ವೀಕೆಂಡ್ ಬಂದ್ರೆ ಸಾಕು ಜನ ಟ್ರಿಪ್ ಹೋಗಬೇಕು ಅಂತ ಸಾಕಷ್ಟು ದಿನದಿಂದ ಪ್ಲಾನ್ ಮಾಡಿಕೊಂಡು ಕುಳಿತಿರುತ್ತಾರೆ ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕುದ್ರೆ ಕೇಳಬೇಕಾ?? ಮೋಜು ಮಸ್ತಿ ಮಾಡೋದ್ರ ಜೊತೆಗೆ ದೇವಾಲಯಗಳ ದರ್ಶನಕ್ಕೆ ಜನ ಮುಗಿ ಬೀಳುತ್ತಾರೆ. ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ಕೊಡ್ತಾರೆ. ಇನ್ನು ಸಾಲು ಸಾಲು ರಜೆಗಳಿಂದ ಜನರು ಪವಿತ್ರ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ವೆಂಕಟೇಶ್ವರ ಜನಿಸಿದ ದಿವ್ಯಕ್ಷೇತ್ರ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಹೌದು ತಿಮ್ಮಪ್ಪ, ಬಾಲಾಜಿ, ಏಳುಕುಂಡಲವಾಡ, ಗೋವಿಂದ ಹೀಗೆ ನಾನಾ ನಾಮಗಳಿಂದ ಕರೆಯೋ ಭೂಮಿಯ ಮೇಲಿನ ಸುಪ್ರಸಿದ್ಧ ದೇವರು ನೆಲಸಿರೋ ಪುಣ್ಯಕ್ಷೇತ್ರ. ತಿರುಪತಿ ತಿಮ್ಮಪ್ಪನ ಕಾಣಲು ಜನ ಮುಗಿಬಿದ್ದಿದ್ದಾರೆ. ನಿನ್ನೆ ಭಾನುವಾರ ತಿರುಮಲಕ್ಕೆ ಆಗಮಿಸೋ ಭಕ್ತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ 48 ಗಂಟೆಗಳ ಕಾಲ ಕಾದು ನಿಂತರೂ ಭಕ್ತರಿಗೆ ತಿಮ್ಮಪ್ಪನ ದರ್ಶನ ಸಿಗುತ್ತಿಲ್ಲ. ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ 5 ಕಿಲೋ ಮೀಟರ್ ಸುತ್ತಾ ಭಕ್ತರು ಕಾದು ನಿಂತಿರುವ ದೃಶ್ಯವೇ ಎಲ್ಲೆಲ್ಲೂ ಕಾಣುತ್ತಿದೆ. ಹೌದು ಶನಿವಾರ, ಭಾನುವಾರ ಇದರ ಜೊತೆಗೆ ಗಾಂಧಿ ಜಯಂತಿಯ ರಜೆ. ಸಾಲು, ಸಾಲು ರಜೆಯಿಂದಾಗಿ ಜನರು ವೀಕೆಂಡ್ ಟ್ರಿಪ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರವಾಸಿ ತಾಣಗಳು, ಮಠ ಮಂದಿರಗಳನ್ನ ಸುತ್ತುತ್ತಿದ್ದಾರೆ. ಅದೇ ರೀತಿ ತಿರುಪತಿ ತಿಮ್ಮಪ್ಪನ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿದೆ. ಗೋವಿಂದನ ದರ್ಶನ ಪಡೆಯಲು ಹೆಣಗಾಡುತ್ತಿದ್ದಾರೆ. ಹತ್ತಾರು ಗಂಟೆ ಕಳೆದ್ರೂ ತಿಮ್ಮಪ್ಪನ ಕಾಣದೇ ಬಸವಳಿದು ಹೋಗಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ನಟ ನಾಗಭೂಷಣ್ ಕಾರ್ ಆಕ್ಸಿಡೆಂಟ್ ಪ್ರಕರಣ; ಸಿಸಿಟಿವಿ ಯಲ್ಲಿ ಸೆರೆಯಾಯಿತು ಆಕ್ಸಿಡೆಂಟ್ ದೃಶ್ಯ
ಭಕ್ತರಿಗೆ ಟಿಕೆಟ್ ಸಿಗುತ್ತಿಲ್ಲ
ಇನ್ನು ಅತ್ಯಂತ ಪ್ರಸಿದ್ಧವಾಗಿರೋ ಶ್ರೀಮಂತ ದೇವರ ಕಾಣಲು ವರ್ಷದ ಯಾವುದೇ ದಿನವಾದ್ರೂ ತಿಮ್ಮಪ್ಪನ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿರುತ್ತೆ. ಇದೀಗ ವಾರಾಂತ್ಯದಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಲಕ್ಷಾಂತರ ಮಂದಿ ಮುಗಿಬಿದ್ದಿದ್ದಾರೆ. ಅಲ್ದೇ ತಿಮ್ಮಪ್ಪನ ಕಾಣಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಸಾಲು ಸಾಲು ರಜೆ ಇರುವ ಕಾರಣ ತಿರುಮಲಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದೆ. ತಿರುಮಲ ಮೆಟ್ಟಿಲುಗಳ ಪ್ರವೇಶದ್ವಾರ, ಪ್ರತಿಯೊಂದು ರಸ್ತೆ, ರಸ್ತೆ ಬದಿಗಳು ಭಕ್ತರಿಂದು ತುಂಬಿ ತುಳುಕುತ್ತಿದೆ. ತಿರುಪತಿ ಹಾಗೂ ತಿರುಮಲದ ಎಲ್ಲಾ ಪಾರ್ಕಿಂಗ್ ಪ್ರದೇಶಗಳು ಸಂಪೂರ್ಣ ಭರ್ತಿಯಾಗಿದೆ.
ಇನ್ನು ಸುಮಾರು 5 ಕಿಲೋಮೀಟರ್ ದೂರ ಭಕ್ತರು ಕಾದು ಕುಳಿತಿದ್ದಾರೆ. ಜೊತೆಗೆ ಭಕ್ತರ ನೂಕು ನುಗ್ಗಲನ್ನು ನಿಯಂತ್ರಿಸಲು ಟಿಟಿಡಿ ಟೋಕನ್ ವಿತರಣೆಯನ್ನೇ ರದ್ದುಗೊಳಿಸಿತ್ತು. ಅಲ್ಲದೇ ಇನ್ನೂ 4 ದಿನಗಳ ಕಾಲ ಟೋಕನ್ ವಿತರಣೆಯನ್ನ ಸ್ಥಗಿತಗೊಳಿಸಿದೆ. ಹೌದು ಅಕ್ಟೋಬರ್ 7, 8, 14, 15ರಂದು ಟೋಕನ್ ವಿತರಣೆಯನ್ನ ರದ್ದು ಮಾಡಿ ಟಿಟಿಡಿ ಆದೇಶ ಹೊರಡಿಸಿದೆ. ದೇಶದೆಲ್ಲೆಡೆಯಿಂದ ಭಕ್ತರು ಬಹುಸಂಖ್ಯೆಯಲ್ಲಿ ಆಗಮಿಸೋ ಸಾಧ್ಯತೆ ಇದೆ. ಅದರಲ್ಲೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ಆಗೋ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಟಿಡಿ(TTD) ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ತಿರುಪತಿಯಿಂದ(Tirupati) ತಿರುಮಲೆಯ ಏಳು ಬೆಟ್ಟಕ್ಕೆ ತೆರಳಲು ಅಲಿಪಿರಿ ಪ್ರದೇಶದಲ್ಲಿ ಕಣ್ಣಾಯಿಸಿದಷ್ಟೂ ದೂರ ಕಾರು, ಬಸ್ ಸೇರಿದಂತೆ ಹಲವು ವಾಹನಗಳೇ ಕಾಣಸಿಗುತ್ತವೆ. ಅಲ್ಲಿಂದ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತನಕ ಹೆದ್ದಾರಿಯ ಎರಡೂ ಬದಿ ಕರ್ನಾಟಕ, ತಮಿಳುನಾಡು ವಾಹನಗಳು ಸುಮಾರು 10 ಕಿಲೋಮೀಟರ್ ತನಕ ನಿಂತಿವೆ. ಅಲಿಪಿರಿ ಕಡೆ ಬರುವ ಯಾವುದೇ ಮಾರ್ಗದಲ್ಲೂ ಸಂಚಾರ ಕಷ್ಟಸಾಧ್ಯವಾಗಿದೆ. ಹೀಗಾಗಿ ತಿಮ್ಮಪ್ಪನ ದರ್ಶನಕ್ಕಾಗಿ ಇರುವ ಎಲ್ಲ ಸರದಿ ಸಾಲುಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಹೌದು ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಟಿಟಿಡಿ 2,500 ಸ್ವಯಂ ಸೇವಕರನ್ನ ನೇಮಿಸಿದೆ. ಸ್ವಯಂ ಸೇವಕರು ಕ್ಯೂನಲ್ಲಿ ನಿಂತಿರುವ ಭಕ್ತರಿಗೆ ನೀರು, ಹಾಲು, ಪ್ರಸಾದ ವಿತರಣೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ದೇಶದ ಶ್ರೀಮಂತ ದೇವರು ಅಂತ ಕರೆಸಿಕೊಳ್ಳೋ ತಿಮ್ಮಪ್ಪನ ಕಾಣಲು ಜನರು ದಾಂಗುಡಿ ಇಡ್ತಿದ್ದಾರೆ. ಹೀಗೆ ಹೋದವರು ಕಾದು ಕಾದು ಬಾಲಾಜಿಯ ದರ್ಶನ ಮಾಡಲು ತವಕಿಸುತ್ತಿದ್ದೂ, ಹೇಗೋ ಬಾಲಾಜಿಯಾ ಕಂಡು ಪುನೀತರಾದ್ವು ಅಂದುಕೊಂಡು ಪ್ರಯಾಣದ ಆಯಾಸವನ್ನೆಲ್ಲ ಮರಿಯುತ್ತಿದ್ದಾರೆ. ಅದೇನೆ ಇರ್ಲಿ, ವೀಕೆಂಡ್ ಅಂತ ಧಾರ್ಮಿಕ ಕ್ಷೇತ್ರಗಳತ್ತ ಹೋಗೋರು ಸ್ವಲ್ಪ ಕಾದು ವೀಕ್ ಡೇಸ್‌ನಲ್ಲಿ ಹೋದ್ರೆ ವೆಂಕಟೇಶ್ವರನ ಕೃಪೆ ಮತ್ತಷ್ಟು ಹೆಚ್ಚಾಗಬಹುದೇನೋ ಇಲ್ಲದಿದ್ದರೆ ಈ ರೀತಿ ನುಕ್ಕು ನುಗ್ಗಲು ರಸ್ತೆ ನಲ್ಲಿ ಸಿಲುಕಿ ಪರದಾಡಿ ಸಾಕಾಪ್ಪ ಸಹವಾಸ ಅಂತ ಬಸವಳಿಯಬೇಕಾದಿತ್ತು ಎಚ್ಚರ.
ಇದನ್ನೂ ಓದಿ: ನವೆಂಬರ್ ತಿಂಗಳ ಮೊದಲ ವಾರವೇ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram