ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುವ ಇಂಧನ ಅಂದರೆ ಅದು ಪೆಟ್ರೋಲ್. ಪ್ರತಿ ಹಳ್ಳಿ ಹಳ್ಳಿಯಲ್ಲೂ ಪೆಟ್ರೋಲ್ ದಿನಬಳಕೆಯ ವಸ್ತುವಾಗಿದೆ. ದ್ವಿಚಕ್ರ ವಾಹನ ನಾಲ್ಕು ಚಕ್ರದ ವಾಹನಗಳ ಜೊತೆಗೆ ಈಗ ಕೃಷಿಗೆ ಸಂಬಂಧಿಸಿದಂತೆ ಕೊಳೆ ಮಶೀನ್, ಭತ್ತ ಕೊಯ್ಯುವ ಯಂತ್ರ, ಕಳೆ ನಾಶಕ ಯಂತ್ರ, ಹೀಗೆ ಎಲ್ಲ ಕೃಷಿ ಉಪಕರಣಗಳಿಗೆ ಪೆಟ್ರೋಲ್ ಬೇಕೆ ಬೇಕು. ಅಷ್ಟೇ ಅಲ್ಲದೆ ಈಗ ಕರೆಂಟ್ ಇಲ್ಲ ಎಂದರೆ ಜನರೇಟರ್ ಬಳಕೆಗೆ ಕೂಡ ಪೆಟ್ರೋಲ್ ಬೇಕು. ಪೆಟ್ರೋಲ್ ಹೊರತು ಪಡಿಸಿ ವಿದ್ಯುತ್ ಚಾಲಿತ ಯಂತ್ರಗಳು, ಬ್ಯಾಟರಿ ಬಳಕೆಯಿಂದ ಬಳಕೆ ಆಗುವ ಯಂತ್ರಗಳು ಏಷ್ಟು ಬಂದರೂ ಅದು ಪೆಟ್ರೋಲ್ ಗೆ ಸಮನಾಗಿ ಸ್ಪರ್ಧೆ ಮಾಡುತ್ತಿಲ್ಲ.
ಟ್ರಾನ್ಸ್ಪೋರ್ಟ ಹೆಚ್ಚಾದಾಗ ಇಂಧನ ಬಳಕೆಯು ಸಹ ಹೆಚ್ಚಾಗುತ್ತದೆ. ಈಗ ಹಳ್ಳಿ ಹಳ್ಳಿಗಳಿಗೆ ಸಹ ಸಿಮೆಂಟ್ ರೋಡ್ ಗಳು ಆಗಿವೆ. ಮನೆಯ ಎಲ್ಲಾ ಸದಸ್ಯರು ಒಂದೊಂದು ದ್ವಿಚಕ್ರ ವಾಹನವನ್ನು ಹೊಂದಿದ್ದಾರೆ. ಹೀಗಿರುವಾಗ ಸಹಜವಾಗಿ ಪೆಟ್ರೋಲ್ ದರವು ಜಾಸ್ತಿ ಆಗುತ್ತದೆ. ಇತ್ತೀಚಿನ ದಿನದಲ್ಲಿ ಸಿಲೆಂಡರ್ ಬಳಸಿ ಕಾರ್ ಓಡಿಸುವವರ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಈಗ ಬಂದಿರುವ ಸೋಲಾರ್ ವಾಹನ, ವಿದ್ಯುತ್ ಚಾರ್ಜರ್ ಬೈಕ್ ಗಳು ಎಸ್ಟೇ ಮಾರುಕಟ್ಟೆಗೆ ಬಂದರೂ ಸಹ ಪೆಟ್ರೋಲ್ ಬಳಸುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಪೆಟ್ರೋಲ್ ದರ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಬೆಲೆಯನ್ನು ಹೊಂದಿರುತ್ತದೆ. ಏಕೆಂದರೆ ರಾಜ್ಯ ಸರ್ಕಾರದ tax ಹಣ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತವೆ. ಹಾಗೆಯೇ transportation charge ಸಹ ಹೆಚ್ಚು ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದ Citroen C3 Aircross ಬುಕಿಂಗ್ ಗೆ ರೆಡಿ, ಕಾರು ಅಂದ್ರೆ ಹೀಗಿರಬೇಕು
ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್ ದರ:-
ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು 102.48ಆಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದಿನ ಪೆಟ್ರೋಲ್ ದರವು 0.01ರೂಪಾಯಿ ಇಳಿಕೆ ಆಗಿದೆ. ನಿನ್ನೆಯ ಪೆಟ್ರೋಲ್ ದರವು 102.49 ಆಗಿತ್ತು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ವಿವಿಧ ರಾಜ್ಯಗಳ ಪೆಟ್ರೋಲ್ ದರವು ಹೀಗಿದೆ.
- ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 84.10 ರೂಪಾಯಿ ಆಗಿದೆ.
- ಆಂಧ್ರಪ್ರದೇಶದಲ್ಲಿ 111.62 ರೂಪಾಯಿ ಆಗಿದೆ.
- ಅರುಣಾಚಲ ಪ್ರದೇಶದಲ್ಲಿ 95.25 ರೂಪಾಯಿ ಆಗಿದೆ.
- ಅಸ್ಸಾಂ ನಲ್ಲಿ 98.73 ರೂಪಾಯಿ ದರ ಇದೆ.
- ಬಿಹಾರ್ ರಾಜ್ಯದಲ್ಲಿ ಲೀಟರ್ ಗೆ 108.25 ರೂಪಾಯಿ ಇದೆ.
- ದೇಶದ ರಾಜಧಾನಿಯಾದ ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂಪಾಯಿ ಇದೆ.
ಉಳಿದೆಲ್ಲ ರಾಜ್ಯಗಳ ಪೆಟ್ರೋಲ್ ಬೆಲೆಗೆ ಹೋಲಿಸಿದರೆ ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬೆಲೆಯೂ ಹೆಚ್ಚಾಗಿದೆ.
ಇಂದಿನ ಡಿಸೇಲ್ ದರ ಹೀಗಿದೆ
- ಬೆಂಗಳೂರಿನಲ್ಲಿ 87.89/LTR ರೂಪಾಯಿ ಆಗಿದೆ.
- ಬೆಳಗಾವಿಯಲ್ಲಿ 88.39/LTR ರೂಪಾಯಿ ಆಗಿದೆ.
- ದಾವಣಗೆರೆಯಲ್ಲಿ 89.66/LTR ರೂಪಾಯಿ ಆಗಿದೆ.
- ಮೈಸೂರಿನಲ್ಲಿ 87.49/LTR ರೂಪಾಯಿ ಆಗಿದೆ.
- ಉತ್ತರ ಕನ್ನಡ 88.80/LTR ರೂಪಾಯಿ ಆಗಿದೆ.
- ಕೋಲಾರ 88.09/LTR ರೂಪಾಯಿ ಆಗಿದೆ.
ಪೆಟ್ರೋಲ್ ದರವನ್ನು ಮೊಬೈಲ್ SMS ಮೂಲಕ ತಿಳಿಯುವುದು ಹೇಗೆ?
- ಇಂಡಿಯನ್ ಆಯಿಲ್ ಕಂಪನಿಯ ಪೆಟ್ರೋಲ್ ದರ ತಿಳಿಯಲು ಗ್ರಾಹಕ ಸೇವಾ ಸಂಖ್ಯೆಗೆ ಕಾಲ್ ಮಾಡಿ ತಿಳಿಯಬಹುದು. ಗ್ರಾಹಕ ಸೇವಾ ಸಂಖ್ಯೆ 1800-2333-555
- ಇಂಡಿಯನ್ ಆಯಿಲ್ ಅವರ ಅಧಿಕೃತ ಜಾಲತಾಣ ಅಥವಾ ಇಂಡಿಯನ್ ಆಯಿಲ್ ಒನ್ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದು.
- SMS ಮೂಲಕ ಪೆಟ್ರೋಲ್ ದರವನ್ನು ತಿಳಿಯಬೇಕು ಎಂದಾದರೆ RSP <space> ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಹಾಕಿ 9224992249 ಈ ನಂಬರ್ ಗೆ SMS ಮಾಡಬೇಕು.
- BPCL ಗ್ರಾಹಕರಾಗಿದ್ದರೆ, ಗ್ರಾಹಕ ಸೇವಾ ಸಂಖ್ಯೆ 1800 – 22 – 4344 ಆಗಿದೆ.
- BPCL ನ ಅಧಿಕೃತ ಅಪ್ಲಿಕೇಶನ್ ಹೆಸರು ಸ್ಮಾರ್ಟ್ ಡ್ರೈವ್.
- SMS ಮೂಲಕ ಮಾಹಿತಿಯನ್ನು ಪಡೆಯಲು RSP <ಸ್ಪೇಸ್> ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ 9223112222 ಗೆ ಸಂದೇಶ ಕಳುಹಿಸಿ.
- HPCL ಕಂಪೆನಿಯ ಪೆಟ್ರೋಲ್ ದರವನ್ನು ತಿಳಿಯಲು HPPRICE <ಸ್ಪೇಸ್> ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ 9222201122 ಗೆ ಮೆಸೇಜ್ ಮಾಡಿ.
ಇದನ್ನೂ ಓದಿ: 50 MP ಕ್ಯಾಮೆರಾವನ್ನು ಹೊಂದಿರುವ OnePlus ನ ಹೊಸ 5G ಫೋನ್‌ನ ಬೆಲೆ ಮತ್ತು ಸಂಪೂರ್ಣ ವಿವರಣೆಯನ್ನು ಅನ್ವೇಷಿಸಿ.