ಇಂದು ರಾಜ್ಯದ SSLC ಫಲಿತಾಂಶ ಬಿಡುಗಡೆ ಆಗುತ್ತಿದ್ದು ಸಾವಿರಾರು ಮಕ್ಕಳ ಭವಿಷ್ಯ ನಿರ್ಧಾರ ಆಗಲಿದೆ. ಮುಂದಿನ ಶಿಕ್ಷಣಕ್ಕೆ SSLC ಮುಖ್ಯ ಘಟ್ಟ. ಈಗಾಗಲೇ ಮಕ್ಕಳು ತಮ್ಮ ಮಾರ್ಕ್ಸ್ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾದರೆ ನೀವು ಮನೆಯಲ್ಲಿಯೇ ಕುಳಿತು SSLC ಫಲಿತಾಂಶ ನೋಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಫಲಿತಾಂಶ ಬಿಡುಗಡೆ ಆಗುವ ಸಮಯ ಏಷ್ಟು?: ಮೇ 9 2024 ರ ಬೆಳಗ್ಗೆ 10.30 ಗಂಟೆಗೆ ಫಲಿತಾಂಶ ಬಿಡುಗಡೆ ಆಗುವುದು ಎಂದು ಕರ್ನಾಟಕ ಶಿಕ್ಷಣ ಮಂಡಳಿ ತಿಳಿಸಿದೆ.
ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
1) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್‌ಟಾಪ್ ಬಳಸಿ, ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದಕ್ಕೆ ಭೇಟಿ ನೀಡಿ ಫಲಿತಾಂಶ ವೀಕ್ಷಣೆ ಮಾಡಬಹುದು. ವೆಬ್ಸೈಟ್ ವಿಳಾಸಗಳು ಹೀಗಿವೆ.
2) ಫಲಿತಾಂಶ ವಿಭಾಗಕ್ಕೆ ಹೋಗಿ: ವೆಬ್‌ಸೈಟ್‌ನ ಮುಖಪುಟದಲ್ಲಿ, ಫಲಿತಾಂಶಗಳು ಅಥವಾ SSLC ಫಲಿತಾಂಶಗಳು ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಅಗತ್ಯ ಮಾಹಿತಿಯನ್ನು ನಮೂದಿಸಿ: SSLC ಪರೀಕ್ಷೆ 2024 ಫಲಿತಾಂಶ ಎಂಬ ಆಪ್ಷನ್ ಆಯ್ಕೆ ಮಾಡಿದಾಗ ನಿಮಗೆ ಸ್ಕ್ರೀನ್ ಮೇಲೆ ಪರೀಕ್ಷಾ
ಹಾಲ್ ಟಿಕೆಟ್ ಸಂಖ್ಯೆ ನಮೂದಿಸಲು ಕೇಳುತ್ತದೆ. ನಿಮ್ಮ ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸಿ.
4) ಫಲಿತಾಂಶವನ್ನು ವೀಕ್ಷಿಸಿ :- ನಿಮ್ಮ ಹಾಲ್ ಟಿಕೆಟ್ ನಮೂದಿಸಿದ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ. SSLC ಫಲಿತಾಂಶ ಪತ್ರವು ಪರದೆಯ ಮೇಲೆ ಕಾಣುತ್ತದೆ.
ಇದನ್ನೂ ಓದಿ: ರೈಲು ಟಿಕೆಟ್ ನಿಂದ ಪ್ರಯಾಣವಷ್ಟೇ ಅಲ್ಲದೆ, ಅನೇಕ ಉಚಿತ ಸೇವೆಗಳೂ ಲಭ್ಯವಿದೆ!
SMS ಮೂಲಕ ಅಂಕಪಟ್ಟಿ ಪಡೆಯಲು ಕೆಳಗಿನ ಸ್ಟೆಪ್ಸ್ ಅನುಸರಿಸಿ
- ನಿಮ್ಮ ಮೊಬೈಲ್ ಫೋನ್‌ನಲ್ಲಿ SMS ಅಪ್ಲಿಕೇಶನ್ ಗೆ ಹೋಗಬೇಕು.
- KB10 ಟೈಪ್ ಮಾಡಿ ಸ್ಪೇಸ್ ಕೊಟ್ಟು ನಂತರ ನಿಮ್ಮ ಹಾಲ್ ಟಿಕೆಟ್ ಸಂಖ್ಯೆ ಉದಾಹರಣೆಗೆ: KB10 123456789.
- ಸಂದೇಶವನ್ನು 56263 ಗೆ ಕಳುಹಿಸಿ.
- ಕೆಲವು ನಿಮಿಷಗಳ ನಂತರ, ನಿಮ್ಮ SSLC ಫಲಿತಾಂಶವನ್ನು ಒಳಗೊಂಡಿರುವ SMS ನಿಮಗೆ ಸಿಗುತ್ತದೆ.
ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ವೀಕ್ಷಿಸಿ :- ಮೊಬೈಲ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಲು ಆಗದೆ ಇದ್ದರೆ ನೀವು ನಿಮ್ಮ ಶಾಲೆಗೆ ಭೇಟಿನೀಡಿ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ವೀಕ್ಷಣೆ ಮಾಡಲು ಸಾಧ್ಯವಿದೆ.
ಈ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿವರ :-
2023-24 ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. SSLC ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಒಟ್ಟು 8.69 ಲಕ್ಷ ಅದರಲ್ಲಿ 4.41 ಲಕ್ಷ ಬಾಲಕರು ಹಾಗೂ 4.28 ಲಕ್ಷ ಬಾಲಕಿಯರು ಇದ್ದರೂ.ಹಾಗೂ ಇದರ ಜೊತೆಗೆ 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ರೀ ಎಕ್ಸಾಮ್ ಬರೆದಿದ್ದಾರೆ.
ಎಲ್ಲ ವಿದ್ಯಾರ್ಥಿಗಳಿಗೆ all the best.. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇವೆ.
ಇದನ್ನೂ ಓದಿ: ಮಾರುತಿ ಸುಜುಕಿಯಲ್ಲಿ ಬಂಪರ್ ರಿಯಾಯಿತಿ! ರೂ. 1.50 ಲಕ್ಷದವರೆಗೆ ಉಳಿತಾಯ!