Joker Felix: ಎಲ್ಲರ ಎದುರು ಡಬಲ್ ಮರ್ಡರ್ ಮಾಡಿದ ಟಿಕ್ ಟಾಕ್ ಸ್ಟಾರ್! ಮರ್ಡರ್ ಸುದ್ದಿಯನ್ನ ತನ್ನ ಸ್ಟೋರಿಯಲ್ಲಿ ಹಂಚಿಕೊಂಡ ಭೂಪ

Joker Felix: ನಿಜಕ್ಕೂ ಒಮೊಮ್ಮೆ ಇಂತಹ ಸಮಾಜದಲ್ಲಿ ಹೇಗಪ್ಪಾ ಬದುಕೋದು ಅನಿಸಿಬಿಡುತ್ತೆ. ಒಳ್ಳೆಯವರಾಗಿದ್ರು ಕಷ್ಟ ಕೆಟ್ಟವರಾಗಿದ್ರು ಕಷ್ಟ ನೇರವಾಗಿದ್ರು ಕಷ್ಟ ಇಲದಿದ್ರೂ ಕಷ್ಟ ಮತ್ತೆ ಜೀವನ ನಡೆಸೋದು ಹೇಗಪ್ಪಾ ಅನ್ನೋ ಯಕ್ಷ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಶುರುವಾಗಬಿಟ್ಟಿದೆ. ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಜೀವ ತೆಗೆಯೋದು ಅಂದ್ರೆ ಈಗ ಎಷ್ಟು ಸುಲಭ ಆಗಬಿಟ್ಟಿದೆ ಅಂದ್ರೆ ಜೀವ ತೆಗೆದ ವ್ಯಕ್ತಿಗೆ ಆ ಪಾಪ ಪ್ರಜ್ಞೆ ಕೂಡ ಇರೋದಿಲ್ಲ ಅಷ್ಟು ಗಟ್ಟಿಯಾಗಿ ಇರ್ತಾರೆ. ಇದೆಲ್ಲವನ್ನ ನೋಡ್ತಿದ್ರೆ ನಮ್ಮ ಸಮಾಜ ಯತ್ತ ಸಾಗುತ್ತಿದೆ ಅನ್ನೋದು ನಿಜಕ್ಕೂ ಕೂಡ ಗೊತ್ತಾಗುತ್ತಿಲ್ಲ. ಇವ್ರೇಲ ಹಿಂದೂ ಸಮಾಜ ಹಿಂದೂ ಸಂಪ್ರದಾಯವನ್ನ ಹೇಗೆ ಹಾಳು ಗೆಡವುತ್ತಿದ್ದಾರೆ ಅಂದ್ರೆ.. ಕೆಲವೊಮ್ ಬದುಕೋಕು ಭಯ ಪಡುವಂತೆ ಭಯ ಹುಟ್ಟಿಸಿಬಿಡುತ್ತಾರೆ. ಯಾಕಂದ್ರೆ ಹಾಡುಹಗಲೇ ಕಚೇರಿಯೊಂದಕ್ಕೆ ನುಗ್ಗಿ ಇಬ್ಬರನ್ನ ನಿರ್ಧಾಕ್ಷಿಣ್ಯವಾಗಿ ಎಲ್ಲ ಉದ್ಯೋಗಿಗಳ ಮುಂದೆಯೇ ಕೊಂದು ಎಸ್ಕೇಪ್ ಆಗಿ ಈ ಘನಂದಾರಿ ಕೆಲಸವನ್ನ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿ ಕೊಳ್ತಾನೆ ಅಂದ್ರೆ ನಮ್ಮ ಕಾನೂನು ಸುವ್ಯವಸ್ಥೆ ಎಲ್ಲಿಗೆ ಹೋಯ್ತು, ಪೊಲೀಸ್ ಇಲಾಖೆ ನ್ಯಾಯಾಲಯ ದೇವತೆಯ ಮೇಲೆ ಭಯವೇ ಇಲ್ವಾ ಅನಿಸದೆ ಇರದು ಸ್ನೇಹಿತರೆ. ಈ ಹಿಂದೆ ಕೆಲಸ ಮಾಡ್ತಿದ್ದ ಕಂಪನಿಯ ಮಾಲೀಕನ ಕೊಲೆಗೆ ಈ ವ್ಯಕ್ತಿ ಅಂದ್ರೆ ಈ ವಿಚಿತ್ರ ಟಿಕ್ ಟಾಕ್ ಸ್ಟಾರ್ ಮುಂದಾಗಿ ಅವ್ರನ್ನ ಬಹಳ ಕ್ರೂರವಾಗಿ ಸಾಯಿಸಿದ್ದಾನೆ ಅಂದ್ರೆ ಇವ್ನು ಇನ್ನೆಷ್ಟು ವಿಚಿತ್ರ ಮನಸ್ಸಿನವನು ಅಂತ ಅನ್ನಿಸದೆ ಇರದು.

WhatsApp Group Join Now
Telegram Group Join Now

ಇದನ್ನೂ ಓದಿ: ಎರಡನೇ ಮಗುವಿನ ತಂದೆಯಾದ ನಟ ವಿಜಯ್ ಸೂರ್ಯ; ಮಗು ಹುಟ್ಟಿದ್ದು ಅಯ್ತು.. ನಾಮಕಾರಣವೂ ಮುಗಿತು!ಹೆಸರೇನು ಗೊತ್ತಾ?

ಇಬ್ಬರ ಕೊಂದ ಸುದ್ದಿಯನ್ನು ತನ್ನ ಸ್ಟೋರಿಯಲ್ಲಿ ಹಾಕಿಕೊಂಡ ಜೋಕರ್ ಫಿಲಿಕ್ಸ್

ಹೌದು ಬೆಂಗಳೂರಿನ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂ.ಡಿ ಫಣೀಂದ್ರ ಸುಬ್ರಮಣ್ಯಂ ಮತ್ತು ಸಿಇಒ ವಿನುಕುಮಾರ್​ ಅವರನ್ನು ಹತ್ಯೆ ಮಾಡಿದ ನಂತರ ಪ್ರಕರಣದ ಪ್ರಮುಖ ಆರೋಪಿ ಟಿಕ್​ಟಾಕ್ ಸ್ಟಾರ್ ಫಿಲಿಕ್ಸ್ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ “ನಾನು ಒಳ್ಳೆಯ ವ್ಯಕ್ತಿಗಳನ್ನು ಎಂದಿಗೂ ನೋಯಿಸುವುದಿಲ್ಲ” ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ. ಅಲ್ದೇ ಖಾಸಗಿ ಚಾನಲ್ ಹಾಕಿದ್ದ ಸುದ್ದಿಯೊಂದರ Screenshot ತೆಗೆದುಕೊಂಡು ತನು ಮಾಡಿರುವ ಕೊಲೆ ಬಹಳ ಶ್ರೇಷ್ಠ ಕೆಲಸ ಅಂತ ಅದನ್ನು ಕೂಡ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆಸಿ ಗೌಪ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಹೌದು ಬಂಧಿತಾ ಆರೋಪಿ ಫಿಲಿಕ್ಸ್ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ “ಈ ಗ್ರಹದ ಜನರು ಯಾವಾಗಲೂ ಮೋಸಗಾರರು. ಆದ್ದರಿಂದ ನಾನು ಕೆಟ್ಟ ಜನರನ್ನು ಮಾತ್ರ ನೋಯಿಸುತ್ತೇನೆ. ನಾನು ಯಾವುದೇ ಒಳ್ಳೆಯ ಜನರನ್ನು ನೋಯಿಸುವುದಿಲ್ಲ” ಎಂದು ಪೋಸ್ಟ್ ಹಂಚಿಕೊಂಡಿದ್ದ.

ಅಲ್ದೇ ಕೊಲೆ ಮಾಡಲು ಸ್ನೇಹಿತರ ಸಹಾಯ ಪಡೆದು ಕೊಲೆ ನಂತರ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನ ಪಟ್ಟು ಇದೀಗ ಪೋಲೀಸರ ಅತಿಥಿಯಾಗಿದ್ದಾನೆ. ಇನ್ನು ಪ್ರಕರಣ ಬಗ್ಗೆ ಮಾಹಿತಿ ನೀಡಿದ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ ಗುಪ್ತಾ, ಸಂಜೆ 4 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ಮೂವರು ಆರೋಪಿಗಳಿಂದ ಈ ಕೃತ್ಯ ಎಸಗಲಾಗಿದೆ. ಗಂಭೀರವಾಗಿ ಗಾಯಗೊಂಡು ಕಂಪನಿಯ ಎಂಡಿ ಮತ್ತು ಸಿಇಒ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇವರು ಕಳೆದ 7 ತಿಂಗಳ ಹಿಂದೆ ಕಂಪನಿ ಶುರುಮಾಡಿದ್ದರು. ನಂತರ ಕಂಪನಿಯಲ್ಲಿ ಕೆಲವೊಂದು ವಿಚಾರಕ್ಕೆ ಫಿಲಿಕ್ಸ್ ತನ್ನ ಕಂಪನಿಯ ಎಂ.ಡಿ ಫಣೀಂದ್ರ ನಿಂದಿಸಿದ್ರು ಈಗಾಗಿ ಆರೋಪಿ ಕೆಲಸ ಬಿಟ್ಟು ಇದೀಗ ಹತ್ಯೆ ಮಾಡಿದ್ದಾನೆ ಅಂತ ಪ್ರಾಥಮಿಕ ತನಿಖೆಯೊಂದ ಗೊತ್ತಾಗಿರೋದಾಗಿ ಹೇಳಿದ್ದಾರೆ.

ಹೌದು ಏರೋನಿಕ್ಸ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನ ಕಳೆದ 2022ರ ನವೆಂಬರ್​​ನಲ್ಲಿ ಸ್ಥಾಪಿಸಲಾಗಿದೆ. ಇದಕ್ಕೂ ಮೊದಲು ಆರೋಪಿ ಫಿಲಿಕ್ಸ್, ಫಣೀಂದ್ರ ಮತ್ತು ವಿನುಕುಮಾರ್ ಅವರಿಗೆ ಪರಿಚಿತನಾಗಿದ್ದ. ಹೀಗಾಗಿ ತಮ್ಮ ಕಂಪನಿಯಲ್ಲಿ ಕೆಲಸ ನೀಡಿದ್ರು. ನಂತರ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಆಗಿ ಫಿಲಿಕ್ಸ್ ಕಂಪನಿ ಬಿಟ್ಟಿದ್ದ. ಹೊಸ ಸಂಸ್ಥೆಯನ್ನು ಸ್ಥಾಪಿಸಿದ್ದಾ ಎನ್ನಲಾಗುತ್ತಿದ್ದೂ, ಎಲ್ಲಿ ತನ್ನ ಕಂಪನಿಗೆ ಫಣೀಂದ್ರ ಕಂಪನಿ ಸವಾಲು ನೀಡುತ್ತೋ ಅತ್ವ ತನ್ನ ಕಂಪನಿ ಬೆಳವಣಿಗೆಗೆ ಅಡ್ಡಿಯಾಗುತ್ತೋ ಅಂತ ಆಲೋಚಿಸಿ ನಂತರ ಸ್ನೇಹಾತರೊಂದಿಗೆ ಚರ್ಚಿಸಿ ಕೊಲೆಗೆ ಸಂಚು ರೂಪಿಸಿದ್ದಾನೆ. ಅಲ್ದೇ ಹಾಡು ಹಗಲೇ ಕಂಪನಿಗೆ ನುಗ್ಗಿ ಫಣೀಂದ್ರ ಅವ್ರಿಗೆ ತಳವರ್ ಬಿಸಿದ್ದಾನೆ ಆಗ ಬಂದ ಸಿ ಇ ಒ ಮೇಲು ಹಲ್ಲೆ ನಡಿಸಿ ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ಭೇಧಿಸಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದು ಆರೋಪಿಗಳಿಂದ ಒಂದೊಂದೇ ಸತ್ಯವನ್ನ ಆಚೆ ತೆಗೆಯುತ್ತಿದ್ದಾರೆ. ಒಟ್ಟಿನಲ್ಲಿ ಆರೋಪಿ ಫಿಲಿಕ್ಸ್ ಇನ್ಸ್ಟಾ ನೋಡ್ತಿದ್ರೆ ಈ ವ್ಯಕ್ತಿಯೇ ವಿಚಿತ್ರ ಅನಿಸದೆ ಇರದು, ಆದ್ರೂ ಹಾಡುಹಗಲೇ ಕೊಲೆ ಮಾಡುವ ಧೈರ್ಯ ಮಾಡಿರುವುದಂತು ಬೆಂಗಳೂರಿಗರನ್ನ ಬೆಚ್ಚಿ ಬೀಳಿಸಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram