ಸರ್ಕಾರಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅವರ ಶಿಕ್ಷಣದ ಅವಧಿಯು ಮುಗಿಯುವ ಮೊದಲೇ ಕೌಶಲ ತರಬೇತಿ ನೀಡಬೇಕು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆಯು ಟೊಯೊಟಾ ಕಿರ್ಲೋಸ್ಕರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಬಗ್ಗೆ ಸಚಿವರು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಅವರ ಹೇಳಿಕೆ :- ಈ ಒಪ್ಪಂದದ ಮೂಲ ಉದ್ದೇಶವು ಅವರಿಗೆ ಉದ್ಯಮದ ಬಗ್ಗೆ ಇನ್ನಷ್ಟು ಅರಿವು ಮೂಡಲಿ ಎಂಬುದಾಗಿದೆ. ಈ ಒಪ್ಪಂದದ ಮೊದಲ ಹಂತವಾಗಿ ರಾಮನಗರ ಮತ್ತು ಬಿಡದಿ ಸುತ್ತಮುತ್ತಲಿನ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಟೊಯೊಟಾ ಕಿರ್ಲೋಸ್ಕರ್ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಾಸ್ತವಿಕ ಉದ್ಯಮದ ಬಗ್ಗೆ ಅನುಭವ ಪಡೆಯುವ ಅವಕಾಶವನ್ನು ಮಾಡಲಾಗಿದೆ ಎಂದು ಉನ್ನತ ಸಚಿವ ಡಾ. ಎಂಸಿ ಸುಧಾಕರ್. ರಾಮನಗರ ಬಿಡದಿ ಅಷ್ಟೇ ಅಲ್ಲದೆ ಟೊಯೊಟಾ ಕಿರ್ಲೋಸ್ಕರ್ ಅವರು ತರಬೇತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಎಲ್ಲಾ ಕಾಲೇಜುಗಳಲ್ಲಿ ಆಯೋಜಿಸುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉನ್ನತ ಶಿಕ್ಷಣ ಇಲಾಖೆಯು ಸಂಶೋಧನೆ ಮತ್ತು ತರಬೇತಿಯನ್ನು ಉತ್ತೇಜಿಸಲು ಆಸ್ಟ್ರೇಲಿಯಾ ಮತ್ತು ನ್ಯೂಜೆಲ್ಯಾಂಡ್‌ನ 8 ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಸುಮಾರು 10 ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಂಶೋಧನೆ ಮತ್ತು ತರಬೇತಿ ಇನ್ನಷ್ಟು ಅವಕಾಶ ಸಿಕ್ಕಿದಂತೆ ಆಗುತ್ತದೆ. .ಪ್ರತಿ ಒಪ್ಪಂದವು ಕಾರ್ಪೊರೇಟ್ ವಲಯವನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು. ಈ ಒಪ್ಪಂದದಿಂದ ಭಾರತೀಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಭಾರತೀಯ ವಿದ್ಯಾರ್ಥಿಗಳಿಗೆ ಒಂದು ವರದಾನವಾಗಿದೆ.
ಇದನ್ನೂ ಓದಿ: ಪಿಯುಸಿ, ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ..
ಟೊಯೊಟಾ ಕಿರ್ಲೋಸ್ಕರ್ ಭಾರತದಲ್ಲಿ ಹೂಡಿಕೆ ಮಾಡುವ ಮೊತ್ತ ಏಷ್ಟು?
ಟೊಯೊಟಾ ಕಿರ್ಲೋಸ್ಕರ್ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಸಲುವಾಗಿ 3,300 ಕೋಟಿ ರೂಪಯಿ ಹೂಡಿಕೆ ಮಾಡುತ್ತೇವೆ ಎಂದು ಕೆಲವು ತಿಂಗಳುಗಳ ಹಿಂದೆ ಹೇಳಿದ್ದರು. ಈ ಘಟಕವು 2026 ರ ವೇಳೆಗೆ ವಾರ್ಷಿಕ ಒಂದು ಲಕ್ಷ ಯೂನಿಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ತಿಳಿಸಿದರು. ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್‌ನ ಕ್ಯಾಂಪಸ್‌ನ ಇತ್ತು ವಿಸ್ತೀರ್ಣ 432 ಎಕರೆ. ಈ ಕ್ಯಾಂಪಸ್ ನಿಂದ 2,000 ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ ಎಂದು ಒಪ್ಪಂದಕ್ಕೆ ಹಾಕುವ ಸಹಿ ವೇಳೆ ಆಶ್ವಾಸನೆ ನೀಡಿತ್ತು.
Toyota ಭಾರತಕ್ಕೆ ಬಂದಿದ್ದು ಯಾವಾಗ?: ಟೊಯೊಟಾ ಕಿರ್ಲೋಸ್ಕರ್ ಭಾರತಕ್ಕೆ ಬಂದು 25 ವರ್ಷ ಆಗಿದೆ. 1997 ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭ ಮಾಡಿತ್ತು. 1999 ಡಿಸೆಂಬರ್‌ನಲ್ಲಿ ಮೊದಲ ಉತ್ಪಾದನಾ ಘಟಕ ಮತ್ತು 2010 ರಲ್ಲಿ ಎರಡನೇ ಘಟಕ ಸ್ಥಾಪನೆ ಮಾಡಿತ್ತು. ಎರಡು ಉತ್ಪಾದನಾ ಘಟಕಗಳಲ್ಲಿ ವಾರ್ಷಿಕವಾಗಿ 3,42,000 ಕಾರುಗಳ ತಯಾರಿಕೆ ಆಗುತ್ತದೆ. ಹಾಗೂ ಒಟ್ಟು 11,500 ಜನರಿಗೆ ಉದ್ಯೋಗ ನೀಡಿದೆ. ಭಾರತದಲ್ಲಿ 617 ಡೀಲರ್‌ಗಳ ನೇಮಕ ಮಾಡಿಕೊಂಡು ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ.
ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಭಾರತದಲ್ಲಿ ಉನ್ನತ ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವುದರ ಜೊತೆಗೆ ಭಾರತದ ಗ್ರಾಹಕರಿಗೆ ಅತ್ಯುತ್ತಮವಾದ ಮಾರಾಟ ಹಾಗೂ ಸೇವಾ ಅನುಭವವನ್ನು ನೀಡುವಲ್ಲಿ ಭಾರತೀಯ ವಾಹನ ಉದ್ಯಮದ ಅಭಿವೃದ್ಧಿಗೆ ಅತ್ಯುನ್ನತ ಕೊಡುಗೆಯನ್ನು ನೀಡುತ್ತಿದೆ. ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ: ಭಾರತದ ಅತ್ಯಂತ ವೇಗವಾಗಿ ಚಾರ್ಜ್ ಆಗುವ 5G ಫೋನ್! ಯಾವುದು ಎಂದು ತಿಳಿಯಬೇಕಾ? ಇಲ್ಲಿದೆ ನೋಡಿ Vivo Y100t 5G