ತಿಮ್ಮಪ್ಪನ ಸನ್ನಿಧಿಯಲ್ಲಿ ಖಾಲಿಯಿದೆ ವಿವಿಧ ಹುದ್ದೆಗಳು; ಅಭ್ಯರ್ಥಿಗಳ ಕೈ ಸೇರಲಿದೆ ಭರ್ಜರಿ ಸಂಬಳ, ಹೇಗೆ ಅರ್ಜಿ ಸಲ್ಲಿಸುವುದು?

ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ, ಆರ್ಥಿಕವಾಗಿ ಸದೃಢವಾಗಿರುವ, ಪ್ರಭಾವಶಾಲಿ ದೇವಾಲಯಗಳಲ್ಲಿ ತಿರುಮಲ ಬೆಟ್ಟದ ಮೇಲೆ ನೆಲೆಗೊಂಡ ತಿರುಪತಿ ತಿಮ್ಮಪ್ಪನ ದೇವಸ್ಥಾನವೂ ಒಂದು. ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.

WhatsApp Group Join Now
Telegram Group Join Now

ತಿರುಪತಿ ಬಾಲಾಜಿ ದೇವಾಲಯವು ಇಂದು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ನೀವು ಈ ದೇವಾಲಯಕ್ಕೆ ಭೇಟಿ ನೀಡಿದರೂ ಲಕ್ಷಾಂತರ ಭಕ್ತರ ಸಮೂಹವನ್ನು ನೋಡಬಹುದು. ಹಾಗೂ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ. ಅದರಂತೆ ತಿಮ್ಮಪ್ಪನ ಸನ್ನಿಧಿಯಲ್ಲಿ ಸೇವೆ ಮಾಡೋದೇ ಇನ್ನು ಶ್ರೇಷ್ಠ ಅಂತ ನಂಬಲಾಗಿದೆ. ಇದೀಗ ಅಂತವರಿಗೆ ತಿರುಪತಿಯಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು ವೇತನಕ್ಕಾಗಿ ಅರ್ಜಿ ಸಲ್ಲಿಸಲು ಟಿಟಿಡಿ ಪ್ರಕಟಣೆ ಹೊರಡಿಸಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಟಿಟಿಡಿಯಲ್ಲಿ ಕೆಲಸ ಸಿಗಬೇಕು ಅಂದ್ರೆ ಏನ್ ಮಾಡಬೇಕು ಗೊತ್ತಾ?

ಹೌದು ಇದೀಗ ತಿರುಪತಿ ದೇವಸ್ಥಾನದಲ್ಲಿ ವಿವಿಧ ಹುದ್ದೆಗಳಿಗೆ ಕೆಲಸ ಖಾಲಿಯಿದ್ದು ಟಿಟಿಡಿ ಆಸಕ್ತರು ಅರ್ಜಿ ಸಲ್ಲಿಸಬಹುದು ಅಂತ ತಿಳಿಸಿದೆ. ಹೌದು ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರ ಬಾಕಿ ಇದೆ. ಹಾಗಿದ್ರೆ ಏನೆಲ್ಲ ಕೆಲಸಗಳಿವೆ? ಅರ್ಜಿ ಹಾಕೋದು ಹೇಗೆ? ಅನ್ನೋದರ ಬಗ್ಗೆ ನೋಡ್ತಾ ಹೋಗೋಣ ಬನ್ನಿ. ಹೌದು ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಟಿಟಿಡಿಯಲ್ಲಿ 50ಕ್ಕೂ ಹೆಚ್ಚು ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರ ಬಾಕಿ ಇದೆ.

ನೀವು ಅರ್ಜಿ ಸಲ್ಲಿಸಲು ಬಯಸಿದರೆ ತಕ್ಷಣ ಹೀಗೆ ಮಾಡಬಹುದಾಗಿದೆ. ಟಿಟಿಡಿಯ ಕೆಲವು ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇದ್ದಾಗ ಟಿಟಿಡಿ ಉದ್ಯೋಗ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಪ್ರಸ್ತುತ ಟಿಟಿಡಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 56 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಹೀಗಾಗಿ ಆಸಕ್ತರು ಮತ್ತು ಅರ್ಹ ಅಭ್ಯರ್ಥಿ ಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಹೌದು ಎಇಇ ಸಿವಿಲ್ ನಲ್ಲಿ 27 ಹುದ್ದೆಗಳು ಖಾಲಿ ಇವೆ. ಒಸಿಗೆ 12, ಬಿಸಿಎಗೆ 2, ಬಿಸಿಬಿಗೆ 2, ಬಿಸಿಡಿಗೆ 2, ಎಸ್ಸಿಗೆ 5, ಎಸ್ಟಿಗೆ 2 ಮತ್ತು ಇಡಬ್ಲ್ಯೂ ಎಸ್ಸಿಗೆ 2 ಹುದ್ದೆಗಳಿವೆ. ಅಭ್ಯರ್ಥಿಗಳು ಬಿಇ ಸಿವಿಲ್, ಮೆಕ್ಯಾನಿಕಲ್ ಓದಿರಬೇಕು. ಇನ್ನು ವೇತನ ಶ್ರೇಣಿ 57,100 ರಿಂದ 1,47,760 ಆಗಿರುತ್ತದೆ. ಎಇ ಸಿವಿಲ್ ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಟಿಟಿಡಿ ಸಿದ್ಧತೆ ನಡೆಸಿದೆ. ಒಸಿಗೆ 3, ಬಿಸಿಬಿಗೆ 1, ಬಿಸಿಎಗೆ 1, ಬಿಸಿಡಿಗೆ 1, ಎಸ್ಸಿಗೆ 2 ಮತ್ತು ಇಡಬ್ಲ್ಯೂಎಸ್ಗೆ 1 ಹುದ್ದೆಗಳಿವೆ. ಅಭ್ಯರ್ಥಿಗಳು ಎಲ್ಸಿಇ ತೇರ್ಗಡೆಯಾಗಿರಬೇಕು.

ಇದೇ ರೀತಿಯ ಕೋರ್ಸ್ ಹೊಂದಿರಬೇಕು. ವೇತನ ಪ್ರಮಾಣವು 48,440 ರಿಂದ 1,37,220 ರವರೆಗೆ ಇರುತ್ತದೆ. ಅಲ್ದೇ ಅಭ್ಯರ್ಥಿಗಳು ಜುಲೈ 1 ಕ್ಕೆ 42 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಅಂತ ತಿಳಿಸಿದೆ. ಇನ್ನು ಅರ್ಜಿಗಳನ್ನು ಸ್ವೀಕರಿಸಲು 23-11-2023 ಕೊನೆಯ ದಿನಾಂಕವಾಗಿದ್ದು, TTD https://ttd-recruitment.aptonline.in ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಇನ್ನು ವಯಸ್ಸು, ವೇತನ ಶ್ರೇಣಿ, ವಿದ್ಯಾರ್ಹತೆಗಳು, ಇತರ ನಿಯಮಗಳನ್ನು ತಿಳಿಯಲು ದಯವಿಟ್ಟು ಈ ವೆಬ್‌ಸೈಟ್‌ಗೆ (www.tirumala.org)ಲಾಗಿನ್ ಮಾಡಿ ನೋಡಬಹುದು.

ಇದನ್ನೂ ಓದಿ: ಬಜಾಜ್ ಫೈನಾನ್ಸ್ ಗೆ ಸಾಲ ನೀಡದಂತೆ RBI ಆದೇಶವನ್ನು ಹೊರಡಿಸಿದೆ, ಏನಿದು?ಈ ಎರಡು ಬಜಾಜ್ ಫೈನಾನ್ಸ್ ಯೋಜನೆ ಅಡಿಯಲ್ಲಿ ಸಾಲ ನೀಡಲ್ಲ

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಬೋರ್ ವೇಲ್ ಅರ್ಜಿ ಅಹ್ವಾನ; ಅರ್ಜಿ ಸಲ್ಲಿಸಲು ಕೊನೆಯ ದಿನ? ಹೇಗೆ ಮತ್ತು ಎಲ್ಲಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram