Nikhil Ravindra: ಕುಡಿದ ಮತ್ತಿನಲ್ಲಿ ದಂಧಲೆ ಮಾಡಿದ್ರ ಯೂಟ್ಯೂಬರ್.. ಪೊಲೀಸರು ನಿಖಿಲ್ ನನ್ನ ಕರೆದೋಯ್ದದ್ದು ಯಾಕೆ?

Nikhil Ravindra: ಸಾಮಾಜಿಕ ಜಾಲತಾಣಗಳು ಯಾವ ಮಟ್ಟಕ್ಕೆ ಹೋಗ್ತಾ ಇದೆ ಅಂತ ಅಂದ್ರೆ ಒಂದು ದಿನದಲ್ಲಿ ಒಬ್ಬರು ಹೀರೋ ಕೂಡ ಆಗಬಹುದು ಅದೇ ಒಂದು ದಿನದಲ್ಲಿ ಮತ್ತೊಬ್ಬರು ತೀರ ಎಲ್ಲವನ್ನು ಕಳೆದುಕೊಂಡು ಕೆಳಗು ಕೂಡ ಬೀಳ್ಬಹುದು ಆ ಮಟ್ಟಕ್ಕೆ ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಈಗಂತೂ ರಿಲ್ಸ್ ಗಳು ಕಾಮಿಡಿ ವಿಡಿಯೋಗಳು ಸಾಕಷ್ಟು ವೈರಲ್ ಆಗ್ತಿದ್ದು, ಅದರಿಂದ ಸಾಕಷ್ಟು ಜನರು ಫೇಮಸ್ ಆಗ್ತಾ ಹೋಗ್ತಿದ್ದಾರೆ, ಇವ್ರು ಕೂಡ ಸೆಲೆಬ್ರಿಟಿಗಳು ಆಗ್ತಿದ್ದಾರೆ. ಕೇವಲ ರೀಲ್ಸ್ ಹಾಗೂ ಕಾಮಿಡಿ ವಿಡಿಯೋ ಮಾಡುವ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಅಷ್ಟೇ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ ಅಂತ ಹೇಳಿದ್ರೆ ತಪ್ಪಾಗಿಕ್ಕಿಲ್ಲ. ಇವತ್ತು ಈ ವಿಚಾರವನ್ನು ಯಾಕಪ್ಪ ಹೇಳ್ತಿದ್ದೀನಿ ಅಂತ ಅಂದ್ರೆ ಅದಕ್ಕೆ ಕಾರಣವೂ ಕೂಡ ಇದೆ. ಹೌದು ಸಾಮಾಜಿಕ ಜಾಲತಾಣ ಅಂದ್ಮೇಲೆ ಅದ್ರಲ್ಲಿ ಕೆಲವೊಂದಷ್ಟು ಜನ ಫೇಮಸ್ ಆಗ್ತಾರೆ, ಆ ಫೇಮಸ್ ಆದಂತಹ ಜನರು ತಮ್ಮ ನಿಜ ಜೀವನದಲ್ಲಿ ಹೇಗಿರ್ತಾರೆ ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ವಿಡಿಯೋದಲ್ಲಿ ಅವರನ್ನು ಹೇಗೆ ನೋಡ್ತೀವೋ ಅವರು ನಿಜ ಜೀವನದಲ್ಲಿಯೂ ಹಾಗೆ ಇರುತ್ತಾರೆ ಅಂತ ಅಂದುಕೊಂಡು ಬಿಡುತ್ತೇವೆ. 

WhatsApp Group Join Now
Telegram Group Join Now

ಈ ಸಿನಿಮಾ ಮತ್ತೆ ಸೀರಿಯಲ್ ನಲ್ಲಿ ಯಾವ ಪಾತ್ರಕ್ಕೆ ಯಾರು ಸೆಟ್ ಆಗ್ತಾರೋ ಅವರು ನಿಜ ಜೀವನದಲ್ಲೂ ಅದೇ ರೀತಿ ಇರ್ತಾರೆ ಅನ್ನೋ ರೀತಿ ನಾವು ಮೈಂಡ್ ಸೆಟ್ ಮಾಡ್ಕೊಂಡಿರ್ತೀವಲ್ಲ ಈಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅದೇ ರೀತಿ ಸಾಕಷ್ಟು ವಿಡಿಯೋ ಮತ್ತೆ ಕಾಮಿಡಿ ವಿಡಿಯೋಗಳನ್ನು ಮಾಡುವರು ಕೂಡ ಅದೇ ರೀತಿ ಇರುತ್ತಾರೆ ಅಂತ ಜನ ಡಿಸೈಡ್ ಮಾಡಿರುತ್ತಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಗುರುತುಸ್ಕೊಂಡಿರ್ತಕ್ಕಂತ ಕೆಲವೊಂದು ಜನರು ಸೋಶಿಯಲ್ ಮೀಡಿಯಾದಲ್ಲಿ ನಾವು ಯಾವ ರೀತಿ ಇರ್ತೀವಿ ನಾವು ಯಾವ ರೀತಿ ಇದ್ರೆ ಒಳ್ಳೆಯದು ಅನ್ನೋದನ್ನ ಮೊದಲೇ ಯೋಚನೆ ಮಾಡಿರಬೇಕು. ಯಾಕಂದ್ರೆ ಅವ್ರು ಮಾಡೋ ಸಣ್ಣ ಪುಟ್ಟ ತಪ್ಪುಗಳು ಕೂಡ ಅವರ ಅಭಿಮಾನಿಗಳ ಮೇಲು ಕೂಡ ಪರಿಣಾಮ ಬೀರಬಹುದು ಅವರನ್ನ ಫಾಲೋ ಮಾಡತಕ್ಕಂತಹ ಒಂದಷ್ಟು ಜನರು ಮೇಲು ಕೂಡ ಅದು ಪರಿಣಾಮವನ್ನು ಬೀರಬಹುದು. ಈಗ ಇಂತದ್ದೇ ಒಂದು ಘಟನೆ ಈಗ ನಡೆದಿದೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೇಮಸ್ ಆಗ್ತಾ ಹೋಗ್ತಿದ್ದಾರೆ ಅದರಲ್ಲಿ ನಿಖಿಲ್ ಮತ್ತೆ ನಿಶಾ ಜೋಡಿ ಕೂಡ ಒಂದು. ಹೌದು ಇವ್ರ ವಿಡಿಯೋ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿರುತ್ತೆ. ಹೀಗಾಗಿ ಒಳ್ಳೆಯ ಅಭಿಮಾನಿ ಬಳಗವನ್ನ ಇವ್ರು ಹೊಂದಿದ್ದಾರೆ.

ಇದನ್ನೂ ಓದಿ: ನಂಬಿದವರಿಂದಲೇ ರಶ್ಮಿಕಾ ಮಂದಣ್ಣನಿಗೆ ಲಕ್ಷ ಲಕ್ಷ ಪಂಗನಾಮ!! ಹಣ ಕಳೆದುಕೊಂಡು ರಶ್ಮಿಕಾ ಪರಿಸ್ಥಿತಿ ಅಯ್ಯೋ ಪಾಪ

ವೈರಲ್ ವಿಡಿಯೋ ದಲ್ಲಿ ಏನಿದೆ?

ಈ ಅಣ್ಣ ತಂಗಿ ಮಾಡ್ತಕ್ಕಂತ ಕಾಮಿಡಿ ವಿಡಿಯೋಗಳಿಗಾಗಿ ಸಾಕಷ್ಟು ಜನರು ಕಾಯುತ್ತಿರುತ್ತಾರೆ. ಇವರು instagram ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ನ ಹೊಂದಿದ್ದಾರೆ.ಅದು ಅಷ್ಟು ಸುಲಭದ ಮಾತಲ್ಲ ಯಾಕಂದ್ರೆ instagram ನಲ್ಲಿ ನಾವು ಅಷ್ಟು ಫಾಲೋವರ್ಸ್ ಅನ್ನು ಹೊಂದುವುದು ತುಂಬಾ ಕಷ್ಟದ ಕೆಲಸ ಆದ್ರೂ ಕೂಡ ಈ ಅಣ್ಣ ತಂಗಿ ತಾವು ಮಾಡತಕ್ಕಂತಹ ರಿಲ್ಸ್ ಹಾಗೂ ಕಾಮಿಡಿ ವಿಡಿಯೋಗಳ ಮೂಲಕ ಇದೀಗ ಜನಮನ್ನಣೆ ಪಡೆದುಕೊಂಡಿದ್ದಾರೆ. ಆದರೆ ನಿಖಿಲ್ ಈಗ ತುಂಬಾ ಅಂದ್ರೆ ತುಂಬಾ ಕೆಳಮಟ್ಟಕ್ಕೆ ಹೋಗಿದ್ದಾರೆ ಅನ್ನುವಂತಹ ಒಂದು ವಿಡಿಯೋ ವೈರಲ್ ಆಗಿದೆ ಅದಕ್ಕೆ ಅಸಲಿ ಕಾರಣ ಏನು? ನಿಜಕ್ಕೂ ನಿಖಿಲ್ ಪೊಲೀಸ್ ಅವ್ರಿಗೆ ಹೊಡೆದ್ರ?ಏನಾಯ್ತು ಎಲ್ಲವನ್ನು ನೋಡೋಣ ಬನ್ನಿ..

ಸ್ನೇಹಿತರೆ ಅಸಲಿಗೆ ಏನಾಯ್ತು ಅನ್ನೋದನ್ನ ನೋಡೋದಾದ್ರೆ ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾರೆ ಅಲ್ಲಿ ಫ್ರೆಂಡ್ಸ ಒಟ್ಟಿಗೆ ಹೋಗಿರತಕ್ಕಂತ ಸಂದರ್ಭದಲ್ಲಿ ನಿಖಿಲ್ ಅವರು ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾರೆ ಅದಾದ ನಂತರ ಪೊಲೀಸರು ಸ್ಥಳಕ್ಕೆ ಬಂದು ನಿಖಿಲ್ ಅವರನ್ನು ಅಲ್ಲಿಂದ ಜೀಪಲ್ಲಿ ಕೂರಿಸೋ ಪ್ರಯತ್ನ ಮಾಡ್ತಾರೆ. ಆಗ ನಿಖಿಲ್ ಅವರು ಹೊರಗಡೆ ಬರುವಂತಹ ಪ್ರಯತ್ನ ಮಾಡ್ತಿರ್ತಾರೆ ಆಗ ಕೆಲವೊಂದಷ್ಟು ಜನ ಡೋರ್ ಓಪನ್ ಮಾಡಿ ಅಂತ ಹೇಳಿದ್ರೆ, ಮತ್ತೊಂದಷ್ಟು ಜನ ಸುಮ್ನೆ ಇರು ಗುರು ಪೊಲೀಸ್ ನವರಿಗೆ ಹೊಡೆದಿದ್ದಾನೆ ಸುಮ್ನೆ ಬಿಟ್ಟುಬಿಡುತ್ತಾರೆ ಅಂತ ಕೇಳುತ್ತಾರೆ ಹಾಗಾದ್ರೆ ನಿಜಕ್ಕೂ ಪೊಲೀಸ್ ನವರಿಗೆ ನಿಖಿಲ್ ಹೊಡುದ್ರ ಅನ್ನುವಂತಹ ಮಾತುಗಳು ಈಗ ಸಾಕಷ್ಟು ಪ್ರಶ್ನೆಯನ್ನು ಎಬ್ಬಿಸ್ತಾ ಇರುವಂತದ್ದು. ಜೊತೆಗೆ ನಿಖಿಲ್ ಅವರನ್ನು ಈ ವಿಡಿಯೋದಲ್ಲಿ ನೋಡ್ತಾ ಇದ್ರೆ ನಿಖಿಲ್ ಅವರು ಕುಡಿದಿರುವಂತೆ ಕಾಣಿಸ್ತಾ ಇದೆ ಅಲ್ಲದೆ ಪೊಲೀಸ್ರು ಅವರನ್ನ ಜೀಪ್ ಒಳಗಡೆ ಕೂರಿಸ್ದಾಗ ಅಲ್ಲಿ ನಿಂತಿರ್ತಕ್ಕಂತ ಮತ್ತೊಬ್ಬ ವ್ಯಕ್ತಿಯ ಮೇಲೆಯೂ ಕೂಡ ನಿಖಿಲ್ ಕೈ ಮಾಡ್ತಾರೆ ಜೊತೆಗೆ ಕೆಟ್ಟದಾಗಿ ಬೈದಿದ್ದಾರೆ. ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗ್ತಾ ಇದೆ. ಇನ್ನು ಪೋಲಿಸ್ನೋರು ಅವರನ್ನು ಕರೆದುಕೊಂಡು ಹೋಗಿದ್ದು ನಿಜ ಇದೀಗ ನಿಖಿಲ್ ರಿಲೀಸ್ ಆಗಿ ಮನೆಗೆ ಬಂದಿರೋದು ಸಹ ನಿಜ ಅದನ್ನ ಸ್ವತಹ ನಿಖಿಲ್ ಅವರ ತಂಗಿ ನಿಶಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊನೆಗೂ ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ನಿಖಿಲ್..

ಹೌದು ವೈರಲ್ ಆಗುತ್ತಿರುವ ವಿಡಿಯೋ ದ ಬಗ್ಗೆ ಈಗ ತಮ್ಮ ಯೂಟ್ಯೂಬ್ ನಲ್ಲಿ ವಿಡಿಯೋ ಹಾಕಿ ಕ್ಲಾರಿಟಿಯನ್ನು ಕೋಟ್ಟಿದ್ದಾರೆ ನಿಖಿಲ್ ಕೆಳಗೆ ವಿಡಿಯೋ ಇದೇ ನೋಡಿ..

ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram