Tv Actors Who Died At Young Age: ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಕಿರುತೆರೆ ನಟ ನಟಿಯರು!

Tv Actors Who Died At Young Age: ಮನುಷ್ಯ ಎಂದರೆ ಕನಸು ಮತ್ತೆ ಆಸೆ ಎಂಬುದು ಸಹಜ ಆದರೆ ಈ ಸಾವು ಎಂಬುದು ಖಚಿತ ಮನುಷ್ಯ ತನ್ನ ಕನಸುಗಳನ್ನು ಪೂರ್ತಿ ಮಾಡಬೇಕು ಎನ್ನುವಷ್ಟರಲ್ಲಿ. ಈ ಸಾವು ಎಂಬುದು ಬಂದು ಎಲ್ಲದನ್ನು ಮುಗಿಸಿ ಬಿಡುತ್ತದೆ. ಅಂತ ಕನಸು ಮತ್ತು ಆಸೆಗಳನ್ನು ಹೊತ್ತು ಕಿರುತೆರೆಯಲ್ಲಿ ನಟಿಸುತ್ತಾ ಸಣ್ಣ ವಯಸ್ಸಿಗೆ ಸಾವನಪ್ಪಿದವರು ಕೂಡ ಇದ್ದಾರೆ. ತಮ್ಮ ಆಸೆ ಕನಸು ಮತ್ತು ಕುಟುಂಬದವರನ್ನು ಬಿಟ್ಟು ಸಣ್ಣ ವಯಸ್ಸಿಗೆ ಸಾವನ್ನಪ್ಪಿದ ಕಿರುತರೆ ನಟ ನಟಿಯರು ಯಾರು ಯಾರು ಎಂದು ನಾವು ಇಲ್ಲಿ ನೋಡೋಣ, ಮುಂದೆ ಓದಿ.

WhatsApp Group Join Now
Telegram Group Join Now

ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ನಟ ನಟಿಯರು

  • ಮೆಬಿನ ಮೈಕಲ್ ರವರು ಮಾಡೆಲ್ ಆಗಿ ತಮ್ಮ ವೃತ್ತಿಯನ್ನು ಶುರು ಮಾಡಿದರು ಮತ್ತು ಇವರು ಪೇಟೆ ಹುಡುಗೀರ್ ಹಳ್ಳಿ ಲೈಫು ಸೀಸನ್ 4ರಲ್ಲಿ ವಿನ್ನರ್ ಆಗಿದ್ದರು. ಆದರೆ ಇವರು ಮೇ 26, 2020 ರಂದು ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು.
  • ರೇಖಾ ಸಿಂಧೂ ರವರು ಮೊದಲು ಮಾಡೆಲ್ ಆಗಿದ್ದರು ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಕನ್ನಡ ಮತ್ತು ತಮಿಳು ಸೀರಿಯಲ್ ಗಳಲ್ಲಿ ನಟಿಸಿ ಫೇಮಸ್ ಆಗಿದ್ದರು. ಇವರು ಕಾರು ಅಪಘಾತದಲ್ಲಿ ಮೇ 5, 2017 ರಂದು ನಿಧನರಾದರು. ಆಗ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.
  • ರಚನ ರವರು ಮಧು ಬಾಲ ಸೀರಿಯಲ್ ನಿಂದ ಜನಪ್ರಿಯತೆ ಗಳಿಸಿದ್ದರು ಇನ್ನು ಇವರು ಹಲವು ಸೀರಿಯಲ್ ಗಳಲು ಕೂಡ ನಟಿಸಿದ್ದರು. ಇವರು ಸೀರಿಯಲ್ ನಟ ಕಾರ್ತಿಕ್ ರವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಸ್ಟ್ 24, 2017 ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿರುವಾಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ಆಗ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.
  • ಜೀವನ್ ಸುರೇಶ್ ರವರು ಮಜಾ ಭಾರತ ರಿಯಾಲಿಟಿ ಶೋನಿಂದ ಬಹಳಷ್ಟು ಜನರನ್ನು ನಗಿಸಿದ್ದ ಇವರು ಕೂಡ ಸೀರಿಯಲ್ ನಟ ಕಾರ್ತಿಕ್ ರವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಇವರು ಮತ್ತು ರೇಖಾ ಹಾಗೂ ಇವರ ಕೆಲವು ಸ್ನೇಹಿತರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಿರುವಾಗ ರಸ್ತೆ ಅಪಘಾತದಲ್ಲಿ ನಿಧನರಾದರು. ಆಗ ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು.
  • ಶೋಭಾ ಅವರು ಮಗಳು ಜಾನಕಿ ಸೀರಿಯಲ್ ಮೂಲಕ ಕಿರುತರಿಗೆ ಎಂಟ್ರಿ ಕೊಟ್ಟು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಶೋಭ ರವರು ಜುಲೈ 17, 2019 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು. ಆಗ ಅವರಿಗೆ 45 ವರ್ಷ ವಯಸ್ಸಾಗಿತ್ತು.
  • ಚಂದನ್ ರವರು ಟೆಲಿವಿಷನ್ ಪ್ರೋಗ್ರಾಮ್ ಹೌಸ್ಟಿಂಗ್‌ನಲ್ಲಿ ಅದರಲ್ಲೂ ಕನ್ನಡವನ್ನು ಶುದ್ಧವಾಗಿ ಮಾತನಾಡುವುದರಲ್ಲಿ ಇವರು ಹೆಚ್ಚು ಪ್ರಸಿದ್ಧಿ ಹೊಂದಿದ್ದರು ಮತ್ತು ಹಲವು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿ ಅಭಿನಯದಿಂದಲೂ ಪ್ರಸಿದ್ಧಿ ಹಾಗಿದ್ದರೂ ಆದರೆ ಇವರು ರಸ್ತೆ ಅಪಘಾತದಲ್ಲಿ ಮೇ 24, 2018ರಂದು ಸಾವನ್ನಪ್ಪಿದ್ದರು. ಆಗ ಚಂದನ್ ರವರಿಗೆ 34 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಮತ್ತು ಈಗ ಅವರೆಲ್ಲ ಹೇಗಿದ್ದಾರೆ?

ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ನಟ ನಟಿಯರು

  • ಸಂಪತ್ ಜೈ ರಾಮ್ ರವರು ಅಗ್ನಿಸಾಕ್ಷಿ ಮತ್ತು ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಸಂಪತ್ ಅವರು ಸಿನಿಮಾಗಳಲ್ಲೂ ಕೂಡ ನಟಿಸಿದ್ದ ಇವರು ಏಪ್ರಿಲ್ 21,2023 ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.
  • ಜಯಶ್ರೀ ರಾಮಯ್ಯ ರವರು ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ಫೇಮಸ್ ಆಗಿದ್ದ ಇವರು ಅತಿಯಾದ ಡಿಪ್ರೆಶನ್ ನಿಂದ ಜನವರಿ 24, 2021 ರಲ್ಲಿ ಮೃತರಾದರು. ಆಗ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.
  • ಸುಶೀಲ್ ಗೌಡ ರವರು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದ ಇವರು ಫಿಟ್ನೆಸ್ ನಲ್ಲೂ ಆಸಕ್ತಿಯನ್ನು ಹೊಂದಿದ್ದರು ಹಾಗೂ ಫಿಟ್ನೆಸ್ ಟ್ರೈನರ್ ಆಗಿ ಕೂಡ ಕೆಲಸವನ್ನು ಮಾಡುತ್ತಿದ್ದರು ಇವರು ದುನಿಯಾ ವಿಜಯ್ ರವರ ಸಲಗ ಸಿನಿಮಾದಲ್ಲೂ ಪೊಲೀಸ್ ಪಾತ್ರದಲ್ಲಿ ಕೂಡ ನಟಿಸಿದ್ದ ಇವರು ಜುಲೈ 8,2020 ರಲ್ಲಿ ತಮ್ಮ ಹುಟ್ಟೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು ಸಾವನಪ್ಪಿದರೂ. ಆಗ ಅವರಿಗೆ 32 ವರ್ಷ ವಯಸ್ಸಾಗಿತ್ತು.
  • ರಾಜೇಶ್ ರವರು ಹಳ್ಳಿ ಹೈದ ಪೇಟೆಗ್ ಬಂದ ರಿಯಾಲಿಟಿ ಶೋನಿಂದ ಮನೆ ಮಾತಾಗಿದ್ದ ಇವರು ಕಾಲು ಜಾರಿಯೋ ಅಥವಾ ಡಿಪ್ರೆಶನ್ ನಿಂದಲೂ ನವೆಂಬರ್ 3, 2013ರಂದು ತಮ್ಮ ಮೈಸೂರಿನ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದರು.
  • ಸೌಜನ್ಯ ರವರು ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ನಟಿಸಿ ಜನರ ಗಮನ ಸೆಳೆದಿದ್ದ ಇವರು ಡಿಪ್ರೆಶನ್ ಗೆ ಒಳಗಾಗಿ ಅಕ್ಟೋಬರ್ 1, 2021 ರಲ್ಲಿ ತಮ್ಮ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರೂ. ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು.

ಸಣ್ಣ ವಯಸ್ಸಿಗೆ ಸಾವನಪ್ಪಿದ ಕಲಾವಿದರು

  • ಮಂಡ್ಯ ರವಿ ರವರು ಜನಪ್ರಿಯ ಕಿರುತೆರೆ ನಟ ಇವರು ಹಲವಾರು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಲಿವರ್ ಡಿಸೀಸ್ ನಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿ ಆಗದೆ ಸೆಪ್ಟೆಂಬರ್ 14,2022 ರಂದು 43ನೇ ವಯಸ್ಸಿಗೆ ಮರಣ ಹೊಂದಿದರು.
  • ಸತೀಶ್ ವಜ್ರಾ ರವರು ಉದಯೋನ್ಮುಖ ನಟ ಇವರು ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆಗಿದ್ದರು ಜುಲೈ 20,2022ರಲ್ಲಿ ಕೇವಲ 32ನೇ ವಯಸ್ಸಿಗೆ ತನ್ನ ಹೆಂಡತಿಯ ಸಹೋದರನಿಂದ ಹತ್ಯೆಗೊಳಗಾದರು.
  • ಹರೀಶ್ ರವರು ಅರಗಿಣಿ ಸೀರಿಯಲ್ ನ ಮೂಲಕ ಕರ್ನಾಟಕ ಜನರ ಮನೆ ಮಾತಾಗಿದ್ದರು. ಹರೀಶ್ ರವರು ಡೆಂಗ್ಯೂ ಮತ್ತು ಜಾಂಡೀಸ್ ರೋಗ ದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 6, 2016 ರಲ್ಲಿ ಮೃತಪಟ್ಟರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು.
  • ಹೇಮಶ್ರೀ ರವರು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದ ಇವರು ದಾಂಪತ್ಯ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ಅಕ್ಟೋಬರ್ 1, 2012 ರಂದು ನಿಗೂಢವಾಗಿ ಸಾವನ್ನಪ್ಪಿದ್ದರು.
  • ಚೇತನಾ ರಾಜ್ ಅವರು ಕನ್ನಡದ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ಇವರು ಜೀರೋ ಫಿಗರನ್ನು ಮಾಡಲು ಫ್ಯಾಟ್ ರಿಮೂವಲ್ ಸರ್ಜರಿಗೆ ಒಳಗಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 17 ,2022 ರಂದು ನಿಧನರಾದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಜಗ್ಗೇಶ್ ಸೊಸೆ ಸಿನಿಮಾ ನೋಡಿ ಏನ್ ಹೇಳಿದ್ರು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram