Tiger Prabhakar: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

Tiger Prabhakar: ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ, ಮರೆಯಲಾಗದ ಛಾಪು ಮೂಡಿಸಿರುವ ನಟರ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಟೈಗರ್ ಪ್ರಭಾಕರ್. ತಮ್ಮ ಸ್ಟೈಲ್, ತಮ್ಮ ಬಾಡಿ ಫಿಟ್ಟಿಂಗ್, ಫೈಟಿಂಗ್ ಮೂಲಕವೇ ಆಗಿನ ಕಾಲದ ಸಿನಿ ರಸಿಕರ ನೆಚ್ಚಿನ ನಟನಾಗಿ ಗುರುತಿಸಿಕೊಂಡವರು. ನಾಯಕ ನಟನಾಗಿ ನಟಿಸಿರೋದು ಕೆಲವೇ ಸಿನಿಮಾಗಳಾದ್ರು, ಸಿಕ್ಕಾಪಟ್ಟೆ ಪಾತ್ರಗಳಿಗೆ ಅಂದ್ರೆ ವಿಲನ್ ಆಗಿ, ಪೋಷಕ ನಟನಾಗಿ ನಟಿಸಿ ಯಾವುದೇ ಪಾತ್ರಕ್ಕಾದ್ರೂ ಸೈ ಅನ್ನಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇನ್ನು ಟೈಗರ್ ಪ್ರಭಾಕರ್​ ನಟನ ಶೈಲಿಗೆ ಫೈಟ್​ ಸೀನ್ ಗಳಲ್ಲಿ ಅವ್ರು ಮಾಡ್ತಿದ್ದ ಕಮಾಲ್ ಗೆ ದೊಡ್ಡ ಅಭಿಮಾನಿ ಬಳಗವೆ ಇತ್ತು. ಈಗಲೂ ಕೂಡ ಟೈಗರ್ ಪ್ರಭಾಕರ್ ಅವ್ರನ್ನ ಜನ ಮಿಸ್ ಮಾಡ್ಕೊಳ್ತಾಳೆ ಇರ್ತಾರೆ. ಇನ್ನು ಟೈಗರ್ ಪ್ರಭಾಕರ್ ಅವರ ನಟನಾ ಜೀವನದಂತೆ ಖಾಸಗಿ ಜೀವನವೂ ರಂಗು-ರಂಗಾಗಿತ್ತು. 

WhatsApp Group Join Now
Telegram Group Join Now

ಕಾರಣ ಪ್ರಭಾಕರ್ ಅವರಿಗೆ ಮೂವರು ಪತ್ನಿಯರು, ಐವರು ಮಕ್ಕಳು. ಆದ್ರೆ ಅವ್ರ ಕೊನೆಯ ದಿನಗಳಲ್ಲಿ ಅವ್ರು ಒಂಟಿಯಾಗಿ ಜೀವನ ನಡೆಸಿದ್ದು ಮಾತ್ರ ವಿಧಿಯಾಟ ಅನ್ನಬಹುದು. ಸದ್ಯ ಅದೆಲ್ಲವನ್ನ ಮರೆತು ಇದೀಗ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಈಗಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತಂದೆಯವರ ಹಾದಿಯಲ್ಲಿಯೇ ಚಿತ್ರರಂಗದಲ್ಲಿ ಸಾಗುತ್ತಿದ್ದಾರೆ. ಹೀಗಿರುವಾಗ ಸ್ಯಾಂಡಲ್ವುಡ್ ನಲ್ಲಿ ಒಂದು ಟಾಕ್ ಸದಾ ಹರಿದಾಡುತ್ತಾಲೇ ಇತ್ತು ಅದೇನಂದ್ರೆ ಟೈಗರ್ ಪ್ರಭಾಕರ್ ಅವರ ಮಕ್ಕಳಿಗೆ ಒಬ್ಬರಿಗೊಬ್ಬರನ್ನ ನೋಡಿದ್ರೆ ಆಗಲ್ಲ, ಅವ್ರು ಒಟ್ಟಿಗೆ ಎಲ್ಲೂ ಕಾಣಿಸಿಕೊಳ್ಳಲ್ಲ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಲೇ ಇರ್ತಿತ್ತು ಆದ್ರೆ ಇದೀಗ ಅದೆಲ್ಲ ಸುಳ್ಳು ಸುದ್ದಿ ಅನ್ನುವಂತೆ ವಿನೋದ್ ಪ್ರಭಾಕರ್ ಹಾಗೂ ಅವರ ಸಹೋದರಿ ಸೌಂದರ್ಯಾ ಅಂದ್ರೆ ಜಯಮಾಲ ಅವ್ರ ಪುತ್ರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಆಗಿ ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ

ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ಬೇಟಿಯಾದ ಅಣ್ಣ-ತಂಗಿ

ಹೌದು ವಿನೋದ್ ಹಾಗೂ ಸೌಂದರ್ಯ ಮೊನ್ನೆ ಮೊನ್ನೆಯಷ್ಟೇ ಭೇಟಿ ಮಾಡಿದ್ದು ಇಬ್ಬರ ಫೋಟೋಗಳು ಸಾಕಷ್ಟು ವೈರಲ್ ಆಗ್ತಿದ್ದು, ಗಾಂಧಿನಗರದಲ್ಲಿ ಹರಿದಾಡುತ್ತಿದ್ದ ಉಹಾಪೊಹಗಳಿಗೆ ತೆರೆ ಬೀಳುವಂತೆ ಮಾಡಿದೆ. ಹೌದು ಇವರಿಬ್ಬರು ಇಂದಿಗೂ ಅಣ್ಣ ತಂಗಿ ಥರನೇ ಇದ್ದಾರೆ. ಅದೇ ಪ್ರೀತಿ ಬಾಂಧವ್ಯ ಈಗಾಲು ಆಗೇ ಇದೆ, ಆದರೆ ಕೆಲವರು ಅವರಿಬ್ಬರನ್ನು ಭೇಟಿ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದೂ, ಆದರೆ ಅಣ್ಣ ತಂಗಿ ಭಾಂಧವ್ಯವನ್ನ ಮಾತ್ರ ಕಸಿಯಲು ಸಾಧ್ಯವಾಗಿಲ್ಲ ಅನ್ನೋದನ್ನ ಸಮಯ-ಸಂದರ್ಭ ಇವರಿಬ್ಬರ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ ಅನ್ನೋದಕ್ಕೆ ಫೋಟೋಗಳೇ ಸಾಕ್ಷಿ ನೋಡಿ.

ಹೌದು ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ. ಈ ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಬಾಲ್ಯದ ಆಟ-ತುಂಟಾಟ ನೆನಪು ಮಾಡಿಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಲ್ಲದೇ ವಿನೋದ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೌದು ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಈಗಲೂ ಅಣ್ಣ ತಂಗಿಯ ಬಾಂಧವ್ಯ ಇದೆ. ಟೈಗರ್ ಮಕ್ಕಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಅನ್ನೋದು ಇದೀಗ ಸ್ಪಷ್ಟವಾಗಿದೆ.

ನಮ್ಮ ನಡುವೆ ಯಾವುದೇ ದ್ವೇಷ ಹಗೆ ಇಲ್ಲ

ಹೌದು ಸ್ನೇಹಿತರೆ ಟೈಗರ್ ಪ್ರಭಾಕರ್(Tiger Prabhakar) ಅವರು 3ಮದುವೆಯಾಗಿದ್ರು. ಅದ್ರಲ್ಲಿ ಮೊದಲಿಗೆ ಅಲ್ಫೋನ್ಸೋ ಮೇರಿ ಎಂಬುವರನ್ನು ವಿವಾಹವಾದರು. ಅವರಿಗೆ ಭಾರತಿ, ಗೀತಾ ಹಾಗೂ ವಿನೋದ್ ಪ್ರಭಾಕರ್ ಅನ್ನೋ ಮೂವರು ಮಕ್ಕಳಿದ್ರೆ, ನಂತರ ಕೆಲವೊಂದು ವೈವಾಹಿಕ ಜೀವನದ ಭಿನ್ನಾಭಿಪ್ರಾಯದಿಂದ ಅವರಿಂದ ದೂರವಾಗ್ತಾರೆ, ನಂತರ ಆಗಿನ ಸ್ಟಾರ್ ನಟಿ ಜಯಮಾಲಾ ಅವರನ್ನು ವಿವಾಹವಾಗ್ತಾರೆ ಅವರಿಗೆ ಇಬ್ಬರು ಮಕ್ಕಳು ಅವರಲ್ಲೊಬ್ಬರು ನಟಿ ಸೌಂದರ್ಯಾ ಜಯಮಾಲಾ. ಅದರಲ್ಲೂ ಅಲ್ಲಿಯೂ ನೆಮ್ಮದಿ ಕಾಣದ ಟೈಗರ್ ಪ್ರಭಾಕರ್ ನಂತರ ಅದಾದ ಅತೀ ಕಿರಿಯ ವಯಸ್ಸಿನ ಅಂಜು ಅನ್ನೋರನ್ನು ಮದುವೆಯಾಗ್ತಾರೆ. ಆದ್ರೆ ಎಲ್ಲಿಯೂ ಕೂಡ ಟೈಗರ್ ನೆಮ್ಮದಿಯುತ ಜೀವನ ಸಾಗಿಸಲು ಸಾಧ್ಯವಾಗೋದೇ ಇಲ್ಲ..ಸದ್ಯ ಅದೆಲ್ಲವೂ ಮುಗಿದು ಹೋದ ಕಥೆ ಆದ್ರೆ ಇದೀಗ ಟೈಗರ್ ಪ್ರಭಾಕರ್ ಅವರ ಮೊದಲ ಪತ್ನಿಯ ಮಗ ವಿನೋದ್ ಪ್ರಭಾಕರ್, ಹಾಗೂ ಎರಡನೇ ಪತ್ನಿ ಮಗಳು ಸೌಂದರ್ಯಾ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಹೀಗಿರುವಾಗ ಇಬ್ಬರಿಗೂ ಪರಸ್ಪರರ ಮೇಲೆ ಅಸಮಾಧಾನ, ಹಗೆ ಎಂಬು ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು ಇಬ್ಬರು ಒಟ್ಟಿಗೆ ಫೋಟೋಗಳನ್ನ ತೆಗೆಸಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರಿ ಟೈಗರ್, ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ. ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ, ಒಟ್ಟಿಗೆ ಆಡುತ್ತಾ ಬೆಳೆದ ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದರು. ಆದರೆ ಸಮಯ ಸಿಕ್ಕಾಗ , ಎದುರು ಬದುರು ಅದಾಗೆಲ್ಲ ಅವ್ರ ಬಂಧನದ ಭಾಂದವ್ಯ ತೆರೆದುಕೊಳ್ಳುತ್ತದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ.

ಇದನ್ನೂ ಓದಿ: ಅಭಿಷೇಕ್-ಅವಿವಾ ಆರತಕ್ಷತೆಯ ಕಲರ್ ಫುಲ್ ಫೋಟೋಗಳು, ಇಲ್ಲಿವೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram