ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯತೆ ಪರಿಸ್ಥಿತಿ ಇತ್ತು . ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದ್ರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೊಟೊ ಬೆಲೆ ಹೆಚ್ಚಾಗ್ತಿದ್ದು, ಟೊಮೆಟೊ ಮಾರಾಟ ಮಾಡಿ ರೈತರು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದು ನಾವು ಅಂತಹ ಒಬ್ಬ ರೈತನ ಬಗ್ಗೆ ಮಾತನಾಡುತ್ತೇವೆ, ಅವರು ಟೊಮೆಟೊಗಳನ್ನು ಮಾರಾಟ ಮಾಡುವ ಮೂಲಕ ದಿನಕ್ಕೆ ಲಕ್ಷಾಂತರ ಹಣವನ್ನ ಸಂಪಾದಿಸುತ್ತಿದ್ದಾರೆ. ವಿಶೇಷವೆಂದರೆ ಕೇವಲ ಒಂದೇ ದಿನಕ್ಕೆ ಈ ರೈತ ಟೊಮೆಟೊದಿಂದ 10ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸುದ್ದಾರೆ. ಹೌದು ಟೊಮೆಟೊ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬಜೆಟ್‌ನಿಂದ ಟೊಮೆಟೊ ಖರೀದಿ ಭಾರೀ ದೂರವಾಗಿದೆ. ಆದ್ರೂ ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂಪಾಯಿ ತಲುಪಿದೆ. ಟೊಮೇಟೊ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗಿದ್ದರೆ, ರೈತರಿಗೆ ಮಾತ್ರ ಅನುಕೂಲವಾಗಿದ್ದು ಇದರಿಂದ ಇಲ್ಲೊಬ್ಬ ಮಾದರಿ ರೈತ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದಾರೆ.
ಹೌದು ನಮ್ಮ ಕರ್ನಾಟಕ ಸೇರಿದಂತೆ ದೇಶದಲ್ಲಿ ಈಗಾಗಲೇ ಟೊಮೊಟೊ ಬೆಳೆದಿದ್ದ ಸಾಕಷ್ಟು ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದು, ಟೊಮೊಟೊಗೆ ಒಳ್ಳೆ ಬೆಲೆ ಸಿಗುತ್ತಿರೋದ್ರಿಂದ ಖುಷಿಯಲ್ಲಿದ್ದಾನೆ. ದೇಶದ ನಾನಾ ಭಾಗಗಳಲ್ಲಿ ಟೊಮೊಟೊ ಬೆಳೆ ಒಂದೊಂದು ರೀತಿಯಿಂದ್ದು ಈಗಾಗ್ಲೇ ಕೆಲವೊಂದು ರಾಜ್ಯಗಳಲ್ಲಿ ಟೊಮೆಟೋ ಬೆಲೆ 100 ರೂಪಾಯಿ ಗಡಿ ದಾಟಿ ತಿಂಗಳುಗಳೇ ಆಗಿದೆ. ಇದೀಗ ದ್ವಿಶತಕದ ಅಂದ್ರೆ 200ರೂಪಾಯಿಯ ಅಸುಪಾಸಿನಲ್ಲಿರುವ ಕಾರಣ ಟೊಮೆಟೋವನ್ನು ಜನ ಬೇಡ ಅಂತ ದೂರವಿಡುತ್ತಿದ್ದಾರೆ.
ಹೌದು ಜನಸಾಮಾನ್ಯರು ಟೊಮೆಟೋ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಆದ್ರೂ ಟೊಮೊಟೊ ಬೆಲೆ ಕಡಿಮೆಯಾಗಿಲ್ಲ ಹೀಗಾಗಿ ಛತ್ತೀಸ್‌ಗಢದ ಧಮ್ತಾರಿಯ ರೈತ ಅರುಣ್ ಸಾಹು ಟೊಮೇಟೊ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಒಂದು ದಿನಕ್ಕೆ ಇವ್ರ ಆದಾಯ 10ಲಕ್ಷಕ್ಕೂ ಹೆಚ್ಚಿಗೆ ಇದ್ದು, ಟೊಮೊಟೊ ಬೆಳೆಯೋದ್ರಲ್ಲಿ ಅನುಸರಿಸಿದ ಆ ಒಂದು ಟೆಕ್ನಿಕ್ ಇವತ್ತು ಈ ರೈತ ಈ ಮಟ್ಟದ ಆದಾಯಕ್ಕೆ ಕಾರಣಾವಾಗಿದ್ಯಂತೆ. ಟೊಮೊಟೊ(tomato) ಬೆಳೆಗೆ ಕೀಟಭಾಧೆ ಇದ್ದೆ ಇರುತ್ತೆ ಆದ್ರೆ ಈ ರೈತ ಮಾಡಿದ ಒಂದು ಉಪಾಯ ಅನುಸರಿಸಿದ ಆ ಒಂದು ಕ್ರಮದಿಂದ ಇಂದು ಈ ರೈತನ ಆದಾಯ ದುಪ್ಪಟಾಗಿದ್ದು ಬಹಳ ಖುಷಿ ಪಡ್ತಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗಧಿ; ಅರ್ಜಿ ಸಲ್ಲಿಸೋದು ಯಾವಾಗ? ಹೇಗೆ?
ಮಿಶ್ರ ಬೆಳೆಯಿಂದ ಈ ರೈತ ದುಡೀತಾರೆ ಲಕ್ಷ ಲಕ್ಷ
ಹೌದು ರೈತ ಅರುಣ್ ಸಾಹು ಡ್ರಾಫ್ಟಿಂಗ್ ವಿಧಾನದ ಮೂಲಕ ಟೊಮೆಟೊ(tomato) ಗಿಡಗಳನ್ನು ಬೆಳೆದಿದ್ದು, ಈ ಕ್ರಮದಿಂದ ಇವತ್ತು ಇವರು ಈಗ ಕೈತುಂಬಾ ಲಾಭ ಪಡೆಯುತ್ತಿದ್ದಾರೆ. ಇನ್ನು ಟೊಮೆಟೋ ಬೆಲೆ ನಿರಂತರವಾಗಿ ಗಗನಕ್ಕೇರುತ್ತಿರುವುದು ಈ ರೈತನಿಗೆ ಲಕ್ ಹೊಡೆದಂತಾಗಿದೆ. ಅಲ್ದೇ ಇನ್ನೊಂದು ವಿಶೇಷ ಅಂದ್ರೆ ಈ ರೈತ ಬರೋಬ್ಬರಿ ಸುಮಾರು 300 ಎಕರೆಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದು ಸದ್ಯ 150 ಎಕರೆಯಲ್ಲಿ ಟೊಮೆಟೋ ಬೆಳೆಯನ್ನೇ ಬೆಳೆದಿದ್ದಾರೆ. ಇನ್ನು ಟೊಮೆಟೋ ಬೆಳೆಯನ್ನು ಫೆಬ್ರವರಿ ತಿಂಗಳಲ್ಲಿ ಬಿತ್ತಿದ್ದ ಇವರು ಬಿಳಿ ಬದನೆ ಗಿಡಗಳ ನಡುವೆ ಟೊಮೆಟೋ ಗಿಡಗಳನ್ನು ನೆಟ್ಟಿದ್ದು ಇವ್ರಿಗೆ ವರದಾನವಾಗಿದೆ ಯಾಕಂದ್ರೆ ಹೀಗೆ ಮಾಡುವುದರಿಂದ ಟೊಮೆಟೋ ಗಿಡಗಳಿಗೆ ಕೀಟ ಬಾಧೆ ಬರುವುದಿಲ್ಲ ಟೊಮೊಟೊ ಒಳ್ಳೆಯ ಫಸಲು ಬರುತ್ತಾದ್ಯಂತೆ. ಇನ್ನು ಟೊಮೆಟೊಗಳನ್ನು ಮೇ ತಿಂಗಳಲ್ಲಿ ಕೊಯ್ಲು ಮಾಡಲಾಗಿದೆ ಆಗ ಟೊಮೊಟೊ ಬೆಲೆ ತುಂಬಾ ಕಡಿಮೆ ಇತ್ತು.
ಇನ್ನು ನಿತ್ಯ 7 ಸಾವಿರ ಕೆ.ಜಿ.ವರೆಗೆ ಇಳುವರಿ ಬರುತ್ತಿದ್ರು. ಅಂದುಕೊಂಡಷ್ಟು ಆದಾಯ ಬರುತ್ತಿರಲಿಲ್ಲ. ಆದ್ರೆ ಈಗ ಟೊಮೆಟೋ(tomato) ಬೆಲೆ 100 ರೂಪಾಯಿ ದಾಟುತ್ತಿದೆ. ಹೀಗಾಗಿ ಇಳುವರಿ ಹೆಚ್ಚಳದಿಂದ ನಿತ್ಯ 10 ಲಕ್ಷ ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ. ಛತ್ತೀಸ್‌ಗಢದ ಹೊರತಾಗಿ, ಇವ್ರು ಬೆಳೆಯುತ್ತಿರುವ ಟೊಮೆಟೋಗಳು ಬಂಗಾಳ, ಆಂಧ್ರಪ್ರದೇಶಕ್ಕೂ ಹೋಗುತ್ತವೆ. ಇನ್ನು ಮೊದಲಿನಿಂದಲೂ ಕೃಷಿಯಲ್ಲಿ ಒಲವು ಹೊಂದಿದ್ದ ಅರುಣ್ ಸಾಹು ಓದು ಮುಗಿಸಿ ನಂತರ ಕೆಲಸಕ್ಕೆ ಸೇರುವಂತೆ ಕುಟುಂಬಸ್ಥರು ಹೇಳಿದ್ದರು.ಆದ್ರೆ ರಾಯಪುರಕ್ಕೆ ಬಿ.ಎಸ್ಸಿ. ಓದಲು ಹೋಗಿದ್ದ ಅರುಣ್ ಸಾಹುಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ಅವರು ತನ್ನ ಊರಿಗೆ ಬಂದು ಕುಟುಂಬದವರ ಜೊತೆಗೆ ಸೇರಿ ಭತ್ತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ ಅರುಣ್ ಅಕ್ಕಿಯ ಬದಲು ತರಕಾರಿ ಬೆಳೆಯತೊಡಗಿದರು. ಹೀಗಾಗಿ 2007 ರಿಂದ ಭುರ್ಸಿ ಡೋಂಗ್ರಿ, ಬಿರಾನ್‌ಪುರದಲ್ಲಿ ತನ್ನದೇ ಆದ ತೋಟವನ್ನು ಸ್ಥಾಪಿಸಿ ಕೃಷಿ ಮಾಡ್ತಿದ್ದು, ಮಿಶ್ರ ಬೆಳೆ ವಿಧಾನ ಇವ್ರಿಗೆ ಹೆಚ್ಚಿನ ಲಾಭ ಕೊಡ್ತಿದ್ಯಂತೆ. ಹೀಗಾಗಿ ಕೃಷಿ ಮಾಡೋದ್ರಲ್ಲಿ ಕೆಲವೊಂದು ಟೆಕ್ನಿಕ್ ಅನುಸರಿಸೋದು ಇಳುವರಿ ಹಾಗೂ ಆದಾಯ ಎರಡನ್ನು ಹೆಚ್ಚು ಮಾಡ್ತದೆ ಅನ್ನೋದು ಅರುಣ್ ಸಾಹು ಅವ್ರ ಮಾತು.
ಇದನ್ನೂ ಓದಿ: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ; ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram