ಮಹಿಳೆಯರ ಜೀವನ ಉನ್ನತವಾಗಿರಬೇಕು ಎಂದು ಸರ್ಕಾರ ಈಗಾಗಲೇ ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ. ಈಗಾಗಲೇ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್, ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,000 ಅವರ ಖಾತೆಗೆ ಸರ್ಕಾರ ನೀಡುತ್ತಾ ಇದೆ . ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಕ್ಕೆ ಈಗ ತರಬೇತಿ ಕೇಂದ್ರ ಸ್ಥಾಪಿಸಿ ಅವರಿಗೆ ಸ್ವಂತ ಉದ್ದಿಮೆ ಮಾಡಲು ನೆರವಾಗುತ್ತಿದೆ. ಅದರ ಜೊತೆಗೆ ಈಗ ಹೊಸದಾಗಿ ಬಡ್ಡಿ ಇಲ್ಲದೆಯೇ ಮಹಿಳೆಯರಿಗೆ 3 ಲಕ್ಷದ ವರೆಗೆ ಸಾಲ ನೀಡಲು ಸರ್ಕಾರ ನೀಡಲು ಮುಂದಾಗಿದೆ. ಮಹಿಳೆಯರ ಸಬ್ಸಿಡಿ ಜೊತೆಗೆ ಬಡ್ಡಿ ಇಲ್ಲದೆಯೇ ನಿಮಗೆ ಸಾಲ ಸಿಗುತ್ತದೆ.
ಏನಿದು ಸರ್ಕಾರದ ಹೊಸ ಯೋಜನೆ?: ಈಗಾಗಲೇ ಮಹಿಳೆಯರಿಗೆ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಈಗ ಹೊಸದಾಗಿ ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಇನ್ನಷ್ಟು ಒತ್ತು ಕೊಡುವಲ್ಲಿ ಸರ್ಕಾರ ಮುಂದಾಗಿದೆ. ಕರ್ನಾಟಕದ ಮಹಿಳೆಯರ ಜೀವನಕ್ಕೆ ಮತ್ತೊಂದು ಹೊಸ ಬದಲಾವಣೆಗೆ ಉತ್ತಮ ಯೋಜನೆ ಆಗಿದೆ. ಯಾವುದೇ ರೀತಿಯ ಬಡ್ಡಿ ನೀಡದೆ ಈ ಸಾಲದ ಮರುಪಾವತಿ ಮಾಡಬಹುದು. ಈ ಸಾಲಕ್ಕೆ ನೀವು ಯಾವುದೇ ಶ್ಯೂರಿಟಿ ನೀಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರು ಸ್ವಂತವಾಗಿ ಉದ್ದಿಮೆ ಮಾಡುವ ಯೋಚನೆ ಇದ್ದರೆ ಇದು ಬಹಳ ಲಾಭದಾಯಕ ಆಗಿದೆ. ಹೊಲಿಗೆ ಮಶೀನ್, ಅಥವಾ ನಿಮ್ಮ ಮನೆಯಲ್ಲಿ ಕುಳಿತು ಯಾವುದೇ ರೀತಿಯ ಅಗರಬತ್ತಿ ತಯಾರಿಕೆ, ಮಹಿಳೆಯರ ಅಲಂಕಾರಿಕ ವಸ್ತುಗಳ ತಯಾರಿಗೆ, ಅಂತಹ ಉದ್ಯೋಗ ಮಾಡಲು ಬಯಸುವವರು ಈ ಯೋಜನೆಯ ಲಾಭ ಪಡೆಯಬಹುದು. ಇಲ್ಲವೇ ನೀವು ಒಂದಿಷ್ಟು ಜನರಿಗೆ ಉದ್ಯೋಗ ನೀಡುವ ಆಲೋಚನೆ ಇಂದ ಪುಟ್ಟದಾಗಿ ಏನಾದರೂ ಸ್ವಂತ ಉದ್ದಿಮೆ ಮಾಡಬೇಕು ಎಂದು ಬಯಸುವವರ ಆಸೆಗೆ ಗರಿಬಿಚ್ಚಿದಂತೆ ಆಗಿದೆ. ನಿಮ್ಮ ಖಾತೆಗೆ ಸಾಲದ ಹಣ ಸಿಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಅತ್ಯಂತ ಜನಪ್ರಿಯತೆಯ ಸ್ಮಾರ್ಟ್ ಫೋನ್ Realme ಈಗ ನಿಮ್ಮ ಕೈಯಲ್ಲಿ
ಉದ್ಯೋಗಿನಿ ಯೋಜನೆಯ ಫಲಾನುಭವಿಗಳು ಯಾರು ಯಾರು?
ಕರ್ನಾಟಕದ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಈ ಯೋಜನೆ ಸಿಗುತ್ತದೆ. ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 55ವರ್ಷದ ವರೆಗೆ ಈ ಯೋಜನೆಗೆ ಅರ್ಜಿ ಹಾಕಬಹುದು. ಈ ಯೋಜನೆಗೆ ಸಾಮಾನ್ಯ ವರ್ಗದ ಜನರು ಸಹ ಅರ್ಜಿ ಹಾಕಬಹುದು. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ 40 ಪರ್ಸೆಂಟ್ ಸಬ್ಸಿಡಿ ಸಿಗುತ್ತದೆ. ಅಲ್ಲದೆ ಸಾಮಾನ್ಯ ವರ್ಗದ ಜನರಿಗೆ ಸಬ್ಸಿಡಿ ಸಿಗುತ್ತದೆ. ಇಲ್ಲವೇ 90,000 ರೂಪಾಯಿಗಳ ವರೆಗೆ ರಿಯಾಯಿತಿ ಸಿಗುತ್ತದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ Documents:-
- ಆಧಾರ್ ಕಾರ್ಡ್ (Aadhar card).
- ರೇಷನ್ ಕಾರ್ಡ್ (ಪಡಿತರ ಚೀಟಿ).
- ಬ್ಯಾಂಕ್ ಖಾತೆಯ ವಿವರ (bank account details).
- ಪಾಸ್ ಪೋರ್ಟ್ ಸೈಜ್ ಫೋಟೋ(passport size photo).
- ಜನನ ಪ್ರಮಾಣ ಪತ್ರದ ದಾಖಲೆ(birth certificates).
- ಯಾವ ಉದ್ದಿಮೆ ಮಾಡುತ್ತೇವೆ ಎಂಬ ಬಗ್ಗೆ ದಾಖಲೆಗಳು.
- ಕರ್ನಾಟಕದ ಮೂಲ ನಿವಾಸಿ ಎಂಬ ದಾಖಲೆ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವುದು ಹೇಗೆ?: ಜಿಲ್ಲೆಯ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಯುವನಿಧಿ ಹಣವನ್ನು ಪಡೆಯುವವರು ಪ್ರತಿ ತಿಂಗಳು ಸ್ವಯಂ ಘೋಷಿತ ನಿರೋದ್ಯೋಗ ಪ್ರಮಾಣ ಪತ್ರ ನೀಡಬೇಕು.