ಯುವ ಪೀಳಿಗೆಯ ಬೈಕ್ ಕ್ರೇಜ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಾರುಕಟ್ಟೆಯಲ್ಲಿ ಸಿಗುವ ಬೈಕ್ ಗಳಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿದು ಖರೀದಿಸುತ್ತಾರೆ. ಹೊಸ ಬೈಕ್ ಮಾರುಕಟ್ಟೆಗೆ ಬಂತೆಂದರೆ ಸಾಕು ಅದರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಾರೆ. ಎಲ್ಲಾ ಕಂಪನಿಗಳು ಜನರನ್ನು ತಮ್ಮತ್ತ ಸೆಳೆಯಲು ಹೊಸ ಮಾಡೆಲ್ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಟಿವಿಎಸ್ ಈಗ ಹೊಸದೊಂದು ಬಗೆಯ ಸ್ಕೂಟರ್ ಬಿಡುಗಡೆ ಮಾಡಿದೆ. ಅದರ ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಸ್ಕೂಟರ್ ಕ್ಷೇತ್ರದಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
TVS Jupiter ನ ವಿಶೇಷತೆಗಳು:-
- 17ಬಣ್ಣಗಳಲ್ಲಿ ಈ ಸ್ಕೂಟರ್ ಲಭ್ಯವಿದೆ.
- ಇದರ ಬೆಲೆ 90,000 ರೂಪಾಯಿ.
- ಈ ಸ್ಕೂಟರ್ 109 cc Bs6 ಎಂಜಿನ್ ಹೊಂದಿದೆ.
- ಕಿತ್ತಳೆ ಮತ್ತು ಬೂದು ಬಣ್ಣದ ಸ್ಕೂಟರ್ ಗೆ ಭಾರಿ ಡಿಮ್ಯಾಂಡ್ ಇದೆ.
- ಆರು ಲೀಟರ್ ಪೆಟ್ರೋಲ್ ಟ್ಯಾಂಕ್ ಇದೆ.
- ಬಿಸಿಲಿನಲ್ಲಿ ನಿಲ್ಲಿಸಿದರೆ ಸಾಮಾನ್ಯ ಸೀಟ್‌ಗಳಿಗೆ ಹೋಲಿಸಿದರೆ ಸುಮಾರು 10 ಡಿಗ್ರಿ ಕಡಿಮೆ ಶಾಖವನ್ನು ಈ ಸ್ಕೂಟರ್ ಪಡೆದುಕೊಳ್ಳುತ್ತದೆ.
ಟಿವಿಎಸ್ ಜೂಪಿಟರ್(TVS Jupiter) ಫ್ಯೂಚರ್ಸ್:-
- 110 ಸಿಸಿ ಇಂಜಿನ್ ಹೊಂದಿದೆ.
- ಸ್ಕೂಟರ್ ನ ಇಂಜಿನ್ ಶಕ್ತಿ 5.88 kW @ 7500 rpm.
- 8.8 Nm @ 5500 rpm ನ ಟಾರ್ಕ್ ಉತ್ಪಾದನೆ ಮಾಡುತ್ತದೆ.
- ವರ್ಗ ಪ್ರಮಾಣಿತ ಆಗಿದೆ.
- ಇದರ ಮುಂದಿನ ಬ್ರೇಕ್ 130mm ಡಿಸ್ಕ್ ಮತ್ತು ಹಿಂದಿನ ಬ್ರೇಕ್ 130mm ಡ್ರಮ್ ಸಾಮರ್ಥ್ಯ ಹೊಂದಿದೆ.
- ಗಂಟೆಗೆ 60 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
- ಎಕನೋಮೀಟರ್ ಸೌಲಭ್ಯ ಹೊಂದಿದೆ.
- ಸ್ಕೂಟರ್ ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.
ಇದನ್ನೂ ಓದಿ: 50 MP ಕ್ಯಾಮೆರಾವನ್ನು ಹೊಂದಿರುವ OnePlus ನ ಹೊಸ 5G ಫೋನ್‌ನ ಬೆಲೆ ಮತ್ತು ಸಂಪೂರ್ಣ ವಿವರಣೆಯನ್ನು ಅನ್ವೇಷಿಸಿ.
ಟಿವಿಎಸ್ ಜೂಪಿಟರ್ ದಾಖಲೆಗಳು :-
ಸೆಪ್ಟೆಂಬರ್ 2013 ರಲ್ಲಿ ಭಾರತದ TVS ಮೋಟಾರ್ ಕಂಪನಿಯಿಂದ ಬಿಡುಗಡೆಯಗಿದೆ. 2018 ರಲ್ಲಿ 2.5 ಮಿಲಿಯನ್ ಸ್ಕೂಟರ್ ಮಾರಾಟವಾಗಿದೆ. ಈ ಸ್ಕೂಟರ್ ಗೆ ಹಲವಾರು ಪ್ರಶಸ್ತಿಗಳು ಸಹ ಬಂದಿವೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
- NDTV ಕಾರ್ & ಬೈಕ್ ಅವಾರ್ಡ್ಸ್ ನವರು TVS ಜೂಪಿಟರ್ ಅನ್ನು ವರ್ಷದ ಸ್ಕೂಟರ್ ಎಂದು ಘೋಷಣೆ ಮಾಡಿದ್ದಾರೆ.
- BBC ಟಾಪ್ ಗೇರ್ ಇಂಡಿಯಾ ಮತ್ತು ಬೈಕ್ ಇಂಡಿಯಾ ಪ್ರಶಸ್ತಿ ನೀಡಿದೆ.
- ವರ್ಲ್ಡ್ ಬ್ರಾಂಡ್ ಕಾಂಗ್ರೆಸ್‌ನಿಂದ 5 ನೇ CMO ಏಷ್ಯಾ ಪ್ರಶಸ್ತಿ ಸಮಾರಂಭದಲ್ಲಿ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿನ ಶ್ರೇಷ್ಠತೆಗಾಗಿ ಪ್ರಶಸ್ತಿ ಪಡೆದಿದೆ.
- ಡಿಸೆಂಬರ್ 2013 ರಲ್ಲಿ ಟಾಪ್‌ಗೇರ್ ಇಂಡಿಯಾ ಪ್ರಶಸ್ತಿ ಲಭಿಸಿದೆ.
- ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಗಳ ಪೈಕಿ ಇದು ಎರಡನೇ ಸ್ಥಾನದಲ್ಲಿ ಇದೆ.
ಈಗಾಗಲೇ ಹಲವು ಪತ್ರಿಕೆಗಳು ,ಟಿವಿ ಮಾಧ್ಯಮಗಳು TVS ಜೂಪಿಟರ್ ಬಗ್ಗೆ ವರದಿ ಮಾಡಿದ್ದಾರೆ.
ಟಿವಿಎಸ್ ನ ಉತ್ತಮ ಸ್ಕೂಟರ್ಗಳು:-
- TVS ಸ್ಕೂಟಿ ಪೆಪ್ ಪ್ಲಸ್.
- TVS NTorq 125 ಡ್ರಮ್.
- ಸೂಪರ್ ಸ್ಕ್ವಾಡ್ ಆವೃತ್ತಿ.
- ಟಿವಿಎಸ್ ಸ್ಕೂಟಿ ಪೆಪ್.
- ಟಿವಿಎಸ್ ಜುಪಿಟರ್ ZX.
ಇದನ್ನೂ ಓದಿ: 8 GB RAM ಮತ್ತು 5000 mAh ಬ್ಯಾಟರಿಯನ್ನು ಹೊಂದಿರುವ Moto G24 Power ನ ಬಿಡುಗಡೆಯ ದಿನಾಂಕವನ್ನು ತಿಳಿಯಬೇಕಾ?