2020 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ನಂತರ ಬಿಡುಗಡೆಯಾಗಿ ಬಂದ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಬೆಂಗಳೂರಿನ ಸ್ಮೈಲ್ ನವೀನ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಹೌದು ಮೈಸೂರಿನಲ್ಲಿ ನವೀನ್ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ನಂಜನಗೂಡು ಪೊಲೀಸರು 8 ಜನ ಆರೋಪಿಗಳನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಮೊದಲಿಗೆ ಆಗಸ್ಟ್ 27 ರ ರಾತ್ರಿ ಮೈಸೂರಿನ ಅರಮನೆಯ ಮುಂಭಾಗ ಇರುವ ವರಾಹ ಗೇಟ್ ಬಳಿ ಯುವತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಾಗಲೇ ನವೀನ್‌ನನ್ನು ಎರಡು ಕಾರುಗಳಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ನಂತರ ಅಪಹರಣ ಕೇಸ್ ದಾಖಲಾಗಿತ್ತು.
ಆದ್ರೆ ಅಪಹಾರಣಕಾರರು ಕಾರಿನಲ್ಲೇ ಕೊಲೆ ಮಾಡಿ ಶವವನ್ನು ನಂಜನಗೂಡಿನ ಗೋಳೂರು ಬಳಿಯ ನಾಲೆಗೆ ಬಿಸಾಕಿ ಪರಾರಿಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಆದ್ರೆ ಅಪಹರಣ ಮಾಡಿದ್ದೆಕೆ? ಅಪಹರಣ ಮಾಡಿ ಕೊಲೆ ಮಾಡಿದ್ದರಾ ಉದ್ದೇಶ ಏನು ಅನ್ನೋದು ದೊಡ್ಡ ಪ್ರಶ್ನೆಯಾಗಿದ್ದು, ಈ ಕುರಿತು ಸಾಕಷ್ಟು ಅಂತೇ ಕಾಂತೆಗಳು ಓಡಾಡುತ್ತಿವೆ.
ಹೌದು ಮೊದಲು ಟಿಕ್ ಸ್ಟಾರ್ ಆಗಿದ್ದು ಭಾರಿ ಜನಪ್ರಿಯತೆ ಹೊಂದಿದ್ದ ನವೀನ್ ಬಳಿಕ ಟಿಕ್ ಟಾಕ್ ಬಂದ್ ಆದಾಗ ರೀಲ್ಸ್ ಶುರು ಮಾಡಿದ್ದ. ರೀಲ್ಸ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ನವೀನ್ ಕಳೆದ ಆಗಸ್ಟ್ 27ರಂದು ಮೈಸೂರಿಗೆ ಬಂದಿದ್ದ. ಬೆಂಗಳೂರಿನಿಂದ ಬರುವಾಗ ಇಬ್ಬರು ಯುವತಿಯರನ್ನೂ ಜತೆಗೆ ಕರೆದುಕೊಂಡು ಬಂದಿದ್ದ ನವೀನ್ ರಾತ್ರಿ ಮೈಸೂರು ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ. ಆಗ ರಾತ್ರಿ 9.45ರ ಹೊತ್ತಿಗೆ ರೀಲ್ಸ್ ಮಾಡುತ್ತಿದ್ದಾಗ ಅಲ್ಲಿಗೆ ಬಂದ ತಂಡವೊಂದು ನವೀನ್‌ನನ್ನು ಮಾತನಾಡಿಸುತ್ತಾ ಕಾರಿನಲ್ಲಿ ಹಾಕಿ ಪರಾರಿಯಾಗಿತ್ತು. ಆವತ್ತೇ ಮೈಸೂರಿನಲ್ಲಿ ನವೀನ್ ಅಪಹರಣದ ಬಗ್ಗೆ ಸುದ್ದಿ ಹರಡಿತ್ತು. ಆದರೆ, ಯಾರೂ ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇದನ್ನು ಅಪಹರಣ ಎಂದು ಭಾವಿಸದೆ ಮಿಸ್ಸಿಂಗ್ ಕೇಸ್ ಎಂಬಂತೆ ಟ್ರೀಟ್ ಮಾಡಲಾಗಿತ್ತು. ಬಳಿಕ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನು ಹತ್ತಿ ಗಮನಿಸಿದಾಗ ಅದು ಅರಮನೆ ಆವರಣದಿಂದ ನಾಪತ್ತೆಯಾಗಿದ್ದ ನವೀನ್‌ನ ಶವ ಎಂದು ತಿಳಿದುಬಂದಿತ್ತು. ಆಗ ತನಿಖೆ ಚುರುಕು ಮಾಡಿದ ಪೊಲೀಸರು 8ಜನರನ್ನ ಬಂಧಿಸಿದ್ದು, ಕೊಲೆ ಕಾರಣ ಏನು ಅಂತ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಅಂದ್ರೆ ಏನ್ ಮಾಡ್ಬೇಕು? ಹಣ ಬಂದಿದ್ಯ ಇಲ್ವಾ ಅಂತ ಚೆಕ್ ಮಾಡೋದು ಹೇಗೆ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ನವೀನ್ ಕೊಲೆಗೆ ಕಾರಣವೇನು?
ಇನ್ನು ನವೀನ್ ಅಪಹರಣ ಮತ್ತು ಕೊಲೆಯ ಬೆನ್ನು ಬಿದ್ದ ಪೊಲೀಸರಿಗೆ ಕೆಲವು ಬೆಚ್ಚಿ ಬೀಳುವ ಮಾಹಿತಿಗಳು ಲಭ್ಯವಾಗಿವೆ. ಪೊಲೀಸರು ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಕೊಲೆಯ ಸಂಭಾವ್ಯ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಅದ್ರಲ್ಲಿ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನವೀನ್‌ಗಾಗಿ ವಿರೋಧಿಗಳ ತಂಡ ಕಾದು ಕುಳಿತಿತ್ತು. ಕಾರಣ ಬೆಂಗಳೂರಿನ ಕಾರ್ಪೋರೇಟರ್ ಒಬ್ಬರ ಅಣ್ಣನ ಮಗನ ಕೊಲೆ ರಿವೆಂಜ್ ಗಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಈ ನವೀನ್ ಜೈಲು ಶಿಕ್ಷೆ ಅನುಭವಿಸಿದ್ದ.
ಹೌದು ಬೆಂಗಳೂರಿನ ಮಾಜಿ ಕಾರ್ಪೋರೆಟರ್ ಅಣ್ಣನ ಮಗನ ಕೊಲೆ ಸೇಡಿಗಾಗಿ ನವೀನ್ ರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದ್ದ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಟಿಕ್ ಟಾಕ್ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೆ ಗುರುತಿಸಿಕೊಂಡಿದ್ದ. ಹೀಗಾಗಿ ಆ ಕೊಲೆ ಸೇಡಿಗಾಗಿ ನವೀನ್ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ನಂಜನಗೂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ಪ್ರಮುಖ ಆರೋಪಿ ಮಾಜಿ ಕಾರ್ಪೊರೇಟರ್‌ನ ಸೋದರಳಿಯನಾಗಿದ್ದು, ರಾಜಕೀಯವಾಗಿ ಉತ್ತಮ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ರೆ ಆರೋಪಿಗಳ ಬಂಧನ ಕುರಿತು ಪೊಲೀಸರು ಇನ್ನೂ ಅಧಿಕೃತ ಘೋಷಣೆ ಮಾಡಬೇಕಿದ್ದು, ಮುಂದಿನ ತನಿಖೆ ಕೂಡ ನಡೆಯುತ್ತಿದೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಟ ನಟಿಯರ ರಕ್ಷ ಬಂಧನ ಹೇಗಿತ್ತು ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram