ದುಡಿದ ಹಣವನ್ನು ಒಂದು ಒಳ್ಳೆಯ ಹೂಡಿಕೆ ಯೋಜನೆಯಲ್ಲಿ ಕೂಡಿಡಬೇಕು. ಮುಂದಿನ ಭವಿಷ್ಯದ ಸಲುವಾಗಿ ಇಂದಿನಿಂದಲೇ money save ಮಾಡಬೇಕು ಎಂದು ಹಲವರು ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುತ್ತೇವೆ. ಈಗ ಸಾಮಾನ್ಯವಾಗಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎಂದು ಬಹಳ ಜನರು ಇದೆ ಸ್ಕೀಮ್ ನಲ್ಲಿ ಹೂಡಿಕೆ ಮಾಡುತ್ತಾರೆ. ಪ್ರೈವೇಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಭದ್ರತೆಯ ದೃಷ್ಟಿಯಿಂದ ಉತ್ತಮ ಆಯ್ಕೆ. ಆದರೆ ಹಣ ಹೂಡಿಕೆ ಮಾಡುವಾಗ ಯಾವ ಸ್ಕೀಮ್ ಬೆಸ್ಟ್ ಅಥವಾ ಯಾವ ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿದರ ಸಿಗುತ್ತದೆ ಎಂಬ ಅರಿವು ಇಲ್ಲದೆಯೇ ಹತ್ತಿರದ ಬ್ಯಾಂಕ್ ಅಥವಾ ಯಾರೋ ಪರಿಚಯ ಇರುವ ವ್ಯಕ್ತಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಹಣ ಹೂಡಿಕೆ ಮಾಡುವ ಮೊದಲು ಯಾವ ಯಾವ ಬ್ಯಾಂಕ್ ನಲ್ಲಿ FD ಯೋಜನೆಗೆ ಏಷ್ಟು ಪರ್ಸೆಂಟ್ ಬಡ್ಡಿ ನೀಡುತ್ತಾರೆ ಎಂದು ತಿಳಿದುಕೊಳ್ಳುವುದು ಉತ್ತಮ.
ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವುದು ಏಕೆ ಉತ್ತಮ?
ನಿಗದಿತ ವರ್ಷಕ್ಕೆ ಉತ್ತಮ ಬಡ್ಡಿದರದ ಜೊತೆಗೆ ನಿಮ್ಮ ಹಣವೂ ಭದ್ರವಾಗಿ ಇರಿಸಲು ಫಿಕ್ಸೆಡ್ ಡಿಪಾಸಿಟ್ ಉತ್ತಮ ಆಯ್ಕೆಯಾಗಿದೆ. ಷೇರು ಮಾರುಕಟ್ಟೆ ಅಂತಹ ಕಡೆಯಲ್ಲಿ ಹಣ ವಾಪಸ್ ಬರುತ್ತದೆ ಎಂಬ ಖಾತರಿ ಇರುವುದಿಲ್ಲ ಆದರೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣದ ಜೊತೆಗೆ ಬಡ್ಡಿದರ ನಿಮಗೆ ಸಿಗುತ್ತದೆ. ಹಾಗೂ ಇನ್ಸೂರೆನ್ಸ್ ಯೋಜನೆಯಂತೆ ಪ್ರತಿ ತಿಂಗಳು ಅಥವಾ ವರ್ಷ ಇಷ್ಟು ಹಣ ಕಟ್ಟಬೇಕು ಎಂಬ ಯಾವುದೇ ನಿಯಮ ಇಲ್ಲ. ಒಮ್ಮೆ ಹಣ ಕಟ್ಟಿದರೆ ನೀವು ಏಷ್ಟು ವರುಷಗಳ ವರೆಗೆ ಬೇಕಾದರೂ ಹೂಡಿಕೆಯನ್ನು ಮುಂದುವರೆಸಬಹುದು. ಹಣದ ಕೊರತೆ ಉಂಟಾದರೆ ಬಡ್ಡಿದರ ಕಡಿಮೆ ಆದರೂ ಸಹ ತಕ್ಷಣ ಹಣ ಸಿಗುತ್ತದೆ. ಹಾಗೂ ಬ್ಯಾಂಕ್ ನಿಮ್ಮ ಹಣವನ್ನು ಹಿಂದಿರುಗಿಸಲು ವಿಫಲವಾದರೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಲಿಮಿಟೆಡ್ (ಡಿಐಸಿಜಿಸಿ) ನಿಮಗೆ 5 ಲಕ್ಷ ರೂಪಾಯಿಗಳ ವಿಮೆ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರವನ್ನು ನಿಗದಿ ಪಡಿಸಲಾಗಿದೆ?
- RBL:- ಇದು ಒಂದು ಖಾಸಗಿ ಬ್ಯಾಂಕ್ ಆಗಿದ್ದು, FD ಖಾತೆಯಲ್ಲಿ 546 ದಿನಗಳಿಂದ 24 ತಿಂಗಳವರೆಗಿನ ಹೂಡಿಕೆ ಮಾಡಿದರೆ ನಿಮಗೆ 8.10% ಬಡ್ಡಿದರ ಸಿಗುತ್ತದೆ.
- DCB :- ಇದು ಒಂದು ಸಾರ್ವಜನಿಕ ವಲಯದ ಖಾಸಗಿ ಬ್ಯಾಂಕ್ ಆಗಿದ್ದು. FD ಖಾತೆಯಲ್ಲಿ 25 ರಿಂದ 26 ತಿಂಗಳ ಅವಧಿಗೆ ಹಣ ಹೂಡಿಕೆ ಮಾಡಿದರೆ 8% ಬಡ್ಡಿದರ ಸಿಗುತ್ತದೆ.
- ಇಂಡಸ್‌ಇಂಡ್ ಬ್ಯಾಂಕ್:- ಇಂಡಸ್‌ಇಂಡ್ ಬ್ಯಾಂಕ್ ಭಾರತದ ಅತ್ಯಂತ ಖ್ಯಾತ ಮತ್ತು ವಿಶ್ವಾಸಾರ್ಹ ಬ್ಯಾಂಕ್ ಆಗಿದ್ದು. FD ಯೋಜನೆಯಲ್ಲಿ ಹಣ ಠೇವಣಿ ಮಾಡಿದರೆ ನಿಮಗೆ 7.75% ಬಡ್ಡಿದರವನ್ನು ನೀಡುತ್ತದೆ.
- IDFC ಫಸ್ಟ್ ಬ್ಯಾಂಕ್:- ಇದು ಒಂದು ಖಾಸಗಿ ಬ್ಯಾಂಕ್ ಆಗಿದ್ದು FD ಯೋಜನೆಯಲ್ಲಿ 549 ದಿನಗಳಿಂದ 2 ವರ್ಷಗಳವರೆಗಿನ ಠೇವಣಿ ಮಾಡಿದಲ್ಲಿ ನಿಮಗೆ 7.75% ಬಡ್ಡಿದರವನ್ನು ನೀಡುತ್ತದೆ.
- ಯೆಸ್ ಬ್ಯಾಂಕ್:- ಭಾರತದ ಹಲವು ರಾಜ್ಯಗಳಲ್ಲಿ ಯೆಸ್ ಬ್ಯಾಂಕ್ ತನ್ನ ಶಾಖೆಯನ್ನು ಹೊಂದಿದೆ. FD ಯೋಜನೆಯಲ್ಲಿ 18 ತಿಂಗಳಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಹೂಡಿಕೆಗೆ 7.75% ಬಡ್ಡಿದರವನ್ನು ಯೆಸ್ ಬ್ಯಾಂಕ್ ನೀಡುತ್ತದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್ :- ಭಾರತದ ಉತ್ತಮ ಖಾಸಗಿ ಬ್ಯಾಂಕ್ ಇದಾಗಿದ್ದು ಫಿಕ್ಸೆಡ್ ಡಿಪಾಸಟ್ ನಲ್ಲಿ 400 ದಿನಗಳವರೆಗೆ ಹಣವನ್ನು ಠೇವಣಿ ಮಾಡಿದರೆ 7.25% ಬಡ್ಡಿದರ ಸಿಗುತ್ತದೆ.
- ಬ್ಯಾಂಕ್ ಆಫ್ ಬರೋಡಾ :- ಭಾರತದ ಹಲವು ರಾಜ್ಯಗಳಲ್ಲಿ ಇದರ ಶಾಖೆಗಳು ಇವೆ. ನೀವು 2 ವರ್ಷಕ್ಕಿಂತ ಹೆಚ್ಚು ಮತ್ತು 3 ವರ್ಷಗಳವರೆಗಿನ ಠೇವಣಿಗೆ ಬ್ಯಾಂಕ್ ಆಫ್ ಬರೋಡಾ 7.25% ಬಡ್ಡಿದರವನ್ನು ನಿಮಗೆ ನೀಡುತ್ತದೆ.
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ :- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ 444 ದಿನಗಳವರೆಗೆ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹಣ ಠೇವಣಿ ಮಾಡಿದರೆ 7.40% ಬಡ್ಡಿದರವನ್ನು ಸಿಗುತ್ತದೆ.
- ಕೋಟಕ್ ಮಹೀಂದ್ರಾ ಬ್ಯಾಂಕ್ :- ಈ ಬ್ಯಾಂಕ್ ನಲ್ಲಿ ನೀವು 390 ದಿನಗಳಿಂದ 23 ತಿಂಗಳ ವರೆಗೆ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ FD ಯೋಜನೆಯಲ್ಲಿ ಹಣ ಠೇವಣಿ ಮಾಡಿದರೆ 2.75% ರಿಂದ 7.40% ವರೆಗೆ ಬಡ್ಡಿಯನ್ನು ಸಿಗುತ್ತದೆ.
- ಎಚ್‌ಡಿಎಫ್‌ಸಿ ಬ್ಯಾಂಕ್ :- ಭಾರತದ ಉತ್ತಮ ಬ್ಯಾಂಕ್ ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಹ ಒಂದು. 18 ತಿಂಗಳು ಅಥವಾ 21 ತಿಂಗಳು FD ಖಾತೆಯಲ್ಲಿಹಣ ಠೇವಣಿ ಮಾಡಬಹುದು. ನೀವು ಮಾಡಿದ ಠೇವಣಿಯ ಮೊತ್ತಕ್ಕೆ 7.25% ಬಡ್ಡಿಯನ್ನು ಬ್ಯಾಂಕ್ ನೀಡುತ್ತದೆ.
- ಐಸಿಐಸಿಐ ಬ್ಯಾಂಕ್ :- ನೀವು ಠೇವಣಿ ಮಾಡಿದ ಅವಧಿ ಆಧಾರದ ಮೇಲೆ ಬಡ್ಡಿದರ ಸಿಗಲಿದ್ದು. 15ರಿಂದ 18 ತಿಂಗಳವರೆಗಿನ ಅವಧಿಗೆ 7.20% ಬಡ್ಡಿ ದರವನ್ನು ಸಿಗುತ್ತದೆ ಹಾಗೂ 18 ತಿಂಗಳಿಂದ 2 ವರ್ಷಗಳ ಅವಧಿಗೆ 7.20% ಬಡ್ಡಿ ದರವನ್ನು ಸಿಗುತ್ತದೆ.
- ಆಕ್ಸಿಸ್ ಬ್ಯಾಂಕ್ :- FD ಖಾತೆಯಲ್ಲಿ 17 ತಿಂಗಳು ಅಥವಾ 18 ತಿಂಗಳ ಅವಧಿಗೆ ಹಣ ಹೂಡಿಕೆ ಮಾಡಿದರೆ 7.20% ಬಡ್ಡಿ ದರವನ್ನು ಸಿಗುತ್ತದೆ.
- ಎಸ್‌ಬಿಐ:- ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿದ್ದು, ಭಾರತದಲ್ಲಿ ಹೆಚ್ಚಿನ ಶಾಖೆಯನ್ನು ಹೊಂದಿದೆ. ಇಲ್ಲಿ 2 ರಿಂದ 3 ವರ್ಷಗಳ ಅವಧಿಗೆ ಎಫ್‌ಡಿ ಖಾತೆಯ ಠೇವಣಿಗೆ 7% ಬಡ್ಡಿಯನ್ನು ಸಿಗುತ್ತದೆ.
ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್ಡೇಟ್ ಗೆ ನೀಡಿದ್ದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ