Udyogini Scheme: ಮಹಿಳೆಯರಿಗಾಗಿ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ ಸರ್ಕಾರ ಇದೊಂದು ಹೊಸ ಯೋಜನೆಯನ್ನು ರೂಪಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳ ಎರಡು ಸಾವಿರ ರೂಪಾಯಿಯನ್ನು ಕೊಡುವುದಲ್ಲದೆ ಅವರ ಉದ್ಯೋಗಕ್ಕಾಗಿ ಮಹಿಳಾ ಸಬಲೀಕರಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿ ಸಾಲವನ್ನು ಒದಗಿಸುತ್ತಿದೆ. ಈ ಮಹಿಳಾ ಉದ್ಯೋಗಿನಿ ಯೋಜನೆಯೆಲ್ಲಿ ಮಹಿಳೆಯರು ಸ್ವ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ. ಮಿತಿಗೆ ತಕ್ಕಂತೆ ಗರಿಷ್ಠ ಮೂರು ಲಕ್ಷ ರೂಪಾಯಿಯವರೆಗೆ ಸಾಲವನ್ನು ಒದಗಿಸಲಾಗುತ್ತದೆ. ಹಾಗಾದ್ರೆ ಈ ಯೋಚನೆಗೆ ಅರ್ಜಿ ಸಲ್ಲಿಸುವುದು ಹೇಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಯೋಜನೆಯು ಜಾರಿಗೊಂಡಿರುವುದು ಮಹಿಳಾ ಸದೃಢತೆಗಾಗಿ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿರುವ ಸರಕಾರ ಮಹಿಳಾ ಸಬಲೀಕರಣಕ್ಕಾಗಿ ಈ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ. ಯೋಜನೆಯಲ್ಲಿ ಮಹಿಳೆಯರು ತಮಗೆ ಬೇಕಾದ ರೀತಿಯ ಸ್ವಉದ್ಯೋಗವನ್ನು ಪ್ರಾರಂಭಿಸಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದಾಗಿದೆ. ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸುವವರು ತಮ್ಮ ತಾಲೂಕಿನ ಸರಕಾರಿ ಕಚೇರಿಗೆ ಭೇಟಿಯನ್ನ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದ್ರೆ ಉದ್ಯೋಗಿನಿ ಯೋಜನೆಯಲ್ಲಿ ಎಷ್ಟು ಸಾಲವನ್ನು ಪಡೆಯಬಹುದು?
ಸ್ವಂತ ಉದ್ಯೋಗವನ್ನು ಮಾಡಲು ಬಯಸಿದಂತಹ ಮಹಿಳೆಯರು ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದು. ಪ್ರತಿ ಮಹಿಳೆಗೆ ಮೂರು ಲಕ್ಷದವರೆಗೆ ಸಾಲವು ಸಿಗಲಿದೆ ಪ್ರಮುಖವಾದ ಅಂಶವೇನೆಂದರೆ ಪರಿಶಿಷ್ಟ ಜಾತಿಯ ಮಹಿಳೆಯರಿಗೆ 50% ರಿಯಾಯಿತಿಯಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಹಾಗೂ ಬಾಕಿ ಎಲ್ಲಾ ವರ್ಗದ ಮಹಿಳೆಯರಿಗೆ 30% ಸಬ್ಸಿಡಿ ದೊರೆಯುತ್ತಿದೆ. ಮಹಿಳೆಯರು ಈ ಯೋಜನೆಯನ್ನು ಉಪಯೋಗಿಸಿಕೊಂಡು ತಮ್ಮ ಸ್ವಂತ ಕಾಲ ಮೇಲೆ ನಿಂತು ಕೊಳ್ಳಬಹುದಾಗಿದೆ ತಮಗೆ ಬೇಕಾದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ.
ಉದ್ಯೋಗಿನಿ ಯೋಜನೆಯ(Udyogini Scheme) ಷರತ್ತುಗಳು
ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸುವವರು ಖಾಯಂ ರಾಜ್ಯದ ನಿವಾಸಿ ಆಗಿರಬೇಕು. ಇಲ್ಲದೆ ಇದ್ದಲ್ಲಿ ಇವರಿಗೆ ಅರ್ಜಿಯನ್ನ ಸಲ್ಲಿಸುವ ಹಕ್ಕು ಇರುವುದಿಲ್ಲ. ಮಹಿಳೆಯರು 18ರಿಂದ 55 ವರ್ಷದೊಳಗಿನವರಾಗಿರಬೇಕು. ಅಂದರೆ 18ಕ್ಕಿಂತ ಕಡಿಮೆ ಇರಬಾರದು 55 ವರ್ಷದಕ್ಕಿಂತ ಜಾಸ್ತಿ ಇರಬಾರದು. ಅಂತಹ ಮಹಿಳೆಯರಿಗೆ ಈ ಸೌಲಭ್ಯ ಒದಗಿ ಬರಲಿದೆ. ಮತ್ತು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವವರು ಎಸ್ಸಿ ಎಸ್ಟಿ ವರ್ಗದವರ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಇರಬಾರದು. ಇನ್ನು ಸಾಮಾನ್ಯ ವರ್ಗದವರನ್ನು ತೆಗೆದುಕೊಂಡರೆ ಇವರ ಆದಾಯವು 1.5 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಇರಬಾರದು. ಈ ರೀತಿಯಲ್ಲಿ ಇದ್ದರೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತೀರಾ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಅರ್ಜಿಯನ್ನು ಸಲ್ಲಿಸುವ ಬಗೆ ಹೇಗೆ?
- ನಿಮ್ಮ ತಾಲೂಕಿನಲ್ಲಿರುವ ಶಿಶು ಅಭಿವೃದ್ಧಿ ಕಚೇರಿಗೆ ಭೇಟಿ ಭೇಟಿ ನೀಡಬೇಕು.
- ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ನೀವು ಅಲ್ಲಿ ತುಂಬ ಬೇಕಾಗುತ್ತದೆ.
- ಬೇಕಾದ ಅಗತ್ಯ ದಾಖಲೆಗಳನ್ನು ಅರ್ಜಿಯ ಜೊತೆಗೆ ನೀವು ಕೊಡಬೇಕಾಗುತ್ತದೆ.
- ಅಧಿಕಾರಿಗಳು ನಿಮ್ಮ ಅರ್ಜಿಯನ್ನ ಪರಿಶೀಲಿಸಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತವು ಜಮಾವಣೆಯಾಗುತ್ತದೆ.
ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಈ ರೀತಿ ಇವೆ
ಅರ್ಜಿಯನ್ನ ಸಲ್ಲಿಸುವ ಮಹಿಳೆಯರು ಆಧಾರ್ ಕಾರ್ಡನ್ನು ಹೊಂದಿರಬೇಕು ಮತ್ತು ಜನನ ಪ್ರಮಾಣ ಪತ್ರವನ್ನು ಹೊಂದಿರಬೇಕು. ಮಹಿಳೆಯ ವಿಳಾಸ ಹಾಗೂ ಆದಾಯ ಪ್ರಮಾಣ ಪತ್ರವನ್ನು ಕೂಡ ಹೊಂದಿರಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸುವವರು ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಹೊಂದಿರಬೇಕು. ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನ ಪ್ರತಿಯನ್ನು ಕೊಡಬೇಕಾಗುತ್ತದೆ. ಒಂದು ವೇಳೆ ಎಸ್ ಸಿ ಎಸ್ಟಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಇದೆಲ್ಲಾ ದಾಖಲೆಗಳು ಇದ್ದಾಗ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತೀರಾ.
ಇದನ್ನೂ ಓದಿ: ಪಿ.ಎಂ ವಿಶ್ವಕರ್ಮ ಯೋಜನೆ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿಧಾನ
ಇದನ್ನೂ ಓದಿ: ಬಿಗ್ ಬಿ ಮನೆಯಲ್ಲಿ ಡ್ರೋನ್ ಕೋಲಾಹಲ; ಡ್ರೋನ್ ಪ್ರತಾಪ್ ವಿರುದ್ಧ ಗರಂ ಆದ ಮನೆ ಮಂದಿ