ರಾಜ್ಯ ಹಾಗೂ ದೇಶದಲ್ಲಿ ಇಂದಿನಿಂದಲೇ ಟೋಲ್ ರೇಟ್ ಹೆಚ್ಚಳ ಆಗಿದ್ದು, ಆರ್ಥಿಕವಾಗಿ ಇದು ಹೊರೆಯಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದ ಕಾರಣ ಟೋಲ್ ದರವನ್ನು ಹೆಚ್ಚಳ ಮಾಡಿರಲಿಲ್ಲ. ಈಗ ಟೋಲ್ ದರ ಹೆಚ್ಚಾಗಿದೆ.
ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಆಗಿದೆ :- ಟೋಲ್ ದರವನ್ನು 3 ರಿಂದ 5 ಪರ್ಸೆಂಟ್ ವರೆಗೆ ಹೆಚ್ಚಳ ಮಾಡಿರುವ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ. ಜೂನ್ 3 2024 ರಿಂದ ನೂತನ ಟೋಲ್ ದರ ಜಾರಿಗೆ ಬರಲಿದೆ ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರದ ಹಿರಿಯ ಅಧಿಕಾರಿ ಒಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಷನಲ್ ಬತ್ತು ಲೋಕಲ್ ಪತ್ರಿಕೆಗಳಲ್ಲಿ ಇದು ವರದಿ ಆಗಿದೆ.
ರಾಷ್ಟ್ರೀಯ ಪ್ರಾಧಿಕಾರದ ಹಿರಿಯ ಅಧಿಕಾರಿ ಟೋಲ್ ದರ ಹೆಚ್ಚಳದ ಬಗೆಗಿನ ಹೇಳಿಕೆ ಹೀಗಿದೆ :- ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಟೋಲ್ ಗೇಟ್ ನ ಹಣ ವಿನಿಯೋಗ ಆಗಲಿದೆ. ಭಾರತ ಕಳೆದ ವರ್ಷ ಶತಕೋಟಿ ಡಾಲರ್ ಮೊತ್ತದಲ್ಲಿ 146,0000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ವಿಸ್ತರಣೆ ಮಾಡಿದೆ ಎಂಬ ಮಾಹಿತಿ ನೀಡಿದರು. ಜೊತೆಗೆ 2018-19 ನೇ ಇಸವಿಯಲ್ಲಿ 252 ಶತಕೋಟಿ ಟೋಲ್ ಹಣ ಸಂಗ್ರಹ ಆಗಿತ್ತು. 2022-23 ನೇ ಇಸವಿಯಲ್ಲಿ 540 ಶತಕೋಟಿ ಟೋಲ್ ಹಣ ಸಂಗ್ರಹ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಹಕರಿಗೆ ಆರ್ಥಿಕ ಹೊರೆ ಆಗಲಿದೆ :-
ಈಗಾಗಲೆ ಅಕ್ಕಿ ಬೇಳೆ ದಿನಸಿ ಸಾಮಗ್ರಿ ಹಾಗೂ ಇನ್ನಿತರ ದಿನ ಬಳಕೆಯ ವಸ್ತುಗಳು ಸೇರಿ ಎಲ್ಲಾ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಜನಸಾಮಾನ್ಯರಿಗೆ ಇದು ಆರ್ಥಿಕವಾಗಿ ಹೊರೆ ಆಗುತ್ತಿದೆ. ಇದರ ಜೊತೆಗೆ 3% ರಿಂದ 5 % ವರೆಗೆ ಟೋಲ್ ದರ ಏರಿಕೆ ಮಾಡಿರುವುದು ಆರ್ಥಿಕವಾಗಿ ಮಾಧ್ಯಮ ಹಾಗೂ ಬಡ ವರ್ಗದ ಜನರಿಗೆ ಇನ್ನಷ್ಟು ಆರ್ಥಿಕವಾಗಿ ಹೊರೆ ಆಗಲಿದೆ.
ಪ್ರತಿಪಕ್ಷಗಳ ಟೀಕೆ :- ಟೋಲ್ ದರ ಏರಿಕೆ ಆಗುತ್ತಿರುವಂತೆ ಪ್ರತಿಪಕ್ಷಗಳು ಕೋಪ ಗೊಂಡಿದ್ದಾರೆ ಹಾಗೂ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತೆ ಆಗಿದೆ. ಚುನಾವಣೆಯ ನಂತರ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ತಿಳಿಸಿವೆ.
ಇದು ವಾರ್ಷಿಕ ದರ ಪರಿಷ್ಕರಣೆ :- ವಾರ್ಷಿಕವಾಗಿ ಸಗಟು ಬೆಲೆಗಳ ಆಧಾರದ ಮೇಲೆ ಆಧಾರಿತ ಮೇಲೆ ಟೋಲ್ ಗೆಟ್ ನ ದರ ಬದಲಾವಣೆ ಆಗಲಿದೆ. ಬೆಲೆಗಳಲ್ಲಿ ಹೆಚ್ಚಳ ಉಂಟಾದರೆ ಟೋಲ್ ದರ ಹೆಚ್ಚಳ ಆಗುತ್ತದೆ ಅಥವಾ ಬೆಳಗಳ ದರ ಇಳಿಕೆಯಾಗಿದೆ ಟೋಲ್ ದರ ಸಹ ಇಳಿಕೆ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಕಾರಣ ಟೋಲ್ ದರ ಪರಿಷ್ಕರಣೆ ಮಾಡಿಲ್ಲ.:- ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಕಾರಣ ಯಾವುದೇ ಶುಲ್ಕ ದರ ಹೆಚ್ಚಳ ಮಾಡಲು ಸಾಧ್ಯ ವಾಗಿಲ್ಲ. ಈಗ ನೀತಿ ಸಂಹಿತೆ ಇಲ್ಲದೆ ಇರುವ ಕಾರಣ ನಾವು ದರ ಪರಿಷ್ಕರಣೆ ಮಾಡುತ್ತಿದ್ದೇವೆ. ಇದು ಮೊದಲೇ ನಿಗದಿ ಆಗಿತ್ತು ಎಂಬ ಮಾಹಿತಿಯನ್ನು ರಾಷ್ಟ್ರೀಯ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯ ಹಿಂದಿನ ದಿನ ಚಿನ್ನ, ಬೆಳ್ಳಿಯ ದರ ಹೇಗಿದೆ ಎಂಬುದನ್ನು ತಿಳಿಯೋಣ