Today Gold Price: ಭಾರತೀಯ ಇತಿಹಾಸದಲ್ಲಿ ಬಂಗಾರ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಅದರ ಸೌಂದರ್ಯ, ಅಪರೂಪದ ಮತ್ತು ಶಾಶ್ವತತೆಯ ಸಂಕೇತವಾಗಿ, ಈ ಲೋಹವು ಶತಮಾನಗಳಿಂದ ಜನರನ್ನು ಆಕರ್ಷಿಸುತ್ತಿದೆ. ಬಂಗಾರದ ದರ ಗಗನಕ್ಕೆ ಏರಿದರೂ ಸಹ ಬಂಗಾರದ ಮೇಲಿನ ಆಕರ್ಷಣೆ ಮಾತ್ರ ಕಡಿಮೆ ಆಗಲಿಲ್ಲ. ಕಳೆದ ಮೂರು ನಾಲ್ಕು ವರ್ಷಗಳ ಈಚೆಗೆ ಬಂಗಾರದ ದರ ಇಳಿಕೆ ಕಂಡಿದ್ದು ಕಡಿಮೆ. ಬಂಗಾರದ ದರ ಭಾರತದಲ್ಲಿ ಒಂದೊಂದು ಪ್ರದೇಶಕ್ಕೆ ಒಂದೊಂದು ಬೆಲೆ ಇರುತ್ತದೆ. ಅದರ ಮೇಲೆ ನಾವು ಮಾಡಿಸುವ ಆಭರಣ ಕೂಲಿ ಸೇರಿದರೆ ಮೂಲ ಬೆಲೆಕಿಂತ ಹೆಚ್ಚಾಗುತ್ತದೆ.
ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಯಾವುದೇ ಬದಲಾವಣೆ ಇಲ್ಲ:- ನಿನ್ನೆ ಮತ್ತು ಇಂದಿನ ಬಂಗಾರದ ದರ ಹೋಲಿಸಿದರೆ. ಯಾವುದೇ ರೀತಿಯ ಬದಲಾವಣೆ ಇಲ್ಲ. ಹಾಗಾದರೆ ಇಂದು ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟು ಇದೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರ ಹೀಗಿದೆ:-
- 22 ಕ್ಯಾರೆಟ್ ಚಿನ್ನದ ದರ ಪಟ್ಟಿ.
- 1 ಗ್ರಾಮ್ ಗೆ 6,665 ರೂಪಾಯಿ.
- 8 ಗ್ರಾಮ್ ಗೆ 53,240 ರೂಪಾಯಿ.
- 10 ಗ್ರಾಮ್ ಗೆ 66,650 ರೂಪಾಯಿ.
- 100 ಗ್ರಾಮ್ ಗೆ 6,66,500 ರೂಪಾಯಿ.
- 24 ಕ್ಯಾರೆಟ್ ಚಿನ್ನದ ದರ ಪಟ್ಟಿ.
- 1 ಗ್ರಾಮ್ ಗೆ 7,260 ರೂಪಾಯಿ.
- 8 ಗ್ರಾಮ್ ಗೆ 58,080 ರೂಪಾಯಿ.
- 10 ಗ್ರಾಮ್ ಗೆ 72,600 ರೂಪಾಯಿ.
- 100 ಗ್ರಾಮ್ ಗೆ 7,26,000 ರೂಪಾಯಿ.
- 18 ಕ್ಯಾರೆಟ್ ಚಿನ್ನದ ದರ ಪಟ್ಟಿ.
- 1 ಗ್ರಾಮ್ ಗೆ 5,445 ರೂಪಾಯಿ.
- 8 ಗ್ರಾಮ್ ಗೆ 43,560 ರೂಪಾಯಿ.
- 10 ಗ್ರಾಮ್ ಗೆ 54,450 ರೂಪಾಯಿ.
- 100 ಗ್ರಾಮ್ ಗೆ 5,44,500 ರೂಪಾಯಿ.
ಲೋಕಸಭಾ ಚುನಾವಣೆಯ ನಂತರ ಬಂಗಾರದ ದರ ಹೀಗಿರಲಿದೆ?: ಕಳೆದ ಹತ್ತು ದಿನಗಳಲ್ಲಿ ಬಂಗಾರದ ದರವು 153 ರೂಪಾಯಿಗಳ ವರೆಗೆ ಕುಸಿತ ಕಂಡಿತ್ತು. ನಂತರ ಸ್ವಲ್ಪ ಏರಿಕೆ ಕಂಡು ಈಗ ಮತ್ತೆ ಬಂಗಾರದ ದರ ಇಳಿಕೆ ಕಾಣುತ್ತಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಮೇಲೆ ಜಾಗತಿಕ ಮಟ್ಟದಲ್ಲಿ ಆಗುವ ಹಲವು ಬದಲಾವಣೆಗಳು ಬಂಗಾರದ ದರ ಕುಸಿತ ಕಾಣಲೂ ಬಹುದು ಅಥವಾ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯನ್ನು ಮೀರಿಸುವ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಸುರಕ್ಷಿತ ಹೂಡಿಕೆ ಮಾಡಿ!
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಹೀಗಿದೆ :-
ಬೆಳ್ಳಿಯ ದರವು ಸಹ ಯಾವುದೇ ಬದಲಾವಣೆ ಇಲ್ಲ. ನಿನ್ನೆಯ ದರ ಹೇಗಿದೆಯೋ ಇವತ್ತು ಸಹ ಬೆಳ್ಳಿಯ ದರ ಇದೇ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರವು ಒಂದು ಗ್ರಾಮ್ ಗೆ 83.50 ರೂಪಾಯಿ ಆಗಿದೆ. ಹಾಗೂ 8 ಗ್ರಾಮ್ ಗೆ 668 ರೂಪಾಯಿ. 10 ಗ್ರಾಮ್ ಗೆ 835 ರೂಪಾಯಿ, 100 ಗ್ರಾಮ್ ಗೆ 8,350 ರೂಪಾಯಿ ಹಾಗೂ ಒಂದು ಕೆ.ಜಿ ಗೆ 83,500 ರೂಪಾಯಿ ಆಗಿದೆ.
ಬೆಳ್ಳಿ ಮತ್ತು ಬಂಗಾರದ ದರವು ಸ್ಥಿರತೆ ಇರುವುದರಿಂದ ಇಂದು ಬಂಗಾರದ ಖರೀದಿ ಮಾಡಬಹುದು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಯಾವ ಯೋಜನೆಯಲ್ಲಿ ಮಹಿಳೆಯರು ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.