ಬಹುದಿನಗಳಿಂದ ಸೆಕೆಂಡ್ ಪಿಯುಸಿ ಫಲಿತಾಂಶ ಯಾವಾಗ ಪ್ರಕಟಣೆ ಆಗಬಹುದು ಎಂಬ ಚರ್ಚೆಗಳು ನಡೆಯುತ್ತಾ ಇತ್ತು. ಏಪ್ರಿಲ್ 10 ರಂದು ಫಲಿತಾಂಶ ಬಿಡುಗಡೆ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದವು ಆದರೆ ಇಂದು ಅಧಿಕೃತವಾಗಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದ ನಾಳೆ 11 ಗಂಟೆಗೆ ಫಲಿತಾಂಶ ವೆಬ್ಸೈಟ್ ನಲ್ಲಿ ಬಿಡುಗಡೆ ಆಗುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.
ಆನ್ಲೈನ್ ನಲ್ಲಿ ಫಲಿತಾಂಶ ನೋಡುವುದು ಹೇಗೆ?
- ಹಂತ 1: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್ಸೈಟ್ ವಿಳಾಸ https://karresults.nic.in/
- ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ, KSEAB PUC ಫಲಿತಾಂಶ 2024 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ಹಂತ 3: ನಿಮ್ಮ ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
- ಹಂತ 4: ಸಲ್ಲಿಸಿ ಎಂಬ ಬಟನ್ ಕ್ಲಿಕ್ ಮಾಡಬೇಕು.
- ಹಂತ 5: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಫಲಿತಾಂಶದಲ್ಲಿ ಈ ಕೆಳಗಿನ ಮಾಹಿತಿ ಲಭ್ಯವಿರುತ್ತದೆ:
- ವಿದ್ಯಾರ್ಥಿಯ ಹೆಸರು.
- ಪರೀಕ್ಷೆಯ ಹೆಸರು.
- ಪರೀಕ್ಷೆಯ ವರ್ಷ.
- ವಿಷಯವಾರು ಅಂಕಗಳು.
- ಒಟ್ಟು ಅಂಕಗಳು.
- ಫಲಿತಾಂಶ (ಉತ್ತೀರ್ಣ/ಅನುತ್ತೀರ್ಣ).
ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?
- ಸ್ಟೆಪ್ 1:- ಫಲಿತಾಂಶದ ಮೇಲೆ ಇರುವ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ.
- ಸ್ಟೆಪ್ 2:- ಫಲಿತಾಂಶದ PDF ಫೈಲ್ ನಿಮ್ಮ ಕಂಪ್ಯೂಟರ್‌ಗೆ ಅಥವಾ ನಿಮ್ಮ ಮೊಬೈಲ್ ಗೆ ಡೌನ್‌ಲೋಡ್ ಆಗುತ್ತದೆ..
ಮುಖ್ಯ ಅಂಶಗಳು:- ನಿಮ್ಮ ಫಲಿತಾಂಶದ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿ. ನಿಮ್ಮ ಮೂಲ ಅಂಕಪಟ್ಟಿ ಲಭ್ಯವಾಗುವವರೆಗೆ ಈ ಪ್ರತಿಯು ನಿಮ್ಮ ಶೈಕ್ಷಣಿಕ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮರು ಎಣಿಕೆ ಅಥವಾ ಮರುಪರೀಕ್ಷಾ ಮಾಹಿತಿಗಳು ಮುಂದಿನ ದಿನಗಳಲ್ಲಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ಫಲಿತಾಂಶದ ಬಗ್ಗೆ ಏನಾದರೂ ಮಾಹಿತಿ ಅಥವಾ ಯಾವುದೇ ರೀತಿಯ ವಿವರಣೆಗಳು ಬೇಕಾದಲ್ಲಿ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
ಇದನ್ನೂ ಓದಿ: ವಿಶೇಷ ವೈಶಿಷ್ಟ್ಯಗಳೊಂದಿಗೆ ನೀವು ಶೀಘ್ರದಲ್ಲೇ WhatsApp ನಿಂದ ಅಧಿಸೂಚನೆಯ ಹೊಸ ರೂಪವನ್ನು ನಿರೀಕ್ಷಿಸಿ
ಇದನ್ನೂ ಓದಿ: ಪಿಯುಸಿ ಓದಿದವರಿಗೆ ಬಳ್ಳಾರಿ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಇವೆ. ಈಗಾಲೇ ಅರ್ಜಿ ಸಲ್ಲಿಸಿ