ಉಜ್ವಲ 2.0 ಯೋಜನೆಯಲ್ಲಿ ಉಚಿತ ಸಿಲೆಂಡರ್ ಮತ್ತು ಗ್ಯಾಸ್ ಒಲೆಯನ್ನು ಪಡೆಯಲು ಈಗಲೇ ಅಪ್ಲೈ ಮಾಡಿ..

ಹಳ್ಳಿಯ ಮತ್ತು ಬಡ ಮಹಿಳೆಯರಿಗೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಹೊಗೆಯಿಂದ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಶುರುವಾದ ಯೋಜನೆ ಉಜ್ವಲ 2016 ಇಸವಿಯಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ ಚಾಲನೆ ನೀಡಿತು. ಈಗಾಗಲೇ ಸಾವಿರಾರು ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆದಿದೆ..

WhatsApp Group Join Now
Telegram Group Join Now

ಏನಿದು ಉಜ್ವಲ 2.0 ಯೋಜನೆ?: ಹಳ್ಳಿಯ ಜನರಿಗೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದ ವರ್ಗದ ಜನರಿಗೆ ಹೊರೆಯಾಗದಂತೆ ಎಲ್. ಪಿ. ಜಿ. ಸಿಲೆಂಡರ್ ತಲುಪಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಈಗ ಎರಡನೇ ಹಂತದಲ್ಲಿ 1.6 ಕೋಟಿ ಜನರಿಗೆ ಈ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಗೆ ಮತ್ತೆ ಚಾಲನೆ ನೀಡಿದ್ದಾರೆ. ಅಪ್ಲಿಕೇಶನ್ ಹಾಕಲು ಅರ್ಹರು ಯಾರು ಯಾರು? ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  • ಎಲ್ ಪಿ ಜಿ ಕನೆಕ್ಷನ್ ಹೊಂದಿಲ್ಲದೆ ಇರುವ ಬಡ ಕುಟುಂಬದ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು .
  • ಹಿಂದುಳಿದ ವರ್ಗದ ಜನರಿಗೆ ಈ ಯೋಜನೆ ಸಿಗುತ್ತದೆ.
  • ಬುಡಕಟ್ಟು ಜನಾಂಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
  • ಕಡಿಮೆ ಆದಾಯ ಹೊಂದಿರುವ ಕುಟುಂಬದವರು ಅರ್ಜಿ ಹಾಕಬಹುದು.

ಈ ಯೋಜನೆಯ ಲಾಭಗಳೇನು?

  1. ಮಹಿಳೆಯರು ವೇಗವಾಗಿ ಅಡುಗೆ ಕೆಲಸಗಳನ್ನು ಮಾಡಬಹುದು.
  2. ಕಟ್ಟಿಗೆಯ ಹೊಗೆಯಿಂದ ಬರುವ ಕಾಯಿಲೆಗಳನ್ನು ತಪ್ಪಿಸಬಹುದು.
  3. ಉಚಿತವಾಗಿ ಸಿಗುವುದರಿದ ಇದಕ್ಕೆ ಯಾವುದೇ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ.

ಅಪ್ಲಿಕೇಶನ್ ಹಾಕಲು ನೀಡಬೇಕಾದ ಕಾಗದ ಪತ್ರಗಳು(Documents)

  • ಆಧಾರ್ ಕಾರ್ಡ್ ಜೆರಾಕ್ಸ್.
  • ಪಾಸ್ಪೋರ್ಟ್ ಸೈಜ್ ಫೋಟೋ.
  • ಬ್ಯಾಂಕ್ ಪಾಸಬುಕ್ ಜೆರಾಕ್ಸ್.
  • ಜಾತಿ ಪ್ರಮಾಣ ಪತ್ರ.
  • ಆದಾಯ ಪ್ರಮಾಣ ಪತ್ರ.
  • ರೇಷನ್ ಕಾರ್ಡ್ ಜೆರಾಕ್ಸ್.

ಅಪ್ಲಿಕೇಶನ್(Application) ಹಾಕುವುದು ಹೇಗೆ?

  • Ujjwala Yojana 2.0 Application ಲಿಂಕ್ ಗೆ ಹೋಗಿ ಇಲ್ಲಿ ಕ್ಲಿಕ್ ಮಾಡಿ.
  • ಆನ್ಲೈನ್ ಪೋರ್ಟಲ್(online portal) ಎಂಬುದನ್ನು ಆಯ್ಕೆ ಮಾಡಿ.
  • ನಿಮಗೆ ಯಾವ ಕಂಪನಿಯ ಸಿಲೆಂಡರ್ ಬೇಕು ಎಂಬುದನ್ನು ಆಯ್ಕೆ ಮಾಡಿ . ಅಲ್ಲಿ ನಿಮಗೆ Bhartah gas, Indian, HP ಎಂಬ ಆಯ್ಕೆಗಳು ಸಿಗುತ್ತವೆ. ನಿಮ್ಮ ಹತ್ತಿರದ ಹಾಗೂ ನಿಮಗೆ ಇಷ್ಟವಾಗುವ ಕಂಪನಿ ಯನ್ನೂ ನೀವು ಆಯ್ಕೆ ಮಾಡಬಹುದು.
  • ಟೈಪ್ ಆಫ್ ಕನೆಕ್ಷನ್ (type of connection ) ಎಂಬುದನ್ನು ಆಯ್ಕೆ ಮಾಡಿ , ಅಲ್ಲಿ ಉಜ್ವಲ 2.0 ಕನೆಕ್ಷನ್ (ujwala 2.0 connnection) ಎಂಬ ಆಪ್ಷನ್ ಕ್ಲಿಕ್ ಮಾಡಿ.
  • ಅಲ್ಲಿ ನಿಮಗೆ ರಾಜ್ಯ ಮತ್ತು ಜಿಲ್ಲೆಗಳ ಹೆಸರಿನ ಪಟ್ಟಿ ಸಿಗುತ್ತದೆ. ನಿಮ್ಮ ಜಿಲ್ಲೆ ಮತ್ತು ರಾಜ್ಯದ ಹೆಸರನ್ನು ಆಯ್ಕೆ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆ ನೊಂದಾಯಿಸಿ.
  • ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಯನ್ನೂ ಹಾಕಿ.
  • ನಿಮ್ಮ ಆಧಾರ್ ಸಂಖ್ಯೆ ರೇಶನ್ ಕಾರ್ಡ್ ವಿವರ ಹಾಗೂ ನಿಮ್ಮ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ , ಫೋಟೋ ಎಲ್ಲವನ್ನೂ ಕಾಣುವ ಅಪ್ಲಿಕೇಶನ್ ಫಾರ್ಮ್ ನಲ್ಲಿ ತುಂಬಿ ಅಪ್ಲೈ ಬಟನ್ ಒತ್ತಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ನೀವು ಅಪ್ಲೈ ಮಾಡಿರುವ ಬಗ್ಗೆ ಮೆಸೇಜ್ ಬರುತ್ತದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: ಯಾರಿಗುಂಟು, ಯಾರಿಗಿಲ್ಲ ಈ ಅವಕಾಶ! ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ LED ಟಿವಿಗಳು ಇಂದೇ ಖರೀದಿಸಿ

ಇದನ್ನೂ ಓದಿ: ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.