Titanic Submarine: ಟೈಟಾನಿಕ್ ದುರಂತದ ಬಗ್ಗೆ ತಿಳಿಯಲು ಹೋಗಿ ಅಂತ್ಯವಾದ್ರು, ಸಾವಿರಾರು ಕೋಟಿ ಒಡೆಯರು..

Titanic Submarine: ಬ್ರಿಟನ್‌ನ ಐಷಾರಾಮಿ ಪ್ರಯಾಣಿಕ ಹಡಗು ಟೈಟಾನಿಕ್‌ ತನ್ನ ಮೊದಲ ಪ್ರಯಾಣದಲ್ಲಿ ಐಸ್‌ಬರ್ಗ್‌ ಗೆ ಬಡಿದು ಸಮುದ್ರದಲ್ಲಿ ಮುಳುಗಿತ್ತು. ಏಪ್ರಿಲ್‌ 10ರಂದು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಮೊದಲ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು, ಆ ಸಂದರ್ಭದಲ್ಲಿ ಹಡಗಿನಲ್ಲಿ ಸುಮಾರು 2207 ಮಂದಿ ಪ್ರಯಾಣಿಕರು ಇದ್ರು, ಅದರಲ್ಲಿ ಸುಮಾರು 1500 ಮಂದಿ ಮೃತಪಟ್ಟಿದ್ದರು. ಹೌದು 1912ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. ಘೋರ ಅಂದ್ರೆ ‘ಮುಳುಗಲಾರದ ಹಡಗು’ ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ ಹಡಗು ಮುಳುಗಿಯೇ ದಾರುಣ ಅಂತ್ಯ ಕಂಡಿದ್ದು, ನಿಜಕ್ಕೂ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲಿ ಒಂದು ಅಂದ್ರೆ ತಪ್ಪಾಗಲಾರದು.ಇನ್ನು ಈಗಾಗ್ಲೇ ಟೈಟಾನಿಕ್ ದುರಂತದ ಕುರಿತು ಸಿನಿಮಾಗಳು ಬಂದಿದ್ದು, ದುರಂತವನ್ನ ಕಣ್ಣಿಗೆ ಕಟ್ಟುವಂತೆ ತೋರಿಸಿವೆ. ಹೌದು ಈ ನೈಜ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್‌ ಕ್ಯಾಮರಾನ್‌ 1997ರಲ್ಲಿ ಟೈಟಾನಿಕ್‌ ಎಂಬ ಚಿತ್ರವನ್ನ ರಚಿಸಿದ್ರು. ಇನ್ನು ಇದೀಗ ಈವೊಂದು ಘೋರ ಅಂತ್ಯವನ್ನ ನೆನಪಿಸುವಂತ ಮತ್ತೊಂದು ದುರಂತ ಇದೀಗ ನಡೆದಿದ್ದು, ಟೈಟಾನಿಕ್ ಅವಶೇಷಗಳನ್ನ ನೋಡಿ ಅವುಗಳ ಬಗ್ಗೆ ತಿಳಿಯಲು ಹೋದವರು ಅಲ್ಲಿಯೇ ಅಂತ್ಯವಾಗಿ ಹೋಗಿದ್ದಾರೆ.

WhatsApp Group Join Now
Telegram Group Join Now
Image Credit: Original Source

ಸ್ಪೋಟಗೊಂಡ ಜಲಾಂತರ್ಗಾಮಿ

ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ಜನರು ಒಂದಷ್ಟು ಸಾಹಸೀ ಪ್ರಯತ್ನಗಳಿಗೆ ಕೈ ಹಾಕಲು ಹೋಗಿ ದುರಂತ ಅಂತ್ಯವನ್ನ ಕಾಣುತ್ತಿದ್ದಾರೆ. ಅದರಂತೆ ಇದೀಗ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ ಅಂದ್ರೆ ಸಬ್‌ಮರ್ಸಿಬಲ್‌ನಲ್ಲಿ ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಅಂತ ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ. ಹೌದು ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ ಸಾಗರದ ಒಳಗಡೆ ಸುಮಾರು 1,600 ಅಡಿ ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಸಬ್‌ಮರ್ಸಿಬಲ್‌ನಲ್ಲಿದ್ದ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಇನ್ನು ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಅಂತ ಹೇಳಲಾಗಿದ್ದು, ಈ ಮಾಹಿತಿಯನ್ನ ತಕ್ಷಣವೇ ಸಂಬಂಧಪಟ್ಟ ಕುಟುಂಬಗಳಿಗೆ ತಿಳಿಸಲಾಗಿದೆ, ಯುಎಸ್ ಕೋಸ್ಟ್ ಗಾರ್ಡ್ ಇದಕ್ಕೆ ಸಂತಾಪ ಸೂಚಿಸುತ್ತದೆ ಅಂತ ಅಮೆರಿಕದ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ಬೋಸ್ಟನ್‌ನಲ್ಲಿ ಹೇಳಿದ್ದಾರೆ.

ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಅಂತ ತಿಳಿಸಿದೆ. ಹೌದು ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಕಣ್ಮರೆಯಾಗಿದ್ದರು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. ಇನ್ನು 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಆದರೆ ಆಮ್ಲಜನಕದ ಕೊರತೆಯಿಂದ ಅವ್ರು ಸಾವನ್ನಪ್ಪಿಲ್ಲ ಬದಲಿಗೆ ಸಬ್‌ಮರ್ಸಿಬಲ್‌ ಸ್ಫೋಟ ಗೊಂಡು ಐವರು ಕೂಡ ದುರಂತ ಅಂತ್ಯ ಕಂಡಿದ್ದಾರೆ ಅಂತ ಹೇಳಲಾಗಿದೆ. ಇನ್ನು ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಹೊರತೆಗೆಯಲು ಅಂದಿನಿಂದ ಇಂದಿನವರೆಗೂ ಸಾಕಷ್ಟು ಪ್ರಯತ್ನಗಳು ನಡೆದ್ರು ಕೂಡ ಪ್ರಯೋಜನವಾಗಿಲ್ಲ. ಆದರೆ ಇದೀಗ ಅವಶೇಷಗಳನ್ನ ನೋಡಲು ಹೋದವರು ಉಸಿರು ಚೆಲ್ಲಿದ್ದು ಮಾತ್ರ ಶೋಚನಿಯ.

ಇದನ್ನೂ ಓದಿ: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ..

ಇದನ್ನೂ ಓದಿ: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram