬಹುಮಾನ ದೊರೆಯಲಿದೆ.

  • ಪ್ರಥಮ ಬಹುಮಾನಕ್ಕೇ 50,000 ರೂಪಾಯಿ
  • ದ್ವಿತೀಯ ಬಹುಮಾನಕ್ಕೇ 25,000 ರೂಪಾಯಿ
  • ತೃತೀಯ ಬಹುಮಾನಕ್ಕೇ 15,000 ರೂಪಾಯಿ

ಯಾವ ವಿಷಯಗಳಿಗೆ ರೀಲ್ಸ್‌ ಮಾಡಬಹುದು?: ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಸಂವಿಧಾನದ ಮಹತ್ವದ ಬಗ್ಗೆ, ಪೀಠಿಕೆಯ ವೈಶಿಷ್ಟ್ಯ ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾರೂ ಅಂಶದ ಬಗ್ಗೆ ರೀಲ್ಸ್‌ ಮಾಡಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿ ಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್, ಪ್ರಧಾನಿ ಘೋಷಣೆ

ನಿಯಮಗಳು ಹೀಗಿವೆ :-

  • ರೀಲ್ಸ್‌ 30 ರಿಂದ 40 ಸೆಕೆಂಡ್ ಗಳಲ್ಲಿ ಇರಬೇಕು.
  • ಸಂವಿಧಾನದ ವಿಷಯ ಬಿಟ್ಟು ಬೇರೆ ವಿಷಯಗಳ reels ಗೆ ಅವಕಾಶ ಇಲ್ಲ.
  • ಆಯೋಜಕ ತಂಡದಿಂದ ಅನುಮೋದಿಸ್ಪಟ್ಟವರು ಮಾತ್ರ ರೀಲ್ಸ್ ಕಳುಹಿಸಬಹುದು.
  • ರೀಲ್ಸ್‌ನ ಯುಆರ್‌ಎಲ್‌ (URL) ಅನ್ನು ಫೆಬ್ರವರಿ 20ರವೊಳಗೆ ಆಯೋಜಕರಿಗೆ ತಲುಪಿಸಬೇಕು. ಫೆಬ್ರವರಿ 22ರ ಸಂಜೆ 5 ಗಂಟೆಯ ತನಕ social media ದಲ್ಲಿ ಪಡೆದ ಲೈಕ್ಸ್‌ ಗಳ ಆಧಾರದ ಮೇಲೆ ವಿಜೇತರನ್ನ ಘೋಷಣೆ ಮಾಡುತ್ತಾರೆ.
  • ವಯಸ್ಸಿನ ಮಿತಿಯ ಬಗ್ಗೆ ಹೇಳಿಲ್ಲ.
  • ಯುವ ಮತದಾರರು, 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಹಾಗೂ ಸಾರ್ವಜನಿಕರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತಹ ವಿಷಯಗಳು ವೀಡಿಯೋ ದಲ್ಲಿ ಇರಬೇಕು.

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?: ಸ್ಪರ್ಧಿ ಗಳು ರೀಲ್ಸ್‌ಗಳನ್ನು 9986929286 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಈ reels ಗಳನ್ನು ಧಾರವಾಡ ಜಿಲ್ಲಾ ಪಂಚಾಯತ YouTube Chanel ದಲ್ಲಿ ಅಪ್ಲೋಡ್ ಮಾಡಿಸಬೇಕು ನಂತರ ಲಿಂಕ್‌ ಗಳನ್ನು ಸಂಬಂಧಿಸಿದ ಕ್ಯಾಂಪಸ್ ಅಂಬಾಸಿಡರ್ ಮೂಲಕ ವಿದ್ಯಾರ್ಥಿ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಮೂಲಕ ಪ್ರಚಾರ ಮಾಡಬೇಕು.

ಇದನ್ನೂ ಓದಿ: Airtel ಹಾಗೂ jio ಟೆಲಿಕಾಂ ಕಂಪನಿ ಗಳು 666 ರೂಪಾಯಿ ಯ ಹೊಸ ಪ್ಲಾನ್ ಬಿಡುಗಡೆ ಮಾಡಿವೆ. ಒಂದೇ ದರದ ಪ್ಲಾನ್ ಗಳಲ್ಲಿ ಯಾವುದು ಬೆಸ್ಟ್ 

ಇದನ್ನೂ ಓದಿ: Yamaha Ray ZR 125 ಅದರ ಅದ್ಭುತ ವೈಶಿಷ್ಟ್ಯತೆ ಮತ್ತು ಮೈಲೇಜ್ ಬಗ್ಗೆ ತಿಳಿದರೆ ಎಂತವರಾದರೂ ದಂಗಾಗುತ್ತಾರೆ